ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಶಿವನ ದೇವಾಲಯದ ರ’ಹಸ್ಯ ನೋಡಿ

0

ತಮಿಳುನಾಡಿನ ತಂಜಾವೂರಿನಲ್ಲಿರುವ ಶಿವನಿಗೆ ಅರ್ಪಿತವಾದ ದೇವಾಲಯವಾಗಿದೆ ಇದು ಕಾವೇರಿ ನದಿಯ ದಕ್ಷಿಣ ದಂಡೆಯಲ್ಲಿರುವ ದೇವಾಲಯವಾಗಿದೆ ಇಲ್ಲಿ ಪರಶಿವನನ್ನು ರಾಜರಾಜೇಶ್ವರಂ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಮರಾಠರು ಈ ದೇವಾಲಯವನ್ನು ಬೃಹದೀಶ್ವರ ದೇವಾಲಯವೆಂದು ಕರೆದರು ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ

ಇದರೊಂದಿಗೆ ಅಲ್ಲಿ ರಾಜೇಂದ್ರ ಚೋಳ ನಿರ್ಮಿಸಿದ ಗಂಗೈಕೊಂಡ ಚೋಳಪುರಂ ಮತ್ತು ಐರಾವತೇಶ್ವರ ದೇವಾಲಯವು ಸೇರಿಕೊಂಡಿದೆ ಪೆರಿಯ ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್‌ನಿಂದ ನಿರ್ಮಿಸಲಾಗಿದ್ದು ಇದು ವಿಶ್ವದ ಮೊದಲ ಸಂಪೂರ್ಣ ಗ್ರಾನೈಟ್‌ ರಚನೆಯ ದೇವಾಲಯವಾಗಿದೆ ಈ ದೇವಾಲಯದ ನಿರ್ಮಾಣಕ್ಕೆ ಸುಮಾರು ಒಂದು ಲಕ್ಷದ ಮೂವತ್ತು ಟನ್‌ಗಳಷ್ಟು ಗ್ರಾನೈಟ್‌ ನ್ನು ಉಪಯೋಗಿಸಲಾಗಿದೆಯೆಂದು ಹೇಳಲಾಗಿದೆ.ನಾವು ಈ ಲೇಖನದ ಮೂಲಕ ಬೃಹದೇಶ್ವರ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

ಬೃಹದೇಶ್ವರ ದೇವಾಲಯವು ಸಾವಿರ ವರ್ಷದ ಇತಿಹಾಸವಿದೆ ಈ ದೇವಸ್ಥಾನಕ್ಕೆ ಭಾರತದಲ್ಲೇ ಅತಿ ದೊಡ್ಡ ಶಿವಲಿಂಗವಿದೆ ಹಾಗೆಯೇ ಅದ್ಭುತ ಲಕ್ಷಣಗಳನ್ನು ಒಳಗೊಂಡಿದೆ ದೊಡ್ಡ ಅಲಯದ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ ತಮಿಳು ನಾಡಿನ ತಂಜಾವೂರಿನಲ್ಲಿ ಈ ಆಲಯವಿದೆ ಹಾಗೆಯೇ ತಂಜನ್ ಎಂಬ ರಾಕ್ಷಸ ಇದ್ದುದರಿಂದ ಆ ಊರಿಗೆ ತಂಜಾವೂರು ಎಂಬ ಹೆಸರು ಬಂದಿತು

ತಂಜಾವೂರನ್ನು ಚೋಳರ ಕಾಲದಲ್ಲಿ ರಾಜರಾಜಚೋಳ ಈ ದೇವಾಲಯವನ್ನು ನಿರ್ಮಿಸಿದನು ಐದು ವರ್ಷದಲ್ಲಿ ಅದ್ಭುತವಾದ ದೇವಸ್ಥಾನವನ್ನು ನಿರ್ಮಿಸಲಾಯಿತು ದೇವಸ್ಥಾನ ನಿರ್ಮಾಣ ಆಗಿ ಇವತ್ತಿಗೆ ಸಾವಿರ ವರ್ಷಗಳು ಆದರೂ ಯಾವುದೇ ಹಾನಿಗೆ ಒಳಗಾಗದೆ ನಿಂತಿದೆ ಈ ದೇವಸ್ಥಾನದಲ್ಲಿ ಇರುವ ಮುಖ್ಯ ದೇವರು ಈಶ್ವರ ಇಲ್ಲಿರುವ ಶಿವ ಲಿಂಗವನ್ನು ಹನ್ನೊಂದನೇ ಶತಮಾನದಲ್ಲಿ ಚೋಳ ರಾಜರು ಪ್ರತಿಷ್ಠಾಪನೆ ಮಾಡುತ್ತಾರೆ ಭಾರತದ ಅತಿ ದೊಡ್ಡ ಶಿವ ಲಿಂಗವಾಗಿದೆ ಏಳು ಮೀಟರ್ ಎತ್ತರ ಹಾಗೂ ಐದು ಮೀಟರ್ ಅಗಲ ಇರುತ್ತದೆ.

ಹಾಗೆಯೇ ನಂದಿ ವಿಗ್ರಹ ಇದೆ ಈ ನಂದಿ ವಿಗ್ರಹ ಎರಡು ಪಾಯಿಂಟ್ ಎರಡು ಏಳರಷ್ಟು ಎತ್ತರವಾಗಿದೆ ಐದು ಮೀಟರ್ ಅಗಲವಿದೆ ಇಪ್ಪತ್ತು ಟನ್ ಏಕಶಿಲಾ ವಿಗ್ರಹವಾಗಿದೆ ಈ ದೇವಾಲಯವನ್ನು ನಿರ್ಮಿಸಲು ಇಟ್ಟಿಗೆ ಸಿಮೆಂಟ್ ಸುಣ್ಣದಕಲ್ಲನ್ನು ಬಳಸದೆ ಜೇಡಿಮಣ್ಣು ಮತ್ತು ಅಂಟು ಬರುವ ಪದಾರ್ಥದಿಂದ ಕಟ್ಟಲಾಗಿದೆ ಈ ನಿರ್ಮಾಣದ ಮೇಲೆ ಯಾವುದೇ ತರದ ಪ್ಲಾಸ್ಟಿಗ್ ಕಾಣಿಸುವುದಿಲ್ಲ

ಅಡಿಯಿಂದ ಮೇಲಿನ ವರೆಗೂ ಗ್ರಾನೈಟ್ ಕಲ್ಲಿನಿಂದ ನಿರ್ಮಾಣವಾಗಿದೆ ಹದಿಮೂರು ಅಂತಸ್ತಿನ ವರೆಗೂ ಪೂರ್ತಿ ಗ್ರಾನೈಟ್ ಕಲ್ಲನ್ನು ಬಳಸಿ ನಿರ್ಮಿಸಿದ್ದಾರೆ ಎಲ್ಲೋ ದೂರದಲ್ಲಿ ಇರುವ ಗ್ರಾನೈಟ್ ಕಲ್ಲನ್ನು ಬಳಸಿ ನಿರ್ಮಾಣ ಮಾಡಲಾಗಿದೆ ಕಲ್ಲನ್ನು ನೂರಾ ಐವತ್ತು ಕಿಲೋಮೀಟರ್ ದೂರದ ಪುದುಕೋಟೈ ನಿಂದ ತರಲಾಗಿದೆ ಎಂದು ಅಂದಾಜು ಮಾಡಿದ್ದಾರೆ ದೇವಸ್ಥಾನ ಮೇಲೆ ಇರುವ ಗೋಪೂರದ ಕಲ್ಲನ್ನು ಎಂಬತ್ತೊಂದು ಟನ್ ಅಷ್ಟು ಇದೆ ಹಾಗೆಯೇ ಒಂದೇ ಕಪ್ಪು ಶಿಲೆಯಿಂದ ಮಾಡಿದ್ದಾರೆ .

ದೇವಸ್ಥಾನದ ಒಳಗೆ ಮಾತನಾಡಿಸಿದರೆ ಪ್ರತಿಧ್ವನಿಸುವುದಿಲ್ಲ ದೇವಸ್ಥಾನದ ಆವರಣದಲ್ಲಿ ಮೊದಲು ಗಣಪತಿ ದೇವಸ್ಥಾನ ಸಿಗುತ್ತದೆ ಹಾಗೆಯೇ ದೇವಾಲಯದ ಶಿಲ್ಪ ಕಲೆ ಎಲ್ಲರನ್ನೂ ಬೆರಗುಗೊಳಿಸುತ್ತದೆ ಒಂದೊಂದು ಕಂಬದಲ್ಲಿ ಒಂದೊಂದು ಶಬ್ದ ಬರುತ್ತದೆ ರಾಜರಾಜಚೋಳನು ದೇವಾಲಯ ನಿರ್ಮಿಸಿದ ಮೇಲೆ ಶಿಲ್ಪಿಯನ್ನು ದೇವಸ್ಥಾನ ಬೀಳುವುದಿಲ್ಲವೇ ಪ್ರಶ್ನಿಸಿದಾಗ ಶಿಲ್ಪಿ ದೇವಸ್ಥಾನದ ನೆರಳು ಕೂಡ ಬೀಳುವುದು ಇಲ್ಲ ಎಂದನು ಹೀಗಾಗಿ ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ

ಹದಿಮೂರು ಅಂತಸ್ತನ್ನು ಹೊಂದಿದ ದೇವಸ್ಥಾನದ ಎತ್ತರ ಅರವತ್ತು ಪಾಯಿಂಟ್ ಒಂಬತ್ತು ಆರು ಮೀಟರ್ ಇದು ನಿರ್ಮಾಣ ಆಗಿ ಸಾವಿರ ವರ್ಷ ದಾಟಿದೆ ಆದರೂ ಯಾವುದೇ ಹಾನಿಗೆ ಒಳಗಾಗದೆ ಗಟ್ಟಿಯಾಗಿ ನಿಂತಿದೆ ದೇವಸ್ಥಾನದ ಕೆಳಭಾಗದಲ್ಲಿ ಅನೇಕ ಸುರಂಗ ಮಾರ್ಗಗಳು ಇದೆ ಅವುಗಳಲ್ಲಿ ಕೆಲವು ತಂಜಾವೂರಿನ ಹಲವು ದೇವಾಲಯಕ್ಕೆ ದಾರಿಯನ್ನು ತೋರಿಸುತ್ತದೆ ಕೆಲವೊಂದು ಸುರಂಗ ಮಾರ್ಗಗಳು ದೊಡ್ಡ ದೊಡ್ಡ ಹಳ್ಳಗಳು ಇರುವುದರಿಂದ ದಾರಿಗಳನ್ನು ಮುಚ್ಚಿ ಹಾಕಿದ್ದಾರೆ

ರಾಜ ರಾಜ್ ಚೋಳನು ಭದ್ರತೆಗಾಗಿ ನಿರ್ಮಿಸಿದನು ಈ ಸುಂದರ ದೇವಾಲಯವನ್ನು ಕುಂಜರ ಮಾಲನ್ ರಾಜ ರಾಜ ಪೇರುತಂಚ ಎಂಬ ಶಿಲ್ಪಿ ನಿರ್ಮಿಸಿದನು ಭಾರತ ಸ್ವಾತಂತ್ರ ಪಡೆದ ಮೇಲೆ ಸರ್ಕಾರ ಒಂದು ಸಾವಿರ ರೂಪಾಯಿಯ ಮುಖ ಬೆಲೆಯ ನೋಟಿನ ಮೇಲೆ ಈ ದೇವಾಲಯದ ಚಿತ್ರವನ್ನು ಪ್ರಕಟಣೆ ಮಾಡಲಾಯಿತು ಹೀಗೆ ಈ ಬೃಹದೇಶ್ವರ ಮಂದಿರ ಪ್ರಸಿದ್ದಿಯನ್ನು ಪಡೆದಿದೆ.

Leave A Reply

Your email address will not be published.

error: Content is protected !!