ಸೂರ್ಯ ನಮಸ್ಕಾರ ಮಾಡೋದ್ರಿಂದ ಶರೀರಕ್ಕೆ ಇಂತಹ ಮಾರಕ ಕಾಯಿಲೆಗಳು ನಿಮ್ಮ ಹತ್ತಿರಕ್ಕೆ ಸುಳಿಯಲ್ಲ

0

ದೇಹಕ್ಕೆ ಅವಶ್ಯಕವಾದ ಡಿಜೀವಸತ್ವವನ್ನು ಉತ್ಪಾದಿಸುವ ಏಕೈಕ ಮೂಲ ಸೂರ್ಯ ಡಿ ಜೀವಸತ್ವದ ಕೊರತೆಯುಂಟಾದಾಗ ಹೃದ್ರೋಗ ಕ್ಷಯ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು ಇರುತ್ತದೆ ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಮಾಡುವ ಸೂರ್ಯ ನಮಸ್ಕಾರವು ದೇಹದ ರಕ್ತ ಸಂಚಾರವನ್ನು ಸುಲಲಿತಗೊಳಿಸಿ ರಕ್ತದೊತ್ತಡ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತದೆ.ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ ದೇಹ ದಂಡನೆ ಮೂಲಕ ಮನಸ್ಸಿನ ಮೇಲೆ ಹತೋಟಿ ಬರುತ್ತದೆ
ದೇಹದ ಎಲ್ಲಾ ಅವಯವಗಳು ಸಡಿಲಗೊಂಡು ನರನಾಡಿಗಳು ಚೈತನ್ಯ ಪಡೆಯುತ್ತದೆ ನಾವು ಈ ಲೇಖನದ ಮೂಲಕ ಸೂರ್ಯ ನಮಸ್ಕಾರದ ಬಗ್ಗೆ ತಿಳಿದುಕೊಳ್ಳೋಣ.

ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ.ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ ಸೂರ್ಯ ನಮಸ್ಕಾರ ಮಾಡುವುದರಿಂದ ತೂಕ ಕಡಿಮೆ ಆಗುತ್ತದೆ ಇಡೀ ದೇಹಕ್ಕೆ ವ್ಯಾಯಾಮ ಆಗುತ್ತದೆ ಪ್ರಸರಣಾಸನದಲ್ಲಿ ಉಸಿರನ್ನು ತೆಗೆದುಕೊಂಡು ಉಸಿರನ್ನು ಬಿಡಬೇಕು ಹಾಗೆಯೇ ನೇರವಾಗಿ ನೋಡಬೇಕು ಎರಡನೇ ಆಸನ ಹಸ್ತ ಉತಂಗ ಆಸನ ಉಸಿರನ್ನು ತೆಗೆದುಕೊಂಡು ಮೇಲಕ್ಕೆ ನೋಡಬೇಕು

ಮೂರನೆಯ ಆಸನ ಎಂದರೆ ಪಾದ ಹಸ್ತಾಸನ ಈ ಆಸನದಲ್ಲಿ ಉಸಿರನ್ನು ಬಿಟ್ಟು ಕೆಳಗಡೆ ನೋಡಬೇಕು ನಾಲ್ಕನೆಯ ಆಸನ ಅಶ್ವ ಸಂಚಲಾಸನ ಈ ಆಸನದಲ್ಲಿ ಬಲಗಾಲನ್ನು ಹಿಂದಕ್ಕೆ ಇಟ್ಟು ಉಸಿರನ್ನು ತೆಗೆದುಕೊಳ್ಳಬೇದ್ದೆ ⅝ಕು ಎಡಗಡೆ ಕಾಳನ್ನು ಲಿ ಹಿಂದಕ್ಕೆ ಇಟ್ಟು ದಂಡಾಸನಕ್ಕೆ ಹೋಗಬೇಕು ಆಗ ಉಸಿರನ್ನು ಬಿಡಬೇಕು ನಂತರ ಅಷ್ಟಾಂಗ ನಮಸ್ಕಾರ ಮಾಡಬೇಕು ಎಂಟು ಅಂಗಗಳು ನೆಲಕ್ಕೆ ತಾಗಬೇಕು

ಇದಾದ ನಂತರ ಬುಜಂಗಾಸನ ಮಾಡುವಾಗ ಉಸಿರನ್ನು ತೆಗೆದುಕೊಳ್ಳಬೇಕು ಹಾಗೆಯೇ ಮುಂದಕ್ಕೆ ಬಂದು ಪಾದ ಹಸ್ತಾಸನ ಮಾಡಬೇಕು ನಂತರ ಹಸ್ತ ಉತಂಗ ಆಸನ ಮಾಡಬೇಕು ನಂತರ ಪ್ರಣಮಾಸನ ಮಾಡಬೇಕು ನಂತರ ಸಮ ಸ್ಥಿತಿಗೆ ಬರಬೇಕು ಸೂರ್ಯ ನಮಸ್ಕಾರದ ಪ್ರತಿಯೊಂದು ಭಂಗಿಯನ್ನು ಉಸಿರಾಟದ ಜೊತೆಗೇ ಬೆಸೆಯಲಾಗಿದೆ.ಉಸಿರಾಟದ ವಿನ್ಯಾಸಕ್ಕೆ ಅನುಗುಣವಾಗಿ ಲಯಬದ್ದ ರೀತಿಯಲ್ಲಿ ಸಂಯೋಜನೆಗೊಂಡಿರುವ ವಿಶಿಷ್ಟ ಆಸನವಾಗಿರುವ ಸೂರ್ಯ ನಮಸ್ಕಾರ ಎಲ್ಲ ಆಸನಗಳಿಂದಲೂ ಸರ್ವಶ್ರೇಷ್ಠವಾದದ್ದು ಹಾಗಾಗಿ ಎಲ್ಲರೂ ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಸೂರ್ಯ ನಮಸ್ಕಾರ ಹನ್ನೆರಡು ಹಂತಗಳನ್ನೊಳಗೊಂಡಿದೆ ಒಂದು ವಿಶ್ರಾಂತ ಸ್ಥಿತಿಯ ಆಸನ ಸೇರಿದಂತೆ ಏಳು ಆಸನಗಳಿಂದ ಕೂಡಿದೆ ಹಾಗಾಗಿ ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ.

Leave A Reply

Your email address will not be published.

error: Content is protected !!