ವಿಕ್ರಾಂತ್ ರೋಣ ಸಿನಿಮಾ ಸೆಟ್ ನಲ್ಲಿ ಕಿಚ್ಚ ಸುದೀಪ್ ಅಡುಗೆ ವಿಡಿಯೋ

0

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಟೀಸರ್ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ಸುದೀಪ್ ಅವರ ಕಟೌಟ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ಸುಳ್ಳಲ್ಲ. ಆರಂಭಿಕ ಹಂತದಿಂದಲೂ ನಿರೀಕ್ಷೆ ಮೂಡಿಸಿಕೊಂಡು ಬಂದಿರುವ ವಿಕ್ರಾಂತ್ ರೋಣ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ಇನ್ನು ಸಿಕ್ಕಿಲ್ಲ. ಏಕಂದರೆ ಮೊದಲು ಕೋಟಿಗೊಬ್ಬ 3 ಸಿನಿಮಾ ತೆರೆಕಾಣಬೇಕಿದೆ. ಆಮೇಲೆ ವಿಕ್ರಾಂತ್ ರೋಣ ಚಿತ್ರಮಂದಿರಕ್ಕೆ ಬರಲಿದೆ. ಆದರೆ ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಪ್ರಚಾರ ಜೋರಾಗಿಯೆ ಆರಂಭವಾಗಿದೆ. ದುಬೈನ ಬುರ್ಜ್ ಖಲೀಫಾ ಮೇಲೆ ಟೀಸರ್ ಲಾಂಚ್ ಮಾಡಿದ ಚಿತ್ರ ತಂಡ ಆರು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಖಚಿತ ಪಡಿಸಿದೆ.

ಸುದೀಪ್‌ ನಟನೆಯ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್‌ ರೋಣ ಮುಂಬರುವ ಆಗಸ್ಟ್‌ 19ರಂದು ತೆರೆಗೆ ಅಪ್ಪಳಿಸಲಿದೆ. ಈ ಕುರಿತು ಸ್ವತಃ ಸುದೀಪ್ ಅವರು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಸಿದ್ದತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ  ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ ಇದಾಗಿದ್ದು ವಿಕ್ರಾಂತ್ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ತಿಳಿಸಲು ನಮ್ಮ ವಿಕ್ರಾಂತ್ ರೋಣ ತಂಡವು ಹರ್ಷಿಸುತ್ತದೆ ಎಂದು ಪೋಸ್ಟ್‌ ಮಾಡಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ವಿಕ್ರಾಂತ್ ರೋಣ ಚಿತ್ರವನ್ನು ಅನೂಪ್‌ ಭಂಡಾರಿ ಅವರು ನಿರ್ದೇಶನ ಮಾಡಿದ್ದು ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜ್ಯಾಕ್‌ ಮಂಜು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ ಚಿತ್ರ ಇದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲೂ ಈ ಚಿತ್ರ ತೆರೆ ಕಾಣಲಿದೆ. ಇನ್ನು ನಮಗೆಲ್ಲ ತಿಳಿದೇ ಇದೆ ಕಿಚ್ಚ ಸುದೀಪ್ ಅವರು ನಟನೆ , ಕಾರ್ಯಕ್ರಮದ ನಿರೂಪಣೆ ಮಾತ್ರವಲ್ಲದೆ ಚೆನ್ನಾಗಿ ಅಡುಗೆ ಕೂಡಾ ಮಾಡುತ್ತಾರೆ ಎನ್ನುವ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಇದೇ ವೇಳೆ ವಿಕ್ರಾಂತ್ ರೋಣ ಚಿತ್ರದ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಕಿಚ್ಚ ಸುದೀಪ ಅವರು ಸೆಟ್ ನಲ್ಲಿ ಅಡುಗೆ ಮಾಡಿ ಎಲ್ಲರಿಗೂ ನೀಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಒಂದು ಪುಟ್ಟ ಹುಡುಗಿಗೆ ತನ್ನ ಇಷ್ಟದ ತಿಂಡಿಯನ್ನು ಸಹ ಮಾಡಿ ತಿನ್ನಲು ಕೊಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಈ ಕೆಳಗಿನ ವಿಡಿಯೋದಲ್ಲಿ ಕಿಚ್ಚ ಸುದೀಪ್ ಹೇಗೆ ವಿಕ್ರಾಂತ್ ರೋಣ ಚಿತ್ರದ ಸೆಟ್ ನಲ್ಲಿ ಅಡುಗೆ ಮಾಡುತ್ತಾ ಇದ್ದಾರೆ ಎನ್ನುವುದನ್ನು ಕಾಣಬಹುದು.

Leave A Reply

Your email address will not be published.

error: Content is protected !!