ಮನೆಯ ಹೊಸ್ತಿಲ ಪೂಜೆ ಮಾಡುವ ಮುನ್ನ ಈ ವಿಷಯ ನಿಮಗೆ ಗೊತ್ತಿರಲಿ

0

ಪ್ರತಿಯೊಂದು ಮನೆಯಲ್ಲಿ ಪ್ರದಾನ ಬಾಗಿಲು ಇರುತ್ತದೆ ಪ್ರದಾನ ಬಾಗಿಲಿನ ಹೊಸ್ತಿಲು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಸ್ತಿಲನ್ನು ನಾವು ಹೇಗೆ ನಿರ್ಮಿಸುತ್ತೇವೆ, ಹೇಗೆ ಕಾಪಾಡಿಕೊಂಡಿದ್ದೇವೆ, ಹೇಗೆ ಪೂಜಿಸುತ್ತೇವೆ ಎನ್ನುವುದರ ಮೇಲೆ ನಮಗೆ ಒಳ್ಳೆಯದಾಗುತ್ತದೆ. ಹೊಸ್ತಿಲಿನ ಮಹತ್ವ ಹಾಗೂ ಪೂಜಾ ವಿಧಾನದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಹೊಸ್ತಿಲಿಗೆ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡಿದರೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಮನೆಯ ಹೊಸ್ತಿಲನ್ನು ಪವಿತ್ರವೆಂದು ನಂಬಲಾಗಿದೆ. ಹೊಸ್ತಿಲನ್ನು ಲಕ್ಷ್ಮೀದೇವಿಗೆ ಹೋಲಿಸಿ ಪೂಜಿಸಲಾಗುತ್ತದೆ. ಹೊಸ್ತಿಲಿನಲ್ಲಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಪ್ರದಾನ ಬಾಗಿಲಿನ ಮೇಲ್ಗಡೆ ಶ್ರೀಗೌರಿ ದೇವಿಯು ನೆಲೆಸಿದ್ದು, ಮನೆಗೆ ರಕ್ಷಣೆ ನೀಡುತ್ತಾಳೆ ಎಂದು ಹೇಳುತ್ತಾರೆ. ಅನಾದಿಕಾಲದಿಂದಲೂ ಹೊಸ್ತಿಲನ್ನು ಪರಮ ಪವಿತ್ರವೆಂದು ನಂಬಿಕೊಂಡು ಬರಲಾಗಿದೆ ಹಿರಿಯರು ಯಾವುದೆ ಆಚರಣೆ ಮಾಡಿದರೂ ಅದರಲ್ಲಿ ಒಂದು ಅರ್ಥವಿರುತ್ತದೆ ಹೀಗಾಗಿ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದಾಗಲಿ ಮಲಗುವುದಾಗಲಿ, ತುಳಿಯುವುದಾಗಲಿ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದರೆ ಶ್ರೀಮಹಾಲಕ್ಷ್ಮೀಯನ್ನು ಅವಮಾನಿಸಿದಂತೆ ಎಂದು ಹಿರಿಯರು ಹೇಳುತ್ತಾರೆ.

ಪ್ರದಾನ ಬಾಗಿಲಿನ ಹೊಸ್ತಿಲನ್ನು ಪರಮ ಪವಿತ್ರ ಎಂದು ಕಾಣುವುದು ಮತ್ತು ಪೂಜಿಸಲಾಗುತ್ತದೆ. ಮನೆಯಲ್ಲಿರುವ ಬಾಗಿಲುಗಳಿಗೆ ಉತ್ತಮವಾದ ಕಟ್ಟಿಗೆಯನ್ನು ತೆಗೆದುಕೊಂಡು ಪ್ರದಾನ ದ್ವಾರವನ್ನು ಮಾಡಿದರೆ ಆಲಯಗಳಲ್ಲಿರುವ ಪ್ರದಾನ ದ್ವಾರಗಳನ್ನು ಕಲ್ಲಿನಿಂದ ತಯಾರಿಸಲಾಗುತ್ತದೆ. ಹೊಸ್ತಿಲನ್ನು ತುಳಿದು ಒಳಗೆ ಬರಬಾರದು ಹಾಗೂ ಹೊರಗೆ ಹೋಗಬಾರದು. ಹೊಸ್ತಿಲು ಪ್ರಮಾಣಕ್ಕೆ ಅನುಪ್ರಮಾಣದ ರೀತಿಯಲ್ಲಿ ನಿರ್ಮಿಸಬೇಕು. ವಾಸ್ತುಪ್ರಕಾರ ಪ್ರದಾನ ಬಾಗಿಲನ್ನು ನಿರ್ಮಿಸದೆ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಸ್ತಿಲನ್ನು ನಿರ್ಮಿಸದೆ ಇದ್ದರೆ ಪೂಜಾ ಮಂದಿರಕ್ಕೆ ಮಲಗುವ ಕೋಣೆಗೆ, ಇನ್ನಿತರ ಕೋಣೆಗೆ ಯಾವುದೆ ವ್ಯತ್ಯಾಸ ಇರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಹೊಸ್ತಿಲನ್ನು ಪ್ರದಾನ ಬಾಗಿಲಿಗೆ ಮಾತ್ರ ನಿರ್ಮಿಸುತ್ತಿದ್ದಾರೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಪ್ರತಿಯೊಂದು ಕೋಣೆಗೆ ಹೋಸ್ತಿಲಿರುವುದನ್ನು ಕಾಣುತ್ತೇವೆ. ದುಷ್ಟ ಶಕ್ತಿ ಮನೆಯ ಒಳಗೆ ಪ್ರವೇಶ ಮಾಡಬಾರದು ಎಂದರೆ ಹೊಸ್ತಿಲಿಗೆ ಪ್ರತಿದಿನ ಪೂಜೆ ಮಾಡಬೇಕು. ಪ್ರತಿ ಶುಕ್ರವಾರ ಹೊಸ್ತಿಲಿಗೆ ಅರಿಶಿಣ ಅಥವಾ ಗೋಮಾಯದಿಂದ ಸಾರಿಸಿ ರಂಗೋಲಿ ಹಾಕಬೇಕು ಇದರಿಂದ ದುಷ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಪ್ರತಿಯೊಂದು ಮನೆಗೆ ಹೊಸ್ತಿಲು ಇರುತ್ತದೆ ಅದನ್ನು ಸರಿಯಾಗಿ ಸರಿಯಾದ ವಿಧಾನಗಳಲ್ಲಿ ಸಂರಕ್ಷಿಸಿ ಪೂಜೆ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಹಳ್ಳಿಗಳಲ್ಲಿ ಹಾವು, ಚೇಳು ಇಂತಹ ಕ್ರಿಮಿ ಕೀಟಗಳು ಮನೆಯ ಒಳಗೆ ಬರುತ್ತವೆ ಹೊಸ್ತಿಲನ್ನು ನಿರ್ಮಿಸುವುದರಿಂದ ಕ್ರಿಮಿ ಕೀಟಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ ಎನ್ನುವುದು ನಂಬಿಕೆಯಾಗಿದೆ. ವಾಸ್ತುಶಾಸ್ತ್ರದ ಪ್ರಕಾರ ಹೊಸ್ತಿಲು ಸರ್ವಾರ್ಥ ಸಾಧಕದ ನಿಯಮಗಳನ್ನು ನಿರ್ದೇಶಿಸುತ್ತದೆ. ಹೊಸ್ತಿಲನ್ನು ನಿರ್ಮಿಸುವಾಗ ಪ್ರಮಾಣಕ್ಕೆ ಅನುಗುಣವಾಗಿ ನಿರ್ಮಿಸಬೇಕು.

ಹೊಸ್ತಿಲನ್ನು ನಿರ್ಮಿಸುವಾಗ ಸೀಳುಗಳು, ಕಳೆಗಳು ಇರಬಾರದು ಅಖಂಡವಾದ ಕಟ್ಟಿಗೆಯಾಗಿರಬೇಕು. ಒಂದು ವೇಳೆ ಹೊಸ್ತಿಲು ನಿರ್ಮಿಸುವ ಕಟ್ಟಿಗೆ ಸರಿಯಾಗಿಲ್ಲದಿದ್ದರೆ ದೋಷಕ್ಕೆ ಒಳಗಾಗಬೇಕಾಗುತ್ತದೆ. ಸಾಧ್ಯವಾದರೆ ಪ್ರತಿದಿನ ಸಾರಿಸಿ ರಂಗೋಲಿ ಹಾಕಬೇಕು. ಕನಿಷ್ಠ ಶುಕ್ರವಾರವಾದರೂ ಹೊಸ್ತಿಲನ್ನು ಶುಭ್ರಗೊಳಿಸಿ ರಂಗೋಲಿ ಹಾಕಬೇಕು. ಹಬ್ಬ ಹರಿದಿನಗಳಲ್ಲಿ ಮುಖ್ಯವಾಗಿ ತೊರಣಗಳನ್ನು ಕಟ್ಟಬೇಕು, ಪೂಜಾ ಮಂದಿರಕ್ಕೆ ಅಶುಭ್ರವಾಗಿ ಅಂದರೆ ಸ್ನಾನ ಮಾಡದೆ ಹೋಗಬಾರದು.

ಪೂಜಾ ಮಂದಿರದಲ್ಲಿರುವ ಭಗವಂತನ ಚಿತ್ರಪಟಗಳನ್ನು ಶುಭ್ರ ಮಾಡಿ ಕುಂಕುಮ ಹಚ್ಚಿ ಹೂವುಗಳನ್ನು ಮುಡಿಸಿ ದೀಪವನ್ನು ಹಚ್ಚಬೇಕು. ಪೂಜಾ ಮಂದಿರದಲ್ಲಿ ಸಿಕ್ಕ ಸಿಕ್ಕ ದೇವರ ಪ್ರತಿಮೆ ಹಾಗೂ ಚಿತ್ರಪಟಗಳನ್ನು ತಂದು ಶೇಖರಣೆ ಮಾಡಬಾರದು. ಅಗತ್ಯಕ್ಕೆ ಅನುಗುಣವಾಗಿ ದೇವರ ಪ್ರತಿಮೆ ಹಾಗೂ ಚಿತ್ರಪಟಗಳನ್ನು ಇಟ್ಟುಕೊಳ್ಳಬೇಕು. ಪೂಜಾ ಮಂದಿರದಲ್ಲಿ ಅನಗತ್ಯ ವಸ್ತುಗಳಿಂದ ಗಜಿಬಿಜಿಯಾಗಿರಬಾರದು.

ಪ್ರಶಾಂತವಾಗಿ ಕುಳಿತುಕೊಂಡು ಪೂಜೆ ಮಾಡಲು ವ್ಯವಸ್ಥೆ ಇರಬೇಕು. ಹೊಸ್ತಿಲನ್ನು ಮತ್ತು ಪೂಜಾ ಮಂದಿರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಪ್ರದಾನ ಬಾಗಿಲಿನ ಮೂಲಕವೆ ಶ್ರೀಮಹಾಲಕ್ಷ್ಮೀ ಮನೆಯ ಒಳಗೆ ಪ್ರವೇಶ ಮಾಡುತ್ತಾಳೆ. ಮಹಾಲಕ್ಷ್ಮೀ ನೆಲೆಸಿರುವ ಜಾಗದಲ್ಲಿ ಸುಖ, ನೆಮ್ಮದಿ ಸಿರಿ ಸಂಪತ್ತು ನೆಲೆಸಿರುತ್ತದೆ. ಹೊಸ್ತಿಲು ಇಲ್ಲದ ಮನೆ ತುಟಿ ಇಲ್ಲದ ಬಾಯಿಯಂತೆ. ಹೊಸ್ತಿಲನ್ನು ಪವಿತ್ರತೆಯಿಂದ ಪೂಜಿಸುವುದರಿಂದ ಮನೆಗೆ ಒಳ್ಳೆಯದಾಗುತ್ತದೆ, ಹಾಗೆಯೆ ಹೊಸ್ತಿಲನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.

error: Content is protected !!