WhatsApp Group Join Now
Telegram Group Join Now

ಜೀವನದಲ್ಲಿ ಹಣ ಎಂಬುದು ತುಂಬಾನೇ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಣವಿದ್ದರೆ ನಾವು ಏನನ್ನಾದರೂ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಹಣದ ಅವಶ್ಯಕತೆ ತುಂಬಾನೇ ಇದೆ ಅದಕ್ಕಾಗಿ ತುಂಬಾ ಕಷ್ಟಪಟ್ಟು ದುಡಿಯುತ್ತೇವೆ ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಯಾವಾಗಲೂ ಖಾಲಿ ಪರ್ಸ್ ಇರುತ್ತಿದ್ದರೆ ಹಣದ ಅಡಚಣೆ ಉಂಟಾಗಿ ಇದರಿಂದಾಗಿ ಸಾಲದ ಬಾಧೆ ಹೆಚ್ಚಾಗುತ್ತಿದ್ದರೆ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದರೆ, ಈ ಎಲ್ಲಾ ಸಮಸ್ಯೆಗಳಿಗೆ ಈ ಒಂದು ಚಿಕ್ಕ ಪರಿಹಾರವನ್ನು ಮಾಡಿ ಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಿರ ಲಕ್ಷ್ಮಿಯ ಚಮತ್ಕಾರದಿಂದ ಶ್ರೀಮಂತರಾಗುತ್ತಿರ ಹೇಗೆ ಆ ಪರಿಹಾರವನ್ನು ಮಾಡಿಕೊಳ್ಳುವುದೆಂದು ಈ ಲೇಖನದಲ್ಲಿ ನೋಡೋಣ.

ಗೋಡೆಯಲ್ಲಿ ಲಕ್ಷ್ಮಿ ಕುಬೇರರ ಪಟ ಇರಿಸಿ. ಮನೆಯ ಹೊಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಪಟದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಪಟಗಳನ್ನು ಇರಿಸಿ. ಇದರೊಂದಿಗೆ ಸ್ವಸ್ತಿಕ್ ಚಿಹ್ನೆಯ ಇನ್ನೊಂದು ಪಟವನ್ನಿರಿಸಿದರೆ ಇನ್ನೂ ಉತ್ತಮ. ಇದರಿಂದ ಮನೆಗೆ ಧನಾಗಮನ ಹೆಚ್ಚುತ್ತದೆ ಹಾಗೂ ಉಳಿಯಲು ಸಾಧ್ಯವಾಗುತ್ತದೆ. ಮನೆಯ ನೈಋತ್ಯ ದಿಕ್ಕಿನಲ್ಲಿ ಪಂಚರೂಪಿ ಹನುಮಂತನ ವಿಗ್ರಹವನ್ನು ಇರಿಸಿ ನಿತ್ಯವೂ ಪೂಜಿಸಿ. ಈ ವಿಗ್ರಹ ನಿಮ್ಮ ಮನೆಗೆ ಆಗಮಿಸುವ ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ಮನೆಗೆ ಹಣ ಬರಲು ಇರುವ ಅಡ್ಡಿಗಳನ್ನು ನಿವಾರಿಸಿ ದಾರಿಯನ್ನು ಸುಗಮವಾಗಿಸುತ್ತದೆ. ನಿಮಗೆ ಸಣ್ಣ ಪ್ರಾರ್ಥನಾ ಅಥವಾ ದೇವರ ಕೋಣೆ ಬೇಕು ಎಂದಾದಲ್ಲಿ, ದೇವತೆಗಳು ನೆಲೆಸಿರುವ ದಿಕ್ಕು ಎಂದು ಹೇಳಲಾದ ವಾಯುವ್ಯ ದಿಕ್ಕು ಇದಕ್ಕೆ ಸೂಕ್ತವಾದುದಾಗಿದೆ.

ನಿಮ್ಮ ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ, ಪಾದರಕ್ಷೆ ಮೊದಲಾದವುಗಳನ್ನು ಮೆಟ್ಟಿಲ ಕೆಳಗೆ ಸಂಗ್ರಹಿಸಬೇಡಿ. ಮೆಟ್ಟಿಲ ಕೆಳಗೆ ಯಾವುದೇ ವಸ್ತುಗಳನ್ನು ಚಲನೆಗೆ ಅಡ್ಡಿಯಾಗುವಂತಿಡುವುದು ವಾಸ್ತುವಿಗೆ ವಿರುದ್ದವಾಗಿದ್ದು ಮನೆಯಲ್ಲಿ ದಾರಿದ್ರ್ಯ ಆವರಿಸಲು ಕಾರಣವಾಗುತ್ತದೆ. ಗ್ಯಾಸ್ ಒಲೆಯನ್ನು ಮನೆಯ ಉತ್ತರ ಭಾಗದಲ್ಲಿ ಇಡಕೂಡದು. ಇದರಿಂದ ಮನೆಗೆ ಆಗಮಿಸುವ ಧನ ಮತ್ತು ಧನಾತ್ಮಕ ಶಕ್ತಿಯನ್ನು ಬೆಂಕಿ ದಹಿಸಿ ಬಿಡುತ್ತದೆ. ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು. ಮನೆಯಲ್ಲಿ ಅಥವಾ ವಾಣಿಜ್ಯ ಸ್ಥಳಗಳಲ್ಲಿರುವ ಯಾವುದೇ ನಲ್ಲಿಯಿಂದ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳುವುದು ಅಗತ್ಯ. ಯಾವಾಗ ತೊಟ್ಟಿಕ್ಕುವುದು ಕಂಡುಬಂದಿತೋ ತಕ್ಷಣವೇ ಇದನ್ನು ರಿಪೇರಿ ಮಾಡಿಸಬೇಕು.

ನೀರು ಪೋಲಾಗುವುದು ಹಣ ಪೋಲಾದಂತೆ ಎಂದು ವಾಸ್ತು ತಿಳಿಸುತ್ತದೆ. ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ. ವಾಸ್ತುಶಾಸ್ತ್ರದ ಪ್ರಕಾರ ಒಂದು ದಿನದ ಬಳಿಕ ಬಾಡಿದ ಮತ್ತು ಒಣಗಿದ ಹೂವುಗಳಲ್ಲಿ ಧನಾತ್ಮ ಶಕ್ತಿ ಖಾಲಿಯಾಗಿ ಉಳಿದಿದ್ದ ಸ್ಥಳದಲ್ಲಿ ಹೊರಗಿನ ಋಣಾತ್ಮಕ ಶಕ್ತಿ ಆಗಮಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ಈಗಾಗಲೇ ಇರುವ ತೊಂದರೆಗಳು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು. ಒಂದು ವೇಳೆ ಒಣ ಹೂವುಗಳಿಂದ ಅಲಂಕರಿಸುವ ಹವ್ಯಾಸವಿದ್ದರೆ ಪ್ರತಿ ಪಕಳೆಯನ್ನೂ ಬಣ್ಣದ ನೀರಿನಲ್ಲಿ ಮುಳುಗಿಸಿ ಒಣಗಿಸಿಯೇ ಉಪಯೋಗಿಸಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಕೆ ಅಥವಾ ಸುರಾಹಿಯನ್ನು ಇರಿಸಿ. ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು. ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಅಂಗಡಿ ಅಥವಾ ವಾಣಿಜ್ಯ ಮಳಿಗೆಗಳಲ್ಲಿ ಇಟ್ಟಿರುವ ಲಾಕರ್ ಸದಾ ಉತ್ತರ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸುವುದು ಅಗತ್ಯ. ಇದರಿಂದ ವಹಿವಾಟಿನ ಲಾಭ ಹೆಚ್ಚು ಹೆಚ್ಚಾಗಿ ತಿಜೋರಿಯಲ್ಲಿ ಸಂಗ್ರಹವಾಗಲು ಸಾಧ್ಯವಾಗುತ್ತದೆ.

ಲಕ್ಷ್ಮಿ ದೇವಿಯ ಪಟ ಅಂತಿಮವಾಗಿ ಮನೆಯಲ್ಲಿ ಧನ ಮತ್ತು ಸಂಪತ್ತು ನೆಲೆಸಿರಲು ಲಕ್ಷ್ಮೀದೇವಿಯ ಪಟವೊಂದನ್ನು ನಿಮ್ಮ ಮನೆಯ ಪೂಜಾಗೃಹದಲ್ಲಿ ಸದಾ ಇರುವಂತೆ ನೋಡಿಕೊಳ್ಳಿ ಹಾಗೂ ನಿತ್ಯದ ಪೂಜೆಯಲ್ಲಿ ಲಕ್ಷ್ಮಿ ದೇವಿಗೂ ಪೂಜೆ ಸಲ್ಲಿಸಿ. ಇದರಿಂದ ಮನೆಯಲ್ಲಿ ಸಮೃದ್ಧತೆ ತುಂಬಿ ಸದಸ್ಯರಲ್ಲಿ ಸಾಮರಸ್ಯ ಹಾಗೂ ಪ್ರೀತಿ ತುಂಬಿ ತುಂಬಿರುತ್ತದೆ. ಮನೆಗೆ ಬಂದ ಧನ ಉಳಿಸಿಕೊಳ್ಳುವುದು ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ಧನ ಆಗಮಿಸುವಂತೆ ನೋಡಿಕೊಳ್ಳಲು ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹ ಅಥವಾ ಪಟ ನಿಮ್ಮ ಪೂಜಾಗೃಹದಲ್ಲಿದ್ದು ನಿತ್ಯವೂ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿರಬೇಕು. ಇದರಿಂದ ಮನೆಗೆ ಧನ ಹೆಚ್ಚು ಆಗಮಿಸುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಸದಾ ಇರುವಂತಾಗುತ್ತದೆ.

ಮಹಾಲಕ್ಷ್ಮಿ ಅನುಗ್ರಹದಿಂದ ಹಣ ನಿಮ್ಮ ಕೈಯಲ್ಲಿ ಸ್ಥಿರವಾಗಿ ಉಳಿಯುತ್ತದೆ ನೀವು ಬೇಗನೆ ಸಾಲದ ಬಾಧೆಯಿಂದ ಮುಕ್ತಿ ಹೊಂದಬಹುದು ಕ್ರಮೇಣವಾಗಿ ಅಭಿವೃದ್ಧಿಯನ್ನು ಹೊಂದಿತ್ತಿರ ಸುಖ ಶಾಂತಿ ನೆಮ್ಮದಿ ನಿಮ್ಮ ಜೀವನದಲ್ಲಿ ಇರುತ್ತದೆ ಹಣದಿಂದಾಗಿ ನೀವು ಅಂದುಕೊಂಡ ಕೆಲಸವನ್ನು ಸುಲಭವಾಗಿ ಮಾಡಬಹುದು. ಗೆಳೆಯರೇ ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳುವುದರ ಜೊತೆಗೆ ಬಡವರಿಗೆ ದಾನ ಧರ್ಮ ಮಾಡುವುದರಿಂದ ಇನ್ನೂ ಹೆಚ್ಚಿನದಾಗಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಿರ ಹಾಗೂ ನಿಮ್ಮ ಕೈಯಲ್ಲಿ ಹಣ ಸಿರಿ ಸಂಪತ್ತು ಸದಾಕಾಲ ಇರುತ್ತದೆ ನೀವು ಯಾವುದೇ ಕೆಲಸ ಮಾಡಿದರೂ ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತಿರ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: