WhatsApp Group Join Now
Telegram Group Join Now

ರಾಶಿಚಕ್ರಗಳಲ್ಲಿ ಮೂರನೇ ರಾಶಿ ಚಿಹ್ನೆ ಮಿಥುನ ರಾಶಿ. ಮಿಥುನ ರಾಶಿಯಡಿಯಲ್ಲಿ ಜನಿಸಿದವರು ಹೆಚ್ಚು ಮಾತನ್ನು ಪ್ರೀತಿಸುವವರಾಗಿರುತ್ತಾರೆ. ಜನರೊಂದಿಗೆ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಈ ರಾಶಿಯವರ ಸಂಭಾಷಣೆಯ ಹಿಂದಿನ ಪ್ರೇರಕ ಶಕ್ತಿ ಎಂದರೆ ಅವರ ಮನಸ್ಸು. ಕುಂಡಲಿಯಲ್ಲಿ ಮೂರನೇ ಮನೆಯನ್ನು ಆಳುವ ಈ ರಾಶಿಯವರು ಬೌದ್ಧಿಕ ವಿಷಯಗಳತ್ತ ಆಸಕ್ತಿ ಹೊಂದಿರುತ್ತಾರೆ. ಜನರು ಹಾಗೂ ಸ್ಥಳವನ್ನು ಇಷ್ಟಪಡುವ ಮುನ್ನ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡ ನಂತರ ಮುಂದುವರಿಯುತ್ತಾರೆ. ಈ ರಾಶಿಯವರ ವ್ಯಕ್ತಿತ್ವ ಹಾಗೂ ಜೀವನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಮಿಥುನ ರಾಶಿಯವರ ಅವಳಿಗಳು ಸಂಕೇತಗಳು ಮಿಥುನ ರಾಶಿಯನ್ನು ಪ್ರತಿನಿಧಿಸುವುದರಿಂದ ಇದು ಅವರ ಉಭಯ ಸ್ವಭಾವದ ಗುಣಲಕ್ಷಣಗಳನ್ನು ವಿವರಿಸುತ್ತದೆ. ಇವರು ಪರಿಣಾಮಕಾರಿ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಇವರು ಬುದ್ಧಿವಂತಿಕೆ, ನ್ಯಾಯಯುತ, ಹಾಗೂ ಮಾನವೀಯ ಸ್ವಭಾವವನ್ನು ಒಳಗೊಂಡವರು. ಇವರ ನಡವಳಿಕೆಯಿಂದಲೇ ಇತರರಿಗಿಂತ ಭಿನ್ನವಾಗಿರುತ್ತಾರೆ. ಅವರು ಇತರ ವ್ಯಕ್ತಿಗಳನ್ನು ನೋಡಿದಾಗಲೇ ಅವರ ಒಳಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರೆ, ಕೆಲವೊಮ್ಮೆ ಇದನ್ನು ದುರುಪಯೋಗ ಪಡಿಸಿಕೊಳ್ಳಲೂಬಹುದು.

ಇವರು ಉತ್ತಮ ಸಂವಹನಕಾರರು, ಉತ್ತಮ ವಾಗ್ಮಿ ಹಾಗೂ ಹಾಸ್ಯ ಪ್ರವೃತ್ತಿಯವರು. ಈ ಗುಣಲಕ್ಷಣಗಳಿಂದಲೇ ಅವರು ಕೆಲವು ಉತ್ತಮ ಸ್ನೇಹಿತರನ್ನು ಗೆಲ್ಲುತ್ತಾರೆ. ಆತಂಕ ಎದುರಾದಾಗ ಉಗುರು ಕಚ್ಚುವ ಸ್ವಭಾವವೂ ಇವರದಾಗಿರಬಹುದು. ಮಿಥುನ ರಾಶಿಯವರ ಸ್ವಭಾವವು ಬಹುಮುಖವಾಗಿದೆ. ಕಾಲ್ಪನಿಕ, ಆಹ್ಲಾದಕರ, ಚಿಂತನಶೀಲ ಮತ್ತು ಎಲ್ಲದಕ್ಕೂ ಹೊಂದಿಕೊಳ್ಳಬಲ್ಲ ಸ್ವಭಾವ ಇವರದ್ದು ಇವರು ಪರಿಣಾಮಕಾರಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಮಿಥುನ ರಾಶಿಯವರು ಯಾವಾಗಲೂ ಆಸಕ್ತಿದಾಯಕ ವಿಷಯಗಳನ್ನು ಹೇಳಲು ಕಾರಣವೆಂದರೆ ಅವರು ಹೆಚ್ಚು ಬುದ್ಧಿವಂತರು. ಅವರು ಕಲಿಯಲು ಇಷ್ಟಪಡುತ್ತಾರೆ. ನೀವು ಅವರನ್ನು ಗಮನಿಸಿ ನೋಡಿ ಹೆಚ್ಚು ಪುಸ್ತಕವನ್ನು ಓದುತ್ತಾರೆ. ಅವರೊಂದಿಗೆ ಚಾಲೆಂಜ್ ಹಾಕುವಾಗ ಎಚ್ಚರದಿಂದಿರಿ. ಬುದ್ಧಿವಂತಿಕೆಯಿಂದಾಗಿ, ಮಿಥುನ ರಾಶಿಯವರು ಅತಿಯಾಗಿ ವಿಶ್ಲೇಷಣಾತ್ಮಕವಾಗಿರಬಹುದು. ನಿಮ್ಮ ಮಿಥುನ ರಾಶಿಯ ಸ್ನೇಹಿತರಿಗೆ ಊಟದ ಸ್ಥಳ ಅಥವಾ ಚಲನಚಿತ್ರವನ್ನು ಆಯ್ಕೆ ಮಾಡಲು ಕೇಳಬೇಡಿ. ಯಾವುದನ್ನು ಆರಿಸಬೇಕೆಂಬುದರ ಬಗ್ಗೆ ಅವರು ಗಂಟೆಗಳ ಕಾಲ ಯೋಚನೆ ಮಾಡುತ್ತಾರೆ.

ಮಿಥುನ ರಾಶಿಯವರು ಡೇಟಿಂಗ್ ಮಾಡುವುದು ಕಷ್ಟವಾಗಬಹುದು ಏಕೆಂದರೆ ಅವರು ಬದ್ಧತೆ ವಿಚಾರದಲ್ಲಿ ಕಷ್ಟಪಡುತ್ತಾರೆ. ಪ್ರೇಮಿಯಾಗಿ ಇವರು ಸಾಕಷ್ಟು ವಿನೋದ ಹಾಗೂ ಉತ್ಸಾಹವನ್ನು ಪರಿಗಣಿಸುವಂತಹ ವ್ಯಕ್ತಿ. ಆರಂಭದಲ್ಲಿ ಮಾತುಕತೆ ಹಾಗೂ ಚರ್ಚೆಗಳನ್ನು ಮಾಡುತ್ತಾರೆ. ತಮ್ಮ ಬುದ್ಧಿವಂತಿಕೆ ಹಾಗೂ ತಮ್ಮ ಶಕ್ತಿಗೆ ಹೊಂದಿಕೆಯಾಗುವವರನ್ನು ಕಂಡುಕೊಳ್ಳುವವರೆಗೂ ಇವರು ವಿವಿಧ ಪ್ರೇಮಿಗಳೊಂದಿಗೆ ಸಮಯ ಕಳೆಯುತ್ತಾರೆ. ಇವರು ಪರಿಪೂರ್ಣವಾದ ಸಂತೋಷ, ಪ್ರಚೋದನೆಯ ಅನುಭವವನ್ನು ಬಯಸುತ್ತಾರೆ.

ಪರಿಪೂರ್ಣವಾದ ಹೊಂದಾಣಿಕೆಯನ್ನು ತಮ್ಮ ಪ್ರೇಮಿಯಲ್ಲಿ ಕಂಡುಕೊಂಡ ನಂತರ ದೀರ್ಘಾವಧಿಯವರೆಗೂ ಇಬ್ಬರಿಗೂ ಸೂಕ್ತವಾದ ಜೀವನಶೈಲಿಯೊಂದಿಗೆ ಮುಂದುವರಿಯುತ್ತಾರೆ. ಇವರು ತಮ್ಮ ವಲಯದಲ್ಲಿರುವ ಪ್ರತಿಯೊಬ್ಬರನ್ನೂ ಸಂತೋಷವಾಗಿಡಲು ಬಯಸುತ್ತಾರೆ. ಎಲ್ಲರ ಬದುಕಿನ ಪುಟಗಳಲ್ಲೂ ತಾವಿರಬೇಕೆಂದು ಬಯಸುತ್ತಾರೆ. ಎಲ್ಲರನ್ನೂ ಪ್ರೀತಿಸುವ ಇವರ ಸ್ವಭಾವದಿಂದ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಅಗತ್ಯದ ಸಮಯದಲ್ಲಿ ಜೊತೆಗಿದ್ದು ಬೆಂಬಲ ನೀಡುತ್ತಾರೆ. ಇವರು ಬಹಳ ಮಾತುಗಾರರಾದ್ದರಿಂದ ಸಂವಹನ ಮಾಡಲು, ವಿಭಿನ್ನ ಜನರೊಂದಿಗೆ ಬೆರೆಯಲು ಹಾಗೂ ವಿವಿಧ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ.

ಹೀಗಾಗಿ ಹೊಸ ಆಲೋಚನೆಗಳು, ಸಾಕಷ್ಟು ಸಂವಹನ, ಹೊಸ ವಿಧಾನವನ್ನು ಹುಡುಕುವಂತಹ ವೃತ್ತಿಜೀವನವು ಇವರಿಗೆ ಸೂಕ್ತವಾಗಿದೆ. ವೃತ್ತಿ ಆಯ್ಕೆಯಲ್ಲಿ ನೋಡುವುದಾದರೆ ಬೋಧನೆ, ಮಾರಾಟ ಬರವಣಿಗೆ ಪ್ರಸ್ತುತಿ ಆವಿಷ್ಕಾರ ನಟನೆ ಉತ್ಪನ್ನ ಅಭಿವೃದ್ಧಿ, ಪತ್ರಿಕೋದ್ಯಮ, ರೇಡಿಯೋ ಜಾಕಿ ಮುಂತಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆರೋಗ್ಯದ ವಿಷಯದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಹೆಚ್ಚು ಶ್ರಮಪಡುವುದರಿಂದ ಆತಂಕ ಮತ್ತು ನಿದ್ರಾಹೀನತೆಗೆ ಗುರಿಯಾಗುತ್ತಾರೆ. ಇವರು ಸಾಕಷ್ಟು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಮತ್ತು ಸಾಕಷ್ಟು ನಿದ್ದೆಯ ಅವಶ್ಯಕತೆಯೂ ಇವರಿಗಿದೆ. ನಿಯಮಿತವಾದ ವ್ಯಾಯಾಮವೂ ಮಿಥುನ ರಾಶಿಯವರ ಆರೋಗ್ಯಕ್ಕೆ ಉತ್ತಮ.

ಸಾಮಾನ್ಯವಾಗಿ ಇವರ ಆರೋಗ್ಯವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದರೂ ಇದರ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ತಮ್ಮ ಮೆದುಳು ಹಾಗೂ ಮಾನಸಿಕ ಸಾಮರ್ಥ್ಯಗಳನ್ನು ಅತಿಯಾಗಿ ಕೆಲಸ ಮಾಡಲು ಬಳಸುವುದರಿಂದ ಮಾನಸಿಕ ಮತ್ತು ನರಗಳ ದೌರ್ಬಲ್ಯದಿಂದ ಬಳಲಬಹುದು. ಬ್ರಾಂಕೈಟಿಸ್‌ ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಗೂ ಕೆಲವರು ಗುರಿಯಾಗಬಹುದು. ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಲು ಧ್ಯಾನ ಮಾಡಬಹುದು. ಮಿಥುನ ರಾಶಿಯವರು ಸುಲಭವಾಗಿ ಹೊಂದಿಕೊಳ್ಳುತ್ತಾರೆ ಆದರೆ ಅದರಿಂದ ಬಹು ಬೇಗನೆ ಹೊರಹೋಗುತ್ತಾರೆ. ಅವರು ಒಮ್ಮೆಯಾದರೂ ಏನನ್ನಾದರೂ ಪ್ರಯತ್ನಿಸಲು ನಿರ್ಧರಿಸಿದರೆ ಅದನ್ನು ಅವರ ಬದಲಾಯಿಸುವುದಿಲ್ಲ.

ಅಲ್ಲದೇ ಆ ಸಮಯದಲ್ಲಿ ಅವರನ್ನು ಸೋಲಿಸಲು ಧೈರ್ಯ ಮಾಡಬಾರದು. ಅವರು ಯಾವುದೆ ಕೆಲಸವಾದರೂ ಅದನ್ನು ಮಾಡಲು ಸಿದ್ದರಿರುತ್ತಾರೆ. ಅವರು ಮಾಡುವ ಸಾಹಸಗಳು ಬಹಳ ಮಜವಾಗಿರುತ್ತದೆ. ಅವರ ಕಥೆಗಳನ್ನು ಕೇಳಿದರೆ ನಿಜಕ್ಕೂ ಸ್ವಾರಸ್ಯಕರವಾಗಿರುತ್ತದೆ. ಮಿಥುನ ರಾಶಿಯವರು ತುಂಬಾ ತಮಾಷೆಯ ವ್ಯಕ್ತಿತ್ವದವರು. ಆದರೆ, ಮಿಥುನ ರಾಶಿಯವರು ಕೆಲ ದೌರ್ಬಲ್ಯಗಳನ್ನು ಹೊಂದಿದ್ದಾರೆ.

ಅವರ ಸಾಮರ್ಥ್ಯವೆಂದರೆ ಅವರು ಎಲ್ಲಿ ಬೇಕಾದರು ಹೊಂದಿಕೊಳ್ಳಬಲ್ಲವರು ಹಾಗೆಯೇ ಹೊರಹೋಗುವವರು ಮತ್ತು ಹೆಚ್ಚು ಬುದ್ಧಿವಂತರು. ಮಿಥುನ ಅವರ ದೌರ್ಬಲ್ಯಗಳೆಂದರೆ ಅವರು ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಪರದಾಡುತ್ತಾರೆ. ಅವರನ್ನು ಕೆಲವೊಮ್ಮೆ ನಂಬುವುದು ಒಳ್ಳೆಯದಲ್ಲ. ಅವರ ಬಳಿ ಯಾವುದೇ ರಹಸ್ಯವನ್ನು ಹೇಳುವ ಮೊದಲು ಎಚ್ಚರದಿಂದಿರಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: