ಮಹಿಳೆಯರು ಮುಂಜಾನೆ ಈ 3 ಕೆಲಸ ಮಾಡಿದ್ರೆ ಶ್ರೀಮಂತ ಆಗೋದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮಹಿಳೆಯರನ್ನು ಮನೆಯ ಮಹಾಲಕ್ಷ್ಮೀ ಎಂದು ಕರೆಯಲಾಗುತ್ತದೆ. ಏಕೆಂದರೆ ಗಂಡಸರು ದುಡಿಯಲು ಮನೆಗೆ ಹೋಗುತ್ತಾರೆ. ಆಗ ಹೆಂಗಸರು ಮನೆಯನ್ನು ನೋಡಿಕೊಂಡು ಹೋಗುತ್ತಾರೆ. ಹಾಗೆಯೇ ಮನೆಯ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವುದು ಅವರ ಕೈಯಲ್ಲಿ ಇರುತ್ತದೆ. ಮನೆ ಸ್ವಚ್ಛವಾಗಿದ್ದರೆ ಮಾತ್ರ ಧನಲಕ್ಷ್ಮೀಯು ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ನಾವು ಇಲ್ಲಿ ಮಹಿಳೆಯರು ಮುಂಜಾನೆ ಮಾಡುವ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮಹಿಳೆಯರನ್ನು ಮನೆಯ ಸಕಾರಾತ್ಮಕ ಶಕ್ತಿಯ ಮೂಲ ಎಂದು ಕರೆಯಲಾಗುತ್ತದೆ. ಏಕೆಂದರೆ ಇವರು ವಾಸ್ತುಶಾಸ್ತ್ರದ ಪ್ರಕಾರ ದಿನನಿತ್ಯದ ಕಾರ್ಯಗಳನ್ನು ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸುಖ ಮತ್ತು ನೆಮ್ಮದಿ ಸಿಗುತ್ತದೆ. ಮಹಿಳೆಯರು ಮನೆಯನ್ನು ಬಹಳ ಸ್ವಚ್ಛವಾಗಿ ಇಡುವ ಬಗ್ಗೆ ಯೋಚನೆ ಮಾಡಬೇಕು. ಏಕೆಂದರೆ ಸ್ವಚ್ಛತ್ವಯಿಂದ ಇರುವ ಜಾಗ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು ಏಕೆಂದರೆ ಮನೆಯಲ್ಲಿ ಯಾವುದೇ ರೀತಿಯ ರೋಗ ರುಜಿನಗಳು ಬರುವುದಿಲ್ಲ.
ಇಂತಹ ಮನೆಯಲ್ಲಿ ಮಾತ್ರ ಲಕ್ಷ್ಮೀ ದೇವಿ ಬಂದು ನೆಲೆಸುತ್ತಾಳೆ. ಹಾಗೆಯೇ ಸುಖ ಮತ್ತು ಸಮೃದ್ಧಿ ಲಭಿಸುತ್ತದೆ. ಹಾಗೆಯೇ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆಯ ಹೊಸ್ತಿಲನ್ನು ಗಂಗಾಜಲ ಅಥವಾ ಹಸಿಹಾಲಿನಿಂದ ಸ್ವಚ್ಛಗೊಳಿಸಬೇಕು. ಹಾಗೆಯೇ ಮನೆಯನ್ನು ಸ್ವಚ್ಛ ಮಾಡಿಕೊಂಡು ಸ್ನಾನವನ್ನು ಮಾಡಬೇಕು. ಸ್ನಾನ ಮಾಡಿದ ನಂತರ ಮನೆಯನ್ನು ಸ್ವಚ್ಛ ಮಾಡಬಾರದು. ಏಕೆಂದರೆ ಇದರಿಂದ ತನು ಮತ್ತು ಮನ ಸ್ವಚ್ಛವಾಗುತ್ತದೆ. ಆಲಸ್ಯ ಕೂಡ ದೂರ ಆಗಿ ಹೊಸ ಕೆಲಸಗಳನ್ನು ಮಾಡಲು ಉತ್ತೇಜನ ಸಿಗುತ್ತದೆ. ಹಾಗೆಯೇ ಅಡುಗೆಯನ್ನು ಮಾಡುವ ಮುನ್ನ ಸ್ನಾನವನ್ನು ಮಾಡಬೇಕು. ಏಕೆಂದರೆ ಸಕಾರಾತ್ಮಕ ಶಕ್ತಿ ದೊರಕುತ್ತದೆ. ಮನೆಯಲ್ಲಿ ತುಳಸಿ ಗಿಡ ಇದ್ದರೆ ತುಳಸೀ ಪೂಜೆಯನ್ನು ದಿನನಿತ್ಯ ಮಾಡಬೇಕು. ಹಾಗೆಯೇ ಊಟ ಮಾಡುವ ಮುನ್ನ ಮೊದಲು ಸ್ವಲ್ಪ ಆಹಾರವನ್ನು ದೇವರ ನೈವೇದ್ಯಕ್ಕೆ ಇಡಬೇಕು. ಇದರಿಂದ ದೇವತೆಗಳು ಪ್ರಸನ್ನರಾಗಿ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿ ಸಿಗುತ್ತದೆ.