ಸಂಚಿತ್ ಹೆಗ್ಡೆ ಹಾಡಿದ ಹಾಡು ಅಪ್ಪು ಸರ್ ಗೆ ಸಕತ್ ಇಷ್ಟವಂತೆ, ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ

0

ಸಂಚಿತ್ ಹೆಗ್ಡೆ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವತ್ತಿನ ಘಾಟಾನುಘಟಿ ಟಾಪ್ ಗಾಯಕರಲ್ಲಿ ಅವರು ಕೂಡ ಒಬ್ಬರು. ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಗಾಯನ ಮಾಡುತ್ತ ಗಾಯನದಲ್ಲಿ ಹೊಸ ಚಾಪ್ ಮೂಡಿಸುತ್ತ ಹೆಸರು ಗಳಿಸಿರುವ ಯುವ ಗಾಯಕ ಹುಡುಗ. ಮನರಂಜನೆಯ ಕಾರ್ಯಕ್ರಮಗಳಿಗೆ ಹೆಸರುವಾಸಿ ಯಾಗಿರುವ, ಟೆಲಿವಿಷನ್ ಪರದೆಯಲ್ಲಿ ಒಂದಾಗಿರುವ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಜನ್ ಹದಿಮೂರರಲ್ಲಿ ಸ್ಪರ್ಧಿ ಕಂಟೆಸ್ಟ್ಂಟ್ ಆಗಿ ಬಂದಿದ್ದ ಸಂಚಿತ್ ಹೆಗ್ಡೆ ಮೊದಲ ಗಾಯನದಲ್ಲೆ ತಮ್ಮ ಧ್ವನಿಯಲ್ಲಿ ವಿಶೇಷವಾಗಿ ಹಾಡಿ ತೀರ್ಪುಗಾರರ ಮೆಚ್ಚುಗೆ ಪಡೆಯುವುದರ ಜೊತೆಗೆ ಜನರ ಮನಸ್ಸನ್ನು ಕೂಡ ಗೆದ್ದಿದ್ದರು.

ಯಾವ ಕವಿಯು ಬರೆಯಲಾರ” ಎಂಬ ಹಾಡನ್ನು ಹಾಡಿ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಲ್ಲದೆ ವಿಜಯ್ ಪ್ರಕಾಶ್ ಅವರು ಕೂಡ ಸಂಚಿತ್ ಹೆಗ್ಡೆ ಅವರ ಜೊತೆ ತಮ್ಮ ಧ್ವನಿಯನ್ನು ಸೇರಿಸಿ ವೇದಿಕೆಯ ಮೇಲೆ ಹಾಡಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ ತೆಲುಗು ತಮಿಳು ಹಾಗೂ ಹಿಂದಿ ಚಿತ್ರಗಳಲ್ಲು ಹಾಡಿ ಸೈ ಎನಿಸಿಕೊಂಡಿದ್ದಾರೆ.

ಅವರ ಗಾಯನಕ್ಕೆ ಸೋಲದವರಿಲ್ಲ. ಅವರ ಧ್ವನಿಗೆ ತಲೆದೂಗಿದರಿಲ್ಲ.2018 ರಲ್ಲಿ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಚಿತ್ರದಲ್ಲಿ ಮೂಡಿ ಬಂದ ” ಕುಷ್ ,ಕುಶ್ ” ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕನೆಂದು ಸೈಮ ಪ್ರಶಸ್ತಿ ಪಡೆದಿದ್ದಾರೆ. 2019 ರಲ್ಲಿ ಅತ್ಯುತ್ತಮ ಮುಂಬರುವ ಪುರುಷ ಗಾಯಕ ಎಂದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಇಷ್ಟೆಲ್ಲಾ ಪ್ರಶಸ್ತಿ ಪಡೆದು , ಇಡೀ ಭಾರತದಲ್ಲೇ ಹೆಸರು ಮಾಡಿರುವ ಈ ಯುವ ಗಾಯಕ ಹಾಡಿದ ಹಾಡೊಂದು ನಮ್ಮೆಲ್ಲರ ಅಚ್ಚು ಮೆಚ್ಚಿನ ಅಪ್ಪುಗೆ ತುಂಬಾ ಇಷ್ಟ ಆಗಿದೆ. ಹಾಗಾದ್ರೆ ಯಾವುದು ಆ ಹಾಡು ನೋಡೋಣ ಬನ್ನಿ. ಮೊನ್ನೆಯಷ್ಟೇ ನಡೆದ ಜೇಮ್ಸ್ ಚಿತ್ರದ ಕಾರ್ಯಕ್ರಮದಲ್ಲಿ ಸಂಚಿತ್ ಹೆಗ್ಡೆ ಕೂಡ ಭಾಗವಹಿಸಿದ್ದು ,ಆ ಚಿತ್ರದ ಸಲಾಂ ಸೋಲ್ಜರ್ ಹಾಡನ್ನು ಹಾಡುವ ಸಲುವಾಗಿ ವೇದಿಕೆ ಹತ್ತಿದ್ದ ಅವರನ್ನು ನಿರೂಪಣೆ ಮಾಡುತ್ತಿದ್ದ ಅನುಶ್ರೀ ಅವರು ಮಾತನಾಡಿಸಿದಾಗ, ನಟ ಸಾರ್ವಭೌಮ ಚಿತ್ರದ ಸಮಯದಲ್ಲಿ ಅಪ್ಪು ಅವರೇ ಹೇಳಿಕೊಂಡಿದ್ದು ತಾನು ಹಾಡಿದ ಶಾಕುಂತಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು ಈ ಹಾಡು ಅಪ್ಪುವರಿಗೆ ಇಷ್ಟ ಎಂದು ಹೇಳಿದ್ದಾರೆ.

Leave A Reply

Your email address will not be published.

error: Content is protected !!