ರಾಜ್ಯದ ರೈತರಿಗೆ ಸರ್ಕಾರದಿಂದ 2 ಸಿಹಿ ಸುದ್ದಿ ಇದೆ

0

ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ಎರಡು ಸಿಹಿಯಾದ ಸುದ್ದಿ ಇದೆ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ಬೆಳೆ ಪರಿಹಾರ ಧನದಲ್ಲಿ ಅತಿ ದೊಡ್ಡ ಬದಲಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಬೆಳೆ ಪರಿಹಾರ ಧನವನ್ನು ಹೆಚ್ಚಳ ಮಾಡಿದ್ದು ಯಾವ ಯಾವ ಬೆಳೆಗಳಿಗೆ ಎಷ್ಟು ಹೆಚ್ಚಳ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಕೂಡ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ಹೊಸ ವರ್ಷ ದ ಭರ್ಜರಿ ಉಡುಗೊರೆ ನಿಡಿದ್ದಾರೆ. ರೈತರಿಗಾಗಿ ಕರ್ನಾಟಕ ಸರ್ಕಾರವು ಹೊಸ ವರ್ಷದ ಎರಡು ಉಡುಗೊರೆ ನೀಡಲಾಗಿದ್ದು ಆ ಕುರಿತಾದ ಸಂಪುರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿ ಕೊಡುತ್ತೆವೆ.

ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿಯನ್ನು ನೀಡಿದ್ದು ರಾಜ್ಯದಲ್ಲಿ ಎರಡು ಸಾವಿರದ ಇಪ್ಪತ್ತೊಂದನೇ ಜುಲೈ ನಿಂದ ನವೆಂಬರ್ ವರೆಗೆ ಉಂಟಾದ ಅತಿವೃಷ್ಟಿ ಮತ್ತು ಪ್ರವಾಹದಿಂದ ಸಂತ್ರಸ್ತರಾದ ವಿವಿಧ ಜನರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಐತಿಹಾಸಿಕ ತಿರ್ಮಾನ ಕೈಗೊಂಡಿದೆ.ರಾಜ್ಯ ಸರ್ಕಾರವು ಬೆಳೆ ಹಾನಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ನಿಗದಿ ಪಡಿಸಿದ್ದ ದರದ ಜೊತೆಗೆ ಹೆಚ್ಚುವರಿ ಪರಿಹಾರ ನೀಡಲು ತೀರ್ಮಾನ ಕೈಗೊಂಡಿದೆ.ರಾಜ್ಯದಲ್ಲಿ ಎರಡು ಸಾವಿರದ ಇಪ್ಪತ್ತೊಂದನೇ ಜುಲೈ ಇಂದ ನವೆಂಬರ್ ವರೆಗೆ ಉಂಟಾದ ನೆರೆ ಹಾವಳಿ ಇಂದ ಹನ್ನೆರಡು. ಐದು ಎರಡು ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ.

ಬೆಳೆಹಾನಿ ಜಂಟಿ ಸಮೀಕ್ಷೆಗಳ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಿದ ಒಂದು ವಾರದೊಳಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಬೆಳೆ ಪರಿಹಾರ ಜಮೇಮಾಡಲು ಕ್ರಮಕೈಗೊಳ್ಳಲಾಗಿದೆ. ಈವರೆಗೂ ಸುಮಾರು ಹದಿನಾಲ್ಕು.ನಾಲ್ಕು ಲಕ್ಷ ರೈತರ ಬ್ಯಾಂಕ್ ಖಾತೆಗೆ ರೂಪಾಯಿ ಒಂಬೈನೂರಾ ಇಪ್ಪತ್ತಾರು.ನಾಲ್ಕು ಸೊನ್ನೆ ಕೋಟಿ ರೂಪಾಯಿ ಮೊತ್ತ ಜಮೆ ಆಗಿದೆ ಕಳೆದ ಒಂದು ತಿಂಗಳಿನಲ್ಲಿ ಸುಮಾರು ಹನ್ನೆರಡು.ಒಂಬತ್ತು ಸೊನ್ನೆ ಲಕ್ಷ ರೈತರಿಗೂ ಕೂಡ ಸುಮಾರು ಏಳುನೂರಾ ತೊಂಬತ್ತಾರು ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಪಾವತಿ ಮಾಡಲಾಗಿದೆ.

ಜನವರಿ ಇಪ್ಪತ್ತರಿಂದ ರಾಜ್ಯಾದ್ಯಂತ ರೈತರ ಮನೆ ಬಾಗಿಲಿಗೆ ಉಚಿತವಾಗಿ ಆರ್ ಟಿ ಸಿ ತಲುಪಿಸುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ರೈತರ ಮನೆ ಬಾಗಿಲಿಗೆ ಸರ್ಕಾರದ ಯೋಜನೆ ತಲುಪಿಸುವ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕನಸಿನ ಯೋಜನೆಗೆ ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.

ರಾಜ್ಯದ ನಲವತ್ತೈದು ಲಕ್ಷ ರೈತರಿಗೆ ಅವರ ಜಮೀನಿನ ಪಹಣಿ ಆರ್ ಟಿ ಸಿ ಹಾಗೂ ಜಮೀನಿನ ನಕಾಶೆ ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲವಾಗುವಂತೆ ಉಚಿತವಾಗಿ ಆರ್ ಟಿ ಸಿ ನಕಾಶೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ. ರೈತರು ತಮ್ಮ ಜಮೀನನ್ನು ವಸತಿ ಅಥವಾ ವಿವಿಧ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಆರು ತಿಂಗಳಿಂದ ಒಂದು ವರ್ಷದವರೆಗೆ ಅಲೆದಾಡ ಬೇಕಾಗಿದ್ದು ಇದನ್ನು ತಪ್ಪಿಸಿ ನಿಯಮವನ್ನು ಸರಳಿಕರಣ ಮಾಡಲಾಗಿದ್ದು ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡುವ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ

ಈರೀತಿಯಾಗಿ ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಹೊಸ ವರ್ಷಕ್ಕೆ ಉತ್ತಮ ಉಡುಗೊರೆಯನ್ನು ನೀಡಿದೆ ಎಂದು ಹೇಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗೂ ಹಾಗೂ ಪರಿಚಿತರಿಗೂ ತಿಳಿಸಿರಿ.

Leave A Reply

Your email address will not be published.

error: Content is protected !!