ಸಿರಿ ಸಂಪತ್ತನ್ನು ಸಮೃದ್ಧಿಯಾಗಿ ನೀಡುವ ಮಾತೆ ಧನಲಕ್ಷ್ಮೀ. ಆ ಜಗನ್ಮಾತೆಯ ಕೃಪಕಟಾಕ್ಷ ಆಗಬೇಕು ಎಂದರೆ ಆಕೆಯ ಇಚ್ಛಾನುಸಾರ ಆಕೆಯ ಮನ ಮೆಚ್ಚುವಂತೆ ನಡೆದುಕೊಳ್ಳಬೇಕು ಆಗ ಕೃಪೆ ತೋರಿ ಧನಕನಕಗಳನ್ನು ರಾಶಿ ಸುರಿಯುವಂತೆ ಮಾಡುತ್ತಾಳೆ ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಧನಲಕ್ಷ್ಮೀಯ ಕೃಪೆಗೆ ಪಾತ್ರರಾಗುವುದು ಹೇಗೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಧನಕ್ಕೆ ಅಧಿದೇವತೆಯಾದ ಮಹಾಲಕ್ಷ್ಮೀಯನ್ನು ಕೆಲವು ರೂಪದಲ್ಲಿ ಪೂಜಿಸಲಾಗುತ್ತದೆ. ಅವುಗಳಲ್ಲಿ ಲಕ್ಷ್ಮೀ ಕವಡೆ ಸಹ ಒಂದಾಗಿದೆ. ಶ್ರೀಮಹಾಲಕ್ಷ್ಮೀ ಸ್ವರೂಪವೆಂದು ಭಾವಿಸುವ ಲಕ್ಷ್ಮೀ ಕವಡೆಗಳು ಇರುವ ಮನೆಯಲ್ಲಿ ಸಿರಿ ಸಂಪತ್ತು ತುಂಬಿ ತುಳುಕುತ್ತದೆ ಹಾಗೂ ಅದೃಷ್ಟ ದೇವತೆ ಹುಡುಕಿಕೊಂಡು ಬಂದು ಬಾಗಿಲನ್ನು ತಟ್ಟುತ್ತಾಳೆ ಎಂದು ಹೇಳುತ್ತಾರೆ. ಕ್ಷೀರ ಸಾಗರ ಮಥನದಲ್ಲಿ ಸಮುದ್ರದಿಂದ ಮಹಾಲಕ್ಷ್ಮೀ ದೇವಿ, ಶಂಖ ಚಕ್ರ, ಕವಡೆಗಳು, ವಿಷ ಅಮೃತ ಉದ್ಭವಿಸಿತು.

ಕವಡೆಗಳನ್ನು ಮಹಾಲಕ್ಷ್ಮೀ ದೇವಿಯ ಸಹೋದರಿ ಎಂದು ಶಂಖವನ್ನು ಸಹೋದರ ಎಂದು ಉಲ್ಲೇಖಿಸಲಾಗಿದೆ. ಕವಡೆಗಳನ್ನು ಲಕ್ಷ್ಮೀ ದೇವಿಯ ಪ್ರತಿರೂಪವಾಗಿ ಭಾವಿಸಿ ಪೂಜಿಸುತ್ತಾರೆ ಆದ್ದರಿಂದ ಕವಡೆಗಳು ಇರುವಲ್ಲಿ ಮಹಾಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಕವಡೆಗಳು ದೃಷ್ಟಿ ದೋಷವನ್ನು ನಿವಾರಿಸುತ್ತದೆ ಧನಾಕರ್ಷಣೆ ಶಕ್ತಿಯನ್ನು ಹೊಂದಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕವಡೆಗಳನ್ನು ಪೂಜಾ ಮಂದಿರದಲ್ಲಿ ಇಟ್ಟು ಪೂಜಿಸುವುದನ್ನು ನೋಡುತ್ತೇವೆ. ದೃಷ್ಟಿ ದೋಷ ನಿವಾರಣೆಗೆ ಕವಡೆಗಳನ್ನು ಬಳಸುವುದು ಬಹಳ ಉತ್ತಮ ಹಾಗೂ ಸೂಕ್ತ. ನೂತನ ಮನೆ ಹಾಗೂ ವಾಹನಗಳಿಗೆ ಕವಡೆಗಳನ್ನು ಕಟ್ಟಿ ದೃಷ್ಟಿ ದೋಷ ನಿವಾರಣೆ ಮಾಡಬಹುದು. ಮೊದಲು ನಾಣ್ಯ ಅಥವಾ ಕಾಸುಗಳಿಗೆ ಬದಲಾಗಿ ಕವಡೆಗಳನ್ನು ಬಳಸುತ್ತಿದ್ದರು.

ಕವಡೆಗಳು ವಿವಿಧ ಬಣ್ಣಗಳಲ್ಲಿ, ವಿವಿಧ ಆಕಾರಗಳಲ್ಲಿ ಸಿಗುತ್ತದೆ. ಅರಿಶಿಣ ಅಚ್ಚಾಗಿ ಮಿಂಚುತ್ತಿರುವ ಕವಡೆಗಳನ್ನು ಶ್ರೀ ಮಹಾಲಕ್ಷ್ಮೀ ಕವಡೆಗಳು ಎಂದು ಭಾವಿಸಿ ಪೂಜಿಸುತ್ತಾರೆ. ಕವಡೆಗಳು ಇದ್ದಲ್ಲಿ ಮಹಾಲಕ್ಷ್ಮೀ ಸುಸ್ಥಿರ ಸ್ಥಾನ, ನಿವಾಸವನ್ನು ಏರ್ಪಡಿಸಿಕೊಳ್ಳುತ್ತಾಳೆ ಎಂಬ ಪ್ರತೀತಿ ಇದೆ. ಪೂಜಾ ಮಂದಿರದ ಒಂದು ಬದಿಯಲ್ಲಿ ಅಥವಾ ಕೋಣೆಯಲ್ಲಿ ಶ್ರೀಮಹಾಲಕ್ಷ್ಮೀ ದೇವಿಯ ಚಿತ್ರಪಟದ ಮುಂದೆ ಅಥವಾ ಶ್ರೀಮಹಾಲಕ್ಷ್ಮೀ ದೇವಿಯ ವಿಗ್ರಹದೊಂದಿಗೆ ಶಂಖ, ಕವಡೆಗಳನ್ನು ಇಟ್ಟು ಪೂಜಿಸಿ ಪ್ರಾರ್ಥಿಸಿ ಆರಾಧಿಸಿದರೆ ಶ್ರೀಮಹಾಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಎಂದು ಹೇಳುತ್ತಾರೆ. ಇದು ಮೊದಲಿನಿಂದಲೂ ಆಚರಣೆಯಾಗಿ ನಡೆದುಬಂದ ಸಂಪ್ರದಾಯವಾಗಿದೆ. ಹೀಗೆ ಪೂಜಿಸಿದವರಿಗೆ ಆರಾಧಿಸಿದವರಿಗೆ ಮಹಾಲಕ್ಷ್ಮೀ ಕಟಾಕ್ಷವಾಗಿ ಸಿರಿಸಂಪತ್ತು, ಭೋಗ ಭಾಗ್ಯಗಳು ಬರುತ್ತವೆ.

ಕವಡೆಗಳನ್ನು ಹಣವನ್ನು ಭದ್ರಪಡಿಸುವ ಲಾಕರ್ ಗಳಲ್ಲಿ ಇಟ್ಟು ಪೂಜಿಸಿದರೆ ಶ್ರೀಮಹಾಲಕ್ಷ್ಮೀ ಸುಸ್ಥಿರವಾಗಿ ಆ ಮನೆಯಲ್ಲಿ ನೆಲೆಸುತ್ತಾಳೆ. ಕವಡೆಗಳು ಇರುವ ಮನೆಯಲ್ಲಿ ಧನ ಧಾನ್ಯ, ಸಿರಿ ಸಂಪತ್ತು ಉಕ್ಕಿ ಹರಿಯುತ್ತದೆ. ಕವಡೆಗಳ ನಾದ ಅಥವಾ ಶಬ್ಧದಿಂದ ಮಹಾಲಕ್ಷ್ಮೀ ತಾನೇ ತಾನಾಗಿ ಮನೆಯಲ್ಲಿ ಪ್ರವೇಶಿಸಿ ಬಂದು ಕೂರುತ್ತಾಳೆ ಎಂಬ ಒಂದು ನಂಬಿಕೆ ಇದೆ. ಶಿವನ ಜಡೆಯಲ್ಲಿ, ನಂದೀಶ್ವರನ ಕಂಠದಲ್ಲಿ ಕವಡೆಯನ್ನು ನೋಡುತ್ತೇವೆ ಅಂತೆಯೆ ಸವದತ್ತಿ ಯಲ್ಲಮ್ಮನ ಕಂಠದಲ್ಲಿ ನೋಡಬಹುದು. ಕೆಲವು ಕಡೆ ಪಗಡೆಯಲ್ಲಿ ಕವಡೆಯನ್ನು ಬಳಸುತ್ತಾ ಆಡುತ್ತಾ ಲಕ್ಷ್ಮೀ ದೇವಿಯನ್ನು ಆಹ್ವಾನಿಸುವ ಪದ್ಧತಿ ಇದೆ . ವಾಹನಗಳಿಗೆ ಕಪ್ಪು ದಾರದಲ್ಲಿ ಕವಡೆಗಳನ್ನು ಕಟ್ಟಿದರೆ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಹಾಗೂ ಯಾವುದೆ ಅನಾಹುತಗಳು ಜರುಗುವುದಿಲ್ಲ ಎಂಬುದು ನಂಬಿಕೆಯಾಗಿದೆ.

ಕಟ್ಟಡ ನಿರ್ಮಾಣದಲ್ಲಿ ಸಹ ಯಾವುದೊ ಒಂದು ಪ್ರದೇಶದಲ್ಲಿ ಕವಡೆಗಳನ್ನು ಕಟ್ಟಬೇಕು ಆಗ ಸುಗಮವಾಗಿ ಆ ಕಟ್ಟಡದ ನಿರ್ಮಾಣ ಸಂಪೂರ್ಣವಾಗಿ ಇರುತ್ತದೆ ಎನ್ನುವ ನಂಬಿಕೆಯಿದೆ. ನೂತನ ಗ್ರಹ ಪ್ರವೇಶಿಸುವಾಗ ಒಂದು ಚಿಕ್ಕ ಬುಟ್ಟಿಯಲ್ಲಿ ಹಾಕಿ ಮುಖ್ಯ ದ್ವಾರದ ಮೇಲೆ ಕವಡೆಗಳನ್ನು ಕಟ್ಟಿದರೆ ಶುಭಪ್ರದ ಲಕ್ಷ್ಮೀ ತಾನಾಗಿ ಬಂದು ಕೂರುತ್ತಾಳೆ ಎಂಬ ಪ್ರತೀತಿ ಇದೆ. ಅರಿಶಿಣದ ಬಟ್ಟೆಯಲ್ಲಿ ಕವಡೆಗಳನ್ನು ಹಾಕಿ ಕಟ್ಟಿ ಪೂಜಾ ಮಂದಿರದಲ್ಲಿ ಇಟ್ಟು ಶ್ರೀಲಲಿತಾ ಸಹಸ್ರನಾಮದೊಂದಿಗೆ, ಮಹಾಲಕ್ಷ್ಮೀ ಅಷ್ಟೋತ್ತರದೊಂದಿಗೆ ಕುಂಕುಮಾರ್ಚನೆ ಮಾಡುವುದರಿಂದ ಧನಾಕರ್ಷಣೆ ಉಂಟಾಗಿ ಧನಪ್ರಾಪ್ತಿಯಾಗುತ್ತದೆ. ಹಣ ಇಡುವ ಸ್ಥಳಗಳಲ್ಲಿ ಹಣಕ್ಕೆ ತಾಗುವಂತೆ ಕವಡೆಗಳನ್ನು ಇಡುವುದರಿಂದ ದಿನೆ ದಿನೆ ಧನಾಭಿವೃದ್ಧಿಯಾಗಿ ಸಿರಿ ಸಂಪತ್ತು ಬರುತ್ತದೆ. ವಿವಾಹ ಆಲಸ್ಯ ಆಗಿರುವವರಿಗೆ ಕವಡೆಗಳನ್ನು ಹತ್ತಿರ ಇಟ್ಟುಕೊಳ್ಳುವುದರಿಂದ ಕಲ್ಯಾಣ ಯೋಗ ಕೂಡಿ ಬರುತ್ತದೆ ಜೊತೆಗೆ ಕಂಕಣ ಭಾಗ್ಯ ಬರುತ್ತದೆ ಎಂದು ಹೇಳುತ್ತಾರೆ.

ವಿವಾಹದ ನಂತರ ವಧು ವರರ ಕೈಗೆ ಕವಡೆಯನ್ನು ಕಟ್ಟಿದರೆ ದೃಷ್ಟಿ ತಾಗುವುದಿಲ್ಲ ಸಂಸಾರ ಸುಖಮಯವಾಗಿ ಸಾಗುತ್ತದೆ. ವಶೀಕರಣ ಮಂತ್ರ ಪಠಿಸುವಾಗ ಕೈಯಲ್ಲಿ ಕವಡೆಯನ್ನು ಹಿಡಿಯುವುದು ಅತ್ಯಂತ ಶ್ರೇಷ್ಠವಾಗಿದೆ. ಕವಡೆಗಳು ಇರುವ ಜಾಗದಲ್ಲಿ ಮಹಾಲಕ್ಷ್ಮೀ ವಾಸಿಸುತ್ತಾಳೆ ಎನ್ನುವುದರಲ್ಲಿ ಯಾವುದೆ ಸಂಶಯವಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ಪಡೆಯಿರಿ.

By admin

Leave a Reply

Your email address will not be published. Required fields are marked *

error: Content is protected !!
Footer code: