ಸಿಗಂದೂರು ಚೌಡೇಶ್ವರಿ ದೇವಿಯ ಕೃಪೆಯಿಂದ 12/5/23 ಇವತ್ತಿನ ರಾಶಿ ಭವಿಷ್ಯ ನೋಡಿ

0

ಮೇಷ ರಾಶಿ ಮನೆಗೆ ಮಕ್ಕಳ ಆಗಮನದಿಂದಾಗಿ ಹೆಚ್ಚಿನ ಸಂತೋಷವಿರುತ್ತದೆ. ಮಧ್ಯಮವರ್ಗದವರಿಗೆ ನಿತ್ಯದ ವಸ್ತುಗಳ ಬೆಲೆ ಹೆಚ್ಚಳ ಹೊರೆಯಾಗಿ ಕಾಣುವುದು. ಲಾರಿ ಬಸ್‌ ನಂತಹಾ ಬೃಹತ್ ವಾಹನ ಚಾಲಕರು ಕಾಳಜಿವಹಿಸಿ. ಉದ್ವೇಗವನ್ನು ಶಾಂತಗೊಳಿಸಲು ಮನಸ್ಸಿಗೆ ಸಮಾಧಾನವಾಗುವಂತಹಾ ಸಂಗೀತವನ್ನು ಕೇಳಿ.

ವೃಷಭ ರಾಶಿ ಉನ್ನತ ವಿದ್ಯಾಭ್ಯಾಸ ನಡೆಸಲು ವಿದೇಶಕ್ಕೆ ಹೋಗಬೇಕೆಂದು ಕೊಂಡಿರುವವರಿಗೆ ಆಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಗೃಹವಿನ್ಯಾಸಗಾರರಿಗೆ ಹಾಗೂ ಅಂತರಿಕ ವಿನ್ಯಾಸಗಾರರಿಗೆ ಉತ್ತಮ ಅವಕಾಶಗಳು ದೊರೆಯಲಿದೆ. ಅತ್ಯಾಪ್ತರಿಗಾಗಿ ಉಡುಗೊರೆ ಕೊಡುವ ಸಲುವಾಗಿಹುಡು ಕುತ್ತಿರುವ ವಸ್ತುವು ಈ ದಿನ ಲಭ್ಯವಾಗುವುದು.

ಮಿಥುನ ರಾಶಿ ಇದೀಗ ತಾನೇ ಚಿತ್ರರಂಗಕ್ಕೆ ಸೇರಿದ ಕಲಾವಿದರಿಗೆ ಪ್ರಯತ್ನ ಪ್ರಾಮಾಣಿಕವಾಗಿದ್ದಲ್ಲಿ ದೊಡ್ಡ ಮಟ್ಟದ ಪ್ರಚಾರ ದೊರೆಯುವುದು.ವಿದ್ಯೆಯ ಹೊರತಾಗಿ ಅವರಲ್ಲಿರುವ ಇತರ ಆಸಕ್ತಿಕರ ಕ್ಷೇತ್ರಗಳಲ್ಲಿ ಭಾಗವಹಿಸಿ.ಗಣಕಯಂತ್ರದ ಮುಂದೆ ಕೂತು ಕೆಲಸ ನಡೆಸುವವರು ಕಣ್ಣಿನ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿ.

ಕರ್ಕಾಟಕ ರಾಶಿ ದೀರ್ಘಕಾಲಿಕ ಯೋಜನೆಗಳ ಕೆಲಸವನ್ನು ಪ್ರಾರಂಭಮಾಡುವ ಮೊದಲು ಸಂಕ್ಷಿಪ್ತವಾದ ಸಭೆಯೊಂದಿಗೆ ಪಾಲುದಾರರಿಗೂ ಧೈಯೊದ್ದೇಶಗಳ ನ್ನು ತಿಳಿಸಿ. ಹೂವು ಹಣ್ಣು ಮಾರಾಟಗಾರರು ಲಾಭದೊಂದಿಗೆ ಹಿಂದಿರುಗುವಿರಿ.ನಿಮಗೆ ಬರಲು ಬಾಕಿ ಇದ್ದಂಥ ಹಳೇ ಸಾಲಗಳು ತೀರಿಸುವ ಬಗ್ಗೆ ಮಾತುಗಳನ್ನು ಕೇಳಡುವಿರಿ. ಆದರೆ ನಂಬಲು ಅನರ್ಹ.

ಸಿಂಹ ರಾಶಿ ಹೊಸ ವೃತ್ತಿ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವವರಿಗೆ ಹೊಸ ಜೊತೆಗಾರರೊಬ್ಬರು ಸಿಕ್ಕು ಸಮಾಧಾನವಾಗುತ್ತದೆ. ನಿಮ್ಮಭಾವನಾತ್ಮಕ ಪ್ರವೃತ್ತಿಯು ನಿಮ್ಮನ್ನು ಹೆಚ್ಚು ಕೆಲಸ ಮಾಡಿಸುವಂತೆ ಮಾಡಬಹುದು. ನೀವು ಮಾಡುತ್ತಿರುವಂತಹ ಕೆಲಸದಲ್ಲಿ ನಿಮ್ಮ ಅಪೇಕ್ಷಿಸಿನ ಮಟ್ಟಿಗೆ ಯಶಸ್ಸು ದೊರೆಯುವುದಿಲ್ಲ.

ಕನ್ಯಾ ರಾಶಿ ನಿಮ್ಮದಲ್ಲದ ಕ್ಷೇತ್ರದವರಿಗೆ ಸಲಹೆ ನೀಡಲು ಹೋಗಿ ಮುಖಭಂಗ ಮಾಡಿಕೊಳ್ಳದಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ವ್ಯಕ್ತಿಗಳಿಗೆ ಮನೆಗೆ ಹೋಗುವ ಅವಕಾಶ ಲಭಿಸಲಿರುವ ಕಾರಣ ಸಂತೋಷವಾಗಲಿದೆ. ವಿದ್ಯಾರ್ಥಿಗಳು ಓದು ಅಭ್ಯಾಸದಲ್ಲಿ ಹೆಚ್ಚಿನ ಗಮನವನ್ನು ಕೊಡಬೇಕು

ತುಲಾ ರಾಶಿ ಆರ್ಥಿಕ ಜೀವನದ ಪುನರುಜ್ಜಿವನವಾಗುವ ಎಲ್ಲಾ ಸಾಧ್ಯತೆಗಳಿವೆ.ಸಂಸಾರಿಸಿದ ಹಣವನ್ನು ಸನ್ಮಾರ್ಗದಲ್ಲಿ ಬಳಸಿ. ಅಕ್ರಮವಾದ ವ್ಯವಹಾರಗಳನ್ನು ಕೈಬಿಡುವುದು ಕ್ಷೇಮಕರ, ಬಡ ವಿದ್ಯಾರ್ಥಿಗೆ ಕೈಲಾದ ಧನ ಸಹಾಯ ಮಾಡಿ.

ವೃಶ್ಚಿಕ ರಾಶಿ ಆರ್ಥಿಕ ಸ್ಥಿತಿಯನ್ನು ನೀವಂದುಕೊಂಡ ಮಟ್ಟಕ್ಕೆ ತರಲು ಈಗಿನ ಪ್ರಯತ್ನ ಸಾಲುವುದಿಲ್ಲ. ಮಾತೃಸಂಬಂಧಿ ಬಂಧುಗಳ ಆಗಮನದಿಂದ ಸಂತೋಷ ಹೊಂದುವಿರಿ. ಮನೆಯ ಹಿರಿಯರಿಗೆ ಸರಿಯಾದ ಗೌರವ ಸಲ್ಲಿಸಿ. ಮನೆಗೆ ಬಂದ ಹೊಸ ವ್ಯಕ್ತಿಯೊಂದಿಗೆ ಉತ್ತಮ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ.

ಧನು ರಾಶಿ ಇಚ್ಚಾಶಕ್ತಿಯೊಂದಿಗೆ ಪ್ರಯತ್ನವೂ ಉತ್ತಮವಾಗಿರುವುದರಿಂದ ನೀವಂದುಕೊಂಡ ಕಾರ್ಯ ಅದ್ಭುತವಾಗಿ ನಡೆಯಲಿದೆ. ವ್ರತ ಹಾಗೂ ಅನುಷ್ಠಾನಫಲವಾಗಿ ಮಗ ಅಥವಾ ಮಗಳಿಗೆ ಶ್ರೇಯಸ್ತಾಗಲಿದೆ.ಸಾಗರ ಸಮೀಪದ ಪ್ರವಾಸಗಳನ್ನು ನಿಶ್ಚಯಿಸಿದ್ದರೆ ತಾತ್ಕಾಲಿಕವಾಗಿ ಅದನ್ನು ಮುಂದೂಡಿ.

ಮಕರ ರಾಶಿ ದೊಡ್ಡಮಟ್ಟದ ಲೋಕ ಕಲ್ಯಾಣಾರ್ಥವಾಗಿ ನಡೆಸುವ ಧಾರ್ಮಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರ ಬೆಂಬಲ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ದೊರೆಯಲಿದೆ. ಕೀಲು ನೋವುಗಳಂತಹ ಕಾಯಿಲೆ ನಿರ್ಲಕ್ಷಿಸದಿರಿ.ಹಲವು ವಿಚಾರಗಳು ಒಂದೇ ಬಾರಿಗೆ ತಲುಪುವುದರಿಂದತಳಮಳವಾಗಬಹುದು.

ಕುಂಭ ರಾಶಿ ಈ ಹಿಂದೆ ಕುಟುಂಬದೊಂದಿಗೆ ನಡೆದವೈಮನಸ್ಯವನ್ನು ಕ್ಷಮಾಯಾ ಚನೆಯೊಂದಿಗೆ ಮುಕ್ತಗೊಳಿಸಿಕೊಳ್ಳಿ. ನಿರ್ಜಲೀಕರಣದಂತಹಾ ಸಮಸ್ಯೆಗಳು ಕಾಡಬಹುದು. ದೂರದ ಪ್ರಯಾಣಗಳಿಗೆ ಆದಷ್ಟು ಮಟ್ಟಿಗೆ ಕಡಿವಾಣ ಹಾಕಿ.
ವಿದೇಶದಲ್ಲಿ ನೆಲೆಸಿರುವವರಿಗೆ ಸ್ವಸ್ಥಾನದಲ್ಲಿರುವ ಪೋಷಕರ ಬಗ್ಗೆ ತಲೆಬಿಸಿಯಾಗುತ್ತದೆ.

ಮೀನ ರಾಶಿ ಜೀವನದ ಕಷ್ಟ ಸುಖಗಳು ತಿರುಗುವ ಚಕ್ರದಂತಿರುವುದರಿಂದ ಒಳ್ಳೆಯ ದಿನಗಳು ಜೀವನದಲ್ಲಿದೆ ಎಂಬ ಆಶಾ ಭಾವನೆಯನ್ನು ಮರೆಯದಿರಿ. ಶಿಕ್ಷಣ ಮುಗಿಸಿರುವ ಉದ್ಯೋಗಾಭಿಲಾಷಿಗಳು ಉತ್ತಮ ವಿಚಾರ ಕೇಳುವಿರಿ.

Leave A Reply

Your email address will not be published.

error: Content is protected !!