WhatsApp Group Join Now
Telegram Group Join Now

ಸಿನಿಮಾ ನಟ ನಟಿಯರು ತಮ್ಮದೇ ಆದ ಮನೆಯನ್ನು ವಿಶಾಲವಾಗಿ, ಸುಂದರವಾಗಿ, ವಿಭಿನ್ನವಾಗಿ ನಿರ್ಮಿಸಿಕೊಳ್ಳುತ್ತಾರೆ, ಅದರಂತೆ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಮೇಘನಾ ರಾಜ್ ಅವರ ಮನೆಯು ಬಹಳ ವಿಶೇಷತೆಯನ್ನು ಹೊಂದಿದೆ. ಹಾಗಾದರೆ ಮೇಘನಾ ಅವರ ಮನೆಯ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸದಾ ನಗುಮುಖವನ್ನು ಹೊಂದಿರುವ ಮೇಘನಾ ರಾಜ್ ಅವರು ನಮಗೆಲ್ಲ ತಿಳಿದಿರುವ ಹಾಗೆ ಬಹಳ ವರ್ಷಗಳ ಕಾಲ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಆದರೆ ವಿಧಿಯಾಟದಂತೆ ಮದುವೆಯಾಗಿ ಎರಡು ವರ್ಷದಲ್ಲಿ ಚಿರು ಅವರು ನಿಧನರಾಗುತ್ತಾರೆ. ಆಗ ಒಂಟಿಯಾದ ಮೇಘನಾ ರಾಜ್ ಅವರ ಜೀವನದಲ್ಲಿ ಮಗು ಹುಟ್ಟಿದ ನಂತರ ಹೊಸಬೆಳಕು ಮೂಡಿತು. ಇದೀಗ ಬಹಳ ದಿನಗಳ ನಂತರ ಮಗುವಿನೊಂದಿಗೆ ಮೇಘನಾ ಅವರು ತಮ್ಮ ಮನೆಯಲ್ಲಿ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಮೇಘನಾ ಅವರು ಬಾಲನಟಿಯಾಗಿ ಮೊದಲ ಬಾರಿಗೆ ಜೋಕುಮಾರಸ್ವಾಮಿ ಚಿತ್ರದಲ್ಲಿ ನಟಿಸಿದ್ದರು. ನಂತರ ಓದಿನ ಕಡೆ ಗಮನ ಹರಿಸಿದರು, ಸೈಕಾಲಜಿ ವಿಷಯದಲ್ಲಿ ಪದವಿ ಪಡೆದ ನಂತರ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದರು. ರಾಜಾಹುಲಿ ಸಿನಿಮಾದಲ್ಲಿ ಯಶ್ ಅವರೊಂದಿಗೆ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಮತ್ತೆ ಬಂದರು.

ಮೇಘನಾ ಅವರು ಬೆಂಗಳೂರಿನಲ್ಲಿ ಭವ್ಯವಾದ ಮನೆಯನ್ನು ನಿರ್ಮಿಸಿದ್ದಾರೆ. ಮೇಘನಾ ಅವರು ಹುಟ್ಟಿ ಬೆಳೆದ ಮನೆಯನ್ನು ಸಾಂಪ್ರದಾಯಿಕವಾಗಿ ನಿರ್ಮಿಸಲಾಗಿದೆ. ಈ ಮನೆಯ ವಿಶೇಷತೆಯೆಂದರೆ ಈ ಮನೆಯು ಬೆಂಗಳೂರಿನಂತಹ ಮಹಾನಗರದಲ್ಲಿ ಇದ್ದರೂ ಹಳ್ಳಿಯಂತೆ ಗಿಡಮರಗಳನ್ನು ಹೆಚ್ಚು ಬೆಳೆಸಲಾಗಿದೆ. ಪರಿಸರ ಪ್ರೇಮ ಹೊಂದಿರುವ ಮೇಘನಾ ರಾಜ್ ಕುಟುಂಬದವರು ಮನೆಯ ಸುತ್ತಮುತ್ತ ತರಕಾರಿ, ಹಣ್ಣು, ಔಷಧೀಯ ಗಿಡಗಳನ್ನು ಬೆಳೆಸಿದ್ದಾರೆ. ಮೇಘನಾ ರಾಜ್ ಕುಟುಂಬದವರ ಪರಿಸರ ಪ್ರೇಮವನ್ನು ಎಲ್ಲರೂ ಮೆಚ್ಚಲೇಬೇಕು. ಇಷ್ಟೆ ಅಲ್ಲದೆ ಮನೆಯಲ್ಲಿ ವಿದೇಶಿ ತಳಿಯ ಎರಡು ನಾಯಿಗಳನ್ನು ಸಾಕಿದ್ದಾರೆ, ಜೊತೆಯಲ್ಲಿ ಪಕ್ಷಿಗಳನ್ನು ಸಾಕಿದ್ದಾರೆ, ಮಾತನಾಡುವ ಗಿಳಿಯನ್ನು ಸಹ ಮೇಘನಾ ಅವರ ಮನೆಯಲ್ಲಿ ನೋಡಬಹುದು. ಮನೆಯಲ್ಲಿ ಎಲ್ಲಿ ನೋಡಿದರು ಚಿರು ಅವರು ಕಾಣಬೇಕು ಎಂದು ಮನೆಯ ಎಲ್ಲ ಕಡೆ ಚಿರು ಅವರ ಫೋಟೋಗಳನ್ನು ಹಾಕಿಸಿದ್ದಾರೆ. ಸುಂದರವಾಗಿರುವ ಮನೆಯನ್ನು ಮೇಘನಾ ಅವರೆ ಅಲಂಕರಿಸಿದ್ದಾರೆ ಇದರಿಂದ ಆ ಮನೆಗೆ ಇನ್ನಷ್ಟು ಮೆರಗು ಬಂದಿದೆ. ಮೇಘನಾ ಅವರ ಮನೆಯ ಮುಂದೆ ಕೈತೋಟವಿದ್ದು ಬಣ್ಣ, ಬಣ್ಣದ ಗಿಡಗಳಿಂದ ತುಂಬಿ ತುಳುಕುತ್ತಿದೆ. ಮೇಘನಾ ಅವರ ಸುಂದರವಾದ ಮನೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಅವರ ಮನೆಯು ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ಮನೆಯ ಸುತ್ತಲೂ ಅವರ ಮನೆಯಂತೆ ಗಿಡಗಳನ್ನು ಬೆಳೆಸುವುದರಿಂದ ಉತ್ತಮ ಗಾಳಿಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: