ಸೀರೆಗಳು ಕಡಿಮೆ ಬೆಲೆಗೆ ಸಿಗುವ ಅತಿ ದೊಡ್ಡ ಸಿರೆಗಳ ಫ್ಯಾಕ್ಟರಿ ಬಗ್ಗೆ ಮಾಹಿತಿ ಇಲ್ಲಿದೆ

0

ನಾವಿಂದು ನಿಮಗೆ ಸುರತ್ತಿನಲ್ಲಿರುವ ಅತಿ ದೊಡ್ಡ ಸಿರೆಗಳ ಫ್ಯಾಕ್ಟರಿ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಒಂದು ಫ್ಯಾಕ್ಟರಿ ಎರಡು ಮೂರು ಎಕರೆ ಗಳಷ್ಟು ವಿಸ್ತೀರ್ಣ ಹೊಂದಿದೆ. ಇಲ್ಲಿ ಬಟ್ಟೆಗಳು ಉತ್ತಮ ಗುಣಮಟ್ಟದಲ್ಲಿ ತಯಾರಾಗುತ್ತವೆ ಜೊತೆಗೆ ಇಲ್ಲಿ ಸೀರೆ ತಯಾರಿಕೆಗೆ ಸಂಬಂಧಿಸಿದಂತೆ ಅನೇಕ ಸೆಕ್ಷನ್ ಗಳಿವೆ ಇಲ್ಲಿ ಹಂತ ಹಂತವಾಗಿ ಕೆಲಸ ನಡೆಯುತ್ತದೆ. ಇದು ದೊಡ್ಡದಾದ ಬಟ್ಟೆ ಉದ್ಯಮ ಎಂದು ಹೇಳಬಹುದು ನೀವು ಕೂಡ ಮನೆಯಲ್ಲಿಯೇ ಕುಳಿತು ಬಟ್ಟೆಗಳನ್ನು ಖರಿಧಿ ಮಾಡಬಹುದು.

ತಯಾರಾಗಿ ಬಂದ ಬಟ್ಟೆಗಳನ್ನು ಕಟ್ಟಿಂಗ್ ಮಾಡಿ ಪ್ಯಾಕ್ ಮಾಡುತ್ತಾರೆ ನೀವು ಇವರ ಬಳಿ ಹೊಲ್ ಸೇಲ್ ಆಗಿ ಬಟ್ಟೆಯನ್ನು ಕಡಿಮೆ ದರಕ್ಕೆ ಖರಿಧಿಸಬಹುದು ಕೇವಲ ನಲವತ್ತು ನಲವತ್ತೈದು ಐವತ್ತು ರೂಪಾಯಿ ಬೆಲೆಯಲ್ಲಿ ನೀವು ಬಟ್ಟೆಯನ್ನು ಖರೀಧಿ ಮಾಡಬಹುದು. ಪ್ರಿಂಟ್ ಸೀರೆಗಳು ಉತ್ತಮ ಗುಣಮಟ್ಟದಲ್ಲಿ ನಿಮಗೆ ದೊರೆಯುತ್ತದೆ. ಅಲ್ಲಿ ಬೇರೆ ಬೇರೆ ಸೀರೆಗಳಿಗೆ ಅವುಗಳದ್ದೇ ಆದ ದೊಡ್ಡ ಸೆಕ್ಷನ್ ಇರುತ್ತದೆ. ಸೀರೆಗಳ ಪ್ಯಾಕಿಂಗ್ ಕೂಡ ಉತ್ತಮರಿತಿಯಲ್ಲಿ ಮಾಡಲಾಗುತ್ತದೆ. ಇವರು ತಯಾರಿಸುವಂತಹ ಸೀರೆಗಳು ಕರ್ನಾಟಕದ ಅನೇಕ ಪ್ರದೇಶಗಳಿಗೆ ತಲುಪುತ್ತವೆ.

ಗೋಕಾಕ್ ಸಂಕೇಶ್ವರ ಬಸವೇಶ್ವರ ರಾಯಚೂರು ಸೌದತ್ತಿ ಮಂಡ್ಯ ಬೆಂಗಳೂರು ಹೀಗೆ ಎಲ್ಲ ಕಡೆಗಳಿಗು ಕೂಡ ಇವರ ಬಟ್ಟೆ ಪೂರೈಕೆಯಾಗುತ್ತದೆ. ಇವರ ಬಳಿ ಸೀರೆಗಳು ನಲವತ್ತೈದು ರೂಪಾಯಿಂದ ಪ್ರಾರಂಭವಾಗುತ್ತವೆ ಅದು ಬ್ಲೌಸ್ ಪಿಸ್ ಜೊತೆಗೆ. ಇಲ್ಲಿ ನಿಮಗೆ ನೂರು ರೂಪಾಯಿಯ ಸೀರೆಗಳು ದೊರಕುತ್ತವೆ ಅವು ಉತ್ತಮವಾಗಿ ಬಾಳಿಕೆ ಬರುತ್ತದೆ.ನೀವು ಸೀರೆ ಉದ್ಯಮವನ್ನು ಪ್ರಾರಂಭಿಸುವುದಿದ್ದರೆ ನೂರು ರೂಪಾಯಿಯ ಸೀರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲಿ ಅತಿ ಹೆಚ್ಚು ಸೀರೆಗಳ ಕಲೆಕ್ಷನ್ ಇದ್ದು ಸೀರೆಗಳ ಮಾಹಾ ಸಾಗರ ಎಂದು ಹೇಳಬಹುದು.ನೀವು ಮನೆಯಲ್ಲಿಯೇ ಕುಳಿತು ಖರೀದಿ ಮಾಡಬಹುದು.

ಕೇವಲ ಮಿನಿಮಮ್ ಐದು ಸಾವಿರದಿಂದ ನೀವು ಸೀರೆ ಉದ್ಯಮವನ್ನು ಪ್ರಾರಂಭಿಸಬಹುದು. ನಿಮಗೆ ಯಾವ ರೀತಿಯ ಸೀರೆಗಳು ಬೇಕಾದರೂ ಇಲ್ಲಿ ಸಿಗುತ್ತವೆ. ವರ್ಕ್ ಸೀರೆಗಳು ಕೇವಲ ಎರಡು ನೂರಾ ಐವತ್ತು ರೂಪಾಯಿಯಿಂದ ನಿಮಗೆ ಸಿಗುತ್ತವೆ. ನೀವು ಸ್ವತಹ ಒಂದು ಸಾರಿ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಂಡು ಬಟ್ಟೆಗಳನ್ನು ಖರೀದಿಸಬಹುದು. ನಂತರದಲ್ಲಿ ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡಬಹುದು ಜೊತೆಗೆ ನೀವು ನಿಮ್ಮ ಮನೆಯಲ್ಲಿ ನಿಮ್ಮದೇ ಆದ ಸ್ವಂತ ಸೀರೆ ಉದ್ಯಮವನ್ನು ಪ್ರಾರಂಭಿಸಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.

error: Content is protected !!
Footer code: