ಸಮುದ್ರದಲ್ಲಿ ಸೇತುವೆ ಹೇಗೆ ಕಟ್ಟುತ್ತಾರೆ ನೋಡಿ ಇಂಟ್ರೆಸ್ಟಿಂಗ್ ವೀಡಿಯೊ

0

ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಇದರ ಎತ್ತರ ಎಂಟು ನೂರಾ ಮೂವತ್ತು ಮೀಟರ್. ಇದು ಇಂಜಿನಿಯರ್ಸ್ ಗಳು ನಿರ್ಮಿಸಿರುವ ಅದ್ಭುತ. ಇನ್ನು ಪ್ರಪಂಚದ ಬೇರೆ ಕಟ್ಟಡಗಳು ಚಿಕ್ಕದಾಗಿದ್ದರೂ ಕೂಡ ಅವುಗಳ ವಿನ್ಯಾಸ ಅದ್ಭುತವಾಗಿರುತ್ತದೆ ಅವುಗಳನ್ನು ಭೂಮಿಯ ಮೇಲೆ ನಿರ್ಮಿಸಲಾಗಿರುತ್ತದೆ. ನೆಲದ ಮೇಲೆ ಕಟ್ಟಡಗಳಿಗೆ ಫೌಂಡೇಶನ್ ಹಾಕುವುದು ತುಂಬಾ ಸುಲಭ ಆದರೆ ನೀರಿನಲ್ಲಿ ಹಾಕುವುದು ತುಂಬಾ ಕಷ್ಟ ಆದರೂ ನಮ್ಮ ಇಂಜಿನಿಯರ್ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೀರಿನಲ್ಲಿ ಫೌಂಡೇಶನನ್ನು ಹಾಕುತ್ತಾರೆ. ಅದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಮನೆ ಕಟ್ಟಬೇಕು ಎಂದರು ಅಪಾರ್ಟ್ಮೆಂಟ್ ಗಳನ್ನು ಕಟ್ಟಬೇಕು ಎಂದರು ನೆಲದ ಮೇಲೆ ಬ್ರಿಡ್ಜ್ ಕಟ್ಟಬೇಕು ಎಂದರು ಸಮುದ್ರ ಅಥವಾ ನದಿಯ ಮೇಲೆ ಬ್ರಿಡ್ಜ್ ಕಟ್ಟಬೇಕು ಎಂದರು ಮೊದಲು ಅದಕ್ಕೆ ಪಾಯ ಇರಬೇಕು. ಬ್ರಿಡ್ಜ್ ಗಳ ಫೌಂಡೇಶನ್ ಅವುಗಳ ಬ್ರಿಡ್ಜ್ ಗಳ ಆಕಾರದ ಮೇಲೆ ನಿರ್ಧರಿತವಾಗಿರುತ್ತದೆ. ಸಾಮಾನ್ಯವಾಗಿ ಬ್ರಿಡ್ಜ್ ಗಳಲ್ಲಿ ಮೂರು ವಿಧ ಇರುತ್ತದೆ ಒಂದು ಗ್ರೀನ್ ಬಿಡ್ಜ್ ಎರಡನೆಯದು ಸಸ್ಪೆನ್ಶನ್ ಬ್ರಿಡ್ಜ್ ಮೂರನೆಯದು ಆರ್ಟ್ಸ್ ಬ್ರಿಡ್ಜ್ ಅವುಗಳಲ್ಲಿ ಯಾವುದನ್ನಾದರೂ ನೆಲದ ಮೇಲೆ ನಿರ್ಮಾಣ ಮಾಡುವುದು ತುಂಬಾ ಸುಲಭ ಆದರೆ ನದಿ ಅಥವಾ ಸಮುದ್ರದ ಮೇಲೆ ಇಂತಹ ಬ್ರಿಡ್ಜ್ ಗಳನ್ನು ನಿರ್ಮಾಣ ಮಾಡಬೇಕು ಎಂದರೆ ತುಂಬಾ ಅಧ್ಯಯನ ಮಾಡಬೇಕಾಗಿ ಬರುತ್ತದೆ. ಮೊದಲು ನದಿ ಅಥವಾ ಸಮುದ್ರದಲ್ಲಿ ಬ್ರಿಡ್ಜ್ ಗಳನ್ನು ನಿರ್ಮಾಣ ಮಾಡುವ ಸ್ಥಳದಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ತಿಳಿಯಬೇಕು. ಅನಂತರ ನೀರು ಎಷ್ಟು ವೇಗವಾಗಿ ಹರಿಯುತ್ತಿದೆ ಎಂಬುದನ್ನು ತಿಳಿಯಬೇಕು. ಆನಂತರ ನೀರಿನ ತಳಭಾಗದಲ್ಲಿರುವ ಮಣ್ಣು ಯಾವ ರೀತಿಯಾಗಿದೆ ಅದರ ಕೆಪ್ಯಾಸಿಟಿ ಎಷ್ಟು ಎಂಬುದನ್ನು ತಿಳಿಯಬೇಕು.

ಆನಂತರ ಬ್ರಿಡ್ಜ್ ಮೇಲೆ ಎಷ್ಟು ಲೋಡ್ ಬೀಳುತ್ತದೆ ಬ್ರಿಡ್ಜ್ ನಿರ್ಮಾಣವಾದ ಮೇಲೆ ಅದರ ಮೇಲೆ ಎಷ್ಟು ವಾಹನಗಳು ಓಡಾಡುತ್ತವೆ ಎನ್ನುವುದನ್ನು ಮೊದಲು ಅಧ್ಯಯನ ಮಾಡಬೇಕು. ಇದಕ್ಕೆ ಸಂಬಂಧಿಸಿದ ವರದಿ ಬಂದ ನಂತರ ಬ್ರಿಡ್ಜ್ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸುತ್ತಾರೆ. ಸಮುದ್ರದ ಮಧ್ಯದಲ್ಲಿ ಆಯಿಲ್ ತೆಗೆಯುವ ಸ್ಟೇಷನ್ ಅನ್ನು ಮತ್ತು ವಿಂಡ್ ಪವರ್ ಟರ್ಬೈನ್ ಗಳನ್ನು ನಿರ್ಮಾಣ ಮಾಡಲು ಮೊದಲು ನಿರ್ಮಿಸಲಿರುವ ಜಾಗದೆ ಆಳಕ್ಕೆ ತಕ್ಕಂತೆ ದೊಡ್ಡ ದೊಡ್ಡ ಪೈಪುಗಳನ್ನು ತಯಾರಿಸುತ್ತಾರೆ. ಅವುಗಳನ್ನು ಹಡಗುಗಳ ಸಹಾಯದಿಂದ ನಿರ್ಮಿಸುವ ಜಾಗಕ್ಕೆ ಸಾಗಣೆ ಮಾಡುತ್ತಾರೆ. ನಂತರ ಅವುಗಳನ್ನು ಸಮುದ್ರದಲ್ಲಿ ಗಟ್ಟಿ ಮಣ್ಣು ಸಿಗುವವರೆಗೂ ಕ್ರೈನ್ ಗಳ ಮೂಲಕ ಪ್ರೆಸ್ ಮಾಡುತ್ತಾರೆ. ನಂತರ ಅವುಗಳ ಮೇಲೆ ಮತ್ತೊಂದು ಪೈಪ್ ನಿರ್ಮಾಣವನ್ನು ಇಟ್ಟು ವೆಲ್ಡಿಂಗ್ ಮಾಡುತ್ತಾರೆ. ಆ ನಂತರ ಕೆಳಭಾಗದಲ್ಲಿರುವ ಪೈಪ್ ಗೆ ಕಾಂಕ್ರೀಟ್ ಹಾಕಿ ತುಂಬಿಸುತ್ತಾರೆ ಅನಂತರ ಅವರಿಗೆ ಬೇಕಾದ ರೀತಿಯಲ್ಲಿ ನಿರ್ಮಾಣಗಳನ್ನು ನಿರ್ಮಿಸುತ್ತಾರೆ.

ಆದರೆ ಅದನ್ನು ಅಷ್ಟು ವೇಗವಾಗಿ ಸುಲಭವಾಗಿ ನಿರ್ಮಿಸುವುದಕ್ಕೆ ಸಾಧ್ಯವಿಲ್ಲ. ವರ್ಷಗಳ ಸಮಯ ಬೇಕಾಗುತ್ತದೆ ಇನ್ನು ನದಿ ಅಥವಾ ಬ್ರಿಡ್ಜ್ ಗಳಲ್ಲಿ ಫೌಂಡೇಶನ್ ಗಳನ್ನು ಹಾಕುವುದಕ್ಕೆ ಕಾಪರ್ ಡ್ಯಾಮ್ ಎನ್ನುವ ಪದ್ದತಿಯನ್ನ ಬಳಸುತ್ತಾರೆ ಅಂದರೆ ನೀರಿನ ಮದ್ಯದಲ್ಲಿ ಡ್ಯಾಮನ್ನು ನಿರ್ಮಿಸುವುದು. ಅವುಗಳು ವೃತ್ತಾಕಾರದಲ್ಲಿ ಅಥವಾ ಚೌಕಾಕಾರದಲ್ಲಿ ಇರುತ್ತದೆ ಅವುಗಳನ್ನು ಬಲವಾದ ಮೆಟಲ್ ಗಳಿಂದ ನಿರ್ಮಿಸಲಾಗಿರುತ್ತದೆ ಹಾಗಾಗಿ ತುಂಬಾ ಶಕ್ತಿಶಾಲಿಯಾಗಿರುತ್ತವೆ ಅವುಗಳ ಒಳಗಿನಿಂದ ಅಥವಾ ಹೊರಗಿನಿಂದ ಒಂದು ಹನಿ ನೀರು ಕೂಡ ಲೀಕ್ ಆಗುವುದಿಲ್ಲ. ಕಾಪರ್ ಡ್ಯಾಂಗಳನ್ನು ನೀರಿನಲ್ಲಿ ಫೌಂಡೇಶನ್ ಹಾಕಬೇಕಾದ ಸ್ಥಳಕ್ಕೆ ಶಿಪ್ ಕ್ರೇನ್ ಗಳ ಮೂಲಕ ತೆಗೆದುಕೊಂಡು ಹೋಗಿ ಇಡುತ್ತಾರೆ. ಕಾಪರ್ ಡ್ಯಾಮ್ ಎರಡು ಕಡೆ ತೆರೆದಿರುವುದರಿಂದ ನದಿ ಅಥವಾ ಸಮುದ್ರದಲ್ಲಿರುವ ನೀರು ಒಳಗೆ ಹೋಗುತ್ತದೆ ನಂತರ ಕೆಲವು ಹೈಡ್ರಾಲಿಕ್ ಯಂತ್ರಗಳ ಮೂಲಕ ಕಾಪರ್ ಡ್ಯಾಮ್ನ ಶೀಟ್ಗಳನ್ನು ನೀರಿನಲ್ಲಿ ಗಟ್ಟಿ ಮಣ್ಣು ಸಿಗುವವರೆಗೂ ಪ್ರೆಸ್ ಮಾಡುತ್ತಾರೆ ಅನಂತರ ಕಾಫರ್ ಡ್ಯಾಮಿನ ಒಳಗೆ ಇರುವಂತಹ ನೀರನ್ನು ಮೋಟಾರ್ ಗಳ ಸಹಾಯದಿಂದ ಖಾಲಿ ಮಾಡುತ್ತಾರೆ.

ಒಂದು ವೇಳೆ ಮತ್ತೆ ಕೆಳಗಿನಿಂದ ನೀರು ಉಕ್ಕಿ ಬಂದರೆ ಕಾಪರ್ ಡ್ಯಾಮನ್ನು ಮತ್ತೆ ಪ್ರೆಸ್ ಮಾಡಿ ಒಳಗೆ ಹೋಗುವಂತೆ ಮಾಡುತ್ತಾರೆ ಆನಂತರ ಕಾಫರ್ ಡ್ಯಾಮ್ ಖಾಲಿಯಾಗಿರುತ್ತದೆ ಆಗ ಫೌಂಡೇಶನ್ ಕೆಲಸವನ್ನು ಪ್ರಾರಂಭಿಸುತ್ತಾರೆ. ಸಮುದ್ರದ ಮಧ್ಯದಲ್ಲಿ ಯಾವುದನ್ನು ಅಷ್ಟು ಸುಲಭವಾಗಿ ನಿರ್ಮಿಸುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಅಂತಹ ನಿರ್ಮಾಣಗಳನ್ನು ಮೊದಲೇ ನೆಲದಮೇಲೆ ನಿರ್ಮಿಸಿ ಆನಂತರ ಸಮುದ್ರ ಮಾರ್ಗದಲ್ಲಿ ಅದನ್ನು ಎಳೆದುಕೊಂಡು ಹೋಗುತ್ತಾರೆ ಇದು ಒಂದು ಅಸಾಮಾನ್ಯವಾದಂತಹ ಕೆಲಸ. ಇದಿಷ್ಟು ತಂತ್ರಜ್ಞಾನವನ್ನು ಬಳಸಿ ನೀರಿನ ನಡುವೆ ಫೌಂಡೇಶನ್ ಗಳನ್ನು ಹೇಗೆ ನಿರ್ಮಿಸುತ್ತಾರೆ ಎಂಬುದರ ಕುರಿತಾದ ಕುತೂಹಲಕಾರಿ ಮಾಹಿತಿಯಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave A Reply

Your email address will not be published.

error: Content is protected !!