ಹಣವಿಲ್ಲದವನನ್ನು ಬಂದು ಯಾಕೆ ಸ್ವತಃ ಹೆಂಡತಿಕೂಡ ಪ್ರೀತಿಸಲ್ಲ ಆಚಾರ್ಯ ಚಾಣಿಕ್ಯ ಹೇಳಿದ ಸತ್ಯಾಂಶ ಇಲ್ಲಿದೆ

0

ಹಣದ ಬಗ್ಗೆ ಆಚಾರ್ಯ ಚಾಣಕ್ಯರು ಆ ಕಾಲದಲ್ಲಿ ಹಲವು ರೋಚಕ ಸಂಗತಿಗಳನ್ನು ಹೇಳಿದ್ದಾರೆ ಅವುಗಳೆಲ್ಲವನ್ನು ಕೇಳಿದರೆ ಇಂದಿಗೆ ಅದು ವ್ಯಕ್ತಿತ್ವ ವಿಕಸನ ಪುಸ್ತಕವೇ ಆಗಿಬಿಡುತ್ತದೆ. ಹಾಗಾದರೆ ಹಣದ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೆವೆ. ಮೊದಲನೆಯದಾಗಿ ಹಣವಿಲ್ಲದವನ ಮಡದಿ. ಹಣವಿರುವವನು ಅನಕ್ಷರಸ್ಥ ಆಗಿದ್ದರೂ ಕೂಡ ಆತನಿಗೆ ಮರ್ಯಾದೆ ಸಿಗುತ್ತದೆ ಆದರೆ ಅಕ್ಷರಸ್ಥ ಆಗಿದ್ದು ಹಣ ಇಲ್ಲ ಎಂದರೆ ಆತನಿಗೆ ಯಾರೂ ಕೂಡ ಮರ್ಯಾದೆ ಕೊಡುವುದಿಲ್ಲ. ಸ್ವತಹ ಆತನ ಪತ್ನಿಯೂ ಮರ್ಯಾದೆ ಕೊಡುವುದಿಲ್ಲ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.

ಸಾಮಾನ್ಯವಾಗಿ ಹಣವಿಲ್ಲದವನನ್ನು ಆತನ ಹೆಂಡತಿ ಮನಃಪೂರ್ವಕವಾಗಿ ಪ್ರೀತಿಸುವುದಿಲ್ಲ ಎಂದು ಹೇಳುತ್ತಾರೆ ಚಾಣಕ್ಯ. ಆಕೆ ಕೇವಲ ನಟನೆ ಮಾಡಿಕೊಂಡು ಜೊತೆಗಿರುತ್ತಾಳೆ ಹೊರತು ಮನಃಪೂರ್ವಕವಾಗಿ ಗಂಡನನ್ನ ಪ್ರೀತಿಸುವುದಿಲ್ಲ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಆಸೆ ಜಾಸ್ತಿ ಹಣ ಒಡವೆ ಅಂತಸ್ತು ವೈಭವ ಎಲ್ಲವೂ ಇರಬೇಕು ಎಂದು ಬಯಸುತ್ತಾರೆ

ಪತಿಯಿಂದ ತಮಗೆ ಎಲ್ಲವೂ ಸಿಗಬೇಕು ಎಂದು ಬಯಸುತ್ತಾರೆ. ಆದರೆ ಪತಿಯ ಬಳಿ ಹಣ ಇಲ್ಲ ಎಂದಾಗ ಮನಸ್ಸಿನಲ್ಲಿಯೇ ಪತಿ ಬಗ್ಗೆ ಇರುವ ಗೌರವವನ್ನು ಕಳೆದುಕೊಳ್ಳುತ್ತಾರೆ. ಹೊರಗಡೆ ಗೌರವ ಕೊಡುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಆದರೆ ನಿಜವಾಗಿಯೂ ಗೌರವವನ್ನು ಕೊಡುವುದಿಲ್ಲ. ಹಣವಿಲ್ಲದ ಪತಿಯನ್ನು ಯಾವ ಪತ್ನಿಯೂ ಇಷ್ಟಪಡುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರು ಹೇಳಿರುವ ಮತ್ತೊಂದು ಸಂಗತಿ ಯಾವ ಊರಿನಲ್ಲಿ ಸಿರಿವಂತರೂ ವಿದ್ಯಾವಂತರೂ ಕುಶಲಕರ್ಮಿಗಳು ಇರುವುದಿಲ್ಲವೋ ಅಂತಹ ಸ್ಥಳದಲ್ಲಿ ವಾಸಿಸುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ. ನೀರಿನ ಆಸರೆ ಇಲ್ಲದ ಪ್ರದೇಶದಲ್ಲಿ ವಾಸ ಮಾಡುವುದು ಎಂದರೆ ಘೋರಾರಣ್ಯದಲ್ಲಿ ವಾಸ ಮಾಡಿದಂತೆ ಸರಿ ಎಂದು ಹೇಳುತ್ತಾರೆ ಅಂತಹ ಸ್ಥಳದಲ್ಲಿ ಯಾರು ಉಳಿಯುವುದಕ್ಕೆ ಬಯಸುವುದಿಲ್ಲ ಎಂದು ಹೇಳುತ್ತಾರೆ.

ಯಾವ ಊರಿನಲ್ಲಿ ಹಣವಂತರು ಇಲ್ಲವೋ ಆ ಊರಿನಲ್ಲಿ ಬದುಕುವುದಕ್ಕೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಅಂದರೆ ಹಣವಂತರೆ ನಾಗರಿಕತೆ ಬೆಳೆಯುವುದಕ್ಕೆ ಕಾರಣ. ಹಣವಂತರು ಎಲ್ಲಿರುತ್ತಾರೆ ಅಲ್ಲಿಯೇ ಜನರು ನೆಲೆಯೂರುತ್ತಾರೆ. ಹಣವಂತರೆ ನಾಯಕರು ಅವರೇ ಮುನ್ನಡೆಸುವವರು ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.

ಹಣವನ್ನು ಗಳಿಸುವುದರ ಜೊತೆಗೆ ಅದನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದರ ಬಗ್ಗೆ ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅದರಲ್ಲಿ ಒಂದು ವಿಷಯ ಹೀಗಿದೆ ಯಾರಿಗೆ ಸಹಾಯ ಮಾಡಬೇಕು ಎಂದರೆ ಗುಣವಂತನಿಗೆ ಆಪತ್ಕಾಲದಲ್ಲಿ ಹಣ ಇರುವವನು ಸಹಾಯ ಮಾಡಬೇಕು. ಆಗ ಅಂತವರು ತಮಗೆ ಲಭಿಸಿದ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ

ಜೂಜುಕೋರರಿಗೆ ಯಾವುದೇ ರೀತಿಯ ಹಣ ಸಹಾಯ ಮಾಡಬಾರದು ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ. ಯಾಕೆಂದರೆ ಜೂಜುಕೋರರಿಗೆ ಸಹಾಯ ಮಾಡಿದರೆ ಅವರು ಹಣದಿಂದ ಮತ್ತೆ ಜುಜಾಡಿ ಹಾಳುಮಾಡುತ್ತಾರೆ. ಅವರು ತಮಗೆ ಸಿಕ್ಕಂತಹ ಹಣವನ್ನು ಯದ್ವಾತದ್ವ ಬಳಸಿ ಹಾಳುಮಾಡುತ್ತಾರೆ. ಒಬ್ಬ ಕಷ್ಟಪಟ್ಟು ದುಡಿದ ಹಣವನ್ನ ಜೂಜುಕೋರರಿಗೆ ಕೊಟ್ಟರೆ ಆತ ಅದನ್ನು ಕಾಲಕಸದಂತೆ ಹರಣ ಮಾಡಿಬಿಡುತ್ತಾನೆ. ಆಗ ದುಡಿದವನ ಶ್ರಮವು ಕೂಡ ಹಾಳಾಗುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ಅವರಿಗೆ ಸಹಾಯ ಮಾಡಬೇಡಿ ಗುಣವಂತರ ಕೈಬಿಡಬೇಡಿ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಚಾಣಕ್ಯ ಹೇಳುವ ಇನ್ನೊಂದು ಘಟನೆ ಯಾವುದು ಎಂದರೆ ಯೋಗ್ಯ ಯೋಗವನ್ನು ಗುರುತಿಸುತ್ತಾನೆ ಕುರುಡ ಕುಂಟರಿಗೆ ಅದೃಷ್ಟವಶಾತ್ ಧನಿಕನಾಗುವ ಸುಕೃತ ಸಂಭವಿಸಿದರೆ ಧನದ ಮಹತ್ವದ ಅರಿವು ಅವರಿಗೆ ಪೂರ್ಣಪ್ರಮಾಣದಲ್ಲಿ ಇರುತ್ತದೆಯಂತೆ ಅಂಥವರು ಉದಾರ ಮನೋಭಾವಿ ಹಾಗೂ ಗುಣಗ್ರಾಹ್ಯ ವ್ಯಕ್ತಿ ಎನಿಸುತ್ತಾರೆ. ಆದರೆ ವಿದ್ಯೆ ಇಲ್ಲದಿದ್ದರೂ ಆಗುಹೋಗುಗಳ ಅನುಭವ ಇರುತ್ತದೆ ತನ್ನ ಮಗಳನ್ನೇ ಬಡತನದಲ್ಲಿ ಬೆಳೆದವರಿಗೆ ಮದುವೆ ಮಾಡುತ್ತಾರೆ ಅಂಥವನ ಬದುಕು ಬಂಗಾರವಾಗಲು ದಾರಿದೀಪವಾಗುತ್ತದೆ.

ಇದರ ಅರ್ಥ ಯಾವ ಮನುಷ್ಯ ಸಂಕಷ್ಟದಲ್ಲಿ ಬೆಳೆದಿರುತ್ತಾನೆ ಆತನಿಗೆ ಹಣ ಬಂತು ಎಂದರೆ ಆತ ಖಂಡಿತವಾಗಿ ಆ ಹಣವನ್ನು ಸದ್ವಿನಿಯೋಗ ಮಾಡುತ್ತಾನೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ. ಕುರುಡ ಕುಂಟರಂಥವರು ಬದುಕಿನಲ್ಲಿ ನೋವನ್ನು ನೋಡಿರುತ್ತಾರೆ ಅಂತವರು ಹಣವಂತರಾದರೆ ಖಂಡಿತವಾಗಿಯೂ ದಾರಿ ತಪ್ಪುವುದಿಲ್ಲ ಒಳ್ಳೆಯದನ್ನೆ ಮಾಡುತ್ತಾರೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ. ಆಚಾರ್ಯ ಚಾಣಕ್ಯರು ಅಂದಿನ ಕಾಲದಲ್ಲಿಯೇ ಇಂಥ ಹಲವು ಅದ್ಭುತ ವಿಚಾರಗಳನ್ನು ಹೇಳಿದ್ದಾರೆ.

Leave A Reply

Your email address will not be published.

error: Content is protected !!