ಮೇಷ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ಅಚ್ಚರಿ ವಿಷಯಗಳು ಇಲ್ಲಿದೆ

0

ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶೇಷ ಗುಣಗಳು ಅಡಗಿರುವುದು ಸಹಜ. ಅದು ಕೆಲವೊಮ್ಮೆ ಎಲ್ಲರ ಗಮನಕ್ಕೂ ಬರೆದೆ ಇರಬಹುದು. ಇನ್ನೂ ಕೆಲವೊಮ್ಮೆ ವ್ಯಕ್ತಿಯ ಸೂಕ್ತ ಗುಣವು ಏನೆಂದು ಅರ್ಥವಾಗದೆ ಇರಬಹುದು. ಅಂತಹ ಸಂದರ್ಭದಲ್ಲೂ ವ್ಯಕ್ತಿಯ ಬಗ್ಗೆ ತಪ್ಪು ಕಲ್ಪನೆ ಅಥವಾ ಅಪಾರ್ಥಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ನಿಮಗೆ ನಿಮ್ಮ ಸ್ನೇಹಿತರ ಗುಣ ಏನು ಅವರ ಬಗ್ಗೆ ಒಂದಿಷ್ಟು ವಿಶೇಷ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ವಿವರಿಸಲಾದ ಮೇಷ ರಾಶಿಯವರ ಬಗೆಗಿನ ಅಚ್ಚರಿಯ ಸಂಗತಿಯನ್ನು ಪರಿಶೀಲಿಸಿ.

ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ. ಎಂತಹ ಸಂಗತಿಗಳಲ್ಲಾದರೂ ತಮ್ಮದೊಂದು ಸ್ಥಾನವನ್ನು ಮಾಡಿಕೊಳ್ಳಲು ಸಾಕಷ್ಟು ಉತ್ಸಾಹವನ್ನು ತೋರುವರು.

ಅಶ್ವಿನಿ ನಕ್ಷತ್ರ ನಾಲ್ಕು ಪಾದ, ಭರಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಕೃತ್ತಿಕಾ ನಕ್ಷತ್ರದ ಒಂದು ಪಾದ ಸೇರಿ ಮೇಷ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ. ಯಾವ ರಾಶಿಗೆ ಕುಜ ಅಧಿಪತಿಯೋ ಅವರಿಗೆ ಹಠ ಜಾಸ್ತಿ ಇರುತ್ತದೆ. ಮೇಷ ರಾಶಿಗೆ ಸೇರಿದ ಜನರು ಮಹತ್ವಾಕಾಂಕ್ಷೆಯವರು, ದೃಢಸಂಕಲ್ಪದವರು ಮತ್ತು ಚತುರರು. ಇವರು ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತು ಅವರ ಕನಸುಗಳನ್ನು ಈಡೇರಿಸುವ, ತಮ್ಮ ಗುರಿಗಳನ್ನು ಸಾಧಿಸುವ ಸಂದರ್ಭದಲ್ಲಿ ಯಾರೂ ಅವರನ್ನು ತಡೆಯಲಾಗದು.

ಇವರು ರಿಸ್ಕ್ ತೆಗೆದುಕೊಳ್ಳುವವರು ಮತ್ತು ಸುರಕ್ಷಿತವಾಗಿ ಆಟವಾಡುವುದನ್ನು ನಂಬುವುದಿಲ್ಲ. ಮೇಷರಾಶಿಯಲ್ಲಿ ಜನಿಸಿದವರು ಯಾವುದಕ್ಕೂ ಹೆದರುವುದಿಲ್ಲ, ಧೈರ್ಯಶಾಲಿಗಳು. ಜೀವನದಲ್ಲಿ ಬರುವ ಎಲ್ಲಾ ಉತ್ತಮ ವಿಷಯಗಳನ್ನು ಪ್ರೀತಿಸುವಂತಹ ವ್ಯಕ್ತಿಯನ್ನು ಒಳಗಣ್ಣಿನಿಂದ ನೋಡಿದಾಗ ಅವರು ಮಿತವ್ಯಯಿಯಾಗಿ ಕಾಣುತ್ತಾರೆ. ಆದರೆ ಅವರು ಪ್ರೀತಿಸುವ ವ್ಯಕ್ತಿಗಾಗಿ ಹಣವನ್ನು ಖರ್ಚು ಮಾಡಲು ಎರಡು ಬಾರಿ ಯೋಚಿಸುವುದಿಲ್ಲ. ವೈಯಕ್ತಿಕವಾಗಿ ಹಣಕಾಸಿನ ಬಗ್ಗೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ತಮ್ಮ ಪ್ರೀತಿಪಾತ್ರರು ಕಷ್ಟದ ಸಮಯವನ್ನು ಎದುರಿಸುತ್ತಿದ್ದಲ್ಲಿ ಅವರ ಸಮಸ್ಯೆಯನ್ನು ಪರಿಹರಿಸಲು ಸದಾ ಸಿದ್ಧರಿರುತ್ತಾರೆ.

ನೀರಸ, ನಿಧಾನಗತಿಯ ಜನರು ಹಾಗೂ ಬೋರು ಹೊಡೆಸುವ ಉದ್ಯೋಗಗಳನ್ನು ದ್ವೇಷಿಸುವವರು ಮೇಷ ರಾಶಿಯವರು. ಮೇಷರಾಶಿಯವರ ಈ ಗುಣವು ಅವರಿಗೆ ನೋವುಂಟು ಮಾಡಿದರೂ, ಸತ್ಯವೆಂದರೆ ಈ ರಾಶಿಯವರು ನಿಧಾನಗತಿಯ ಜನರು ಹಾಗೂ ಚಟುವಟಿಕೆಗಳನ್ನು ದ್ವೇಷಿಸುತ್ತಾರೆ. ನೀವು ಅವರನ್ನು ಚೆನ್ನಾಗಿ ತಿಳಿದುಕೊಂಡಿದ್ದು, ಅವರಿಂದ ಸಹಾಯವನ್ನು ಕೇಳಿದರೆ, ಖಂಡಿತವಾಗಿಯೂ ನೀವು ನಿರೀಕ್ಷಿಸಿರದ ವೇಗದಲ್ಲಿ ಪ್ರತಿಕ್ರಿಯೆಯನ್ನೂ ನೀಡುತ್ತಾರೆ.

ಮೇಷ ರಾಶಿಯವರು ಎದುರಿನವರ ನಕಾರಾತ್ಮಕ ಸ್ವಭಾವವನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಅದು ಇವರ ಪಾಲಿಗೆ ನೆಗೆಟಿವ್ ಆಗಿ ಪರಿಣಮಿಸುತ್ತದೆ. ರಾಜಕಾರಣದಲ್ಲಿ ಇವರಿಗೆ ಉತ್ತಮ ಪ್ರಗತಿ ದೊರೆಯುತ್ತಿದೆ. ತುಂಬ ಸರಳ ವ್ಯಕ್ತಿತ್ವದವರಾಗಿರುವ ಇವರು, ಸತ್ಯವನ್ನು ಹೇಳುವಂಥವರಾಗಿರುತ್ತಾರೆ, ಕಠಿಣ ಪರಿಶ್ರಮದ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.

ಇವರು ಇತರರ ಸಹಾಯ ಕೇಳುವುದಿಲ್ಲ. ಅತ್ಯಂತ ವಿರಳ ಅಥವಾ ಸಂದಿಗ್ಧ ವೇಳೆಯಲ್ಲಿ ಮಾತ್ರ ನೆರವು ಕೇಳಬಹುದು. ನಿಮ್ಮ ಮೇಷ ರಾಶಿಯ ಸ್ನೇಹಿತನ ಹಣೆಯ ಮೇಲೆ ಒಂದು ಗಾಯವನ್ನು, ಮೊಣಕೈ ಸಮೀಪ ಒಂದು ಗಾಯವನ್ನು, ಕತ್ತಿನ ಬಳಿ ಒಂದು ಗಾಯ ಅಥವಾ ಯಾವುದಾದರೂ ಒಂದು ಅಪಘಾತಕ್ಕೆ ಒಳಗಾಗಿರುತ್ತಾರೆ. ಕಾರಣ ಅವರಲ್ಲಿ ಒಂದು ವಿಶೇಷ ಆಕರ್ಷಕ ಶಕ್ತಿಯು ತುಂಬಿರುತ್ತದೆ ಎಂದು ಹೇಳಲಾಗುವುದು. ಅದು ಕೆಲವೊಮ್ಮೆ ಗಾಯ ಮಾಡಿಕೊಳ್ಳುವುದರಲ್ಲಿ ಕೊನೆಗೊಳ್ಳಬಹುದು ಎನ್ನಲಾಗುತ್ತದೆ.

Leave A Reply

Your email address will not be published.

error: Content is protected !!