ವೃಷಭ ರಾಶಿಯವರ ಪಾಲಿಗೆ 2022 ರಲ್ಲಿ ವ್ಯಾಪಾರ ವ್ಯವಹಾರ ಉದ್ಯೋಗ ಹೇಗಿರಲಿದೆ?

0

ವೃಷಭ ರಾಶಿಯವರು ಈ ವರ್ಷ ಜೀವನದ ವಿವಿಧ ಅಂಶಗಳಲ್ಲಿ ಸರಾಸರಿ ಫಲಿತಾಂಶಗಳನ್ನು ಪಡೆಯುತ್ತಾರೆ, ಧನು ರಾಶಿಯಲ್ಲಿ ಜನವರಿ 16 ರಂದು ಮಂಗಳದ ಸಾಗಣೆಯೊಂದಿಗೆ ಅದೃಷ್ಟವು ನಿಮ್ಮ ಜೀವನದ ಪ್ರಮುಖ ಅಂಶಗಳಲ್ಲಿ ನಿಮಗೆ ಅನುಕೂಲಕರವಾಗಿರುತ್ತದೆ. ವೃಷಭ ರಾಶಿಯವರಿಗೆ 2022 ರ ಆರಂಭದಲ್ಲಿ ಗುರುವಿನ ಬಲ ಕಡಿಮೆ ಇದೆ ವ್ಯವಹಾರದಲ್ಲಿ ಅಥವಾ ಬೇರೆ ವ್ಯವಹಾರದಲ್ಲಿ ಹಣವನ್ನು ವಿನಿಯೋಗ ಮಾಡುವಂತಹದ್ದು ಇರಬಹುದು. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವುದು ಅಥವಾ ಬಂಗಾರದ ಮೇಲೆ ಹಣವನ್ನು ವಿನಿಯೋಗ ಮಾಡುವುದು ಮತ್ತು ಭೂಮಿಯನ್ನು ಖರೀದಿಸುವುದು ಮಾರುವುದು ಅಥವಾ ಯಾವುದೇ ಹಣಕಾಸು ಕ್ಷೇತ್ರದಲ್ಲಿ ಹಣವನ್ನು ಹೂಡಿದರೆ ನಾಲ್ಕು ತಿಂಗಳ ಕಾಲ ಹಣವನ್ನು ನಿರೀಕ್ಷಿಸಬೇಡಿ.

ಗ್ರಹಗಳ ಯೋಗ ಕಡಿಮೆ ಇರುವುದರಿಂದ ಹಣ ಬೇಗ ಕೈ ಸೇರುವುದಿಲ್ಲ ಹಾಗೆ ಹೋಟೆಲ್ ಉದ್ಯಮದಾರರಿಗೆ ಅಥವಾ ರೋಡ್ ಕಂಟ್ರ್ಯಾಕ್ಟ್ ಮಾಡುವವರಿಗೆ ತುಂಬಾ ಚನ್ನಾಗಿ ಆದಾಯ ನಿರೀಕ್ಷೆ ಮಾಡಬಹುದು ಹಾಗೆ ಬೇರೆ ಬೇರೆ ವ್ಯಾಪಾರ ರಫ್ತುದಾರರು ವ್ಯವಹಾರ ಕ್ಷೇತ್ರದಲ್ಲಿ ಅಗ್ರ ಸ್ಥಾನವನ್ನು ಪಡೆಯುವಿರಿ. ವೃಷಭ ರಾಶಿಯವರಿಗೆ ವಿದೇಶದಲ್ಲಿ ಹಣ ಹೂಡಿಕೆ ಮಾಡುವ ಯೋಗವಿದೆ. ವೃತ್ತಿ ಕ್ಷೇತ್ರದಲ್ಲಿ ನೀವು ಅನುಕೂಲಕರ ಫಲಿತಾಂಶವನ್ನು ಅನುಭವಿಸುವಿರಿ ಮತ್ತು ನಿಮ್ಮ ವೃತ್ತಿಪರ ಜೀವನವು ಚನ್ನಾಗಿ ಇರುತ್ತದೆ. ಅಲ್ಲದೇ ಶನಿಯು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿರುವದರಿಂದ ಬಹು ಆದಾಯದ ಮೂಲಗಳು ಉದ್ಭವಿಸುತ್ತವೆ.

ಏಪ್ರಿಲ್ ನಲ್ಲಿ ಹಲವಾರು ಗ್ರಹಗಳ ಚಲನೆಗಳು ನಡೆಯುವುದರಿಂದ ನೀವು ಸಂಪತ್ತು ಮತ್ತು ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಆದರೂ, ವಾರ್ಷಿಕ ಜಾತಕ 2022 ರ ಭವಿಷ್ಯ ವಾಣಿಯಂತೆ ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಹಲವಾರು ಏರಿಳಿತಗಳು ಕಂಡು ಬರುತ್ತವೆ. ಏಪ್ರಿಲ್ ನಿಂದ ನಿಮ್ಮ ರಾಶಿಯಿಂದ ಮೀನಾ ರಾಶಿಯಲ್ಲಿ ಗುರು ಗುರುವಿನ ಹನ್ನೊಂದನೇ ಮನೆಯಲ್ಲಿ ಸಾಗುವುದರಿಂದ ನೀವು ಅದ್ದೂರಿಯಾಗಿ ಖರ್ಚು ಮಾಡುತ್ತೀರಿ.

ನೀವು ಅಗತ್ಯಗಳು ಮತ್ತು ಆಸೆಗಳು ಅಲ್ಲದೆ, ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಬಹುದು. 2022 ರ ಕೊನೆಯ ಮೂರು ತಿಂಗಳುಗಳು, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ನಿಮ್ಮ ಮಕ್ಕಳಿಗೆ ಅನುಕೂಲಕರವಾಗಿರುತ್ತದೆ.

Leave A Reply

Your email address will not be published.

error: Content is protected !!