ವಕೀಲ ಜಗದೀಶ್ ಅರೆಸ್ಟ್ ಹಿಂದಿನ ರಹಸ್ಯ ಬಯಲು

0

ಸಮಾಜದ ಪರವಾಗಿ ನಿಂತುಕೊಂಡಿದ್ದ ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಿದ್ದಂತಹ ವಕೀಲ್ ಸಾಬ್ ಎಂದು ಎಲ್ಲರಿಂದಲೂ ಕರೆಸಿಕೊಳ್ಳುತ್ತಿದ್ದಂತಹ ಹಾಗೂ ಫೇಸ್ಬುಕ್ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ದೊಡ್ಡ ಮಟ್ಟಿಗೆ ಅಭಿಮಾನಿಗಳನ್ನು ಗಳಿಸಿದಂತಹ ಜಗದೀಶ್ ಅವರನ್ನು ಬಂಧಿಸಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಅವರು ಮಾತನಾಡಿದಂತಹ ಮಾತುಗಳಲ್ಲಿ ಬಳಸಿದಂತಹ ಪದಗಳಲ್ಲಿ ಕೆಲವು ಪದಗಳು ತಪ್ಪಿರಬಹುದು ಕೆಲವರಿಗೆ ಅವರು ಪದೇ ಪದೇ ಲೈವ್ ಗೆ ಬರುತ್ತಿದ್ದಾರೆ ಎನಿಸಿರಬಹುದು.

ಇದೆಲ್ಲದಕ್ಕೂ ಮಿಗಿಲಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದಕ್ಕೆ ಒಬ್ಬ ವ್ಯಕ್ತಿ ಇದ್ದರೂ ಎಂದರೆ ಅವರಿಗೆ ನಾವೆಲ್ಲರೂ ಬೆಂಬಲವನ್ನ ಕೊಡಬೇಕಾಗುತ್ತದೆ. ಆದರೆ ನಮ್ಮ ಸಮಾಜ ಅವರನ್ನು ನೋಡಿ ಕುಹಕ ಆಡುವುದಕ್ಕೆ ಶುರು ಮಾಡಿಕೊಳ್ಳುತ್ತದೆ ಅವರನ್ನು ನೋಡಿ ನಗುವುದಕ್ಕೆ ಪ್ರಾರಂಭಿಸುತ್ತದೆ.

ನೂರು ಜನ ಬಟ್ಟೆ ಬಿಚ್ಚಿ ನಡೆಯುವವರ ನಡುವೆ ಒಬ್ಬ ಬಟ್ಟೆ ಧರಿಸಿ ಓಡಾಡಿದರೆ ಅವನನ್ನ ನೋಡಿ ಸಮಾಜ ನಗುವುದಕ್ಕೆ ಪ್ರಾರಂಭಿಸುತ್ತದೆ ಎಂಬ ಮಾತಿದೆ ಅಂದರೆ ಎಲ್ಲರೂ ಭ್ರಷ್ಟರೇ ಆಗಿರುವ ಈ ಸಮಾಜದಲ್ಲಿ ಯಾರೋ ಒಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾನೆ ಎನ್ನುವ ಸಂದರ್ಭದಲ್ಲಿ ಈ ಸಮಾಜ ಪ್ರತಿಕ್ರಿಯಿಸುವ ಬಗೆಯೆ ಹೀಗೆ. ಜಗದೀಶ್ ಅವರು ಬಂಧನಕ್ಕೆ ಒಳಗಾದರೂ ಕೂಡ ಇನ್ನು ಸಮಾಜ ಎಚ್ಚೆತ್ತುಕೊಂಡಿಲ್ಲ. ಇವರು ಈ ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬರುವುದಕ್ಕಿಂತಲೂ ಮೊದಲಿನಿಂದಲೆ ಹೋರಾಟವನ್ನು ಪ್ರಾರಂಭಿಸಿದವರು ಆರ್ ಟಿ ಇ ಕಾರ್ಯಕರ್ತನಾಗಿ ಕೆಲಸವನ್ನು ಪ್ರಾರಂಭಿಸಿದವರು ಒಂದಿಷ್ಟು ಜನರ ಬ್ರಷ್ಟಾಚಾರದ ವಿಚಾರಗಳನ್ನು ಸಮಾಜದ ಮುಂದೆ ತೆರೆದಿಡುತ್ತಾರೆ.

ಈಗ ಜಗದೀಶ್ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು ಅವರ ಪರವಾಗಿ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ ಇಬ್ಬರು ವಕೀಲರು ಅವರ ಪರವಾಗಿ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಇದು ಯಾವ ರೀತಿಯಾಗಿ ಕಾರ್ಯರೂಪಕ್ಕೆ ಬರುತ್ತದೆ ಎಂದರೆ ಅದಕ್ಕೆ ಇನ್ನೊಬ್ಬರು ಜಾಮೀನು ಕೊಡದಂತೆ ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಆಗ ಕೋರ್ಟ್ ವಿಚಾರಣೆಯನ್ನು ನಡೆಸುತ್ತದೆ ಪರ-ವಿರೋಧ ವಾದವನ್ನು ಆಲಿಸಿ ಅದಕ್ಕೆ ಸಂಬಂಧಪಟ್ಟಂತೆ ತನ್ನ ನಿಲುವನ್ನು ಹೊರಡಿಸುತ್ತದೆ. ಷರತ್ತುಬದ್ಧ ಜಾಮೀನು ಅಥವಾ ಇನ್ಯಾವುದೋ ರೀತಿಯ ಜಾಮೀನನ್ನು ನೀಡುತ್ತದೆ.

ನಾವಿಂದು ವಕೀಲ ಜಗದೀಶ್ ಕೆ ಎನ್ ಅವರನ್ನು ಬಂಧಿಸಿರುವ ರಹಸ್ಯವೇನು ಯಾವ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಜಗದೀಶ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಸ್ ಅಧಿಕಾರಿ ಒಬ್ಬರ ವಿರುದ್ಧ ಹೋರಾಟವನ್ನು ಮಾಡುತ್ತಿದ್ದರು ಹೋರಾಟ ಯಾವ್ಯಾವುದೋ ರೂಪವನ್ನು ಪಡೆಯುತ್ತಿತ್ತು ಒಂದಿಷ್ಟು ಜನ ಜಗದೀಶ್ ಅವರ ವಿರುದ್ಧವಾಗಿ ನಿಂತುಕೊಂಡಿದ್ದರು ಒಂದಷ್ಟು ಷಡ್ಯಂತ್ರ ಕುತಂತ್ರ ಎಲ್ಲವೂ ನಡೆಯುತ್ತಿದ್ದವು.

ಐಪಿಎಸ್ ಅಧಿಕಾರಿ ಕೋರ್ಟ್ನಿಂದ ಇಂಜೆಕ್ಷನ್ ಆರ್ಡರ್ ತಂದಿರುವ ಕಾರಣ ಯಾವುದೇ ಮಾಧ್ಯಮಗಳಲ್ಲಿ ಆ ಕುರಿತು ಸುದ್ದಿ ಪ್ರಸಾರವಾಗುವ ಹಾಗಿರಲಿಲ್ಲ ಯೂಟ್ಯೂಬ್ ಗಳಲ್ಲಿ ಅದಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಮಾಡಿದ್ದರು ಅದನ್ನು ಡಿಲೀಟ್ ಮಾಡಿಸಲಾಗಿದೆ. ಅವತ್ತು ಐಪಿಎಸ್ ಅಧಿಕಾರಿಯವರು ಜಗದೀಶ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರೂ ಅದಕ್ಕೆ ಆಕ್ಷೇಪಣೆಯನ್ನು ಸಲ್ಲಿಸುವುದಕ್ಕೆ ಜಗದೀಶ್ ಅವರು ಕೋರ್ಟ್ನ ಆವರಣಕ್ಕೆ ಹೋಗುತ್ತಾರೆ ಇವರು ಕೋರ್ಟ್ನ ಆವರಣಕ್ಕೆ ಹೋಗುತ್ತಿದ್ದಂತೆ ಇವರನ್ನು ಸಿಕ್ಕಿ ಹಾಕಿಸಬೇಕು ಗಲಾಟೆಯನ್ನು ಮಾಡಬೇಕು ಎಂದು ಒಂದಿಷ್ಟು ಜನ ಸೇರಿರುತ್ತಾರೆ. ಜೊತೆಗೆ ಜಗದೀಶ್ ಅವರು ಕೂಡ ಐಪಿಎಸ್ ಅಧಿಕಾರಿಯ ಪರವಾಗಿ ಇರುವಂತಹ ವಕೀಲರಿಗೆ ಮನಸ್ಸಿಗೆ ಬಂದಂತೆ ಒಂದಿಷ್ಟು ಮಾತನಾಡಿರುತ್ತಾರೆ ಹಾಗಾಗಿ ಅವರೆಲ್ಲರೂ ಸೇರಿಕೊಂಡು ಏನಾದರೂ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ.

ಅಂದು ಅವರು ಕೋರ್ಟ್ನ ಆವರಣಕ್ಕೆ ಹೋಗುತ್ತಿದ್ದಂತೆ ಒಂದಿಷ್ಟು ಜನ ಅವರನ್ನು ಕೆರಳಿಸುವಂತಹ ಕೆಲಸವನ್ನು ಮಾಡುತ್ತಾರೆ. ಹೊರಗಡೆಯಿಂದಲೇ ಒಂದಿಷ್ಟು ಜನ ಗೂಂಡಾಗಳು ಕೂಡ ಬಂದಿದ್ದರು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎನ್ನುವಂತೆ ಅಲ್ಲಿ ಗದ್ದಲ ಗಲಾಟೆಗಳು ಪ್ರಾರಂಭವಾದವು ಮಧ್ಯದಲ್ಲಿ ಜಗದೀಶ್ ಅವರ ಮಗ ಸಿಕ್ಕಿಹಾಕಿಕೊಳ್ಳುತ್ತಾರೆ ಅವರಿಗೂ ಕೂಡ ಹಿಗ್ಗಾಮುಗ್ಗಾ ಹೊಡೆಯುತ್ತಾರೆ ಒಟ್ಟಾರೆಯಾಗಿ ಅಲ್ಲಿ ಗಲಾಟೆ ಮಾಡಬೇಕು ಗಲಾಟೆ ಆದ ತಕ್ಷಣ ಎಫ್ಐಆರ್ ದಾಖಲಿಸಿ ಇವರನ್ನು ಬಂಧಿಸಬೇಕು ಎಂದು ಮೊದಲೇ ಪ್ಲಾನ್ ಮಾಡಲಾಗಿರುತ್ತದೆ.

ಅಂದರೆ ಅವರ ಹೋರಾಟ ಮುಂದುವರಿಯುವುದಕ್ಕೆ ಬಿಡಬಾರದು ಅವರು ಜೈಲಿನಲ್ಲಿದ್ದಾಗ ಏನು ಬೇಕಾದ್ರೂ ಮಾಡಬಹುದು ಅಂದರೆ ಸಾಕ್ಷಿ ನಾಶ ಮಾಡುವುದಾದರೆ ಸಾಕ್ಷಿ ನಾಶ ಅವರ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡುವುದು ಆ ಮೂಲಕ ಅವರ ವೇದಿಕೆಯನ್ನು ಕಿತ್ತುಕೊಳ್ಳಬೇಕು ಎಂದು ಒಂದಿಷ್ಟು ಯೋಜನೆಗಳನ್ನು ಮಾಡಲಾಗುತ್ತದೆ. ಅಲ್ಲಿ ಗಲಾಟೆ ಆಗುತ್ತಿದ್ದಂತೆ ಮಗನ ಮೇಲೆ ಹಲ್ಲೆ ಆಗಿದ್ದಕ್ಕಾಗಿ ಜಗದೀಶ್ ಅವರು ಕೂಡ ದೂರನ್ನು ಕೊಡುತ್ತಾರೆ. ಸರಿಯಾದ ವ್ಯವಸ್ಥೆ ನಮ್ಮಲ್ಲಿ ಇದ್ದಿದ್ದರೆ ಹಲ್ಲೆ ಮಾಡಿದವರನ್ನು ತಕ್ಷಣವೇ ಹಿಡಿಯಬಹುದಾಗಿತ್ತು ಆದರೆ ಆ ಕೆಲಸ ಆಗಲಿಲ್ಲ. ಅದಕ್ಕೆ ಸಂಬಂಧಿಸಿದಂತಹ ಪ್ರತ್ಯಕ್ಷ ಸಾಕ್ಷಿ ವಿಡಿಯೋ ಎಲ್ಲವೂ ಕೂಡ ಇತ್ತು.

ಆದರೆ ಜಗದೀಶ್ ಅವರ ಮಗನ ಮೇಲೆ ಹಲ್ಲೆ ಮಾಡಿದವರನ್ನು ಇನ್ನೂ ಕೂಡ ಬಂದಿಸಿಲ್ಲ ಅವರ ಮೇಲೆ ಕ್ರಮವನ್ನು ಕೈಗೊಂಡಿಲ್ಲ. ಇವರು ದಾಖಲಿಸಿದಂತಹ ದೂರು ವ್ಯರ್ಥವಾಯಿತು ಅದು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಅದೇ ಸಮಯದಲ್ಲಿ ಜಗದೀಶ್ ಅವರ ಮೇಲೆ ಮೂರು ಕಡೆಗಳಲ್ಲಿ ಎಫ್ ಐಆರ್ ದಾಖಲಾಗುವ ರೀತಿಯಲ್ಲಿ ಮಾಡುತ್ತಾರೆ ಇದೇ ಸಮಯದಲ್ಲಿ ಜಗದೀಶ್ ಅವರು ಕೂಡ ಯಡವಟ್ಟು ಮಾಡಿಕೊಳ್ಳುತ್ತಾರೆ ಅದೇನೆಂದರೆ ಪೊಲೀಸ್ ಅಧಿಕಾರಿ ಆಗಿರುವಂತಹ ಕಮಲ್ ಪಂಥ್ ಹಾಗೂ ಇತರ ಕೆಲವು ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯುತ್ತಾರೆ. ಆ ಕಾರಣದಿಂದ ಇವರ ಮೇಲೆ ಎಫ್ಐಆರ್ ದಾಖಲಾಗುತ್ತದೆ ಜೊತೆಗೆ ಸ್ಟ್ರಾಂಗ್ ಆಗಿರುವಂತಹ ಐಪಿಸಿ ಸೆಕ್ಷನ್ ಗಳನ್ನು ಹೊರಡಿಸಲಾಗುತ್ತದೆ.

ಅಂದು ಭಾನುವಾರ ಜಾಮೀನು ಸಿಗುವುದು ಸುಲಭವಾಗಿರುವುದಿಲ್ಲ ಆ ಕಾರಣಕ್ಕಾಗಿ ಬೆಳ್ಳಂಬೆಳಗ್ಗೆ ಜಗದೀಶ್ ಅವರ ಮನೆಗೆ ಬಂದು ಅವರನ್ನು ಬಂಧಿಸುತ್ತಾರೆ. ಇದರ ಯಾವುದೇ ಮುನ್ಸೂಚನೆ ಇಲ್ಲದ ಜಗದೀಶ್ ಅವರು ಯಾವುದೇ ಪೂರ್ವ ತಯಾರಿಯನ್ನು ಮಾಡಿಕೊಂಡಿರುವುದಿಲ್ಲ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅವರ ಹೋರಾಟವನ್ನು ಮೊಟಕುಗೋಳಿಸಬೇಕು ಎಂಬ ಕಾರಣದಿಂದಲೇ ಸರಿಯಾದ ಯೋಜನೆಯನ್ನು ರೂಪಿಸಿಕೊಂಡು ಅವರನ್ನ ಸಿಕ್ಕಿ ಹಾಕಿಸಿ ಬಂಧನ ಮಾಡಲಾಗಿದೆ ಜೊತೆಗೆ ಅಲ್ಲಿ ಜಗದೀಶ್ ಅವರು ಕೆಲವೊಂದು ಎಡವಟ್ಟುಗಳನ್ನು ಮಾಡಿಕೊಂಡಿರುವ ಕಾರಣ ಅವರು ಜೈಲಿಗೆ ಹೋಗುವಂತಹ ಪರಿಸ್ಥಿತಿ ಎದುರಾಯಿತು. ಇದು ವಕೀಲ ಜಗದೀಶ್ ಅವರನ್ನು ಬಂದಿಸುವುದರ ಹಿಂದಿರುವ ರಹಸ್ಯವಾಗಿದೆ.

Leave A Reply

Your email address will not be published.

error: Content is protected !!
Footer code: