ಶನಿದೇವನ ಕೃಪೆಯಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಉದ್ಯೋಗದಲ್ಲಿ ಜಯ

0

ಜನವರಿ 22ರಲ್ಲಿ ಮುಗಿದಿರುವ ಶನಿಗ್ರಹ ಫೆಬ್ರುವರಿ 24ಕ್ಕೆ ಮತ್ತೆ ಉದಯವಾಗಲಿದೆ. ಉದಯವಾದ ಶನಿಗ್ರಹವು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತಾನೆ. ಆಯಾ ರಾಶಿಯಲ್ಲಿ ಜನಿಸಿದವರಿಗೆ ಶನಿ ದೇವರು ಪ್ರಭಾವ ಬೀರುತ್ತಾನೆ. ಹಾಗಾದರೆ ಯಾವ ರಾಶಿಯ ಮೇಲೆ ಶನಿದೇವರು ಯಾವ ರೀತಿ ಪರಿಣಾಮ ಬೀರುತ್ತಾನೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವುದೆ ಗ್ರಹವು ಉದಯಿಸುವಾಗ ಅಥವಾ ಅಸ್ತಮಿಸಿದಾಗ ಅದು ಎಲ್ಲಾ ರಾಶಿಚಕ್ರಗಳ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೆ ಶನಿದೇವನ ಉದಯವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಉದಯವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವಾಗಿರಲಿದೆ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಮೇಷ ರಾಶಿಯವರ ಮೇಲೆ ಶನಿಯ ದೃಷ್ಟಿ ಹೇಗಿದೆ ಎಂದು ನೋಡುವುದಾದರೆ ಶನಿಯ ಉದಯವು ಕರ್ಮದ ಮನೆಯಲ್ಲಿ ಸಂಭವಿಸಲಿದೆ. ಭಾಗ್ಯದ ಮನೆಯಲ್ಲಿ ಮಂಗಳ ಈಗಾಗಲೆ ಇದ್ದಾನೆ ಮನೆಯಲ್ಲಿ ಮಂಗಳಕಾರ್ಯ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಶನಿ-ಮಂಗಳರ ಸಂಯೋಗವು ವಿಪರೀತ ಲಾಭವನ್ನು ನೀಡುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ಜನರು ವಿಶೇಷ ಲಾಭವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿರುವವರು ಬಡ್ತಿ ಹೊಂದುವ ಸಾಧ್ಯತೆ ಇದೆ. ವೃಷಭ ರಾಶಿಯವರ ಮೇಲೆ ಶನಿಯ ದೃಷ್ಟಿ ಹೇಗಿದೆ ಎಂದು ನೋಡುವುದಾದರೆ. ಶನಿಯ ಉದಯವು ಈ ರಾಶಿಯವರಿಗೆ ಅಪಾರ ಸಂತೋಷವನ್ನು ತರುತ್ತದೆ. ಶನಿ ಉದಯದ ಅವಧಿಯಲ್ಲಿ ವ್ಯಾಪಾರದಲ್ಲಿ ಲಾಭ ಇರುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. ಹಲವಾರು ಮೂಲಗಳಿಂದ ಆರ್ಥಿಕ ಲಾಭವಾಗುತ್ತದೆ. 

ಕಟಕ ರಾಶಿಯವರ ಮೇಲೆ ಶನಿಯ ದೃಷ್ಟಿ ಹೇಗಿದೆ ಎಂದು ನೋಡುವುದಾದರೆ. ಶನಿಯು ಈ ರಾಶಿಯ ಏಳನೆ ಮನೆಯಲ್ಲಿ ಉದಯಿಸಲಿದ್ದಾನೆ. ಏಳನೆ ಮನೆ ವೈವಾಹಿಕ ಜೀವನ ಮತ್ತು ಪಾಲುದಾರಿಕೆಗೆ ಸಂಬಂಧಿಸಿದ್ದಾಗಿದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಕೆಲಸಗಳಿಗೂ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ ಅಲ್ಲದೆ ಪಾಲುದಾರಿಕೆ ಕೆಲಸದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ತುಲಾ ರಾಶಿಯವರ ಮೇಲೆ ಶನಿಯ ದೃಷ್ಟಿ ಹೇಗಿದೆ ಎಂದು ನೋಡುವುದಾದರೆ. ಶನಿಯು ಈ ರಾಶಿಗೆ ನಾಲ್ಕನೆ ಮನೆಯಲ್ಲಿ ಉದಯಿಸುತ್ತಾನೆ.

ನಾಲ್ಕನೆ ಮನೆಯನ್ನು ವಾಹನ ಸುಖ, ತಾಯಿ ಮತ್ತು ಕಟ್ಟಡ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಕಂಡುಬರುತ್ತದೆ. ತಾಯಿಯ ಕಡೆಯಿಂದ ಧನ ಲಾಭವಾಗಲಿದೆ. ಕೆಲಸದ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. 

ಮಕರ ರಾಶಿಯವರ ಮೇಲೆ ಶನಿಯ ದೃಷ್ಟಿ ಹೇಗಿದೆ ಎಂದು ನೋಡುವುದಾದರೆ. ಶನಿಯ ಉದಯದೊಂದಿಗೆ ಮಕರ ರಾಶಿಯ ಜಾತಕದಲ್ಲಿ ತ್ರಿಕೋನ ರಾಜಯೋಗವು ರೂಪುಗೊಳ್ಳಲಿದೆ ಇದರಿಂದಾಗಿ ವ್ಯಾಪಾರದಲ್ಲಿ ಆರ್ಥಿಕ ಪ್ರಗತಿಯ ಹಲವು ಮಾರ್ಗಗಳು ತೆರೆದುಕೊಳ್ಳುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ. ಕುಂಭ ರಾಶಿಯ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ.

ಈ ರಾಶಿಚಕ್ರವನ್ನು ಶನಿಯು ಆಳುತ್ತಾನೆ ಆದ್ದರಿಂದ ಶನಿಯ ಉದಯದಿಂದಾಗಿ ಈ ರಾಶಿಯ ಜನರು ಹಠಾತ್ ಧನಲಾಭವನ್ನು ಪಡೆಯಬಹುದು. ಅದೃಷ್ಟದ ಸಂಪೂರ್ಣ ಬೆಂಬಲ ಈ ರಾಶಿಯವರಿಗೆ ಸಿಗಲಿದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ. ಈ ರೀತಿ ಶನಿಯ ಉದಯವು ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರಲಿದೆ. ಈ ಲೇಖನವನ್ನು ಓದಿ ನಿಮ್ಮ ರಾಶಿ ಯಾವುದೆಂಬುದನ್ನು ತಿಳಿದುಕೊಳ್ಳಿ ಹಾಗೆಯೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ತಿಳಿಸಿ.

Leave A Reply

Your email address will not be published.

error: Content is protected !!