ಮೀನಾ ರಾಶಿಯವರ ಫೆಬ್ರವರಿ ಮಾಸ ಭವಿಷ್ಯ

0

ಇದೇ ಬರುವ ಫೆಬ್ರವರಿ ತಿಂಗಳಿನಂದು ಮೀನ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಒಳ್ಳೆಯ ಫಲಗಳು ಕಂಡು ಬರುತ್ತವೆ ಅದರಂತೆ ಫೆಬ್ರವರಿ ತಿಂಗಳ ಮೀನ ರಾಶಿಯವರ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ನಾವು ತಿಳಿಯೋಣ.

ಮೀನ ರಾಶಿಯವರಿಗೆ ಈ ತಿಂಗಳಲ್ಲಿ ಒಳ್ಳೆಯ ಬೆಳವಣಿಗೆಗಳು ಕಂಡು ಬರುತ್ತವೆ ಶನಿ ನಿಮ್ಮನ್ನು ಅಷ್ಟಾಗಿ ಕಾಯದೆ ಇದ್ದರೂ ಸಹ ಉಳಿದ ಗ್ರಹಗಳಿಂದ ನಿಮಗೆ ಒಳ್ಳೆಯ ಫಲಗಳು ದೊರೆಯುತ್ತವೆ ಒಂದು ಕಡೆ ಸಾಡೇಸಾತಿಯ ಪ್ರಾರಂಭವಾಗಿದೆ ಅದೇ ರೀತಿ ಕೆಲವು ಕಷ್ಟಗಳು ನಿಮ್ಮ ಬದುಕಿನಲ್ಲಿ ಕಾಣಿಸಿಕೊಳ್ಳುತ್ತವೆ ಆದಾಗಿಯೂ ಒಂದು ಗ್ರಹದಿಂದ ನಿಮಗೆ ವಿಶೇಷವಾಗಿ ರಕ್ಷಣೆ ಸಿಗುತ್ತದೆ ಅದು ನಿಮಗೆ ಧೈರ್ಯವನ್ನ
ತಂದುಕೊಡುತ್ತದೆ.

ವಿಶೇಷವಾಗಿ ಮೀನ ರಾಶಿಯವರಿಗೆ ಈ ತಿಂಗಳಿನ ಅರ್ಧ ಭಾಗದಲ್ಲಿ ತುಂಬಾ ಒಳ್ಳೆಯ ಘಟನೆಗಳೆ ನಡೆಯುತ್ತವೆ ಶುಭ ಗ್ರಹಗಳು ಎಂದು ಕರೆಯಲ್ಪಡುವ ಕೆಲವು ಗ್ರಹಗಳು ಒಳ್ಳೆಯ ಬದಲಾವಣೆಗಳನ್ನು ಹೆಚ್ಚಾಗಿ ತರುತ್ತವೆ ಕೆಟ್ಟ ಬದಲಾವಣೆಗಳನ್ನು ಕಡಿಮೆಗೊಳಿಸುತ್ತವೆ.

ಶುಭ ಗ್ರಹಗಳು ನಿಮ್ಮ ರಾಶಿಗೆ ಪ್ರವೇಶ ಮಾಡುವುದರಿಂದ ದುಃಖ ಕಡಿಮೆಯಾಗಿ ಖುಷಿಯು ಜಾಸ್ತಿ ಆಗುತ್ತದೆ ಅಂದರೆ ನೀವು ಮಾಡಿದ ಕಾರ್ಯಗಳಿಗೆ ನೀವು ಪಟ್ಟ ತೃಪ್ತಿಯ ಜೊತೆಗೆ ನಿಮ್ಮ ಆತ್ಮೀಯರು ಅಥವಾ ಇತರರು ನಿಮ್ಮನ್ನ ಪ್ರೋತ್ಸಾಹಿಸುತ್ತಾರೆ ಇದರಿಂದ ನೀವು ಸಂತೋಷವಾಗಿ ಇರುತ್ತೀರಿ.

ಜೀವನದಲ್ಲಿ ಬರುವ ಕೆಟ್ಟ ವಿಚಾರಗಳನ್ನು ಮರೆತು ಒಳ್ಳೆಯ ವಿಚಾರದೆಡೆಗೆ ಮುಂದುವರೆಯಲು ಅವಕಾಶಗಳು ದೊರೆಯುತ್ತವೆ. ನಿಮ್ಮ ರಾಶಿಗೆ ಬಂದು ಅಲ್ಲಿ ಹುಚ್ಚನಾಗುವ ಶುಕ್ರ ನಿಮ್ಮ ಮನೋಬಲವನ್ನು ಹೆಚ್ಚಿಗೆ ಮಾಡುತ್ತಾನೆ ಅಷ್ಟೇ ಅಲ್ಲದೆ ಯಾವುದೇ ಒಂದು ಇಷ್ಟಪಟ್ಟ ವಸ್ತುವನ್ನ ಪಡೆದುಕೊಳ್ಳುವುದು ಅಥವಾ ಯಾರಿಂದಲೂ ಉಡುಗೊರೆಯನ್ನು ಪಡೆಯುವುದು ಇತ್ಯಾದಿಗಳಿಂದ ನಿಮಗೆ ಖುಷಿ ಸಿಗುತ್ತದೆ.

ಕೆಲವೊಂದು ವಿಚಾರಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಸಂದರ್ಭಗಳು ಇವೆ ಅಂದರೆ ಕೆಲವೊಮ್ಮೆ ರಾಜಕಾರಣದಲ್ಲಿ 13ನೇ ತಾರೀಖಿನ ನಂತರ ಸೂರ್ಯನಿಂದ ಸ್ವಲ್ಪ ತೊಂದರೆ ಉಂಟಾಗಬಹುದು ಹಾಗೆ ಸ್ವಲ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಇದರ ಬಗ್ಗೆ ಸ್ವಲ್ಪ ಮಟ್ಟಿಗೆ ಕಾಳಜಿ ವಹಿಸಬೇಕಾಗುತ್ತದೆ ಅಂದ ಹಾಗೆ ಈ ತಿಂಗಳ 13ನೇ ತಾರೀಖಿನವರೆಗೆ ರವಿಯು ನಿಮಗೆ ಯಶಸ್ಸನ್ನೇ ನೀಡುತ್ತಾನೆ ಸರ್ಕಾರಿ ಕೆಲಸಗಳನ್ನು ಮಾಡುದಿದ್ದರೆ ಅಷ್ಟರೊಳಗಾಗಿ ಮುಗಿಸಿಕೊಳ್ಳುವುದು ಉತ್ತಮ 13 ನೇ ತಾರೀಖಿನ ನಂತರದಲ್ಲಿ ನಿಮ್ಮ ಕೆಲಸಕ್ಕೆ ಅಡೆತಡೆಗಳು ಬರಬಹುದು.

ಹಾಗೆ ಶನಿಯು ನಿಮ್ಮ ಕಾರ್ಯವನ್ನು ಮುಂದೂಡಲು ಪ್ರಯತ್ನಿಸಬಹುದು ಇದರಿಂದ ನೀವು ಮಾಡುವ ಕೆಲಸದಲ್ಲಿ ವಿಘ್ನಗಳು ಬರಬಹುದು ಆದ್ದರಿಂದ 13ನೇ ತಾರೀಖಿನ ಒಳಗಡೆ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವುದು ಉತ್ತಮವಾದ ಸಲಹೆಯಾಗಿದೆ.

ಇದೆ ತಿಂಗಳ ಆರಂಭದ ದಿನಗಳಲ್ಲಿ ಕುಜನಿಂದಲೂ ನಿಮಗೆ ರಕ್ಷಣೆ ದೊರೆಯುತ್ತದೆ ಧೈರ್ಯವು ನಿಮ್ಮ ಪಾಲಾಗುತ್ತದೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಧೈರ್ಯ ಮತ್ತು ತಾಳ್ಮೆ ತುಂಬಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ತಿಂಗಳ ಆರಂಭದ ದಿನಗಳು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರುತ್ತದೆ.

Leave A Reply

Your email address will not be published.

error: Content is protected !!
Footer code: