ಮೇಷ ರಾಶಿ ಮಹಾನ್ ಯಾಕೆ, ಇವರು ನಿಮ್ಮ ರಾಶಿನಾ? ಮೇಷ ರಾಶಿ ಅಲ್ಲಿ ಬರುವ ಕೆಲವೊಬ್ಬರು ಪ್ರಸಿದ್ದ ಸೆಲೆಬ್ರಿಟಿ ಅವರ ಬಗ್ಗೆ ಇಲ್ಲಿದೆ

0

ನಾವು ದಿನಾಲೂ ಒಬ್ಬ ಒಬ್ಬ ಸೆಲೆಬ್ರಿಟಿ ಅವರ ವಿಷಯವನ್ನು ಟಿವಿ ಮಾಧ್ಯಮ ಹಾಗೂ ದಿನ ಪತ್ರಿಕೆ ಇನ್ನು ಬುಕ್ ಕೆಲವೊಂದು ಲೇಖನ ಮೂಲಕ ತಿಳಿದುಕೊಂಡು ಇರುವೇವು ಅವರ ಜೀವನ ಶೈಲಿ ಹವ್ಯಾಸ ಅಭ್ಯಾಸ ಹಾಗೂ ಗುಣ ಬಗ್ಗೆ ನಮಗೆ ಒಂದು ಮಾಹಿತಿ ಸಿಕ್ಕಿದರೂ ಕೂಡ ನಾವು ಮುಗಿಬಿದ್ದು ಓದುವೇವು ಹಾಗೂ ಅವರ ಬಗ್ಗೆ ಗಾಸಿಪ್ ಹಾಗೂ ಟ್ರೆಂಡ್ ಅಲ್ಲಿ ಹಿಂಬಾಲಿಸುವ ಜನರಿಗೆ ಏನು ಕಮ್ಮಿ ಇಲ್ಲ ಹಾಗಾಗಿ ಅಂತಹ ಸೆಲೆಬ್ರಿಟಿ ಜನರ ರಾಶಿ ಯಾವುದು ನಾವು ಯಾಕೆ ಅವರ ಹಾಗೆ ಇಲ್ಲ ಎನ್ನುವುದನ್ನು ನಾವು ಒಮ್ಮೊಮ್ಮೆ ಯೋಚ್ನೆ ಮಾಡುವುದು ಉಂಟು . ಇಂದಿನ ಲೇಖನ ಅಲ್ಲಿ ಮೇಷ ರಾಶಿ ಅಲ್ಲಿ ಬರುವ ಕೆಲವೊಬ್ಬರು ಪ್ರಸಿದ್ದ ಸೆಲೆಬ್ರಿಟಿ ಅವರ ಬಗ್ಗೆ ತಿಳಿದುಕೊಳ್ಳೋಣ.

ಅಪ್ಪು ಎಂದೇ ಕರೆಯುವ ನಮ್ಮೆಲ್ಲರ ಮನದಲ್ಲಿ ವಿರಾಜಮರ ಆಗಿರುವ ಪುನೀತ್ ರಾಜ್ ಕುಮಾರ್ ಇವರ ರಾಶಿ ಮೇಷ ರಾಶಿ ಬಾಲನಟನಾಗಿ ನಟನೆ ಆರಂಭಿಸಿದ್ದು ಇವರು ಕನ್ನಡಿಗರ ಮನೆ ಮನಗಳಲ್ಲಿ ದೇವರ ಸ್ಥಾನವನ್ನು ಪಡೆದ ವ್ಯಕ್ತಿ. ಬಲಗೈ ಅಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಿಲ್ಲ ಅನ್ನುವ ವ್ಯಕ್ತಿತ್ವ ಇವರದ್ದು. ವೃದ್ಧಾಶ್ರಮ, ಅನಾಥಾಶ್ರಮ ಹಾಗೂ ಶಾಲೆಗೆ ಸಹಾಯ ಮಾಡಿದ ಇವರು ಇನ್ನು ಹೆಚ್ಚು ಸಹಾಯ ಮಾಡುವ ಮನೋಭಾವ ಇವರದ್ದು. ಆದರೆ ಭಗವಂತನ ಕರೆಗೆ ಬೇಗೆನೆ ನಮ್ಮನ್ನೆಲ್ಲ ಅಗಲಿದ ದುಃಖ ಇನ್ನೂ ಜನರಲ್ಲಿ ಹಾಗೆ ಇದೆ .ಆದರೆ ಒಬ್ಬ ವ್ಯಕ್ತಿ ಸತ್ತ ಬಳಿಕ ಆತನ ಅಸ್ತಿತ್ವ ಅನ್ನೇ ಮರೆಯುವ ನಾವು ಇವರು ಮಾಡಿದ ಸಹಾಯ ಹಾಗೂ ದಾನಗಳನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇನ್ನು ಅವರ ಅಭಿಮಾನಿಗಳು ಹಾಗೂ ಜನರಿಗೆ ಇವರು ಮಾಡಿದ ಕೆಲಸವೇ ಸ್ಪೂರ್ತಿ ಆಗಲಿ. ಜನರಿಗೆ ಒಳ್ಳೆಯದು ಮಾಡುವುದು ಪ್ರೀತಿ ಸಂಪಾದನೆ ಮಾಡೋದು ಹಾಗೂ ಒಳ್ಳೆಯ ಜನರಿಗೆ ಸಹಾಯ ಮಾಡಲು ಪ್ರೇರೇಪಣೆ ಮಾಡುವ ಈ ಗುಣ ಮೆಚ್ಚಲೇ ಬೇಕು.

ಸಾನಿಯಾ ಮಿರ್ಜಾ ಇವರು ಒಳ್ಳೆಯ ಬ್ಯಾಟ್ ಮಿಂಟನ್ ಆಟಗಾರ್ತಿ ಇವರು ಬ್ಯಾಟ್ ಹಿಡಿಯುವ ಶೈಲಿ ಹಾಗೂ ಆಟ ಆಡುವ ವೈಖರಿ ಬಹಳ ಅದ್ಬುತ ಟ್ರೈನಿಂಗ್ ಹಣ ಹೊಂದಿಸಲು ಪರದಾಡಿದ ಇವರು ಟಾಪ್ 15 ಆಟಗಾರರಲ್ಲಿ ಒಬ್ಬರು ಆಗಿದು ಸಂತಸ ವಿಷಯ. ಇಲ್ಲಿ ಇವರ ಕಠಿಣ ಪರಿಶ್ರಮ ಹಾಗೂ ಶ್ರದ್ಧೆ ಅಗತ್ಯ ಯಾವುದೇ ಟೀಕೆ ಬಂದರು ಕೂಡ ತಲೆ ಕೆಡಿಸಿಕೊಳ್ಳದೆ ಡಬ್ಬಲ್ ಅಲ್ಲಿ ನಂಬರ್ ವನ್ ಶ್ರೇಣಿಯಲ್ಲಿ ಬರುವುದು ಅಂದರೆ ತಮಾಷೆ ಅಲ್ಲವೇ ಅಲ್ಲ ಹೇಳುವರು ಯಾರು ಬಂದು ಸಹಾಯ ಮಾಡಿಲ್ಲ ನಮ್ಮ ಛಲ ಗುರಿ ನಮ್ಮದೇ ಎನ್ನುವ ಗುಣ ಮೆಚ್ಚಲೇ ಬೇಕು.

ಸೆಲೆನಾ ಗೊಮೆಜ್ ಇವರು ಮ್ಯೂಸಿಕ್ ಪ್ರಿಯರಿಗೆ ಚಿರಪರಿಚಿತ ಇವರು. ಅದ್ಬುತ ಕೆಲಸ ರೂಪ ಯಶಸ್ಸಿನಿಂದ ಮೆಚ್ಚುಗೆಗೆ ಪಾತ್ರರಾದರು. ಕಷ್ಟ ಪಟ್ಟು ಏಕಾಗ್ರತೆ ಇಂದ ಕೆಲಸ ಮಾಡಿದವರು ಇವರ ಜೊತೆ ಇರುವ ಸ್ನೇಹಿತರು ಅಥವಾ ಗೆಳೆತನಕ್ಕೆ ಹೆಚ್ಚಿನ ಒತ್ತು ಕೊಡುವರು ತನ್ನ ಸ್ನೇಹಿತರಿಗೆ ಕಷ್ಟ ಅಂದರೆ ಎಲ್ಲಿ ಇದ್ದರೂ ಕೂಡ ಓಡಿ ಬರುತ್ತಾರೆ ಅಂತ ಸ್ವಭಾವ ಇವರದ್ದು. ಅದಕ್ಕೆ ಉದಾಹರಣೆ ಇವರ ಜೀವನ ಅಲ್ಲಿ ನಡೆದ ಒಂದು ಘಟನೆ ಸಾಕ್ಷಿ ಲೋಪಸ್ ಎನ್ನುವ ಅದೃಶ್ಯ ಖಾಯಿಲೆ ಇವರಿಗೆ ಶುರುವಾಗಿದ್ದು ಕಿಡ್ನಿ ಬದಲಾವಣೆ ಮಾಡುವ ಸಂದರ್ಭ ಒದಗಿತ್ತು ಆವಾಗ ಅವರಿಗೆ ಕಿಡ್ನಿ ಅನ್ನು ನೀಡಲು ಬಂದಿದ್ದು ಅವರ ನಿಕಟ ಸ್ನೇಹಿತೆ ಇಲ್ಲಿ ನಮಗೆ ತಿಳಿಯುವುದು ಒಮ್ಮೆ ನನ್ನವರು ಅಂದುಕೊಂಡರೆ ಏನಾದರೂ ಕೂಡ ಬಿಡೋಲ್ಲ ಆದರೆ ಅವರಿಂದ ಮೋಸ ಆದರೆ ಕಂಡಿತಾ ಕ್ಷಮೆ ಇಲ್ಲ.

ಮಲಯಾಳಿ ನಟ ದುಲ್ಕರ್ ಸಲ್ಮಾನ್ ಇವರು ತಮ್ಮ ಫ್ಯಾಮಿಲಿಯವರ ಸಹಾಯ ಇಲ್ಲದೆ ಮೇಲೆ ಬಂದವರು ಹಾಗೂ ತಾನು ತನ್ನ ಕೆಲಸ ಅಷ್ಟೆ ಇವರ ಪ್ರಪಂಚ ಇನ್ನು ಸಂಗಾತಿ ಬಗ್ಗೆ ಕಾಳಜಿ ಹಾಗೂ ಪ್ರೀತಿಯನ್ನು ಹೊಂದಿದ್ದು, ಇವರ ಹೆಂಡ್ತಿ ಹಾಗೂ ಮಕ್ಕಳೊಂದಿಗೆ ಟೈಮ್ ಪಾಸ್ ಹಾಗೂ ಜಾಲಿ ಆಗಿ ಪ್ರವಾಸ ಮಾಡುವುದು, ಮಕ್ಕಳ ಜೊತೆ ಆಟ ಆಡುವುದು ಸಿಕ್ಕ ಸಮಯವನ್ನು ಕಳೆದುಕೊಳ್ಳದೆ ತಮ್ಮ ಕುಟುಂಬಕ್ಕೆ ಮೀಸಲು ಇಡುವುದು ಶ್ರೀಮಂತಿಕೆ ಹಾಗೂ ಬಡತನ ಬಗ್ಗೆ ಅಹಂಕಾರ ತೋರುವ ಜಾಯಮಾನ ಇವರದ್ದು ಅಲ್ಲ ದೊಡ್ಡ ಪ್ರಸಿದ್ದ ನಟ ಆದರೂ ಒಂದುಚೂರು ಅಹಂಕಾರ ಇಲ್ಲ ಸಂಕೋಚ ಸ್ವಭಾವ ಇವರದ್ದು.

ಮುದ್ದು ಮುಖದ ಚಂದನವನದ ಚೆಲುವೆ ಈ ರಾಧೆಯ ಹೆಸರು ರಾಧಿಕಾ ಪಂಡಿತ್ ಇಷ್ಟು ದಿನ ಕರ್ನಾಟಕ ಜನತೆಗೆ ಮಾತ್ರ ಪರಿಚಯ ಆದರೆ ಇಂದು ಯಶ್ ಅವರ ಪತ್ನಿಯಾಗಿ ಎಲ್ಲರಿಗೂ ಚಿರಪರಿಚಿತ ಧಾರಾವಾಹಿಯಲ್ಲಿ ನಟಿಸಿ ನಂತರ ಸಿನಿಮಾ ಅಲ್ಲಿ ನಟಿಸಿದ್ದರು ಕೂಡ ಸರಳತೆಯ ಗುಣ ಇವರದ್ದು. ಇವರು ಕ್ಯಾಮೆರಾ ಫೇಸ್ ಮಾಡುವ ಸಂದರ್ಭ ಅಲ್ಲಿ ಯಾರೆಲ್ಲ ಇದ್ದರೂ ಅವರನ್ನು ಇಂದಿಗೂ ಮರಿಯದೆ ಅವರ ಜೊತೆ ಒಳ್ಳೆಯ ಸ್ನೇಹವನ್ನು ಕಾಪಾಡಿಕೊಂಡು ಬಂದಿದ್ದಾರೆ. ಕೆಲವರು ತಮಗೆ ಯಶಸ್ಸು ಸಿಕ್ಕಿದ ಬಳಿಕ ಎಲ್ಲರನ್ನೂ ಮರೆಯುವ ಜಗತ್ತಿನಲ್ಲಿ ಇಂತವವರು ಸಿಗುವುದು ಅಪರೂಪ .

ಸ್ಯಾಂಡಲ್ ವುಡ್ ಅಲ್ಲಿ ಮೋಹಕ ನಟಿ ಎಂದೇ ಪ್ರಸಿದ್ಧ ನಟಿ ರಮ್ಯ ಇವರು ಸಿನಿಮಾ ರಂಗದಲ್ಲಿ ಇದ್ದರೂ ಇಲ್ಲದೆ ಹೋದರು ಇವರಿಗೆ ಸಾಕಷ್ಟು ಅಭಿಮಾನಿ ಹೊಂದಿದ್ದು ಇವರು ಹಠ, ದುಡುಕು ಸ್ವಭಾವ ಇವರದ್ದು ಸಮಾಜ ಸೇವೆ ಮಾಡಬೇಕು ಎಂದು ರಾಜಕೀಯ ರಂಗಕ್ಕೆ ಧುಮುಕಿ ಮಂಡ್ಯ ಎಂ ಪಿ ಆಗಬೇಕು ಎಂದು ಲೋಕಸಭೆಗೆ ಆಯ್ಕೆ ಆಗಿದ್ದರು. ಇವರಲ್ಲಿ ನಾಯಕತ್ವ ಗುಣ ಇದೆ .ಸಾಧಿಸಬೇಕು ಎನ್ನುವ ಆಶಾವಾದಿ ಇವರದ್ದು ಒಮ್ಮೆ ಚುನಾವಣೆ ಅಲ್ಲಿ ಗೆದ್ದು ಸೋತರು ಕೂಡ ಧೈರ್ಯ ಕುಂದದೆ ಪಾರ್ಟಿಯ ಡಿಜಿಟಲ್ ಟೀಮ್ನ ಹೆಡ್ ಆಗಿ ಕಾರ್ಯನಿರ್ವಹಿಸುತ್ತಾರೆ ಒಟ್ಟಾರೆ ಜೀವನ ನಿಂತ ನೀರು ಆಗಬಾರದು ಯಾವಾಗಲೂ ಹರಿಯುವ ಗುಣ ಹೊಂದಿರಬೇಕು.

ಜೋ ಬೈಡಿನ್ ರಾಜಕೀಯ ಬಗ್ಗೆ ಆಸಕ್ತಿ ಇರುವ ಇವರ ಬಗ್ಗೆ ತಿಳಿದು ಇರುವುದು ಹಾಗೂ ಇಂದಿನ ಅಮೆರಿಕಾ ಅಧ್ಯಕ್ಷ ಉಪಾಧ್ಯಕ್ಷ ಆಗಿ ವಿದೇಶಾಂಗ ಮಂತ್ರಿ ಆಗಿ ಸಣ್ಣ ವಯಸ್ಸಿನಲ್ಲೇ ತನ್ನ ಫ್ಯಾಮಿಲಿ ಜೊತೆ ವಲಸೆ ಬಂದು ಅಮೇರಿಕ ಅಲ್ಲಿ ಬಂದು ನೆಲಸಿ ಇಲ್ಲಿನ ಅದ್ಯಕ್ಷರು ಆಗಿದ್ದಾರೆ. ಇಲ್ಲಿ ಇವರ ಗುರಿ ಹಾಗೂ ದೃಢತೆ ಅನ್ನು ನೋಡಬಹುದು ಬೈದಾನ್ ಅವರು ಮಾತು ಆಡುವಾಗ ತೊದಲು ಸಮಸ್ಯೆ ಇದೆ ಎಂದು ಎಲ್ಲೋ ಓದಿದ ನೆನಪು ಆದರೆ ಅವರು ಮಾತು ಆಡುವಾಗ ರೆ ಸಮಸ್ಯೆ ಅವರಿಗೆ ಇದೆ ಎನ್ನುವುದು ಎಲ್ಲು ಕಾಣುವುದಿಲ್ಲ ಯಾಕೆಂದರೆ ಮೇಷ ರಾಶಿ ಅವರಿಗೆ ತಮ್ಮ ನ್ಯೂನ್ಯತೆ ಅನ್ನು ಮರೆಮಾಚಿ ಕಾನ್ಫಿಡೆನ್ಸ್ ಮೂಲಕ ಬದುಕುವ ಕಲೆ ಇವರಲ್ಲಿ ಇದೆ.

ಕ್ಯೂಬಾ ರೇವೆಲ್ಯೂಷನ್ ಬಗ್ಗೆ ಮಾಹಿತಿ ಇದ್ದವರಿಗೆ ಚಿಗುವೆರ ಬಗ್ಗೆ ಗೊತ್ತಿರುವುದು ಈತನು ಧೈರ್ಯವಂತ ಹಾಗೂ ಬುದ್ದಿವಂತ ಹಾಗೂ ಈತನಲ್ಲಿ ನಾಯಕತ್ವ ಗುಣ ಜಾಸ್ತಿನೇ ಇದ್ದವು. ಪ್ರತಿಯೊಬ್ಬ ಮನುಷ್ಯನ ಅಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಒಳಗೊಂಡಿದೆ ಹಾಗಾಗಿ ಈತನನ್ನು ಕ್ರೂರಿ ಎಂದೇ ಕರೆದರು. ಇನ್ನು ಹಲವಾರು ಜನರಿಗೆ ದೇವರು ಆಗಿದ್ದ ಊಟ ತಿಂಡಿ ವಸತಿ ಹಾಗೂ ಔಷಧಿ ಯನ್ನು ಬುಡಕಟ್ಟು ಹಾಗೂ ಗುಡ್ಡ ಕಾಡು ಜನರಿಗೆ ಸಹಾಯ ಮಾಡಿದ್ದಾನೆ. ಸಹಾಯ ಕೇಳಿದವರಿಗೆ ಇಲ್ಲ ಎನ್ನದೇ ಸಹಾಯ ಮಾಡುವ ಗುಣ ಹಾಗೂ ಕಷ್ಟದಲ್ಲಿ ಇದ್ದವರಿಗೆ ತನ್ನ ಕೈಲಾದಷ್ಟು ಸಹಾಯ ಮಾಡುವುದು ಹೀಗೆಯೇ ದೂರದೃಷ್ಟಿ ಏನಾದರೂ ಮಾಡಬೇಕು ಎನ್ನುವ ತುಡಿತ ಇದು ಕುಜ ಕೊಟ್ಟಿರುವ ಕೊಡುಗೆ.

ಪಾಕಿಸ್ತಾನ ಮಾಜಿ ಪ್ರಧಾನಿ ಹಾಗೂ ಒಬ್ಬ ಕ್ರಿಕೆಟಿಗ ಇವರು ರಾಜಕೀಯ ಹಾಗೂ ಕ್ರೀಡೆ ಕೂಡ ತನ್ನನ್ನು ತೊಡಗಿಸಿ ಕೊಂಡಿದ್ದಾರೆ ಇವರೇ ಇಮ್ರಾನ್ ಖಾನ್ ಅಲ್ಲಿನ ಅತಿ ದೊಡ್ಡ ಪಕ್ಷದ ಅಧ್ಯಕ್ಷ ಕೂಡ ಆಗಿದ್ದಾರೆ ಟೀಂ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದಾರೆ ಪ್ರಧಾನಿ ತನ್ನ ದೇಶದಲ್ಲಿ ಕ್ಯಾನ್ಸರ್ ಸಂಸ್ಥೆ ಹಾಗೂ ಸ್ಕೂಲ್ ಕಾಲೇಜು ಅನ್ನು ತೆರೆದು ವಿದ್ಯೆಗೆ ಮಹತ್ವ ನೀಡಿದೆ ಹಾಗೂ ದೇಶದ ಆರ್ಥಿಕ ಸುಧಾರಣೆ ಮಾಡಲು ಕಾಯ್ದೆಯನ್ನು ಕೂಡ ತೆರೆದಿದ್ದಾರೆ ಹೀಗೆಯೇ ಯಾವುದನ್ನು ಕಳೆದುಕೊಳ್ಳಲು ಇಷ್ಟ ಪಡದೆ ಗುಣ ಹಾಗೂ ತನ್ನ ಸಂಗಾತಿಯ ಮೇಲೆ ತುಂಬಾನೇ ಪ್ರೀತಿ ಹಾಗೂ ಕಾಳಜಿ ಅನ್ನು ಹೊಂದಿರುವರು.

ಭಾರತದ ಕ್ರಿಕೆಟಿಗ ರೋಹಿತ್ ಶರ್ಮ ಇವರು ಸಿಂಪಲ್ ಮ್ಯಾನ್ ಹಾಗೂ ಹಿಟ್ ಮ್ಯಾನ್ ಎಂದೇ ಪ್ರಸಿದ್ದಿ ಇವರು ಆಟ ಆಡಲು ಫೀಲ್ಡ್ ಇಳಿದರೆ ಆಟ ಆಡುವಾಗ ಹೇಗೆ ಪಿಚ್ ಇದೆ ಹಾಗೂ ಬೌಲಿಂಗ್ ಹೇಗೆ ಮಾಡುತ್ತಾರೆ ಎಂದು ಲೆಕ್ಕ ಹಾಕಿ ತದನಂತರ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಾರೆ. ಇವರು ಆಟ ಆಡಬೇಕು ಎಂದು ಒಮ್ಮೆ ಫಿಕ್ಸ್ ಆದಲ್ಲಿ ಸೋಲಿಸಲು ಕಷ್ಟ ಇವರು ಹುಟ್ಟುತ್ತಾನೆ ಚಿನ್ನದ ಸ್ಪೂನ್ ಬಾಯಿಯಲ್ಲಿ ಇಟ್ಟುಕೊಂಡು ಬೆಳೆದವರಲ್ಲ ಸ್ಕಾಲರ್ ಶಿಪ್ ಅಲ್ಲಿ ಓದಿ ಸಾಲ ಮಾಡಿ ಕೋಚಿಂಗ್ ಸೆಂಟರ್ ಸೇರಿ ರಣಜಿ ಟ್ರೋಫಿ ಅನ್ನು ಗೆದ್ದು ಇಂಡಿಯನ್ ಗಾಯ ಆದರೂ ಕೂಡ ಛಲ ಬಿಡದೇ ಓಡಿ ಅಲ್ಲಿ ತ್ರಿವಿಕ್ರಮನ ಹಾಗೆ ಗೆದ್ದು ಮೂರು ಸಲ ದ್ವಿಶತಕ ಬಾರಿಸಿದ ಅಂದರೆ ಸುಮ್ಮನೆ ಅಲ್ಲವೇ ಅಲ್ಲ ಹಾಗಾಗಿ ಇವರಲ್ಲಿ ನಾಯಕತ್ವ ಗುಣ ಇದೆ.

Leave A Reply

Your email address will not be published.

error: Content is protected !!