ವಿನೋದ್ ಪ್ರಭಾಕರ್ ತಂದೆ ಇಲ್ಲದಿದ್ದರೂ ತನ್ನ ಸ್ವಂತ ದುಡಿಮೆಯಿಂದ ಕಷ್ಟ ಪಟ್ಟು ದುಡಿದು ಕಟ್ಟಿಸಿದ ಮನೆ ಹೇಗಿದೆ ನೋಡಿ ಮೊದಲಬಾರಿಗೆ

0

ಕನ್ನಡ ಚಿತ್ರರಂಗ ಎಂದೂ ಮರೆಯದ ನಾಯಕ ನಟರ ಸಾಲಿನಲ್ಲಿ ಟೈಗರ್ ಪ್ರಭಾಕರ್ ಕೂಡ ಒಬ್ಬರು ತಮ್ಮ ವಿಭಿನ್ನ ನಟನಾ ಶೈಲಿಯ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು ಈಗ ಅವರ ಮಗ ವಿನೋದ್ ಪ್ರಭಾಕರ್ ಕೂಡ ತಂದೆಯ ರೀತಿಯಲ್ಲಿಯೇ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ನಟನೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ತಮ್ಮ ನಟನೆ ದೇಹದಾರ್ಡ್ಯತೆ ನಡವಳಿಕೆಯಿಂದ ತಮ್ಮ ತಂದೆಯನ್ನು ನೆನಪಿಸುತ್ತಾರೆ. ಆಕ್ಷನ್ ಆಧಾರಿತ ಪಾತ್ರ ಎರಡನೇ ನಾಯಕ ಹಾಗೂ ನೆಗೆಟಿವ್ ರೋಲ್ ಗಳ ಮೂಲಕ ತಮ್ಮ ಸಿನಿ ಜೀವನವನ್ನು ಆರಂಭಿಸಿದಂತಹ ವಿನೋದ್ ಪ್ರಭಾಕರ್ ನಾಯಕನಟನಾಗಿ ನಟಿಸುವುದರ ಮೂಲಕವಾಗಿ ತಮ್ಮ ತಂದೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಸದ್ಯ ವಿನೋದ್ ಪ್ರಭಾಕರ್ ಇಂದಿನ ಯುವಜನರ ಯೂತ್ಐಕಾನ್ ಆಗಿದ್ದಾರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ವಿನೋದ್ ಪ್ರಭಾಕರ್ ಅವರು ಹಂತಹಂತವಾಗಿ ಕನ್ನಡ ಚಿತ್ರರಂಗದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ.

ಇತ್ತೀಚಿಗೆ ದರ್ಶನ್ ಅವರ ರಾಬರ್ಟ್ ಸಿನಿಮಾದಲ್ಲೂ ಅವರ ಜತೆ ನಟನೆ ಮಾಡುವುದರ ಮೂಲಕ ಮತ್ತಷ್ಟು ಭರವಸೆಯನ್ನು ಮೂಡಿಸಿದ್ದಾರೆ. ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಸುಮಾರು ಹದಿನೈದು ವರ್ಷ ನಿಶಾ ಅವರನ್ನು ಪ್ರೀತಿಸಿದ ವಿನೋದ್ ಪ್ರಭಾಕರ್ ಅವರು ಎರಡು ಸಾವಿರದ ಹದಿನಾಲ್ಕರಲ್ಲಿ ಅವರನ್ನು ವಿವಾಹವಾಗುತ್ತಾರೆ. ನಿಶಾ ಅವರು ಮೂಲತಃ ಹೈದರಾಬಾದ್ ತೆಲುಗು ಮೂಲದವರು.

ವಿನೋದ್ ಪ್ರಭಾಕರ್ ಅವರು ಎದುರಿಸಿದ ಎಲ್ಲಾ ಕಷ್ಟಗಳಲ್ಲಿ ಜೊತೆಯಾಗಿ ನಿಂತು ಅವರಿಗೆ ಧೈರ್ಯವನ್ನು ತುಂಬುತ್ತಿದ್ದರು. ಇಬ್ಬರೂ ತುಂಬಾ ಹೊಂದಾಣಿಕೆಯನ್ನು ಮಾಡಿಕೊಂಡು ಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ವಿನೋದ್ ಪ್ರಭಾಕರ್ ಅವರು ಈಗ ಒಳ್ಳೆಯ ಜೀವನವನ್ನು ರೂಪಿಸಿಕೊಂಡಿದ್ದಾರೆ. ಹಾಗೆ ತಮ್ಮ ಅಭಿರುಚಿಗೆ ತಕ್ಕಂತೆ ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದಾರೆ. ಒಟ್ಟಾರೆಯಾಗಿ ವಿನೋದ್ ಪ್ರಭಾಕರ್ ಅವರು ಕಷ್ಟದಿಂದ ಮೇಲೆದ್ದು ತಮ್ಮ ಪ್ರಯತ್ನದಿಂದ ಇಂದು ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಉತ್ತಮ ಅವಕಾಶಗಳು ದೊರೆತು ಅವರ ಕೀರ್ತಿ ಇನ್ನೂ ಎತ್ತರಕ್ಕೆ ಏರಲಿ ಎಂದು ನಾವು ಆಶಿಸೋಣ.

Leave A Reply

Your email address will not be published.

error: Content is protected !!
Footer code: