ಮದುವೆಯಾಗಿರುವ ಹೆಣ್ಣು ಮನೆಯಲ್ಲಿ ಹೀಗಿದ್ರೆ ದಾರಿದ್ರ್ಯ ಕಾಡೋಲ್ಲ ಸುಖ ಶಾಂತಿ ನೆಮ್ಮದಿ ಇರತ್ತೆ

0

ಒಂದು ಹೆಣ್ಣು ಮದುವೆಯಾದ ನಂತರ ಅವಳ ಬದುಕು ಮೊದಲಿಗಿಂತ ಭಿನ್ನವಾಗಿರುತ್ತದೆ. ಹೊಸ ಮನೆ, ಹೊಸ ಜವಾಬ್ದಾರಿ, ಹೊಸ ರೀತಿಯ ಸಂಪ್ರದಾಯ ಪಾಲಿಸಬೇಕು. ಹಾಗೇಯೆ ಮನೆಗೆ ಬರುವ ಸೊಸೆಯನ್ನು ಮಹಾಲಕ್ಷ್ಮಿ ಸ್ವರೂಪ ಎನ್ನುತ್ತಾರೆ‌. ಹಾಗೆ ಮದುವೆಯಾಗಿ ಬಂದ ಹೆಣ್ಣು ಮಕ್ಕಳು ಕೆಲವು ನಿಯಮಗಳ ಪಾಲನೆ ಮಾಡಿದರೆ ಆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.

ಹಾಗಾದರೆ ಯಾವ ನಿಯಮಗಳು, ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ. ಈ ನಿಯಮಗಳನ್ನು ಪಾಲಿಸುದಲ್ಲಿ ಗಂಡನ ಆಯುಷ್ಯ ವೃದ್ದಿಸುತ್ತದೆ. ಕುಟುಂಬ ಸುಖವಾಗಿರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಮೊದಲನೆಯದಾಗಿ ಪ್ರತಿಯೊಬ್ಬ ಸುಮಂಗಲಿಯು ತನ್ನ ತಾಳಿಯನ್ನು ಕೊರಳಲ್ಲಿ ಧರಿಸಿರಬೇಕು. ಅದು ಅರಿಶಿನ ದಾರ ಇರಬಹುದು, ಕರಿಮಣಿ ಇರಬಹುದು, ಚಿನ್ನದ ತಾಳಿ ಇರಬಹುದು ಅವರವರ ಸಂಪ್ರದಾಯದ ಪ್ರಕಾರ ಅವರು ಮಾಂಗಲ್ಯ ಧರಿಸಿರಬೇಕು.

ಎರಡನೆಯದಾಗಿ ಕಾಲುಂಗುರಗಳ ಧಾರಣೆ ಮಾಡಿರಬೇಕು. ಕಾಲುಂಗುರ ಧರಿಸುವುದಕ್ಕೆ ವೈಜ್ಞಾನಿಕ ಕಾರಣವು ಇದೆ. ಬಳೆಯನ್ನು ಧರಿಸಿರಬೇಕು. ಇದರಿಂದ ಹೆಣ್ಣು ಲವಲವಿಕೆಯಿಂದ ಕೂಡಿರುತ್ತಾಳೆ. ಬೆಳಿಗ್ಗೆ ಸ್ನಾನವಾದ ನಂತರ ಸುಮಂಗಲಿಯರು ಅರಿಶಿನ ಕುಂಕುಮವನ್ನು ಹಚ್ಚಿಕೊಂಡು ದೇವರಿಗೆ ದೀಪ ಬೆಳಗಿಸಬೇಕು. ಸುಮಂಗಲಿಯರು ಕಾಲ್ಗೆಜ್ಜೆ ಪ್ರತಿನಿತ್ಯ ಧರಿಸಬೇಕು. ಆದರೆ ಯಾವುದೆ ಕಾರಣಗಳಿಂದ ಬೆಳ್ಳಿ ಕಾಲ್ಗೆಜ್ಜೆಯ ಬದಲಾಗಿ ಬಂಗಾರದ ಕಾಲ್ಗೆಜ್ಜೆ ಬಳಸಬೇಡಿ ಬೆಳ್ಳಿಯನ್ನೆ ಬಳಸಿ. ಶಾಸ್ತ್ರದಲ್ಲಿ ಬಂಗಾರವನ್ನು ಮೊಣಕಾಲಿಗಿಂತ ಕೆಳಗೆ ಹಾಕಬಾರದೆಂಬ ನಿಯಮದ ಉಲ್ಲೇಖವಿದೆ. ಹಾಗಾಗಿ ಕಾಲುಂಗುರವಾಗಲಿ, ಕಾಲ್ಗೆಜ್ಜೆ ಆಗಲಿ ಬಂಗಾರದಲ್ಲಿ ಇರಬಾರದೆಂದು ಹಿರಿಯರು ಹೇಳುತ್ತಾರೆ.

ಪ್ರತಿ ನಿತ್ಯವೂ ಸುಮಂಗಲೆಯರು ಹೂವು ಮುಡಿದುಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ. ಹೂವಿನ ಘಮಕ್ಕೆ ಹೆಣ್ಣು ಬುದ್ದಿವಂತಿಕೆಯಿಂದ ಹಾಗೂ ಲಕ್ಷಣವಾಗಿ ಇರುತ್ತಾಳೆ ಎಂಬುದು ಒಂದು ಕಾರಣ. ಸುಮಂಗಲೆಯು ಮೂಗುತಿಯಾಗಲಿ, ಕಿವಿಗೆ ಆಗಲಿ ಬೆರಳಿಗಾಗಲಿ, ಇಲ್ಲವೇ ಕೊರಳಲ್ಲಿ ಆಗಲಿ ಬಂಗಾರವನ್ನು ತಪ್ಪದೆ ಧರಿಸಿರಬೇಕು. ಯಾಕೆಂದರೆ ಬಂಗಾರ ಮಹಾಲಕ್ಷ್ಮಿಯ ಚಿನ್ಹೆಯಾಗಿದೆ. ಮನೆಯ ಮಹಾಲಕ್ಷ್ಮಿ ಸುಮಂಗಲೆಯಾದ ಹೆಣ್ಣು. ಅದಕ್ಕಾಗಿ ಮನೆಯಲ್ಲಿರುವ ಸುಮಂಗಲೆಯರು ಒಂದು ವಸ್ತುವನ್ನಾದರೂ ಬಂಗಾರದ ವಸ್ತುವನ್ನು ಧರಿಸಿರಬೇಕು. ಇನ್ನೂ ಮನೆಯ ಹೆಣ್ಣು ಮಕ್ಕಳು ತಮ್ಮ ಹೊಕ್ಕಳು ಕಾಣದಂತಹ ಉಡುಗೆ ಧರಿಸಬೇಕು.

ಯಾಕೆಂದರೆ ಹೊಕ್ಕಳು ಹೆಣ್ಣಿನ ಪ್ರಧಾನ ಮೂಲ. ಒಂದು ಮಗುವಿಗೆ ಜನ್ಮ ನೀಡಲು ತಾಯಿ ತನ್ನೆಲ್ಲಾ ಶಕ್ತಿ ತುಂಬುವುದು ಹೊಕ್ಕಳಬಳ್ಳಿಗೆ.‌ ಹಾಗಾಗಿ ಅಂತಹ ಹೊಕ್ಕಳು ಯಾರಿಗೂ ಕಾಣಬಾರದು. ಹೆಣ್ಣು ಮನೆಯಲ್ಲಿ ಓಡಾಡುವಾಗ ನೆಲವನ್ನು ಉಜ್ಜಿಕೊಂಡು ಓಡಾಡದೆ. ಕಾಲನ್ನು ಎತ್ತಿ ಹಾಕಿ ನಡೆಯಬೇಕು.

ಹೆಣ್ಣು ಎಂದರೆ ಮನೆಯ ದೀಪವಾಗಿ ಮನೆಯ ಅಭಿವೃದ್ಧಿಗೆ ಕಾರಣ ಆಗುವವಳು ಎಂದು. ಇಂತಹ ಹೆಣ್ಣಿನ ಪಾದದಿಂದ ಮಹಾಲಕ್ಷ್ಮಿ ಆಗಿರಲಿ ಇಲ್ಲವೇ ದರಿದ್ರ ಲಕ್ಷ್ಮಣ್ ಆಗಿರಲಿ ಪ್ರವೇಶವನ್ನು ಪಡೆಯುತ್ತಾರೆ. ಆದ್ದರಿಂದ ಶಾಸ್ತ್ರ ಹೇಳುತ್ತದೆ. ಮನೆಯ ಸುಮಂಗಲೆಯ ಪಾದ ಒಡೆದಿರಬಾರದು. ಒಂದು ವೇಳೆ ಒಡೆದಿದ್ದರೆ ದರಿದ್ರ ಲಕ್ಷ್ಮಿಯ ಪ್ರವೇಶವಾಗುತ್ತದೆ ಎನ್ನುತ್ತಾರೆ. ಹೆಣ್ಣುಮಕ್ಕಳು ಯಾರಿಗೂ ಬೈಯ್ಯಬಾರದು, ಶಾಪ ಹಾಕಬಾರದು ಎನ್ನುತ್ತಾರೆ ಹಿರಿಯರು ಯಾಕೆಂದರೆ ದರಿದ್ರ ಲಕ್ಷ್ಮಿ ಹೆಣ್ಣಿನ ಬಾಯಿಯ ಮೂಲಕವು ಪ್ರವೇಶ ಮಾಡುತ್ತಾಳಂತೆ.

ಇಂತಹ ಸ್ತ್ರೀ ಶಾಪ ಹಾಕಿದರೆ ಆ ಶಾಪಕ್ಕೆ ವಿಮೊಚನೆ ಇಲ್ಲವೆಂದು ಹೇಳುತ್ತಾರೆ. ಹಾಗೆಯೆ ಹೆಣ್ಣುಮಕ್ಕಳ ಬಾಯಲ್ಲಿ ದುರ್ವಾಸನೆ ಬರುತ್ತಿದ್ದರೆ ಅವರ ಮನೆಯಲ್ಲಿ ದರಿದ್ರ ಲಕ್ಷ್ಮಿಯ ವಾಸ ಇರುತ್ತದೆ ಎನ್ನುತ್ತಾರೆ. ಹಾಗಾಗಿ ಬಾಯಿ ವಾಸನೆ ಬರದಂತೆ ನೋಡಿಕೊಳ್ಳುವುದು ಉತ್ತಮ. ಮೇಲೆ ತಿಳಿಸಿದ ವಿಚಾರಗಳನ್ನು ಪಾಲಿಸಿದಲ್ಲಿ ಲಕ್ಷ್ಮಿಯು ಮನೆಯಲ್ಲಿ ವಾಸವಾಗಿರುತ್ತಾಳೆ ಎಂದು ನಂಬಲಾಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: