WhatsApp Group Join Now
Telegram Group Join Now

ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ವರ್ತಮಾನ ಕಾಲದಲ್ಲಿ ಮನೆಯ ಪರಿಕಲ್ಪನೆ ಉಪಯುಕ್ತತೆ, ಸೌಂದರ್ಯ ಹಾಗೂ ಭದ್ರತೆ ಎಂಬ ಮೂರು ಮುಖ್ಯ ಗುಣಗಳಿಂದ ರೂಪಿತವಾಗಿದೆ. ಅದೇ ವೇಳೆ ನಿವೇಶನ, ಸಾಮಗ್ರಿಗಳು ಹಾಗೂ ಆರ್ಥಿಕತೆ ಎಂಬ ಮೂರು ಮುಖ್ಯ ಪರಿಕರಗಳಿಂದ ಮನೆಯ ರಚನೆ ಪ್ರಭಾವಿತವಾಗಿದೆ. ಮೈಸೂರಿನಲ್ಲಿ ನಿರ್ಮಾಣ ಮಾಡಿರುವ ಒಂದು ಆಧುನಿಕ ಮನೆಯ ಚಿತ್ರಣದ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಗುಡ್ಡಗಾಡುಗಳಲ್ಲಿ ದೂರ ದೂರಕ್ಕೆ ಹರಡಿ ಹೋಗಿರುವ ಒಂಟಿ ಬೀಡುಗಳು, ಹಳ್ಳಿಗಳಲ್ಲೂ ಪೇಟೆ ಪಟ್ಟಣಗಳಲ್ಲೂ ಹಿಂಡುಹಿಂಡಾಗಿ ಮೈ ತಳೆದಿರುವ ಮನೆಗಳು, ನಗರಗಳಲ್ಲಿನ ಒಂದು ಅಥವಾ ಎರಡು ಕೋಣೆಗಳಿರುವ ಒಂಟಿ ಮನೆಗಳ ಸಾಲುಗಳು, ಇಂಥ ಅನೇಕ ಮನೆಗಳನ್ನೇ ಒಳಗೊಂಡಿರುವ ಹಲವಾರು ಉಪ್ಪರಿಗೆಗಳ ವಠಾರಗಳು, ಶ್ರೀಮಂತರ ಭವ್ಯಸೌಧಗಳು, ಅರಮನೆಗಳು ಇವೇ ಮುಂತಾದವು ಮನೆಯ ಭಿನ್ನ ರೂಪಗಳು ಆಗಿವೆ. ಮೊದಲ ಕಾಲದಲ್ಲಿ ಮನೆಕಟ್ಟಲು ಬಳಸುತ್ತಿದ್ದ ಸಾಮಗ್ರಿಗಳು ಕಲ್ಲು, ಮಣ್ಣು, ಮರಳು, ಇಟ್ಟಿಗೆ, ಜೇಡಿ, ಸುಣ್ಣ, ಮರ, ಬಿದಿರು, ಸೋಗೆ, ಹುಲ್ಲು, ಹಂಚು ಇತ್ಯಾದಿ.

ಆದರೆ ಇಂದಿನ ಮನೆಗಳಿಗೆ ಬೇಕಾಗುವ ಮುಖ್ಯ ಸಾಮಗ್ರಿಗಳೆಂದರೆ ಕಲ್ಲು, ಇಟ್ಟಿಗೆ, ಮರಳು, ಸಿಮೆಂಟ್, ಕಬ್ಬಿಣ, ಸುಣ್ಣ ಇತ್ಯಾದಿ. ಇವುಗಳ ಬಳಕೆಯಿಂದ ಮನೆಯನ್ನು ಭದ್ರವಾಗಿಯೂ ಶೀಘ್ರವಾಗಿಯೂ ನಾಜೂಕಾಗಿಯೂ ಕಟ್ಟಬಹುದು. ಮೈಸೂರಿನಲ್ಲಿ ಆಧುನಿಕ ರೀತಿಯಲ್ಲಿ ಒಂದು ಮನೆಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಮನೆಯ ಇದರ ಅಂಡರ್ ಗ್ರೌಂಡ್ ನಲ್ಲಿ ನೀರಿನ ಸ್ಟೋರೇಜ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮನೆಯಲ್ಲಿ ಸಿಲೆಂಡರ್ ಅನ್ನು ಇಡಲು ಸಪರೇಟ್ ಆದ ಗಾಳಿಯಾಡುವಂತೆ ಜಾಗವನ್ನು ನಿರ್ಮಾಣ ಮಾಡಿದ್ದಾರೆ. ಮನೆಯ ಎದುರಿಗಿನ ಬಾಗಿಲನ್ನು ಸಂಪೂರ್ಣ ಮರದ ಚೌಕಟ್ಟಿನಿಂದಲೇ ನಿರ್ಮಾಣ ಮಾಡಿದ್ದಾರೆ.

ಮನೆಯ ಒಳಗೆ ಹೋದಾಗ ಮೊದಲು ದೊರಕುವುದು ಟಿವಿ ಕ್ಯಾಬಿನ್ ಇರುವ ಹಾಲಾಗಿದೆ. ಅದಕ್ಕೆ ತಾಗಿಕೊಂಡೆ ಡೈನಿಂಗ್ ಹಾಲ್ ಇದೆ. ಡೈನಿಂಗ್ ಹಾಲ್ ನಲ್ಲಿ ಫಾಲ್ ಸೀಲಿಂಗ್ ಅನ್ನು ಅದ್ಭುತವಾಗಿ ಮಾಡಿದ್ದಾರೆ. ಅದಕ್ಕೆ ಹೆಚ್ಚಾಗಿ ಒಂದು ಸಣ್ಣ ಬಾಕ್ಸನ್ನು ಯುಪಿಎಸ್ ಇಡಲು ಯೋಗ್ಯವಾದ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಮನೆಯಲ್ಲಿ ಆಧುನಿಕ ತಂತ್ರಜ್ಞಾನದ ಉಪಾಯವನ್ನು ಕೂಡ ಮಾಡಿದ್ದಾರೆ. ಇದರ ಪಕ್ಕದಲ್ಲೇ ಒಂದು ರೂಮನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಮನೆಗೆ ಒಂದು ದೊಡ್ಡ ಬೆಡ್ರೂಮ್ ಹಾಗೂ ಸಣ್ಣ 2 ಬೆಡ್ರೂಮ್ ಗಳನ್ನು ಮಾಡಿದ್ದಾರೆ. ರೂಂಗಳಿಗೆ ಅಟ್ಯಾಚ್ ಬಾತ್ರೂಮ್ ವ್ಯವಸ್ಥೆಯನ್ನು ಇಟ್ಟಿದ್ದಾರೆ. ಒಟ್ಟಾರೆ ಮನೆಯೂ ಸಂಪೂರ್ಣ ವಿಶೇಷ ರೀತಿಯಲ್ಲಿ ನಿರ್ಮಾಣವಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: