2023ರ ಮೊದಲ ತಿಂಗಳು ಅಂದರೆ ಜನವರಿಯಲ್ಲಿ, ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸಲಿವೆ. ಈ ತಿಂಗಳು ಶುಕ್ರ, ಸೂರ್ಯ, ಶನಿ ಮತ್ತು ಬುಧದಂತಹ ದೊಡ್ಡ ಗ್ರಹಗಳ ರಾಶಿಚಕ್ರ ಬದಲಾವಣೆ ಇರುತ್ತದೆ. ಗ್ರಹಗಳ ಬದಲಾವಣೆಯ ಪರಿಣಾಮವು ನಿಮ್ಮ ಜೀವನದ ಮೇಲೂ ಗೋಚರಿಸುತ್ತದೆ. ಈ ತಿಂಗಳು ಸಿಂಹ ರಾಶಿಯವರಿಗೆ ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ತರಲಿದೆ. ಈ ಮಾಸ ಸಿಂಹ ರಾಶಿಯವರ ಪಾಲಿಗೆ ಹೇಗಿರಲಿದೆ ಎಂದು ಈ ಲೇಖನದಲ್ಲಿ ತಿಳಿಯೋಣ

ಸಿಂಹ ರಾಶಿಯವರಿಗೆ ಜನವರಿ ತಿಂಗಳು ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ತರಲಿದೆ. ಗುರುವಿನ ಕೃಪೆಗೆ ಪಾತ್ರರಾಗುವಿರಿ. ನಿಮಗೆ ಆರನೇ ಮನೆಯಲ್ಲಿ ಇದ್ದ ಶನಿ ಏಳನೇ ಮನೆಗೆ 17ರಂದು ಪ್ರವೇಶವಾಗುತ್ತಾನೆ. ಆರನೇ ಮನೆಯ ಶನಿ ಬಹಳ ಲಾಭವನ್ನು ಕೊಟ್ಟಿರುತ್ತಾನೆ. ಹಣಕಾಸು ಅಧಿಕಾರ ಕೀರ್ತಿ ಪ್ರತಿಷ್ಠೆ ಎಲ್ಲವನ್ನೂ ನೋಡಿದ್ದೀರಿ. ಈಗ ಅವೆಲ್ಲವನ್ನೂ ಒರೆಗೆ ಹಚ್ಚುವ ಸಮಯ. ಅಂದರೆ ನಿಮ್ಮನ್ನು ನೀವು ಪ್ರೂವ್ ಮಾಡಿಕೊಳ್ಳುವ ಸಮಯ. ಕೊಂಚ ಸಂಕಟಗಳು ಎದುರಾಗಬಹುದು.

ಈ ಹಿಂದೆ ಅನುಭವಿಸಿದಷ್ಟು ಸುಖಸಂತೋಷಗಳು ಸಿಗದೇ ಇದ್ದರೂ ನಷ್ಟವಾಗದೇ ಇದ್ದರೂ ನಿಮಗೆ ಅಂಥ ಲಾಭದ ಸಮಯ ಅಲ್ಲ. ಯಾವ ವಿಚಾರಕ್ಕೂ ಯೋಚಿಸಿ ಹೆಜ್ಜೆ ಮುಂದಿಡಿ. ಏಪ್ರಿಲ್ ವರೆಗೂ ಗುರುಬಲವೂ ಇಲ್ಲ. ಏಪ್ರಿಲ್ ನಂತರ ಗುರುಬಲ ಸಿಗುತ್ತದೆ ಆದರೆ ಗುರು ರಾಹು ಒಟ್ಟಿಗೆ ಇರುವುದು ನಿಮಗೆ ಹೇಳಿಕೊಳ್ಳುವಂಥ ಲಾಭ ಕೊಡುವುದಿಲ್ಲ. ಮೂರನೇ ಮನೆಯ ಕೇತು ನಿಮಗೆ ಶುಭಕಾರಕನಾಗಿದ್ದಾನೆ.

ಧೈರ್ಯ ಮುನ್ನುಗ್ಗುವ ಕೆಚ್ಚು ಕೊಡುತ್ತಾನೆ. 10ರ ಕುಜ ಕಾರ್ಯಕ್ಷೇತ್ರವನ್ನು ಅಲುಗಾಡದಂತೆ ನಿಭಾಯಿಸುತ್ತಾನೆ. ಜನವರಿ 14 ರ ನಂತರ ಸೂರ್ಯನ ಮಕರ ರಾಶಿ ಪ್ರವೇಶ ನಿಮಗೆ ಶುಭಫಲಗಳನ್ನು ಕೊಡುತ್ತದೆ. ರಾಜಕೀಯವಾಗಿಯೂ ಒಳ್ಳೆಯ ಸ್ಥಾನಮಾನ ಸಿಗುವಂಥ ಸಮಯ ಸ್ವಂತ ಉದ್ಯಮ ನಡೆಸುವ ಹಾಗೂ ಬಾಸ್ ಸ್ಥಾನದಲ್ಲಿ ಇರುವವವರಿಗೆ ಸೂರ್ಯ ಹೆಚ್ಚು ಶಕ್ತಿಯನ್ನು ಕರುಣಿಸುತ್ತಾನೆ. ಶುಕ್ರನ ಕುಂಭರಾಶಿ ಪ್ರವೇಶ ನಿಮಗೆ ಕೊಂಚ ಅನಾರೋಗ್ಯ ಕಾಡುತ್ತದೆ.

ಎಂಟರ ಗುರು ನಿಮಗೆ ಕಾರ್ಯವಿಳಂಬವನ್ನು ಮಾಡಿಸುತ್ತಾನೆ ನಿಧಾನ ಪ್ರಗತಿ ತಾಳ್ಮೆ ಕಳೆದುಕೊಳ್ಳಬೇಡಿ ದುಡುಕಬೇಡಿ ದುಡುಕಿನಿಂದ ಬಹಳ ನಷ್ಟ ಅನುಭವಿಸಬೇಕಾಗುತ್ತದೆ. ಕಾನೂನು ವಿಷಯಗಳು ಉದ್ಭವಿಸಬಹುದು. ತಿಂಗಳ ಮೂರನೇ ವಾರದಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಸದ್ಯಕ್ಕೆ ನಿಮ್ಮ ಸ್ವಭಾವದಲ್ಲಿ ನಮ್ರತೆಯನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.

ಅಲ್ಲದೆ, ಯಾವುದೇ ಹಿರಿಯ ವ್ಯಕ್ತಿಯೊಂದಿಗೆ ವಾದ ಮಾಡಬೇಡಿ. ಈ ತಿಂಗಳು ಬೆಲೆಬಾಳುವ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಯಾರಿಗಾದರೂ ಆರ್ಥಿಕವಾಗಿ ಸಹಾಯ ಮಾಡಿ ಆದರೆ ಹೆಚ್ಚುವರಿಯಾಗಿ ಯಾರಿಗೂ ಸಾಲ ನೀಡಬೇಡಿ. ವಿದೇಶದಿಂದ ಬರುವ ಒಪ್ಪಂದಗಳು ಈ ತಿಂಗಳು ನಿಮ್ಮ ವ್ಯವಹಾರಕ್ಕೆ ತುಂಬಾ ಒಳ್ಳೆಯದು. ಈ ತಿಂಗಳು ನಿಮ್ಮ ಪ್ರೀತಿಯ ಸಂಬಂಧವು ಬಲವಾಗಿರುತ್ತದೆ. ಆದರೆ ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಬೇಕು. ಈ ತಿಂಗಳು ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ.

By admin

Leave a Reply

Your email address will not be published. Required fields are marked *

error: Content is protected !!
Footer code: