ನಕಾರಾತ್ಮಕ ಶಕ್ತಿ ಎನ್ನುವುದು ಬಹಳ ಅಪಾಯಕಾರಿ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದಲೇ ಇದು ಹೆಚ್ಚುತ್ತದೆ. ಆದರೆ ನಮಗದು ಲಕ್ಷ್ಯದಲ್ಲಿಯೇ ಇರುವುದಿಲ್ಲ ನಮ್ಮ ಜೀವನದಲ್ಲಿ ನಕಾರಾತ್ಮಕ ಚಿಂತನೆ ಅಪನಂಬಿಕೆ ಸಮಸ್ಯೆ ತೊಂದರೆಗಳು ಬದುಕಿನಲ್ಲಿ ಬಂದು ಹೋಗುತ್ತವೆ ಅವುಗಳಿಗೆ ಹೆದರಿ ಪಲಾಯನ ಮಾಡಬಾರದು ಸಕಾರಾತ್ಮಕ ಚಿಂತನೆಯ ಆತ್ಮವಿಶ್ವಾಸದಿಂದ ಎದುರಿಸಿದರೆ ಅವು ಕಣ್ಮರೆಯಾಗುತ್ತವೆ. ಈ ನಕಾರಾತ್ಮಕ ಶಕ್ತಿಗಳಿಂದ ದೂರವಿರಲು ಈ 7 ಚಕ್ರ ಮರ ಹೇಗೆ ಸಹಾಯಕವಾಗಿದೆ ಎಂಬುದನ್ನ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ..

ಕೆಲವೊಂದಿಷ್ಟು ಜನ ನಮ್ಮ ಎಳಿಗೆಯನ್ನು ಸಹಿಸದವರು ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ ಮತ್ತು ನಮ್ಮ ಸೋಲನ್ನೇ ಎದುರು ನೋಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಹೊರಗಿನವರಲ್ಲ ನಮ್ಮ ಆಪ್ತಬಂಧುಗಳೇ ಆಗಿರುತ್ತಾರೆ ಹಾಗಾಗಿ ನಮ್ಮ ಯಶಸ್ಸಿನ ಗುಟ್ಟನ್ನು ರಟ್ಟು ಮಾಡದಿರುವುದೇ ಒಳಿತು.

ನಕಾರಾತ್ಮಕ ಶಕ್ತಿಯನ್ನ ಹೋಗಲಾಡಿಸಲು ಈ 7 ಚಕ್ರ ಮರ ತುಂಬಾ ಉಪಯುಕ್ತವಾಗಿದೆ. ಇದನ್ನು ನಮ್ಮ ಮನೆ ಅಥವಾ ನಾವು ಕೆಲಸ ಮಾಡುವ ಸ್ಥಳದಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಸಿ ನಮಗೆ ಯಶಸ್ಸು, ಕೀರ್ತಿ, ಸಂಪತ್ತು, ಆರೋಗ್ಯ ತಂದುಕೊಡುವಲ್ಲಿ ಅತಿಮುಖ್ಯ ಪಾತ್ರ ನಿರ್ವಹಿಸುತ್ತದೆ. ಮನಸಿನಲ್ಲಿ ಋಣಾತ್ಮಕ ಚಿಂತನೆಗಳಿದ್ದರೆ 20ನೇ ವಯಸ್ಸಿಗೆ ಮುದುಕರಾಗಿ ಬಿಡುತ್ತೇವೆ. ಅದೇ ಸಕಾರಾತ್ಮಕ ಚಿಂತನೆಗಳಿದ್ದರೆ 80ರಲ್ಲೂ ತರುಣರಾಗಿರುತ್ತಾರೆ ಆಯ್ಕೆ ನಮ್ಮ ಮುಂದೆ ಇದೆ.
ಈ 7 ಚಕ್ರ ಮರ ನಮ್ಮ ಮಾನಸಿಕ ಮತ್ತು ಭಾವನಾತ್ಮಕ ವರ್ತನೆಗೆ ಇದು ನೀಲಿನಕ್ಷೆ ಇದ್ದಂತೆ.

ಈ ಗಿಡವನ್ನು ನಮ್ಮ ಮನೆ ಹಾಗೂ ನಾವು ಕೆಲಸ ಮಾಡುವ ಸ್ಥಳದಲ್ಲಿ ಇಡುವುದರಿಂದ
ನೆನಪಿನ ಶಕ್ತಿ ಹೆಚ್ಚುತ್ತದೆ. ಸಂಪತ್ತು ವೃದ್ಧಿಸುತ್ತದೆ.ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಕೆಟ್ಟ ಕನಸುಗಳಿಲ್ಲದ ನೆಮ್ಮದಿಯ ನಿದ್ರೆ ಪ್ರಾಪ್ತಿಯಾಗುತ್ತದೆ. ಯಾರೇ ಆಗಲಿ ತಾವು ಮಾಡುವ ಕಾರ್ಯದಲ್ಲೀ ಯಶಸ್ಸು ಸಾಧಿಸಬೇಕಾದರೆ ಸಕಾರಾತ್ಮಕ ಮನಸ್ಥಿತಿ ಹೊಂದಿರಬೇಕು. ಉದ್ವೇಗ ಮನಸ್ಸು ಹಿತಕರ ಅನುಭವವನ್ನು ನಿರಾಕರಿಸಿ ಹತಾಶೆ, ಖಿನ್ನತೆ, ಒಂಟಿತನ, ಆತಂಕ ಚಂಚಲದಂತಹ ನಕಾರಾತ್ಮಕ ಭಾವದತ್ತ ಸಾಗುತ್ತದೆ. ಭಾವನೆಗಳ ತಾಕಲಾಟ ಖಿನ್ನತೆಯಂತಹ ಮಾನಸಿಕ ಕಾಯಿಲೆಗೂ ಕಾರಣವಾಗಬಹುದು ಈ 7ಚಕ್ರ ಮರವು ಇದೆಲ್ಲವನ್ನು ಹೋಗಲಾಡಿಸಿ ಸಕಾರಾತ್ಮಕ ಚಿಂತನೆಯ ಮೂಲಕ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ನೆಚ್ಚಿನ ವ್ಯಕ್ತಿಗಳ ಒಳಿತಿಗಾಗಿ ನಾವು ಈ 7 ಚಕ್ರ ಮರ ಅನ್ನು ಉಡುಗೊರೆಯಾಗಿ ನೀಡಬಹುದು.

ಮನೆಯಲ್ಲಿ ನಕಾರಾತ್ಮಕ ಶಕ್ತಿ ಓಡಿಸಲು ಇದೊಂದು ವಸ್ತು ಸಾಕು ನಮ್ಮ ಪ್ರತಿದಿನದ ಆರಂಭ ಮತ್ತು ಅಂತ್ಯವು ಸಕಾರಾತ್ಮಕ ಶಕ್ತಿಯೊಂದಿಗೆ ಆಗಲಿ ಸಕಾರಾತ್ಮಕ ಮನೋಭಾವ ಹೊಂದಿರುವ ವ್ಯಕ್ತಿ ಎಲ್ಲ ಋತುಗಳಲ್ಲಿ ಸಿಗುವ ಹಣ್ಣಿನಂತೆ. ಸಕಾರಾತ್ಮಕ ಚಿಂತನೆ ಮತ್ತು ವರ್ತನೆಯೇ ಸಂತೋಷಕ್ಕೆ ಮೂಲ. ಸದಾ ನಕಾರಾತ್ಮಕವಾಗಿ ಆಲೋಚಿಸುತ್ತಿದ್ದರೆ ದುಃಖ ಕಟ್ಟಿಟ್ಟ ಬುತ್ತಿ ಯಥಾ ದೃಷ್ಟಿ ತಥಾ ಸೃಷ್ಟಿ

By admin

Leave a Reply

Your email address will not be published. Required fields are marked *

error: Content is protected !!
Footer code: