ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅವರಿಗೆ ನಾವಿಂದು ಸಿಹಿಸುದ್ದಿಯನ್ನು ತಿಳಿಸುತ್ತಿದ್ದೇವೆ. ಕರ್ನಾಟಕದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಯಾವ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಕರ್ನಾಟಕ ಸರ್ಕಾರದಲ್ಲಿ ಭೂಮಾಪನ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ. ಎಸ್ಎಸ್ಎಲ್ ಸಿ ಪಿಯುಸಿ ಹಾಗೂ ಯಾವುದೇ ಪದವಿ ಶಿಕ್ಷಣ ಪಡೆದಿರುವಂತಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮುಖ್ಯ ದಿನಾಂಕವನ್ನು ಗಮನಿಸುವುದಾದರೆ ಈಗಾಗಲೇ ಡಿಸೆಂಬರ್ ಒಂದರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಡಿಸೆಂಬರ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮಾಡುವುದರ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಹದಿನೈದು ಸಾವಿರದಿಂದ ಮೂವತ್ತೇಳು ಸಾವಿರದವರೆಗೆ ವೇತನ ಇರುತ್ತದೆ.
ಈ ಒಂದು ಹುದ್ದೆಗೆ ಹದಿನೆಂಟು ವರ್ಷದಿಂದ ನಲವತ್ತೈದು ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ನೋಡುವುದಾದರೆ ಬೆಂಗಳೂರಿನಲ್ಲಿ ಅರವತ್ತೈದು ಹುದ್ದೆಗಳು ವಿಜಯಪುರದಲ್ಲಿ ಇಪ್ಪತ್ತಾರು ಹುದ್ದೆಗಳು ಬೆಳಗಾವಿಯಲ್ಲಿ ನೂರಾ ಹನ್ನೆರಡು ಬಳ್ಳಾರಿಯಲ್ಲಿ ಇಪ್ಪತ್ತೇಳು ವಿಜಯನಗರ ಇಪ್ಪತೊಂಬತ್ತು ಬಾಗಲಕೋಟೆ ಅರವತ್ತು ಬೀದರ್ ಹದಿಮೂರು ಮಂಡ್ಯ ನೂರಾ ತೊಂಬತೈದು ಯಾದಗಿರಿ ನಲವತ್ತೈದು ರಾಮನಗರ ನೂರಾಐವತ್ತೈದು ರಾಯಚೂರು ಐವತ್ತೈದು ಶಿವಮೊಗ್ಗ ನೂರಾ ಇಪ್ಪತ್ತೇಳು ಹಾವೇರಿ ಎರಡು ನೂರಾ ಹತ್ತೊಂಬತ್ತು ಹಾಸನ ನೂರಾ ಮೂವತ್ತೈದು ಮೈಸೂರಲ್ಲಿ ನೂರಮುವತ್ತಾರು ಉಡುಪಿ ನೂರಾ ಮೂವತ್ತೊಂದು ಉತ್ತರ ಕನ್ನಡ ನೂರಾ ಒಂದು.
ಕೊಡಗು ನೂರು ಕೊಪ್ಪಳ ಅರವತ್ತಾರು ಕೋಲಾರ ನೂರಾ ಮೂವತ್ತೇಳು ಗದಗ ನಲವತ್ತಾರು. ಗುಲ್ಬರ್ಗ ಹನ್ನೆರಡು ಚಿಕ್ಕಬಳ್ಳಾಪುರ ಮೂವತ್ತೊಂಬತ್ತು ಚಿಕ್ಕಮಗಳೂರು ನೂರಾ ಹನ್ನೆರಡು ಚಿತ್ರದುರ್ಗ ತೊಂಬತ್ಮುರು ಚಾಮರಾಜನಗರ ಐವತ್ತು ತುಮಕೂರು ಮುನ್ನೂರಾ ಮೂವತ್ನಾಲ್ಕು ದಕ್ಷಿಣಕನ್ನಡ ಅರವಾತ್ತಾರು ದಾವಣಗೆರೆ ನೂರಾ ಎಂಬತ್ಮುರು ಧಾರವಾಡ ಐವತ್ತೊಂಬತ್ತು ಬೆಂಗಳೂರು ಗ್ರಾಮಾಂತರ ಹನ್ನೆರಡು ಹುದ್ದೆಗಳು ಖಾಲಿ ಇದ್ದು ಒಟ್ಟು ಭೂಮಾಪನ ಇಲಾಖೆಯಲ್ಲಿ ಮೂರು ಸಾವಿರ ಹುದ್ದೆಗಳ ಬೃಹತ್ ನೇಮಕಾತಿ ನಡೆಯುತ್ತಿದೆ. ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಿ ಮಾಹಿತಿಯನ್ನು ನಿಮ್ಮ ಪರೀಕ್ಷಕರು ಹಾಗೂ ಸ್ನೇಹಿತರಿಗೂ ತಿಳಿಸಿರಿ.