ಮೀನಾ, ಕುಂಭ ಹಾಗೂ ಮಕರ ರಾಶಿಯವರಿಗೆ ಶನಿ ಸಾಡೇಸಾತಿ ಮುಂದೆ ಏನಾಗಲಿದೆ ಗೊತ್ತಾ..

0

ಏಳೂವರೆ ವರ್ಷಗಳ ಕಾಲ ನಡೆಯುವ ಶನಿಯ ದೆಸೆಯನ್ನು ಸಾಡೇಸಾತಿ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯು ಒಂಬತ್ತು ಗ್ರಹಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಾನೆ. ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯ ಸಾಡೇಸಾತಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಬರುತ್ತದೆ. ಇದಲ್ಲದೇ ವ್ಯಕ್ತಿಯ ಜಾತಕದಲ್ಲಿ ಶನಿ ಸಾಡೇಸಾತಿಯ ಪ್ರಭಾವವಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ ವ್ಯಕ್ತಿಯ ಜಾತಕದಲ್ಲಿ ಶನಿಯ ದೆಸೆ ಸರಿಯಾಗಿದ್ದರೆ ಅವನು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾನೆ. 3 ರಾಶಿಚಕ್ರಗಳಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ಯಾವಾಗ ನೋಡೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಾಡೇಸಾತಿಯು ಎಲ್ಲರ ಜೀವನದಲ್ಲಿ ಬರುವ ಒಂದು ಹಂತವಾಗಿದೆ. ಇದು ಮನುಷ್ಯನ ಜೀವನದಲ್ಲಿ ಕಷ್ಟಗಳು ಎದುರಾಗುವ ಸಮಯ ಎನ್ನಬಹುದು. ಈ ಸಮಯದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಸಾಡೇಸಾತಿಯ ಸಮಯದಲ್ಲಿ, ನಮ್ಮ ಹಿಂದಿನ ಕರ್ಮದ ಪರಿಣಾಮಗಳು ಹೆಚ್ಚು ಕಾಣಿಸುತ್ತದೆ. ಇದು 7.5 ವರ್ಷಗಳ ಅವಧಿಯಾಗಿದ್ದು, ಶನಿಯು ಚಂದ್ರನ ಮೊದಲು ಮನೆಯನ್ನು ಪ್ರವೇಶಿಸಿದಾಗ ಇದು ಪ್ರಾರಂಭವಾಗುತ್ತದೆ.

ಪ್ರತಿ ರಾಶಿಯಲ್ಲಿ ಶನಿಯು ಸುಮಾರು 2.5 ವರ್ಷಗಳವರೆಗೆ ಉಳಿಯುವ ಕಾರನ, ಶನಿಯು ಜನ್ಮಸ್ಥಳವಾದ ಚಂದ್ರನಿಂದ 12 ನೇ ಮನೆಯನ್ನು ತಲುಪಿದಾಗ ಸಾಡೇಸಾತಿ ಪ್ರಾರಂಭವಾಗುತ್ತದೆ ಮತ್ತು ಅದು ಮೂಲ ಚಂದ್ರನಿಂದ 2 ನೇ ಮನೆಯಿಂದ ಹೋಗುವಾಗ ಮುಕ್ತಾಯಗೊಳ್ಳುತ್ತದೆ. ಈ ಸಮಯದಲ್ಲಿ ಕಷ್ಟಗಳು ಬೆನ್ನು ಬೀಳುವುದರಿಂದ ಜನ ಸಾಡೇಸಾತಿಗೆ ಹೆದರುತ್ತಾರೆ. ಶನಿಯನ್ನು ಕರ್ಮದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಸಾಡೇಸಾತಿ ಸಾಮಾನ್ಯವಾಗಿ ನಕಾರಾತ್ಮಕ ಪರಿಣಾಮಗಳನ್ನು ಹೊಂದಿರುತ್ತದೆ. ಆದರೆ ಅದು 2 ನೇ, 7 ನೇ ಮತ್ತು 10 ನೇ ಮನೆಯಲ್ಲಿದ್ದಾಗ ಒಳ್ಳೆಯ ಪರಿಣಾಮಗಳನ್ನು ನೀಡುತ್ತದೆ.

ಇದು ನಿಮ್ಮ ಮನೆ, ಮಕ್ಕಳು, ಸಂಪತ್ತು, ವೈವಾಹಿಕ ಜೀವನ ಮತ್ತು ಇತರ ಅಂಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಶನಿಯು 4, 5 ಮತ್ತು 8 ನೇ ಮನೆಗಳಲ್ಲಿ ಇದ್ದರೆ ಜನರು ಖಂಡಿತವಾಗಿಯೂ ತಮ್ಮ ಜೀವನದಲ್ಲಿ ಭಾರೀ ಸಮಸ್ಯೆ ಎದುರಿಸುತ್ತಾರೆ. ಶನಿಯ ಸ್ಥಾನವು ಕೇತು ಮತ್ತು ರಾಹು ಜೊತೆ ಘರ್ಷಣೆಯಾದಾಗ ಸಮಸ್ಯೆಗಳು ಜಾಸ್ತಿ.
ಪ್ರಸ್ತುತ ಮೂರು ರಾಶಿಗಳಲ್ಲಿ ಶನಿ-ಸಾಡೇಸಾತಿ ದೆಸೆ ನಡೆಯುತ್ತಿದೆ. ಪ್ರಸ್ತುತ ಶನಿಯು ಮಕರ ರಾಶಿಯಲ್ಲಿದೆ.

ಮಕರ ರಾಶಿಯ ಜೊತೆಗೆ ಮೀನ, ಕುಂಭ ರಾಶಿಯವರ ಶನಿ ಸಾಡೇಸಾತಿ ನಡೆಯುತ್ತಿದೆ. ಮೀನ ರಾಶಿಯವರಿಗೆ 2023 ರಿಂದ ಶನಿ ಸಾಡೇಸಾತಿ ಶುರುವಾಗಿದೆ ಇದಲ್ಲದೇ ಮಕರ ರಾಶಿಯವರಿಗೆ ಶನಿಯ ಸಾಡೇಸಾತಿಯ ಎರಡನೇ ಘಟ್ಟ ನಡೆಯುತ್ತಿದೆ. ಈ ರಾಶಿಯವರಿಗೆ ಏಳೂವರೆ ಶನಿ 2025 ರಲ್ಲಿ ಕೊನೆಗೊಳ್ಳುತ್ತದೆ. ಇನ್ನೊಂದೆಡೆ ಕುಂಭ ರಾಶಿಯವರಿಗೆ ಶನಿಯ ಸಾಡೇಸಾತಿಯ ಮೊದಲ ಘಟ್ಟ ನಡೆಯುತ್ತಿದೆ.

ಈ ರಾಶಿಯಿಂದ ಶನಿಯ ಸಾಡೇಸಾತಿಯ ಪರಿಣಾಮವು ಜನವರಿ 23, 2028 ರಂದು ಕೊನೆಗೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯು ರಾಶಿಚಕ್ರವನ್ನು ಬದಲಾಯಿಸಿದಾಗ ಒಂದು ರಾಶಿಯ ಸಾಡೇಸಾತಿ ಕೊನೆಗೊಂಡಾಗ ಇನ್ನೊಂದು ರಾಶಿಗೆ ಏಳೂವರೆ ಶನಿ ಆರಂಭವಾಗುತ್ತದೆ. ಮೀನ ರಾಶಿಯಲ್ಲಿ ಏಳೂವರೆ ಶನಿ ಪ್ರಾರಂಭವಾಗಲಿದೆ.

Leave A Reply

Your email address will not be published.

error: Content is protected !!