ಮೇಕಪ್ ಸ್ಟುಡಿಯೋ ಉದ್ವಾಟಿಸಿದ ದ್ರುವ ದಂಪತಿ ವಿಡಿಯೋ

0

ಧ್ರುವ ಸರ್ಜಾ ಇವರು ಚಿರಂಜೀವಿ ಸರ್ಜಾ ಅವರ ಸಹೋದರ ಆಗಿದ್ದಾರೆ. ಚಿರಂಜೀವಿ ಸರ್ಜಾ ಅವರು ಈಗ ಇಲ್ಲ. ಆದರೆ ಚಿರಂಜೀವಿ ಸರ್ಜಾ ಅವರ ಅತಿ ಹೆಚ್ಚಿನ ಪ್ರೀತಿಯ ಸಹೋದರ ಧ್ರುವ ಸರ್ಜಾ ಅವರು ಆಗಿದ್ದರು. ಧ್ರುವ ಸರ್ಜಾ ಅವರ ಪೊಗರು ಸಿನೆಮಾ ಇತ್ತೀಚೆಗೆ ಅದೆಷ್ಟೋ ಹೆಸರನ್ನು ಮಾಡುತ್ತಿದೆ. ಅದರಲ್ಲಿ ಇವರ ನಟನೆ ಅತ್ಯಂತ ಅದ್ಭುತವಾಗಿದೆ. ಹಾಗೆಯೇ ಧ್ರುವ ಸರ್ಜಾ ಅವರು ಪ್ರೇರಣಾ ಅವರ ಪತಿಯಾಗಿದ್ದಾರೆ. ಆದ್ದರಿಂದ ನಾವು ಇಲ್ಲಿ ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಧ್ರುವ ಸರ್ಜಾ ಇವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ತಮ್ಮ ಒಂದು ಅಮೋಘವಾದ ನಟನೆಯಿಂದ 2012ರಲ್ಲಿ ಒಂದು ಸಿನೆಮಾದಲ್ಲಿ ಕಾಣಿಸಿಕೊಂಡರು. ಹಾಗೆಯೇ ಇವರು ಅರ್ಜುನ್ ಸರ್ಜಾ ಅವರ ಅಕ್ಕನ ಮಗನಾಗಿದ್ದಾರೆ. ಧ್ರುವ ಸರ್ಜಾ ಅವರು ಪ್ರೇರಣಾ ಎನ್ನುವವರನ್ನು ವಿವಾಹವಾಗಿದ್ದಾರೆ. ಈಗ ಸ್ವಲ್ಪ ದಿನಗಳ ಹಿಂದೆ ಪ್ರೇರಣಾ ಅವರ ಹುಟ್ಟುಹಬ್ಬ ಇತ್ತು. ಧ್ರುವ ಸರ್ಜಾ ಅವರು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡಿದ್ದರು.

ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರು ಗೋವಾಕ್ಕೆ ಹೋಗಿದ್ದರು. ಅಲ್ಲಿಂದ ತನ್ನ ಪ್ರೀತಿಯ ಸಹೋದರರಾದ ಚಿರು ಅವರ ಪುತ್ರನಿಗೆ ವಿಶೇಷವಾದ ಉಡುಗೊರೆಯನ್ನು ತಂದಿದ್ದರು. ಅದೇನೆಂದರೆ ಮಕ್ಕಳು ಆಡುವ ಆಟಿಕೆ ಸಾಮಾನುಗಳು. ಇದರಲ್ಲಿ ಬಣ್ಣಬಣ್ಣದ ಆಟಿಕೆ ಸಾಮಾನುಗಳು ಇವೆ. ಹಾಗೆಯೇ ಅವರ ನಾಮಕರಣವನ್ನು ಧ್ರುವ ಸರ್ಜಾ ಅವರು ತಮ್ಮ ಮನೆಯಲ್ಲಿ ಮಾಡಬೇಕೆಂದು ನಿರ್ಧಾರವನ್ನು ಕೈಗೊಂಡಿದ್ದಾರೆ. ಬಹಳ ವಿಜೃಂಭಣೆಯಿಂದ ನಾಮಕರಣ ಮಾಡಬೇಕು ಎಂದುಕೊಂಡಿದ್ದಾರೆ.

ಇವರ ಅಭಿಮಾನಿಗಳು ಇವರನ್ನು ಒಂದು ಮೇಕಪ್ ಸ್ಟುಡಿಯೋ ಉದ್ಘಾಟನೆಗೆ ಕರೆ ನೀಡಿದ್ದರು. ಹಾಗೆಯೇ ಧ್ರುವ ಸರ್ಜಾ ಮತ್ತು ಅವರ ಪತ್ನಿ ಯಾವುದೇ ಅಹಂಕಾರ ಇಲ್ಲದೇ  ಮೇಕಪ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದಾರೆ. ಮೇಕಪ್ ಸ್ಟುಡಿಯೋ ಹೆಸರು ಆಧ್ಯಾ ರಾಜ್ ಮೇಕಪ್ ಸ್ಟುಡಿಯೋ ಮತ್ತು ಅಕಾಡೆಮಿ. ಧ್ರುವ ಸರ್ಜಾ ಮತ್ತು ಅವರ ಪತ್ನಿ ಉದ್ಘಾಟಿಸಿದ ಈ ಸ್ಟುಡಿಯೋ ಒಳ್ಳೆಯ ಪ್ರಗತಿ ಕಾಣಲಿ ಎಂದು ಹಾರೈಸೋಣ.

Leave A Reply

Your email address will not be published.

error: Content is protected !!
Footer code: