WhatsApp Group Join Now
Telegram Group Join Now

ಈ ಪ್ರಪಂಚದಲ್ಲಿರುವ ಪ್ರತಿಯೊಂದು ಗಿಡ ಮರಗಳು ಸಹ ಒಂದು ಕಾಲದಲ್ಲಿ ಬಾಡಿದರೆ ಮತ್ತೊಂದು ಕಾಲದಲ್ಲಿ ಚಿಗುರುವುದುಂಟು. ಆದರೆ, ಕೇವಲ ಅರಳಿಮರ ಮಾತ್ರ ಯಾವಾಗಲೂ ಬಾಳುವುದಿಲ್ಲ ಎಂದಿನಂತೆ ಹಚ್ಚ ಹಸಿರಾಗಿ ಕಂಗೊಳಿಸುತ್ತದೆ. ಇದರ ಹಿಂದೆ ಪುರಾಣದಲ್ಲಿ ಕಥೆಯಿದೆ, ಅದೇನೇಂದು ಈ ಕೆಳಗಿನಂತೆ ತಿಳಿಯೋಣ.

ಈ ಅರಳಿ ಮರದ ಕಥೆ ಇಂದಿನದಲ್ಲ, ತೇತ್ರಾಯುಗದ ಕಾಲಕ್ಕೆ ಸೇರಿರುವಂತದ್ದು. ದಶರಥ ಮಹಾರಾಜರು ಕೊಟ್ಟಂತ ವರಗಳನ್ನು ತಪ್ಪಾಗಿ ಬಳಸಿದ ಕೈಕೆಯಿಮಾತೇ, ಆಕೆಯ ಮಗನಾದ ಭರತನನ್ನು ಅಯೋಧ್ಯೆಯ ರಾಜನಾಗಿಸುವ ಸಲುವಾಗಿ ಶ್ರೀರಾಮರನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆಂದು ಕಳಿಸುತ್ತಾರೆ. ಆಗ ಪತಿಯನ್ನು ಬಿಟ್ಟಿರಲಾಗದೆ ಸೀತಾದೇವಿ, ಅಣ್ಣನನ್ನು ಬಿಟ್ಟಿರಲಾಗದೆ ಲಕ್ಷ್ಮಣ ಇಬ್ಬರೂ ಸಹ ಶ್ರೀರಾಮರನ್ನೆ ಹಿಂಬಾಲಿಸುತ್ತಾ ಅರಣ್ಯಕ್ಕೆ ಹೋಗುತ್ತಾರೆ.

ಇತ್ತ ಮಗನನ್ನು ದೂರಾಗಿಸಿದ ಚಿಂತೆಯಿಂದ ಕೊರಗಿ ದಶರಥ ಮಹಾರಾಜರು ಪ್ರಾಣ ಬಿಡುತ್ತಾರೆ. ನಾಲ್ಕು ಮಕ್ಕಳಿದ್ದರೂ ಅವರು ಸಾಯುವಾಗ ಮಾತ್ರ ಒಬ್ಬ ಮಗನು ಅವರ ಪಕ್ಕದಲ್ಲಿ ಇಲ್ಲದಂತ್ತಾಗುತ್ತದೆ. ಇದಕ್ಕೊಂದು ಕಾರಣವಿದೆ ಅದೇನೆಂದು ಈ ಕೆಳಗೆ ತಿಳಿಯೋಣ.

ಆ ರೀತಿ ವನವಾಸಕ್ಕೆಂದು ಹೊರಟ ಶ್ರೀರಾಮ, ಸೀತಾ, ಲಕ್ಷ್ಮಣರು ಎಲ್ಲ ಪುಣ್ಯ ಕ್ಷೇತ್ರಗಳಿಗೂ ಭೇಟಿ ನೀಡುತ್ತಾ ಗಯಾ ಕ್ಷೇತ್ರಕ್ಕೆ ತಲುಪುತ್ತಾರೆ. ದಶರಥ ಮಹಾರಾಜರಿಗೆ ಪಿಂಡ ಪ್ರಧಾನ ಮಾಡಲು ಸೀತಾ ದೇವಿಯನ್ನು ಫಾಲ್ಗುಣಿಯ ನದಿ ದಡದಲ್ಲಿ ಕೂರಿಸಿ, ಶ್ರೀರಾಮ ಲಕ್ಷ್ಮಣರು ಹಣ್ಣು ಹಂಪಲಗಳನ್ನು ಶೇಖರಿಸಲು ಕಾಡಿನೊಳಗೆ ಹೋಗುತ್ತಾರೆ. ಆದರೆ ಇದಾದ ಸ್ವಲ್ಪ ಹೊತ್ತಿಗೆ ಫಾಲ್ಗುಣಿ ನದಿಯೊಳಗಿನಿಂದ
ಒಂದು ಕೈ ಹೊರಬರುತ್ತದೆ ಸೀತಾದೇವಿ ಹೆದರಿಕೆಯಿಂದ ಬಂಡೆಯ ಹಿಂದೆ ನಿಂತು ಆ ಕೈಯನ್ನೆ ನೋಡುತ್ತಿರುತ್ತಾರೆ. ಆಗ ಹಠಾತ್ತನೆ ಸೀತಾದೇವಿ ನನಗೆ ಹಸಿವಾಗುತ್ತಿದೆಯೆಂಬ ಧ್ವನಿ ಕೇಳಿಸುತ್ತದೆ.

ಆ ಧ್ವನಿ ಪದೇ ಪದೇ ಮರುಕಳಿಸುತ್ತದೆ ಆದರೆ ಆ ಧ್ವನಿ ದಶರಥ ಮಹಾರಾಜರದಾಗಿತ್ತು. ಸೀತೆಗೆ ಏನು ಮಾಡುವುದೆಂದು ದಿಕ್ಕೆ ತೋಚುವುದಿಲ್ಲಾ, ಕೇಳಿದವರಿಗೆ  ಇಲ್ಲವೆನ್ನದೆ ದಾನ ಮಾಡುತ್ತಿದ್ದವರು ಸೀತಾಮಾತೇ. ಆಹಾರ ಕೇಳಿದಾಗ ಇಲ್ಲವೆನ್ನುವುದು ಮಹಾಪಾಪ ಅಂತದ್ದರಲ್ಲಿ ಕೇಳುತ್ತಿರುವವರಾರು ಅಯೋಧ್ಯೆಯ ಮಹಾರಾಜ, ದಶರಥ ಶ್ರೀರಾಮರ ತಂದೆ. ಸೀತಾದೇವಿಯ ಬಳಿ ಕೊಡಲು ಏನೂ ಇಲ್ಲಾ ಹಾಗಾಗಿ ಬೇರೆ ವಿಧಿ ಇಲ್ಲದೆ ಅಲ್ಲೇ ನದಿ ದಡದಲ್ಲಿದ್ದ ಮಣ್ಣನ್ನು ಮೂರು ಉಂಡೆಗಳಂತೆ ಕಟ್ಟಿ ಅದರಲ್ಲಿ ಅನ್ನವನ್ನು ಆಹ್ವಾನೆ ಮಾಡಿ ನದಿಯೊಳಗಿನಿಂದ ಹೊರ ಬಂದ ಆ ಕೈಯೊಳಗೆ ಇಡುತ್ತಾರೆ ಸೀತಾದೇವಿ.

ಆಕೆಯ ಈ ಕಾರ್ಯಕ್ಕೆ ಐವರನ್ನು ಸಾಕ್ಷಿಯಾಗಿಸುತ್ತಾಳೆ. ಸೀತೆಯ ಆಹಾರದಿಂದ ಸಂತುಷ್ಟರಾದ ದಶರಥ ಮಹಾರಾಜರು ಸಂತೋಷದಿಂದ ಹರಸಿ ಮಾಯವಾಗುತ್ತಾರೆ. ಕೆಲ ಹೊತ್ತಿನ ಬಳಿಕ ರಾಮ ಲಕ್ಷ್ಮಣರು ಆಹಾರದೊಂದಿಗೆ ಹಿಂದಿರುಗಿ ಬರುತ್ತಾರೆ, ಆಗ ನೆಡೆದ ಎಲ್ಲಾ ವಿಷಯವನ್ನು ಅವರ ಬಳಿ ಹೇಳುತ್ತಾರೆ ಸೀತಾದೇವಿ. ಆದರೆ ಸೀತಾಮಾತೆಯ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಅವರ ಮುಖದಲ್ಲಿದ್ದ ಅನುಮಾನವನ್ನು ಗ್ರಹಿಸಿದ ಸೀತಾದೇವಿ ನೀವು ನನ್ನನ್ನು ನಂಬುವುದಿಲ್ಲವೆಂದೆ ನಾನು ನನ್ನ ಕಾರ್ಯಕ್ಕೆ ಐದು ಸಾಕ್ಷಿಗಳನ್ನ ನೇಮಿಸಿದ್ದೆನೆ ಎಂದು ಫಾಲ್ಗುಣಿ ನದಿ, ತುಳಸಿಗಿಡ, ಹಸು, ಬ್ರಾಹ್ಮಣ ಹಾಗೂ ಅರಳಿ ಮರವನ್ನು ಕರೆದು ಸಾಕ್ಷಿ ಹೇಳುವಂತೆ ಹೇಳುತ್ತಾರೆ. ಆದರೆ ಸೀತೆಗೆ ಸಹಾಯ ಮಾಡಲು ಅರಳಿಮರವನ್ನು ಹೊರತುಪಡಿಸಿ ಮತ್ಯಾರು ಬರುವುದಿಲ್ಲ.

ಅರಳಿ ಮರ ನಡೆದ ಎಲ್ಲ ವಿಷಯವನ್ನು ರಾಮಲಕ್ಷ್ಮಣರ ಬಳಿ ಹೇಳುತ್ತದೆ. ಅದರಿಂದ ಸಂತೋಷಗೊಂಡ ರಾಮಲಕ್ಷ್ಮಣರು ಸೀತಾಮಾತೆಯ ಕರ್ತವ್ಯ ಪ್ರಜ್ಞೆಯನ್ನು ಅಭಿನಂದಿಸುತ್ತಾರೆ. ಆದರೆ ಆಕೆಗೆ ಸಾಕ್ಷಿ ಹೇಳಲು ಬಾರದ ಫಾಲ್ಗುಣಿ ನದಿ, ತುಳಸಿಗಿಡ, ಹಸು, ಹಾಗೂ ಬ್ರಾಹ್ಮಣನ ಮೇಲೆ ವಿಪರೀತವಾಗಿ ಕೋಪಗೊಂಡು ಅವುಗಳನ್ನು ಶಪಿಸುತ್ತಾರೆ ಸೀತಾದೇವಿ. ಮೊದಲಿಗೆ ಫಾಲ್ಗುಣಿ ನದಿಯನ್ನು ಮಳೆಗಾಲದಲ್ಲಿಯೂ ಸಹ ಬರಿದಾಗಿಯೆ ಇರುತ್ತೀಯ ಎಂದು ಶಪಿಸುತ್ತಾರೆ..

ಎರಡನೆಯದಾಗಿ ಬ್ರಾಹ್ಮಣನನ್ನು ಹೇ ವಿಪ್ರೊತ್ತಂ ನೀನು ಸತ್ಯ ಹೇಳಿದೆ ನನಗೆ ಮೋಸ ಮಾಡಿರುವೆ ಹಾಗಾಗಿ ನೀನು ಈ ಕ್ಷೇತ್ರದಲ್ಲಿಯೇ ಇದ್ದು ಈ ಕ್ಷೇತ್ರಕ್ಕೆ ಬರುವ ಯಾತ್ರಿಕರನ್ನು ಪೀಡಿಸಿ ಅದರಿಂದ ಬಂದ ಲಾಭದಿಂದ ಜೀವನ ಸಾಗಿಸು ಎಂದು ಶಪಿಸುತ್ತಾರೆ.

ಮೂರನೆಯದಾಗಿ ಗೋಮಾತೆಯನ್ನು ಗೋ ಮಾತೇ ನೀನು ಈ ಜಾಗವನ್ನು ಬೆಳಗ ಬೇಕಾದವಳು ಆದರೆ ನೀನು ನನ್ನ ಮಾತನ್ನು ಮೀರಿ ಲೋಭತನವನ್ನು ಮೆರೆದಿರುವೆ. ಹಾಗಾಗಿ ನೀನು ದಯಾ ಕ್ಷೇತ್ರದಲ್ಲಿಯೆ ಇದ್ದು ಅವರಿವರಿಡುವ ಪಿಂಡವನ್ನು ತಿಂದು ಬದುಕು, ಎಷ್ಟೇ ತಿಂದರು ನಿನ್ನ ಹೊಟ್ಟೆ ತುಂಬದಿರಲಿ ಎಂದು ಶಪಿಸುತ್ತಾರೆ.

ನಾಲ್ಕನೇಯದಾಗಿ ತುಳಸಿಯನ್ನು ತುಳಸಿ ಮಾತೇ ನೀನು ಪವಿತ್ರವಾದವಳು ಆದರೆ ನೀನು ಸಹ ನನ್ನ ನಂಬಿಕೆಗೆ ದ್ರೋಹ ಬಗೆಯುವೆ ಎಂದು ನಾನು ಅಂದುಕೊಂಡಿರಲಿಲ್ಲಾ. ಹಾಗಾಗಿ ನೀನೆಷ್ಟೆ ಪವಿತ್ರವಾದರು ಎಲ್ಲಂದರಲ್ಲೆ ಬೆಳೆಯುವಂತಾಗಲಿ ಎಂದು ಶಪಿಸುತ್ತಾರೆ.

ಸೀತಾ ದೇವಿಯ ಶಾಪದಂತೆ ಫಾಲ್ಗುಣಿನದಿ ಬತ್ತಿ ಹೋಗಿದೆ, ಫಾಲ್ಗುಣಿನದಿ ತೀರದಲ್ಲಿರುವ ಹಸುಗಳಿಗೆ ಇಂದಿಗೂ ಪಿಂಡವೇ ಆಹಾರ. ಅದರ ಬಳಿಕ ಸಾಕ್ಷಿ ನುಡಿದು ಸಹಾಯ ಮಾಡಿದ ಅರಳಿಮರದ ಕಾರ್ಯಕ್ಕೆ ಸಂತೋಷಿಸಿ ಅರಳಿ ಮರಕ್ಕೆ ಎಂದು ಬಾಡದಂತೆ ಹಚ್ಚ ಹಸಿರಾಗಿ ಕಂಗೊಳಿಸುತ್ತಾ ದೈವ ವೃಕ್ಷವಾಗಿ ಪೂಜೆಗಳನ್ನು ಸ್ವೀಕರಿಸು ಎಂದು ಆಶೀರ್ವದಿಸುತ್ತಾರೆ ಸೀತಾದೇವಿ. ಆದ್ದರಿಂದಲೇ ಅರಳಿ ಮರ ಇಂದಿಗೂ ಬಾಡುವುದಿಲ್ಲಾ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: