ಸಿದ್ದರಾಮಯ್ಯನವರ ಮಗ ರಾಕೇಶ್ ಸಿದ್ದರಾಮಯ್ಯ 2016 ರಲ್ಲಿ ಇದ್ದಕ್ಕಿದ್ದಂತೆ ವಿಧಿವಶರಾಗಿದ್ದೆಗೆ?

0

ರಾಕೇಶ್ ಸಿದ್ದರಾಮಯ್ಯ ಎರಡು ಸಾವಿರದ ಹಾದಿನಾರರಲ್ಲಿ ಇದ್ದಕ್ಕಿದ್ದಂತೆ ವಿಧಿವಶರಾಗುತ್ತಾರೆ. ಅವರ ಸಾವಿಗೆ ಸಂಬಂಧಪಟ್ಟಂತೆ ನಾನಾ ರೀತಿಯ ಚರ್ಚೆಗಳಾಗುತ್ತದೆ ಮತ್ತೊಂದು ಕಡೆ ಸಿದ್ದರಾಮಯ್ಯನವರಿಗೆ ಈ ವಿಷಯವನ್ನು ಅರಗಿಸಿ ಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕುಗ್ಗಿ ಹೋಗಿಬಿಡುತ್ತಾರೆ ಪುತ್ರ ಶೋಕಂ ನಿರಂತರ ಎನ್ನುತ್ತಾರೆ. ಎಂತಹ ಉನ್ನತ ಹುದ್ದೆಯಲ್ಲಿದ್ದರೂ ಮಕ್ಕಳಿಗೆ ತಂದೆ ತಂದೆಯೇ. ಪ್ರತಿಯೊಬ್ಬ ತಂದೆ ತಾಯಿಯೂ ತಾವು ಸತ್ತ ನಂತರ ನಮ್ಮ ಮಕ್ಕಳು ಚಿತೆಗೆ ಬೆಂಕಿ ಇಡಬೇಕು ಎಂದು ಬಯಸುತ್ತಾರೆ. ಆದರೆ ಕಣ್ಣ ಮುಂದೆ ಮಕ್ಕಳೇ ವಿಧಿವಶರಾದಾಗ ತಂದೆ ತಾಯಿಗೆ ತುಂಬಾ ನೋವುಂಟಾಗುತ್ತದೆ.

ರಾಕೇಶ್ ಸಿದ್ದರಾಮಯ್ಯ ಪದವಿಯನ್ನು ಮುಗಿಸುತ್ತಾರೆ ಪದವಿ ಮುಗಿದ ತಕ್ಷಣ ತಂದೆ ರಾಜಕೀಯದಲ್ಲಿರುತ್ತಾರೆ. ಸಹಜವಾಗಿ ತಂದೆ ರಾಜಕೀಯದಲ್ಲಿ ಇರುವಾಗ ರಾಜಕೀಯಕ್ಕೆ ಬರಬೇಕು ಎನ್ನುವ ಆಸಕ್ತಿ ಇದ್ದೆ ಇರುತ್ತದೆ. ಸಿದ್ದರಾಮಯ್ಯ ಅವರಿಗೆ ಇಬ್ಬರು ಮಕ್ಕಳು ಯತಿಂದ್ರ ಡಾಕ್ಟರ್ ಮತ್ತೋರ್ವರು ರಾಕೇಶ್ ಅವರು ಪದವಿಯನ್ನು ಮುಗಿಸಿದ ನಂತರ ಹೇಳಿಕೊಳ್ಳುವಂತಹ ಉದ್ಯೋಗವನ್ನು ಮಾಡುತ್ತಿರಲಿಲ್ಲ. ಸಹಜವಾಗಿ ತಂದೆಯ ಬೆಂಗಾವಲಿಗೆ ನಿಂತುಕೊಳ್ಳಬೇಕು ಎನ್ನುವಂತಹ ಆಸೆ ರಾಜೇಶ್ ಸಿದ್ದರಾಮಯ್ಯ ಅವರಿಗೆ ಇತ್ತು. ಪ್ರಾರಂಭದಲ್ಲಿ ಸಿದ್ದರಾಮಯ್ಯ ಅವರು ಕುಟುಂಬದ ಸದಸ್ಯರಿಗೆ ರಾಜಕೀಯ ಪ್ರವೇಶಕ್ಕೆ ಅವಕಾಶ ಕೊಟ್ಟಿರಲಿಲ್ಲ ಆ ಕಾರಣ ರಾಕೇಶ್ ಅವರು ಸಿನಿಮಾ ಕ್ಷೇತ್ರದ ಕಡೆ ಮುಖ ಮಾಡುತ್ತಾರೆ.

ನನಗೆ ನೀನು ನಿನಗೆ ನಾನು ಎನ್ನುವ ಸಿನಿಮಾ ಕೂಡ ಸೆಟ್ಟೇರುತ್ತದೆ. ಆದರೆ ಬಿಡುಗಡೆ ಆಗುವುದಿಲ್ಲ ಸಿನಿಮಾ ಕೈ ಹಿಡಿಯುವುದಿಲ್ಲ ಎಂದು ರಾಕೇಶ್ ಅವರಿಗೆ ಅನಿಸುತ್ತದೆ. ಇದೆ ಸಮಯದಲ್ಲಿ ಸಿದ್ದರಾಮಯ್ಯ ಅವರಿಗೂ ರಾಜಕೀಯದಲ್ಲಿ ಏಳು ಬಿಳಿನ ಸ್ಥಿತಿ ಎದುರಾಗುತ್ತದೆ ಆ ಸಮಯದಲ್ಲಿ ರಾಕೇಶ್ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ನಿಲ್ಲುತ್ತಾರೆ. ಎಲ್ಲಾ ರೀತಿಯಲ್ಲಿಯೂ ತಂದೆಯ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಆ ಮೂಲಕ ನಿಧಾನವಾಗಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ನಂತರ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂದು ಬಿಂಬಿತರಾಗುತ್ತಾರೆ. ಹೆಚ್ಚು ಕಮ್ಮಿ ರಾಜಕೀಯದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗುವುದಕ್ಕೆ ವೇದಿಕೆಯನ್ನು ಸಿದ್ದಾಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಬೆಲ್ಜಿಯಂ ಪ್ರವಾಸದಲ್ಲಿ ಇದ್ದಂತಹ ರಾಕೇಶ್ ಆಸ್ಪತ್ರೆ ಸೇರುತ್ತಾರೆ.

ರಾಕೇಶ್ ಅವರು ಒಂದು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ವಿಧಿವಶರಾಗುತ್ತಾರೆ. ಇದೆ ಸಂದರ್ಭದಲ್ಲಿ ಅವನು ಮತ್ತು ಶ್ರಾವಣಿ ಎನ್ನುವ ಧಾರಾವಾಹಿಯ ನಟಿ ಚೈತ್ರ ರೆಡ್ಡಿ ಅವರ ಜೊತೆ ಇರುವ ಗ್ರೂಪ್ ಫೋಟೋ ಎಲ್ಲ ಕಡೆಗಳಲ್ಲಿ ಹರಿದಾಡುತ್ತದೆ. ಆಗ ಯಾವ ರೀತಿಯ ಚರ್ಚೆ ಪ್ರಾರಂಭವಾಗುತ್ತದೆ ಎಂದರೆ ಈ ಎಲ್ಲ ಸ್ನೇಹಿತರು ಬೆಲ್ಜಿಯಂನ ಭೂಮ್ ನಗರದಲ್ಲಿರುವ ಎಲೆಕ್ಟ್ರಾನಿಕ್ ಮುಸಿಯಂ ಹಬ್ಬಕ್ಕೆ ಹೋಗಿದ್ದಾರೆ ಒಂದಷ್ಟು ದಿನಗಳ ಕಾಲ ಆ ಹಬ್ಬ ನಡೆಯುತ್ತದೆ. ಅಲ್ಲಿ ಡ್ರಗ್ಸ್ ಪಾರ್ಟಿ ಎಲ್ಲವೂ ನಡೆಯುತ್ತದೆ ಎಣ್ಣೆ ಡ್ರಗ್ಸ್ ಎಲ್ಲವೂ ಇರುತ್ತದೆ ಈ ರೀತಿಯಾಗಿ ಸ್ನೇಹಿತರೆಲ್ಲರೂ ಸೇರಿ ಅಲ್ಲಿ ಎಣ್ಣೆಯನ್ನು ಹೊಡೆದಿದ್ದಾರೆ ಮೊದಲ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಆ ಗ್ರೂಪ್ ಫೋಟೋವನ್ನು ಚೈತ್ರ ರೆಡ್ಡಿ ಫೇಸ್ ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಎರಡನೇ ದಿನ ಈ ಘಟನೆ ಹೊರಬರುತ್ತಿದ್ದಂತೆ ಚೈತ್ರ ರೆಡ್ಡಿ ಆ ಫೋಟೋವನ್ನು ಡಿಲಿಟ್ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಒಂದಷ್ಟು ಮಾತುಗಳು ಕೇಳಿಬಂತು.

ಜೊತೆಗೆ ಇವರು ಎಣ್ಣೆ ಮತ್ತು ಡ್ರ..ಗ್ಸ್ ತೆಗೆದುಕೊಂಡು ಪಾರ್ಟಿಯ ಬೌನ್ಸರ್ ಜೊತೆ ಜಗಳ ಮಾಡುತ್ತಾರೆ ಅವರು ಇವರಿಗೆ ಸರಿಯಾಗಿ ಹೊಡೆಯುತ್ತಾರೆ ರಾಕೇಶ್ ಅವರಿಗೆ ಗಾಯಗಳಾಗುತ್ತವೆ ಅವರ ಸ್ನೇಹಿತ ಇವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಬಹು ಅಂಗ ವೈಫಲ್ಯದಿಂದ ರಾಕೇಶ್ ಮರಣವನ್ನು ಹೊಂದುತ್ತಾರೆ ಎನ್ನುವ ಕೆಲವು ಬೇರೆ ಬೇರೆ ವಿಚಾರವೂ ಹರಿದಾಡುತ್ತದೆ. ಆ ಸಮಯದಲ್ಲಿ ಚೈತ್ರ ರೆಡ್ಡಿ ಅವರ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ ರಾಕೇಶ್ ಚೈತ್ರ ಅವರನ್ನ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತದೆ ನಂತರ ಚೈತ್ರ ಅವರು ಇದಕ್ಕೆಲ್ಲ ಸ್ಪಷ್ಟನೆ ನೀಡುತ್ತಾರೆ. ಆದರೆ ಆಗಿದ್ದು ಇಷ್ಟೇ ಎರಡು ಸಾವಿರದ ಇಸವಿಯ ಸಂದರ್ಭದಲ್ಲಿ ರಾಕೇಶ್ ಅವರು ಕಾರು ಅಪಗಾತಕ್ಕೆ ಒಳಗಾಗುತ್ತಾರೆ ತ್ರಿವ್ರವಾದ ಪೆಟ್ಟು ಬೀಳುತ್ತದೆ. ಆ ಕಾರಣ ಅವರಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಅಂದಿನಿಂದ ನಿರಂತರವಾಗಿ ರಾಕೇಶ್ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ಒಂದು ರೀತಿಯಲ್ಲಿ ಕರಳು ಬೇನೆ ಅವರಿಗೆ ಶುರುವಾಗಿರುತ್ತದೆ. ಹಾಗಾಗಿ ಅವರು ಮದ್ಯಪಾನ ದಿಂದ ದೂರವಿರಬೇಕಾಗುತ್ತದೆ. ಆದರೆ ರಾಕೇಶ್ ಅವರು ಅಲ್ಕೊ ಹಾಲ್ ಗೆ ಎಡಿಕ್ಟ್ ಆಗಿರುತ್ತಾರೆ. ಆ ಕುರಿತು ಸಿದ್ದರಾಮಯ್ಯನವರು ತಿಳಿ ಹೇಳಿರುತ್ತಾರೆ. ಆದರೆ ರಾಕೇಶ್ ಅವರು ಗೆಳೆಯರ ಜೊತೆ ಸೇರಿ ಪಾರ್ಟಿಗೆ ಹೋಗುತ್ತಿದ್ದರು. ಆಲ್ಕೋಹಾಲ್ ಇವರಿಗೆ ಕರುಳು ಬೇನೆಯನ್ನುಂಟು ಮಾಡುತ್ತದೆ ಇದೆ ಸಂದರ್ಭದಲ್ಲಿ ಆಯುರ್ವೇಧ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ಅದು ಅಷ್ಟರ ಮಟ್ಟಿಗೆ ಪರಿಣಾಮ ಬೀರುವುದಿಲ್ಲ ಆ ಕಾರಣಕ್ಕೆ ಅವರು ಬೆಲ್ಜಿಯಂಗೆ ಹೋಗುತ್ತಾರೆ.

ಹೋದಂತಹ ಸಂದರ್ಭದಲ್ಲಿ ಪಾರ್ಟಿಯಲ್ಲಿ ಭಾಗವಹಿಸುತ್ತಾರೆ ಜೊತೆಗೆ ಅವರಿಗೆ ಕರುಳು ಬೇನೆ ಹೆಚ್ಚಾಗುತ್ತದೆ. ಎಷ್ಟೇ ಚಿಕಿತ್ಸೆಯನ್ನು ನೀಡಿದರು ಪ್ರಯೋಜನವಾಗುವುದಿಲ್ಲ ಬಹು ಅಂಗ ವೈಫಲ್ಯದಿಂದ ಮರಣ ಹೊಂದುತ್ತಾರೆ. ಈ ರೀತಿಯಾಗಿ ಅವರ ಸಾವಿಗೆ ಮೂಲ ಕಾರಣ ಎರಡು ಸಾವಿರದಲ್ಲಿ ಕಾರು ಅಪಗಾತಕ್ಕಿಡಾಗುತ್ತಾರೆ ನಂತರ ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ ಆಲ್ಕೋಹಾಲ್ ಸೇವನೆ ಹೆಚ್ಚು ಮಾಡಿರುತ್ತಾರೆ ಆದಕಾರಣ ಕರುಳುಬೇನೆ ಉಲ್ಬಣಗೊಂಡು ಬಹು ಅಂಗ ವೈಫಲ್ಯದಿಂದ ಮರಣ ಹೊಂದುತ್ತಾರೆ. ಇದು ಅವರ ಸಾವಿಗೆ ಕಾರಣವಾದ ಸಂಗತಿ. ಸದ್ಯ ಅವರ ಪತ್ನಿ ಸ್ಮಿತಾ ಮತ್ತು ಇಬ್ಬರು ಮಕ್ಕಳನ್ನು ಸಿದ್ದರಾಮಯ್ಯನವರ ಕುಟುಂಬ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಇದಿಷ್ಟು ರಾಕೇಶ್ ಅವರ ಸಾವಿಗೆ ಸಂಬಂಧಿಸಿದಂತೆ ನಾವು ನಿಮಗೆ ತಿಳಿಸುತ್ತಿರುವ ವಿಚಾರ.

Leave A Reply

Your email address will not be published.

error: Content is protected !!