WhatsApp Group Join Now
Telegram Group Join Now

ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ಸದಾ ಹರಿಯುತ್ತಿರುವ ನೀರು ಸ್ವಚ್ಛವಾಗಿರುತ್ತದೆ ಮತ್ತು ಉಪಯೋಗಿಸುವುದಕ್ಕೂ ಕೂಡ ಯೋಗ್ಯವಾಗಿರುತ್ತದೆ. ಮತ್ತು ಯಾವ ನೀರು ಸದಾ ನಿಂತಲ್ಲಿಯೇ ಇರುತ್ತದೆಯೋ ಆ ನೀರು ಸ್ವಲ್ಪ ದಿನಗಳ ನಂತರ ಕೊಳಕಾಗಿ ಕೆಸರಾಗಿಬಿಡುತ್ತದೆ. ಇದರಿಂದ ಪ್ರತಿಯೊಬ್ಬರೂ ಕೂಡ ಸದಾಕಾಲ ಕಾರ್ಯ ನಿರತರಾಗಿರಬೇಕು ಇದರ ಬಗ್ಗೆ ಅರಿವು ಮೂಡಿಸುವಂತಹ ಗೌತಮ ಬುದ್ಧರ ಹಾಗೂ ಒಬ್ಬ ಬಡ ವ್ಯಕ್ತಿಯ ಪ್ರಸಂಗಳನ್ನು ತಿಳಿದುಕೊಳ್ಳೋಣ.

ಒಂದು ದಿನ ಗೌತಮ ಬುದ್ಧರು ಒಂದು ಊರಿನಲ್ಲಿ ಧರ್ಮ ಬೋಧನೆಯನ್ನು ನಡೆಸುತ್ತಿರುತ್ತಾರೆ ಆಗ ಅಲ್ಲಿಗೆ ಜನರು ಗೌತಮ ಬುದ್ಧರ ಬಳಿ ತಮ್ಮ ಕಷ್ಟವನ್ನು ತೊಡಿಕೊಳ್ಳುವುದಕ್ಕೆ ಬರುತ್ತಾರೆ ಆಗ ಅಲ್ಲಿ ಊರಿನ ಹೆಬ್ಬಾಗಿಲಿನಲ್ಲಿ ಬಡವ ವ್ಯಕ್ತಿ ಕುಳಿತು ಕೊಂಡಿರುತ್ತಾನೆ ಆ ಬಡ ವ್ಯಕ್ತಿಯು ಜನರು ಕಷ್ಟದಿಂದ ಬೇಸರದ ಮೊಗದಿಂದ ಗೌತಮ ಬುದ್ಧರ ಬಳಿ ಹೋಗುವುದನ್ನು ನೋಡುತ್ತಾನೆ. ಜೊತೆಗೆ ಆ ಜನರು ಅಲ್ಲಿಂದ ಆನಂದದಿಂದ ನಗುಮೊಗದಿಂದ ಮನೆಗೆ ಹಿಂದಿರುವುದನ್ನು ಗಮನಿಸುತ್ತಾನೆ. ಇದನ್ನು ನೋಡಿದ ಆ ಬಡ ವ್ಯಕ್ತಿಗೆ ಆಶ್ಚರ್ಯವಾಗುತ್ತದೆ. ಆಗ ಬಡ ವ್ಯಕ್ತಿ ತಾನು ಸಹ ಬುದ್ಧನ ಬಳಿ ಹೋಗಿ ತನ್ನ ಬಡತನದ ಕಷ್ಟಗಳನ್ನು ಹೇಳಿಕೊಂಡರೆ ತನ್ನ ಬಡತನಕ್ಕೆ ಪರಿಹಾರ ದೊರೆಯಬಹುದು ಎಂದು ಬುದ್ಧರ ಬಳಿಗೆ ಹೋಗುತ್ತಾನೆ.

ಬಡ ವ್ಯಕ್ತಿಯು ಗೌತಮ ಬುದ್ಧರ ಬಳಿ ಹೋದಾಗ ಕಷ್ಟವನ್ನು ಪರಿಹರಿಸಿಕೊಳ್ಳುವುದಕ್ಕೆ ಅವರ ಮುಂದೆ ಸಾಕಷ್ಟು ಜನರು ಕುಳಿತು ಕೊಂಡಿರುತ್ತಾರೆ ಆಗ ಗೌತಮ ಬುದ್ಧರು ಒಬ್ಬೊಬ್ಬರ ಕಷ್ಟಗಳಿಗೆ ಪರಿಹಾರವನ್ನು ಹೇಳುತ್ತಿದ್ದರು ನಂತರ ಬಡ ವ್ಯಕ್ತಿಯ ಸರದಿಯೂ ಬಂದಿತು. ಆ ವ್ಯಕ್ತಿ ಗೌತಮಬುದ್ಧರ ಬಳಿ ಹೇಗೆ ಕೇಳುತ್ತಾನೆ ಸ್ವಾಮಿ ಈ ಊರಿನಲ್ಲಿ ಎಲ್ಲರೂ ಖುಷಿಯಾಗಿ ಆನಂದದ ಜೀವನವನ್ನು ನಡೆಸುತ್ತಿದ್ದಾರೆ ಆದರೆ ನಾನೇಕೆ ಬಡವನಾಗಿದ್ದೇನೆ ಇಂದು ಪ್ರಶ್ನಿಸುತ್ತಾನೆ.

ಆಗ ಗೌತಮ ಬುದ್ಧರು ಮುಗುಳ್ನಗುತ್ತಾ ನೀನು ಬಡವನಾಗಿರಲು ಕಾರಣವೇನೆಂದರೆ ನೀನು ಯಾವತ್ತು ಸಹ ಬೇರೆಯವರಿಗೆ ಏನನ್ನು ಕೊಟ್ಟಿಲ್ಲ ಎಂದು ಬುದ್ಧನು ಉತ್ತರಿಸುತ್ತಾನೆ. ಆಗ ಬಡವನು ಆಶ್ಚರ್ಯದಿಂದ ಸ್ವಾಮಿ ನಾನು ಇನ್ನೊಬ್ಬರಿಗೆ ಕೊಡುವುದಕ್ಕೆ ನನ್ನ ಬಳಿ ಏನಿದೆ ನಾನು ನನ್ನ ಒಂದು ದಿನದ ಊಟವನ್ನೇ ಜನರ ಬಳಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದು ಉತ್ತರವನ್ನು ನೀಡುತ್ತಾನೆ.

ಆಗ ಗೌತಮ ಬುದ್ಧರು ಒಂದು ನಿಮಿಷ ಮೌನವಾಗಿದ್ದು ಆನಂತರ ಈ ರೀತಿಯಾಗಿ ಹೇಳುತ್ತಾರೆ ನೋಡು ನೀನು ಜನರಿಗೆ ಹಂಚುವುದಕ್ಕೆ ಭಗವಂತ ನಿನಗೆ ತುಂಬಾ ನೀಡಿದ್ದಾನೆ ನಿನ್ನ ನಗು ಮತ್ತು ಭರವಸೆಯಿಂದ ಎರಡು ಮಾತುಗಳನ್ನು ಹೇಳಬಹುದಲ್ಲವೇ. ಮತ್ತು ನಿನ್ನ ಎರಡೂ ಕೈಗಳಿಂದ ಇನ್ನೊಬ್ಬರಿಗೆ ಏನಾದರೂ ಸಹಾಯವನ್ನು ಮಾಡಬಹುದಲ್ಲವೇ ಭಗವಂತನು ಯಾರಿಗೆ ಈ ಮೂರು ಗುಣಗಳನ್ನು ಕೊಟ್ಟಿರುತ್ತಾನೊ ಅವರು ಎಂದಿಗೂ ಸಹ ಬಡವರಾಗಿರುವುದಿಲ್ಲ.

ಬಡವ ಎನ್ನುವುದು ಕೇವಲ ಮನಸ್ಸಿನಲ್ಲಿರುವ ಭಯ ವಷ್ಟೇ ಇದನ್ನ ನೀನು ಮೊದಲು ಮನಸ್ಸಿನಿಂದ ತೆಗೆದು ಬಿಡು ಎಂದು ಹೇಳಿದ ತಕ್ಷಣ ಆ ಬಡ ವ್ಯಕ್ತಿಯ ಮುಖವು ಆನಂದದಿಂದ ಹರಡಿತು. ದುಃಖ ಬಡವ-ಶ್ರೀಮಂತ ಕಷ್ಟ ನೋವು ಇವೆಲ್ಲವೂ ಕೂಡ ಭ್ರಮೆ ಅಷ್ಟೇ ಅದನ್ನು ನೀನು ಮನಸ್ಸಿನಿಂದ ಮೊದಲು ತೆಗೆದು ಹಾಕು. ಕಾಲಚಕ್ರವು ಬದಲಾಗುತ್ತಾ ಹೋಗುತ್ತದೆ ಬುದ್ಧ ಭಗವಾನರು ಹಾಗೆ ಹೇಳಿದ ತಕ್ಷಣ ಆ ಬಡ ವ್ಯಕ್ತಿಯ ಮುಖವು ಆನಂದದಿಂದ ಅರಳಿತು. ದುಃಖ ಬಡವ-ಶ್ರೀಮಂತ ಕಷ್ಟ ನೋವು ಇವೆಲ್ಲವೂ ಭ್ರಮೆ ಅಷ್ಟೇ ಕಾಲಚಕ್ರವು ಬದಲಾಗಿ ಹೋಗುತ್ತದೆ ನಾವು ಯಾರಿಗಾದರೂ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದಾಗುವಂತೆ ಭಗವಂತ ಮಾಡುತ್ತಾನೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: