WhatsApp Group Join Now
Telegram Group Join Now

ನಾವಿಂದು ನಿಮಗೆ ಕೆಲವೊಂದು ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಸಿಕೊಡುತ್ತೆವೆ. ಮೊದಲನೆಯದಾಗಿ ಡೇನಿಯಲ್ ಕಿಷ್ ಎಂಬ ವ್ಯಕ್ತಿ ತನ್ನ ಕಣ್ಣುಗಳನ್ನು ಕಳೆದುಕೊಳ್ಳುತ್ತಾರೆ ಆದರೆ ಡೇನಿಯಲ್ ಈ ಘಟನೆಯಿಂದ ಬಾದೆಪಟ್ಟು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಕೋ ಲೋಕೇಶನ್ ಎಂಬ ತಂತ್ರಜ್ಞಾನವನ್ನ ಕಲಿತುಕೊಳ್ಳುತ್ತಾರೆ. ಬಾವಲಿಗಳು ಕೂಡ ಇದೇ ಪದ್ಧತಿಯನ್ನು ಬಳಸುತ್ತವೆ ಅವು ಕತ್ತಲಿನಲ್ಲಿ ಇದ್ದಾಗ ಶಬ್ದವನ್ನು ಮಾಡುತ್ತವೆ ಶಬ್ದದ ಎದುರಿಗೆ ಯಾವುದಾದರೂ ವಸ್ತು ಇದ್ದರೆ ಆ ಶಬ್ದ ಎಕೊ ಆಗುತ್ತದೆ ಪ್ರತಿಧ್ವನಿ ಬಿಡುಗಡೆಯಾಗುತ್ತದೆ

ಆ ಪ್ರತಿಧ್ವನಿಯನ್ನು ಬಾವಲಿಗಳು ಮತ್ತೆ ಕೇಳಿಸಿಕೊಂಡು ಎದುರಿಗಿರುವ ವಸ್ತು ಎಷ್ಟು ದೂರದಲ್ಲಿದೆ ಎಷ್ಟು ದೊಡ್ಡದಾಗಿದೆ ಎಂಬುದನ್ನು ಗುರುತಿಸುತ್ತವೆ ಇದೇ ರೀತಿ ಪದ್ಧತಿಯನ್ನು ಡೇನಿಯಲ್ ಕಿಷ್ ಕೂಡ ಕಲಿತುಕೊಂಡಿದ್ದಾರೆ. ಇವರು ತಮ್ಮ ಬಾಯಿಂದ ಚಿಕ್ಕ ಚಿಕ್ಕ ಶಬ್ದಗಳನ್ನ ಮಾಡುತ್ತಾರೆ ಶಬ್ದ ಪ್ರತಿಧ್ವನಿಯಾಗಿ ಅವರಿಗೆ ಕೇಳಿಸಿದಾಗ ಎದುರಿಗಿರುವ ವಸ್ತು ಯಾವುದು ಎಂದು ಗುರುತಿಸುತ್ತಾರೆ. ಇವರು ಈ ತಂತ್ರಜ್ಞಾನದಿಂದ ಸೈಕಲನ್ನು ತಿಳಿಯುತ್ತಾರೆ ಗುಡ್ಡಗಳನ್ನು ಹತ್ತುತ್ತಾರೆ ಅಡವಿಗಳಲ್ಲಿ ಕೂಡ ಓಡಾಡುತ್ತಾರೆ ಈಗ ಡೇನಿಯಲ್ ಎಕೋ ಲೊಕೇಶನ್ ಟೆಕ್ನಿಕ್ ಅನ್ನು ಕಣ್ಣು ಇಲ್ಲದ ಐದುನೂರು ಜನರಿಗೆ ಕಲಿಸುತ್ತಿದ್ದಾನೆ.

ನಾವು ನಿಮಗೆ ತಿಳಿಸುವ ಎರಡನೇ ಮಾಹಿತಿ ಪ್ರಪಂಚದ ಪ್ರತಿ ಪೊಲೀಸರಿಗೂ ಇರುವ ಸಮಸ್ಯೆ ಏನು ಎಂದರೆ ಅವರು ಅಪರಾಧಿಯನ್ನು ಹಿಡಿಯಲು ಎಲ್ಲಾ ಪ್ರದೇಶಗಳಿಗೆ ತಮ್ಮ ಕಾರು ಅಥವಾ ಬೈಕನ್ನು ತೆಗೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ ಇದಕ್ಕಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಇಂಜಿನಿಯರ್ಗಳು ಶೂ ಕಂಡುಹಿಡಿದಿದ್ದಾರೆ ಈ ಶೂ ಹೆಸರು ಬಯೋನಿಕ್ ಬೂಟ್ಸ್ ಇಂಟು ಸೆವೆಂಟೀನ್. ಇವುಗಳನ್ನು ಆಸ್ಟ್ರಿಚ್ ಪಕ್ಷಿಗಳ ಕಾಲುಗಳಿಂದ ಪ್ರೇರಿತಗೊಂಡು ತಯಾರಿಸಿದ್ದಾರೆ ಈ ಶೂಗಳನ್ನು ಧರಿಸಿ ಎಂತಹದ್ದೇ ಪ್ರದೇಶದಲ್ಲಿ ನಲವತ್ತರಿಂದ ಐವತ್ತು ಕಿಲೋಮೀಟರ್ ವೇಗದಲ್ಲಿ ಚಲಿಸಬಹುದು ಈ ತಂತ್ರಜ್ಞಾನ ಭವಿಷ್ಯದ ಪೊಲೀಸ ಇಲಾಖೆಯನ್ನು ಬದಲಾಯಿಸಲಿದೆ

ಮೂರನೇ ಮಾಹಿತಿ ನಾವು ಇಂಟರ್ನೆಟ್ ಅನ್ನು ಡೇಟಾ ಬ್ಯಾಲೆನ್ಸ್ ಹಾಕಿಸಿಕೊಂಡು ಉಪಯೋಗ ಮಾಡುತ್ತೇವೆ ಇಲ್ಲವೇ ಎಕ್ಸೆಲ್ ಬ್ರಾಡ್ಬ್ಯಾಂಡ್ ನಂತಹ ಕೇಬಲ್ ನೆಟ್ಟನ್ನು ಬಳಸುತ್ತೇವೆ. ಆದರೆ ಹಳ್ಳಿಗಳಲ್ಲಿ ಇಂಟರ್ನೆಟ್ ಬಳಕೆ ಸ್ವಲ್ಪ ಕಡಿಮೆ ಇರುತ್ತದೆ ಇದಕ್ಕೆ ಹಲವಾರು ಕಾರಣಗಳಿವೆ ಸಿಗ್ನಲ್ ಟವರ್ ಕೊರತೆ ಅಥವಾ ಫೈಬರ್ ಕೇಬಲ್ ಹಾಕಿರುವುದಿಲ್ಲ ಹೀಗೆ ಕೆಲವೊಂದು ಕಾರಣಗಳಿಂದ ಹಳ್ಳಿಗಳಲ್ಲಿ ಇಂಟರ್ನೆಟ್ ಬಳಕೆ ಕಡಿಮೆ ಇರುತ್ತದೆ. ಆದರೆ ಇನ್ನು ಮುಂದೆ ನೀವು ಹಳ್ಳಿಗಳಲ್ಲಿ ಇಂಟರ್ನೆಟ್ ಅನ್ನು ಅಡವಿಗಳಲ್ಲಿ ಎಲ್ಲಿ ಬೇಕಾದರೂ ಬಳಕೆ ಮಾಡಬಹುದು ಅದು ಹೇಗೆಂದರೆ ಸ್ಪೇಸ್ ಎಕ್ಸ್ ಅವರು ಸ್ಟಾರ್ ಲಿಂಕ್ ಎಂಬ ಪ್ರಾಜೆಕ್ಟನ್ನೂ ಮಾಡುತ್ತಿದ್ದಾರೆ ಇದಕ್ಕೋಸ್ಕರ ಹನ್ನೆರಡು ಸಾವಿರ ಇಂಟರ್ನೆಟ್ ಸೆಟಲೈಟ್ ಗಳನ್ನು ಭೂಮಿಯ ಸುತ್ತ ತಿರುಗುವುದಕ್ಕೆ ಕಳುಹಿಸುತ್ತಿದ್ದಾರೆ ಈವರೆಗೆ ಐದುನೂರು ಸೆಟಲೈಟ್ ಗಳನ್ನು ಕಳುಹಿಸಿದ್ದಾರೆ ಹಾಗಾಗಿ ನೀವು ಇನ್ನು ಮುಂದೆ ಎಲ್ಲಿಂದ ಬೇಕಾದರೂ ಇಂಟರ್ನೆಟ್ ಬಳಸಬಹುದು.

ನಾಲ್ಕನೆಯದಾಗಿ ನಮಗೆ ಚಿಕ್ಕವರಿದ್ದಾಗ ಉಯ್ಯಾಲೆ ಆಡುವುದು ಎಂದರೆ ತುಂಬಾ ಇಷ್ಟಇತ್ತು ಇದನ್ನ ಇಂಗ್ಲಿಷ್ನಲ್ಲಿ ರೋಪ್ಸ್ ವಿಂಗ್ಸ ಎಂದು ಕರೆಯುತ್ತಾರೆ ಆದರೆ ಪ್ರಪಂಚದ ಅತಿ ಎತ್ತರದ ರೋಪ್ಸ್ ವಿಂಗ್ಸ ಸೌತ್ ಆಫ್ರಿಕಾದ ಮೋಸಸ್ ಮಬಿದ ಸ್ಟೇಡಿಯಂ ನಲ್ಲಿ ಇದೆ ಇದನ್ನು ಅಲ್ಲಿನ ಜನರು ಬಿಗ್ ರೆಸ್ಟ್ ಎಂದು ಕರೆಯುತ್ತಾರೆ. ರೋಪ್ಸ್ ವಿಂಗ್ಸ ಆಡಲು ಮುನ್ನುರಾ ಐವತ್ತು ಮೆಟ್ಟಿಲುಗಳ ಮೇಲೆ ಎಲಿವೇಟರ್ ಸಹಾಯದಿಂದ ಕರೆದುಕೊಂಡು ಹೋಗುತ್ತಾರೆ ನಂತರ ಹಗ್ಗದಿಂದ ಕಟ್ಟಿ ಎರಡು ನೂರಾ ಎಂಬತ್ತೆಂಟು ಅಡಿಗಳ ಮೇಲಿನಿಂದ ಕೆಳಗೆ ತಳ್ಳುತ್ತಾರೆ. ಅಲ್ಲಿನ ಜನರು ಈ ಕ್ರೀಡಾಂಗಣಕ್ಕೆ ಮ್ಯಾಚ್ ನೋಡುವುದಕ್ಕಿಂತ ಈ ರೈಡ್ ಎಂಜಾಯ್ ಮಾಡುವುದಕ್ಕೆ ಹೆಚ್ಚಾಗಿ ಬರುತ್ತಾರೆ. ಇದನ್ನು 2010 ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು ಇದಕ್ಕೆ 2012ರಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರುತ್ತದೆ

ನಾವು ನಿಮಗೆ ತಿಳಿಸುವ ಐದನೇ ಮಾಹಿತಿ ಲಾರೆನ್ಸ್ ಕಿನ್ ಬಿಕ್ ಎಂಬ ವ್ಯಕ್ತಿ ಒಂದು ಪುಸ್ತಕದ ಎಡಭಾಗದ ಪುಟವನ್ನು ಎಡಗಣ್ಣಿನಿಂದ ಬಲಭಾಗದ ಪುಟವನ್ನು ಬಲ ಬಲಗಣ್ಣಿನಿಂದ ಒಂದೇ ಸಮಯದಲ್ಲಿ ಓದಬಲ್ಲರು ಹೀಗೆ ಇವರು ಯಾವುದೇ ಪುಸ್ತಕವನ್ನಾದರೂ ಒಂದು ತಾಸಿನಲ್ಲಿ ಓದಬಲ್ಲರು ಮತ್ತು ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಕಿಮ್ ಚಿಕ್ಕವಯಸ್ಸಿನಲ್ಲಿ ಬುದ್ಧಿಮಾಂದ್ಯ ವ್ಯಾಧಿಗೆ ಒಳಗಾಗುತ್ತಾರೆ ವೈದ್ಯರು ಭವಿಷ್ಯತ್ತಿನಲ್ಲಿ ಮಾತನಾಡುವುದಿಲ್ಲ ಅವನಿಗೆ ಓದುವುದಕ್ಕೆ ಬರುವುದಿಲ್ಲ ಯಾವುದಾದರೂ ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದು ಹೇಳುತ್ತಾರೆ ಆದರೆ ಕಿಮ್ ಓದುವಂತೆ ಯಾರೂ ಓದುವುದಿಲ್ಲ ಆದರೆ ಕಿಮ್ ತನ್ನ ಕೆಲಸಗಳನ್ನು ತಾನು ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಅವನ ಎಲ್ಲ ಕೆಲಸಗಳನ್ನು ಅವನ ತಂದೆ ಮಾಡುತ್ತಿದ್ದರು ಕಿಮ್ ಹನ್ನೆರಡು ಸಾವಿರ ಪುಸ್ತಕಗಳನ್ನು ಓದಿದ್ದರು. ಅದರಲ್ಲಿ ಯಾವುದೇ ಪ್ರಶ್ನೆಯನ್ನು ಕೇಳಿದರು ಉತ್ತರಿಸುತ್ತಿದ್ದರು ಆದರೆ 2009ರಲ್ಲಿ ಅವರು ಮರಣವನ್ನು ಹೊಂದುತ್ತಾರೆ.

ನಾವು ನಿಮಗೆ ತಿಳಿಸುತ್ತಿರುವ ಆರನೇ ಮಾಹಿತಿ ಶಾಲೆ ಅಥವಾ ಕಾಲೇಜುಗಳ ವಾಹನಗಳು ಯಾವಾಗಲೂ ಹಳದಿ ಬಣ್ಣದಲ್ಲಿ ಇರುತ್ತವೆ ಹಳದಿ ಬಣ್ಣದಲ್ಲಿ ಇರುವುದಕ್ಕೆ ಕಾರಣ ಸುರಕ್ಷತೆ. ಅಂದರೆ ಹಳದಿ ಬಣ್ಣ ದೂರದಿಂದ ಬಹಳ ಚೆನ್ನಾಗಿ ಕಾಣಿಸುತ್ತದೆ ಇಷ್ಟೇ ಅಲ್ಲದೆ ಮಳೆಯಲ್ಲಿ ಮಂಜಿನಲ್ಲಿ ಕತ್ತಲಲ್ಲಿ ಹಳದಿ ಬಣ್ಣ ತುಂಬಾ ಚೆನ್ನಾಗಿ ಕಾಣಿಸುತ್ತದೆ ಇದರಿಂದಾಗಿ ಅಪಘಾತವಾಗುವ ಪ್ರಮಾಣ ಕಡಿಮೆ ಇರುತ್ತದೆ ಮತ್ತು ವಿದ್ಯಾರ್ಥಿಗಳು ಕೂಡ ಸುರಕ್ಷಿತವಾಗಿ ಮನೆಗೆ ಸೇರುತ್ತಾರೆ. ಸಾಮಾನ್ಯವಾಗಿ ಎಲ್ಲಾ ದೇಶಗಳ ಶಾಲಾ ವಾಹನಗಳು ಹಳದಿ ಬಣ್ಣದಲ್ಲಿ ಇರುತ್ತವೆ.

ಇದುವರೆಗೂ ಮನುಷ್ಯ ಬಾಹ್ಯಾಕಾಶಕ್ಕೆ ಕಳುಹಿಸಿದ ದೊಡ್ಡ ಒಬ್ಜೆಕ್ಟಿವ್ ಎಂದರೆ ಇಂಟರ್ನ್ಯಾಷನಲ್ ಫೇಸ್ ಸ್ಟೇಷನ್ ಇದನ್ನು ನೀವು ಭೂಮಿಯಿಂದ ಯಾವುದೇ ರೀತಿಯ ಟೆಲಿಸ್ಕೋಪ್ ಇಲ್ಲದೆ ನೋಡಬಹುದು ಇದನ್ನು ನೀವು ನೋಡಬೇಕು ಎಂದರೆ ಅದು ನಿಮ್ಮ ಮೇಲಿನಿಂದ ಹೋಗುವಾಗ ನೋಡಬಹುದು ಅದು ಹೇಗೆಂದರೆ ನಾಸಾಗೆ ಸಂಬಂಧಿಸಿದ ಸ್ಪಾಟ್ ದ ಸ್ಟೇಷನ್ ಎಂಬ ವೆಬ್ಸೈಟ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು ಆಗ ಅದು ನಿಮ್ಮ ಮೇಲಿನಿಂದ ಹೋಗುವಾಗ ನಾಸಾ ನಿಮಗೆ ಸಂದೇಶವನ್ನು ಕಳುಹಿಸುತ್ತದೆ.

ಇನ್ನೊಂದು ಕುತುಹಲಕಾರಿ ವಿಷಯವೆಂದರೆ ನೀವು ಟಿವಿಯಲ್ಲಿ ಅಥವಾ ಮೈದಾನದಲ್ಲಿ ಕ್ರಿಕೆಟ್ ನೋಡುವಾಗ ಗಮನಿಸಿರುತ್ತೀರಿ ಮೈದಾನದಲ್ಲಿ ಕ್ರಿಕೆಟ್ ಆಡುವ ಪಿಚ್ ನ ಅಕ್ಕಪಕ್ಕದಲ್ಲಿ ಎರಡು ಅಥವಾ ನಾಲ್ಕು ಪಿಚ್ ಗಳು ಇರುತ್ತವೆ ನೀವು ಯೋಚನೆ ಮಾಡಿದ್ದೀರಾ ಒಂದೇ ಪಿಚ್ ಆಡುವ ಆಟಕ್ಕೆ ಇಷ್ಟು ಪಿಚ್ ಗಳು ಯಾಕೆ ಎಂದು ಆದರೆ ಅದನ್ನು ಬೇರೆ ಬೇರೆ ಕಾರಣಗಳಿಗಾಗಿ ನಿರ್ಮಿಸಿರುತ್ತಾರೆ. ಒಂದು ಪಿಚ್ ನನ್ನು ಕೇವಲ ನೆಟ್ ಪ್ರಾಕ್ಟೀಸ್ ಗಾಗಿ ಉಪಯೋಗಿಸುತ್ತಾರೆ ಇನ್ನೊಂದನ್ನು ಲೋಕಲ್ ಮ್ಯಾಚ್ ಗಳಿಗಾಗಿ ಉಪಯೋಗಿಸುತ್ತಾರೆ ಇನ್ನೊಂದನ್ನು ಇಂಟರ್ನ್ಯಾಷನಲ್ ಮ್ಯಾಚ್ ಗಳಿಗಾಗಿ ನಿರ್ಮಿಸಿರುತ್ತಾರೆ. ಹೀಗೆ ಪ್ರತಿ ಪಿಚ್ ನ ಹಿಂದೆ ಒಂದೊಂದು ಕಾರಣ ಇರುತ್ತದೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಕುತೂಹಲಕಾರಿ ವಿಷಯಗಳಾಗಿವೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: