ಇಂದ್ರನ ಶಾಪದಿಂದ ಮಹಿಳೆಯರಿಗೆ ಮುಟ್ಟಾಗುತ್ತದೆಯೆ ಮಹಿಳೆಯರಿಗೆ ಮುಟ್ಟಾಗುವುದಕ್ಕೆ ಇಂದ್ರನೇ ಕಾರಣನಾ ಮಹಿಳೆಯರ ಮಾಸಿಕ ನೋವಿನ ಬಗ್ಗೆ ಹಿಂದೂ ಧರ್ಮಗಳ ಗ್ರಂಥಗಳಲ್ಲಿ ಹೇಳುವುದೇನು ಅಷ್ಟಕ್ಕೂ ಇಂದ್ರ ಮಾಡಿದ ತಪ್ಪುಗಳೇನು ಈ ಎಲ್ಲದರ ಬಗ್ಗೆ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ. ಮಹಿಳೆಯರು ಎಂದರೆ ನಮ್ಮ ಅಕ್ಕ ತಂಗಿ ತಾಯಿ ಎಲ್ಲರೂ ಆಗುತ್ತಾರೆ. ಇವರೆಲ್ಲರೂ ಈ ನೋವನ್ನು ಇಂದಿಗೂ ಅನುಭವಿಸುತ್ತಿದ್ದಾರೆ ಈ ರೀತಿ ಹೆಂಗಸರು ಅನುಭವಿಸುವ ಮಾಸಿಕ ನೋವಿನ ಬಗ್ಗೆ ಹಿಂದೂ ಧರ್ಮಗಳಲ್ಲಿ ಏನಿದೆ ಗೊತ್ತಾ.

ಭಾಗವತ ಪುರಾಣ ಆರನೇ ಸ್ಕಂದ ಒಬ್ಬತ್ತನೇ ಭಾಗದಲ್ಲಿ ಈ ರೀತಿ ಮಹಿಳೆಯರಿಗೆ ಬರುವ ನೋವಿನ ಬಗ್ಗೆ ಕಾರಣವನ್ನು ತಿಳಿಸಿದ್ದಾರೆ. ಇದಕ್ಕೆಲ್ಲ ಇಂದ್ರನ ಪಾಪವೇ ಕಾರಣ ಎಂದು ಹೇಳಿದ್ದಾರೆ. ಹಾಗಾದರೆ ಇಂದ್ರ ಮಾಡಿದ ತಪ್ಪು ಏನು ಎಂಬುದನ್ನು ನೋಡುವುದಾದರೆ ಒಮ್ಮೆ ದೇವಗುರು ಬ್ರಹಸ್ಪತಿಗೆ ದೇವತೆಗಳು ಮತ್ತು ಇಂದ್ರ ಅವಮಾನವನ್ನು ಮಾಡುತ್ತಾರೆ ಅವಮಾನದಿಂದ ಬೃಹಸ್ಪತಿಗಳು ಸ್ವರ್ಗದಿಂದ ಹೊರನಡೆಯುತ್ತಾರೆ. ಈ ಎಲ್ಲ ವಿಷಯವನ್ನು ಅರಿತಿದ್ದಂತಹ ರಾಕ್ಷಸರು ಸ್ವರ್ಗದ ಮೇಲೆ ದಾಳಿಯನ್ನು ನಡೆಸಿ ತಮ್ಮ ಅಟ್ಟಹಾಸವನ್ನು ಮೆರೆಯುತ್ತಾರೆ. ಇಂದ್ರನಿಂದ ಆತನ ಪದವಿಯನ್ನು ಕಿತ್ತು ಆತನನ್ನು ಹೊರಗಟ್ಟುತ್ತಾರೆ ನಂತರ ಇಂದ್ರ ಮತ್ತು ಎಲ್ಲಾ ದೇವತೆಗಳು ಬ್ರಹ್ಮನಲ್ಲಿ ಹೋಗಿ ಸಲಹೆಯನ್ನು ಕೇಳುತ್ತಾರೆ.

ಆಗ ಬ್ರಹ್ಮ ಕೊಟ್ಟ ಉತ್ತರ ನೀವು ತಕ್ಷಣ ವಿಶ್ವರೂಪರನ್ನು ನೋಡಿ ಅವರನ್ನು ಗುರುವನ್ನಾಗಿ ಸ್ವೀಕರಿಸಿ ಎಂದು ಸಲಹೆಯನ್ನು ನೀಡುತ್ತಾರೆ ಬ್ರಹ್ಮದೇವ. ನಂತರ ಎಲ್ಲಾ ದೇವತೆಗಳು ಇಂದ್ರರು ಸೇರಿ ವಿಶ್ವರೂಪರಬಳಿ ಸಹಾಯವನ್ನು ಕೋರುತ್ತಾರೆ. ಇದರಿಂದ ಅವರು ತಮ್ಮ ತಪೋಬಲದಿಂದ ನಾರಾಯಣಿ ವಿದ್ಯೆಯಿಂದ ಸ್ವರ್ಗವನ್ನು ರಾಕ್ಷಸರಿಂದ ದೇವತೆಗಳಿಗೆ ಹಿಂದಿರುಗಿ ಸುತ್ತಾರೆ. ಇಲ್ಲಿ ತಿಳಿಯಬೇಕಾದ ವಿಷಯವೆಂದರೆ ವಿಶ್ವರೂಪ ಅವರು ರಾಕ್ಷಸ ಕುಲದವರು ಇವರು ಮಾಡಿದ ಸಹಾಯಕ್ಕೆ ಇಂದ್ರ ಮಾಡಿದ್ದು ಏನು ಎಂಬುದನ್ನು ತಿಳಿದುಕೊಳ್ಳೋಣ. ವಿಶ್ವರೂಪ ರಾಕ್ಷಸರಿಂದ ಸ್ವರ್ಗವನ್ನು ಮುಕ್ತಿಗೊಳಿಸುತ್ತಾರೆ ಅವರು ದೇವತೆಗಳಿಗೆ ಆಹುತಿಯನ್ನು ಕೊಡುವಾಗ ರಾಕ್ಷಸರ ಹೆಸರನ್ನು ಹೇಳಿರುತ್ತಾರೆ ಅವರು ರಾಕ್ಷಸರ ಹೆಸರನ್ನು ಹೇಳಿರುವುದರಿಂದ ಇಂದ್ರ ಅವರನ್ನು ಕೊಲ್ಲುತ್ತಾರೆ.

ಇದರಿಂದ ಇಂದ್ರ ಗುರುಹತ್ಯಾ ಬ್ರಹ್ಮಹತ್ಯ ಶಾಪಕ್ಕೆ ಗುರಿಯಾಗುತ್ತಾರೆ ಬ್ರಹ್ಮಹತ್ಯೆ ಶಾಪ ರಾಕ್ಷಸ ರೂಪತಾಳಿ ಇಂದ್ರನನ್ನು ಬೆಂಬಿಡದೆ ಕಾಡುತ್ತದೆ ಇದರಿಂದ ಇಂದ್ರ ಒಂದು ಸರೋವರದಲ್ಲಿ ಬಚ್ಚಿಟ್ಟುಕೊಂಡು ಇಂದ್ರ ಬರೋಬ್ಬರಿ ಮುನ್ನೂರು ವರ್ಷಗಳ ಕಾಲ ವಿಷ್ಣುವಿನ ಧ್ಯಾನವನ್ನು ಮಾಡುತ್ತಾರೆ. ಇಂದ್ರನ ತಪಸ್ಸಿಗೆ ಮಹಾವಿಷ್ಣು ಪ್ರತ್ಯಕ್ಷರಾಗಿ ಬ್ರಹ್ಮಹತ್ಯ ಪಾಪದಿಂದ ಮುಕ್ತರಾಗಲು ಒಂದು ಸಲಹೆಯನ್ನು ನೀಡುತ್ತಾರೆ. ನಂತರ ವಿಷ್ಣು ಇಂದ್ರನ ಶಾಪವನ್ನು ನಾಲ್ಕು ಭಾಗ ಮಾಡಿ ಒಂದು ಪಾಪದ ಭಾಗವನ್ನು ಮರಕ್ಕೆ ಎರಡನೇ ಪಾಪದ ಭಾಗವನ್ನು ಭೂಮಿತಾಯಿಗೆ ಮೂರನೇ ಪಾಪದ ಭಾಗವನ್ನು ನೀರಿಗೆ ಕೊನೆಯ ಭಾಗವನ್ನು ಸ್ತ್ರೀಯರಿಗೆ ಹಂಚುವಂತೆ ಸಲಹೆಯನ್ನು ನೀಡುತ್ತಾನೆ.

ಪಾಪದ ಭಾಗವನ್ನು ತೆಗೆದುಕೊಳ್ಳುವುದಕ್ಕೆ ಮರ ಭೂಮಿತಾಯಿ ನೀರು ಸ್ತ್ರೀ ಒಪ್ಪಿರುತ್ತಾರೆ ಆದರೆ ಇದಕ್ಕೆ ಒಂದು ವರವನ್ನು ಕೂಡ ಕೇಳಿರುತ್ತಾರೆ. ಇಂದ್ರನ ಪಾಪದ ಒಂದು ಭಾಗವನ್ನು ತೆಗೆದುಕೊಂಡಿರುವುದರಿಂದ ಭೂಮಿ ತಾಯಿ ಕೆಲವು ಕಡೆ ಬಂಜೆಯಾದಳು ಅವಳಿಗೆ ಇಂದ್ರ ಕೊಟ್ಟವರ ಹೀಗಿತ್ತು ಭೂಮಿಯಲ್ಲಿ ಎಲ್ಲೆಲ್ಲಿ ಹೊಂಡಗಳು ಇರುತ್ತವೆ ಅಲ್ಲಿ ನೀರು ತುಂಬಿಕೊಳ್ಳಲಿ ಎಂದು ವರವನ್ನು ನೀಡಿದ. ಇನ್ನು ಎರಡನೇ ಭಾಗದ ಪಾಪವನ್ನು ಮರ ತೆಗೆದುಕೊಂಡಿದ್ದರಿಂದ ಮರಗಳಲ್ಲಿ ಅಂಟು ಹಿಡಿಯುವುದಕ್ಕೆ ಪ್ರಾರಂಭವಾಗುತ್ತದೆ. ಮರದ ಯಾವುದೇ ಭಾಗವನ್ನು ಕಡಿದು ಹಾಕಿದರೂ ಅದು ಮತ್ತೆ ರೂಪಗೊಳ್ಳಬೇಕು ಎಂಬ ವರವನ್ನು ನೀಡುತ್ತಾನೆ. ಇನ್ನು ಇಂದ್ರನ ಪಾಪದ ಮೂರನೇ ಭಾಗವನ್ನು ನೀರು ತೆಗೆದುಕೊಂಡಿದ್ದರಿಂದ ಸಮುದ್ರದಲ್ಲಿ ಅಲೆಗಳು ಮತ್ತು ನೊರೆ ಬರುವುದಕ್ಕೆ ಶುರುವಾಯಿತು.

ಅದಕ್ಕೆ ವರವಾಗಿ ಯಾವುದೇ ವಸ್ತುವನ್ನು ಶುದ್ಧಗೊಳಿಸುವುದುಕ್ಕೆ ಶಕ್ತಿಯನ್ನು ಕೊಟ್ಟಿರುತ್ತಾನೆ ಜೊತೆಗೆ ಪುನರ್ ನವೀಕರಣಗೊಳ್ಳುವ ಶಕ್ತಿಯನ್ನು ಕೂಡ ಕೊಡುತ್ತಾನೆ. ಇಂದ್ರನ ಪಾಪದ ಕೊನೆಯ ಭಾಗವನ್ನು ಸ್ತ್ರೀ ತೆಗೆದುಕೊಂಡಿದ್ದರಿಂದ ಮಹಿಳೆಯರು ಪ್ರತಿ ತಿಂಗಳು ಮುಟ್ಟಿನ ನೋವನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಸ್ತ್ರೀಯರಿಗೆ ಇಂದ್ರ ಕೊಟ್ಟವರ ಮಹಿಳೆಯರು ಪುರುಷರಿಗಿಂತ ಕಾಮದ ಆನಂದವನ್ನು ಪಡೆದುಕೊಳ್ಳುತ್ತಾರೆ ಎಂಬ ವರವನ್ನು ನೀಡಿದ. ಈ ರೀತಿಯಾಗಿ ಇಂದ್ರನ ಪಾಪದ ಕಾರಣದಿಂದಾಗಿ ಮಹಿಳೆಯರು ಮಾಸಿಕ ನೋವನ್ನ ಅನುಭವಿಸಬೇಕಾಗಿದೆ.

By admin

Leave a Reply

Your email address will not be published. Required fields are marked *

error: Content is protected !!
Footer code: