ಮದುವೆ ವಿಳಂಬ, ಭೂ ವ್ಯವಹಾರ ನಾನಾ ರೀತಿಯ ಅರೋಗ್ಯ ಸಮಸ್ಯೆಗಳನ್ನು ಇಲ್ಲದಂತೆ ಮಾಡುವ ದೇವಾಲಯ

0

ದೈವಗಳ ನ್ಯಾಯಾಲಯ ಎಂದೇ ಹೆಸರಾದ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಇದು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಕೆ ಹೊಂದಿಕೊಂಡಿರುವ ಕಾಸರಗೋಡಿನ ಬೋವಿಕಾನದ ಬಳಿ ಇದೆ. ಇದು ನಾಲ್ಕು ದೈವಗಳ ಕ್ಷೇತ್ರವಾಗಿದೆ. ವಿಷ್ಣು ಮೂರ್ತಿ, ರಕ್ತೇಶ್ವರಿ, ಉಗ್ರಮೂರ್ತಿ ಹಾಗೂ ರಕ್ತ ಚಾಮುಂಡಿ ಇಲ್ಲಿನ ಪ್ರದಾನ ದೈವಗಳಾಗಿದ್ದಾರೆ ಆದ್ದರಿಂದ ಈ ಕ್ಷೇತ್ರವನ್ನು ನಾಲ್ವರ ದೈವಸ್ಥಾನ ಎನ್ನುವರು. ಈ ಕ್ಷೇತ್ರದಲ್ಲಿ ಯಾವ ನ್ಯಾಯಾಲಯದಲ್ಲೂ ತಿರ್ಮಾನವಾಗದ ಪ್ರಕರಣಗಳು ಇತ್ಯರ್ಥವಾಗುತ್ತವೆ. ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ಸಹ ನ್ಯಾಯಕ್ಕಾಗಿ ಈ ಕ್ಷೇತ್ರವನ್ನು ಆಶ್ರಯಿಸಲಾಗುತಿತ್ತು.

ಕೋರ್ಟ್ ನಲ್ಲಿ ಸುಳ್ಳು ಸಾಕ್ಷಿ ನೀಡಿ ತಪ್ಪಿಸಿಕೊಳ್ಳುತ್ತಾರೆ ಆದರೆ ಇಲ್ಲಿ ಸುಳ್ಳು ಹೇಳಿದರೆ ಅವರಿಗೆ ಶಿಕ್ಷೆಯಾಗುತ್ತದೆ. ದೈವಾರಾಧನೆ ತುಳು ನಾಡಿನ ವಿಶಿಷ್ಟ ಸಂಪ್ರದಾಯವಾಗಿದೆ. ತಪ್ಪು ಮಾಡಿದ್ದರೆ ಇಲ್ಲಿ ಮುಚ್ಚಿಡಬಾರದು, ಸುಳ್ಳು ಹೇಳಬಾರದು. ಇಲ್ಲಿ ಯಾವುದೇ ಜಾತಿ, ಮತ ಬೇಧ ಭಾವವಿಲ್ಲದೆ ಸಹಸ್ರಾರು ಮಂದಿ ಪರಿಹಾರ ಕಂಡುಕೊಳ್ಳುತ್ತಾರೆ. ಹಣದ ವ್ಯವಹಾರದಲ್ಲಿ ವಂಚನೆ, ಆಸ್ತಿ ವಿಷಯದಲ್ಲಿ ತಕರಾರು, ಕಳ್ಳತನ, ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಭೂ ವ್ಯವಹಾರ ಮೊದಲಾದ ಕೇಸ್ ಗಳನ್ನು ಇಲ್ಲಿ ಇತ್ಯರ್ಥಗೊಳಿಸಲಾಗುತ್ತದೆ.

ಇಲ್ಲಿ ಮೊದಲು ದೂರು ದಾಖಲಿಸುವವರು ಎಷ್ಟು ಸತ್ಯವಾದಿಗಳು ಎನ್ನುವುದನ್ನು ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ನಂತರ ದೂರನ್ನು ಒಂದು ದಾಖಲಾತಿ ಪುಸ್ತಕದಲ್ಲಿ ಬರೆದುಕೊಂಡು ದಾಖಲಿಸಲಾಗುತ್ತದೆ. ನಂತರ ಎದುರು ಪಕ್ಷದವರಿಗೆ ಒಂದು ಸೂಚನಾ ಪತ್ರವನ್ನು ಕಳುಹಿಸಲಾಗುತ್ತದೆ. ನಂತರ ನಿಗದಿತ ದಿನಾಂಕದಂದು ಎರಡು ಪಕ್ಷದವರು ಹಾಜರಾಗಬೇಕು ತಮ್ಮ ವಾದ ವಿವಾದಗಳನ್ನು ಅಲ್ಲಿ ಮಂಡಿಸಬೇಕು ದೇವಸ್ಥಾನದ ಧರ್ಮದರ್ಶಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ನಂತರ ಧರ್ಮದರ್ಶಿಗಳು ಒಂದು ತೀರ್ಮಾನವನ್ನು ಘೋಷಿಸುತ್ತಾರೆ

ಈ ತೀರ್ಮಾನವನ್ನು ನಾಲ್ವರು ದೈವಗಳ ಪ್ರೇರಣೆಯಿಂದ ಧರ್ಮದರ್ಶಿಗಳು ನೀಡಿರುತ್ತಾರೆ ಈ ತೀರ್ಮಾನವೇ ಅಂತಿಮ. ಕೆಲವೊಮ್ಮೆ ಒಂದೇ ದಿನ ತೀರ್ಮಾನ ಹೇಳುತ್ತಾರೆ, ಕೆಲವೊಮ್ಮೆ ತೀರ್ಮಾನ ಕೈಗೊಳ್ಳಲು ತಿಂಗಳು ಹಿಡಿಯುತ್ತದೆ. ಇಲ್ಲಿಂದ ಪ್ರತಿವಾದಿಗೆ ಕಳುಹಿಸುವ ನೋಟೀಸನ್ನು ಪ್ರತಿವಾದಿಯು ನಿರಾಕರಿಸಿದರೆ ಕ್ಷೇತ್ರದ ಆಡಳಿತ ಮಂಡಳಿಯು ಮೂರು ಬಾರಿ ನೋಟೀಸ್ ಕಳುಹಿಸಲಾಗುತ್ತದೆ ಆಗಲೂ ಕಡೆಗಣಿಸಿದರೆ ಆಗ ದೈವಕ್ಕೆ ಬಿಟ್ಟುಬಿಡಲಾಗುತ್ತದೆ. ಅದಾದ ಕೆಲವು ದಿನಗಳ ನಂತರ ಆರೋಪಿಗೆ ತನ್ನಿಂತಾನೇ ಶಿಕ್ಷೆಯಾಗುತ್ತದೆ. ಯಾವುದೇ ವಸ್ತು ಕಳೆದುಹೋದರೂ ದೈವಗಳಲ್ಲಿ ಹರಕೆ ಮಾಡಿಕೊಂಡರೆ ಶೀಘ್ರವೇ ಆ ವಸ್ತು ಸಿಗುತ್ತದೆ. ಅನೇಕ ಜನರು ಇಲ್ಲಿ ಪರಿಹಾರ ಪಡೆದು ಮಾನಸಿಕ ನೆಮ್ಮದಿ ಹೊಂದಿದ್ದಾರೆ. ಹರಕೆ ಮಾಡಿಕೊಂಡು ಪರಿಹಾರ ಸಿಕ್ಕ ನಂತರವೂ ಹರಕೆ ತೀರಿಸದೆ ಇದ್ದರೆ ದೈವಗಳು ಶಿಕ್ಷಿಸದೆ ಬಿಡುವುದಿಲ್ಲ. ಪ್ರೇತಬಾಧೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ದೊರೆಯುತ್ತದೆ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!