WhatsApp Group Join Now
Telegram Group Join Now

ಶಾಸ್ತ್ರಗಳ ಪ್ರಕಾರ ಅಥವಾ ನಮ್ಮ ಪೂರ್ವಜರು ಹೇಳುವ ಪ್ರಕಾರ ನಾವು ನಮ್ಮ ಮನೆಗಳಲ್ಲಿ ಕೆಲವು ವಸ್ತುಗಳನ್ನ ಅಥವಾ ಪ್ರಾಣಿಗಳನ್ನು ಇಡಬಾರದು. ಅದನ್ನ ಯಾವ ಉದ್ದೇಶದಿಂದ ಹೇಳುತ್ತಾರೆ ಅಂತ ನಮಗೆ ಗೊತ್ತಿರಲ್ಲ ಹಾಗಿದ್ರೆ ಇವತ್ತು ಈ ಲೇಖನದಲ್ಲಿ ಹಾಗೆ ಹೇಳುವಂತಹ ಒಂದು ಪ್ರಾಣಿ ಆಮೆ ಇದನ್ನ ಮನೆಯಲ್ಲಿ ಇಟ್ಕೊಂಡ್ರೆ ಸರಿಯೋ ತಪ್ಪೊ ಅನ್ನೋದನ್ನ ನೋಡೋಣ.

ಸಾಕಷ್ಟು ಜನರು ಮನೆಯಲ್ಲಿ ಆಮೆಯನ್ನ ಇಟ್ಟುಕೊಳ್ಳಬಾರದು ಅಂತ ಹೇಳ್ತಾರೆ ನಾವು ಆ ಮಾತನ್ನ ಹಲವಾರು ಜನರು ಹೇಳಿದ್ದನ್ನು ಕೆಳಿದ್ದಿವಿ ಕೂಡ. ಕೆಲವು ಜನರು ಆಮೆ ದರಿದ್ರ ಅಂತ ಹೇಳ್ತಾರೆ ನಿಜ. ಆದ್ರೆ ಜೀವಂತ ಇರುವ ಆಮೆಯನ್ನ ಮನೆಯಲ್ಲಿ ಇಡಬಾರದು ಅದರ ಬದಲು ಆಮೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಹಾಗಿದ್ರೆ ಈ ಆಮೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಮಗೆ ಆಗುವ ಲಾಭ ಅಥವಾ ನಷ್ಟ ಏನು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಸಾಕಷ್ಟು ಜನರ ಮನೆಯಲ್ಲಿ ಈ ಆಮೆಯ ಮೂರ್ತಿಯನ್ನು ಕಾಣುತ್ತೇವೆ. ಇದನ್ನ ಲಕ್ಷ್ಮಿಯ ಸ್ವರೂಪ ಅಂತ ಹೇಳ್ತಾರೆ. ಹಾಗೇ ಪ್ರಾಣಿಗಳಲ್ಲಿಯೇ ಅತೀ ಹೆಚ್ಚು ಜೀವಿತ ಅವಧಿಯನ್ನು ಹೊಂದಿರುವ ಏಕೈಕ ಜೀವಿ ಅಂದ್ರೆ ಅದು ಆಮೆ. ಆಮೆ ಎಷ್ಟು ವರ್ಷ ಬದುಕಿ ಇರತ್ತೋ ಹೋಗ್ತಾ ಹೋಗ್ತಾ ಅದರ ಆಕಾರ, ಗಾತ್ರ ಕೂಡ ದೊಡ್ಡದಾಗುತ್ತಾ ಹೋಗತ್ತೆ. ಹಾಗಾಗಿ ನಿಮ್ಮ ಮನೆಯಲ್ಲಿ ಸಹ ಆಮೆಯ ಮೂರ್ತಿ ಇದ್ದರೆ, ನಿಮ್ಮ ಮನೆಯಲ್ಲಿ ಇರುವ ಜನರ ಆಯಸ್ಸು ಕೂಡ ವೃದ್ಧಿ ಆಗುತ್ತೆ. ಮನೆಯಲ್ಲಿ ಮನೆಯ ಜನರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಸಹ ಈ ಆಮೆಯ ಮೂರ್ತಿಯನ್ನು ತಂದು ಇಟ್ಟುಕೊಂಡರೆ ತುಂಬಾ ಲಾಭ ಆಗತ್ತೆ.

ಅಲ್ಲದೆ ಆಮೆ ಲಕ್ಷ್ಮಿಯ ಸ್ವರೂಪ ಆಗಿರುವುದರಿಂದ ಆಮೆಯ ಮೂರ್ತಿಯನ್ನು ಮನೆಯಲ್ಲಿ ತಂದು ಇಟ್ಟುಕೊಂಡರೆ, ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ನಿವಾರಣೆ ಆಗತ್ತೆ. ಆಮೆಯ ಮೂರ್ತಿ ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಯಾವುದೇ ಜಗಳಗಳು ಕಲಹ ಇರಲ್ಲ ಸುಖ ಸಂತೋಷ ನೆಮ್ಮದಿ ಇರತ್ತೆ.

ಆಮೆಯ ಮೂರ್ತಿಯನ್ನು ಮನೆಯ ಉತ್ತರ ದಿಕ್ಕಿಗೆ ಇಡಬೇಕು. ಆದರೆ ನೆನಪಿನಲ್ಲಿ ಇಡಬೇಕಾದ ಒಂದು ಅಂಶ ಅಂದರೆ, ಮನೆಯ ಉತ್ತರ ದಿಕ್ಕಿಗೆ ಬೆಡ್ ರೂಮ್ ಇದ್ದರೆ ಬೆಡ್ ರೂಮ್ ನಲ್ಲಿ ಆಮೆಯ ಮೂರ್ತಿಯನ್ನು ಇಡಲೆ ಬಾರದು. ಇದರಿಂದ ಹಲವಾರು ದುಷ್ಪರಿಣಾಮಗಳು ಆಗುತ್ತವೆ. ಉತ್ತರ ದಿಕ್ಕಿಗೆ ಬೆಡ್ ರೂಮ್ ಇದ್ದರೆ ಆಗ ಆಮೆಯ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬೇಕು. ಬೆಡ್ ರೂಮ್ ಇಲ್ಲದೆ ಹೋದಲ್ಲಿ ಉತ್ತರ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯ ಪರಿಣಾಮವನ್ನು ಗಮನಿಸಬಹುದು. ಆದರೆ ಇದು ಇಟ್ಟ ಕೂಡಲೇ ಇದರ ಪರಿಣಾಮ ತಿಲಿಯಲ್ಲ ನಿಧಾನವಾಗಿ ಇದು ಪರಿಣಾಮ ಬೀರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: