ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು ಏನು ಗೊತ್ತಾ..

0

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಆಗಾಗ ಭಯಾನಕ ಭವಿಷ್ಯವನ್ನು ನುಡಿಯುವ ಮೂಲಕ ಸುದ್ದಿಯಲ್ಲಿರುತ್ತಾರೆ ಭವಿಷ್ಯ ಎಂಬ ವಿಚಾರವನ್ನು ನಂಬುವಂತಹ ಜನರು ಈ ಶ್ರೀಗಳ ಭವಿಷ್ಯವನ್ನು ನಂಬುತ್ತಾರೆ ಈ ಮೊದಲು ಸ್ವಾಮೀಜಿಯವರು ನುಡಿದಂತಹ ಭವಿಷ್ಯವು ನಿಜವಾಗಿರುವುದರ ಬಗ್ಗೆ ದಾಖಲೆಗಳಿವೆ ಅಂತೆಯೇ ಮತ್ತೊಂದು ಭಯಾನಕ ಭವಿಷ್ಯ ವಂದನ ನುಡಿದಿದ್ದಾರೆ ಅಂತಹ ಭಯಾನಕವಾದ ದೇಶವೇ ಬೆಚ್ಚಿ ಬೀಳುವ ಸುದ್ದಿ ಏನೆಂಬುದನ್ನ ತಿಳಿಯೋಣ.

ಕೋಡಿಮಠದ ಶ್ರೀಗಳು ಆಗಾಗ ಮಾಧ್ಯಮದ ಮುಂದೆ ಬಂದು ಭಯಾನಕ ಭವಿಷ್ಯವನ್ನು ನುಡಿಯುತ್ತಾರೆ ಸುದ್ದಿಯಲ್ಲಿ ಇರುತ್ತಾರೆ ಇದೀಗ ಮತ್ತೊಮ್ಮೆ ಅವರು ಮುನ್ನಡೆಗೆ ಬಂದಿದ್ದಾರೆ ಅವರು ಕರೋನಾದ ಬಗ್ಗೆಯೂ ಮಾತನಾಡಿದ್ದು ಕರೋನಾದ ನಾಲ್ಕನೇ ಅಲೆಯೂ ಅಷ್ಟೊಂದು ಭಯಂಕರವಾಗಿ ಇರುವುದಿಲ್ಲ ಕರೋನ ಹಾಗೆ ಬಂದು ಹೋಗುತ್ತದೆ

ಇದರಿಂದ ಅಷ್ಟೊಂದು ಪರಿಣಾಮವೇನು ಉಂಟಾಗುವುದಿಲ್ಲ ಎಂದಿದ್ದಾರೆ ಬೆಂಗಳೂರಿನ ಕೆಪಿಸಿಸಿ ಸದಸ್ಯ ಕೃಷ್ಣಮೂರ್ತಿಯವರ ಜನ್ಮ ದಿನಕ್ಕೆ ಅತಿಥಿಯಾಗಿ ಬಂದಂತಹ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿ ಕರೋನಾದ ಬಗ್ಗೆ ಯಾರೂ ಕೂಡ ಆತಂಕ ಪಡುವಂತಹ ಅಗತ್ಯತೆ ಇಲ್ಲ ಎಂದಿದ್ದಾರೆ.

ಇದಾದ ನಂತರ ಅವರು ರಾಜಕೀಯ ವಿಚಾರದ ಕುರಿತು ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ ಕರ್ನಾಟಕದ ರಾಜಕೀಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಎಲ್ಲಾ ಪಕ್ಷಗಳು ಹೊಡೆಯುತ್ತವೆ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ ಇದೀಗ ಈ ಮಾತುಗಳು ನಿಜ ಆಗುತ್ತಿದೆ ಎಂದಿದ್ದಾರೆ ಅಂದರೆ ಈ ಮಾತಿನ ಹಿನ್ನೆಲೆ ಜನಾರ್ಧನ ರೆಡ್ಡಿ ಅವರು ಪಕ್ಷ ಸ್ಥಾಪಿಸುತ್ತಿರುವುದನ್ನು ಮುಂದೆ ಇಟ್ಟುಕೊಂಡು ಹೇಳಿದ್ದಾರೆ ಎನ್ನಲಾಗುತ್ತಿದೆ.

ನಂತರ ಅವರು ಒಲೆ ಹೊತ್ತಿ ಉರಿದರೆ ಅಡುಗೆಯಾಗುತ್ತದೆ ಆದರೆ ಭೂಮಿಯೆ ಹೊತ್ತಿ ಉರಿದರೆ ಏನಾಗಬಹುದು ಎಂದು ನುಡಿಯುವುದರ ಮೂಲಕ ಎಲ್ಲರಲ್ಲೂ ಗೊಂದಲ ವ್ಯಕ್ತಪಡಿಸಿದ್ದಾರೆ ಅಲ್ಲದೆ ಈ ಬಗ್ಗೆ ಭವಿಷ್ಯದಲ್ಲಿ ಹೇಳುತ್ತೇನೆ ಎಂದು ತಮ್ಮ ಉತ್ತರವನ್ನು ಕಾಯ್ದಿರಿಸಿದ್ದಾರೆ.

ಈ ಮೊದಲು ಇನ್ನು ಈ ವರ್ಷ ಕಾರ್ತಿಕ ಮಾಸದಿಂದ ಲೋಕಕಂಟಕ ಇದೆ ದೇಹ ನಿಶಕ್ತಿಯಿಂದ ಬಿದ್ದು ಸಾಯುತ್ತದೆ ಎಂದು ಶ್ರೀಗಳು ಹೇಳಿದ್ದರು ಬಾಂಬುಗಳು ಯುದ್ಧಭೀತಿ ಇತ್ಯಾದಿಗಳಿಂದ ಜನ ತಮ್ಮ ಮೇಲೆ ನಿಯಂತ್ರಣವನ್ನ ಕಳೆದುಕೊಳ್ಳುತ್ತಾರೆ ಎಂದು ಕೋಡಿ ಶ್ರೀಗಳು ನುಡಿದಿದ್ದರು ಗಮನಿಸುತ್ತಾ ಹೋದರೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಕೋಡಿಮಠದ ಸ್ವಾಮೀಜಿಯವರು ನುಡಿದಿದ್ದ ಈ ಸ್ಪೋಟಕ ಭವಿಷ್ಯ ಇದೀಗ ನಿಜ ಆಗುತ್ತಿದೆ ಎಂಬ ಅನುಮಾನ ಎದುರಾಗಿದೆ.

ಕೆಲ ತಿಂಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬರು ಸಾಯಿಬಾಬನ ದರ್ಶನ ಪಡೆದ ಬಳಿಕ ದೇವಸ್ಥಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು ಹಾಗೆಯೇ ಉತ್ತರ ಪ್ರದೇಶದ ಮೀರತ್ ನಲ್ಲಿ ಸ್ನೇಹಿತರೊಂದಿಗೆ ರಸ್ತೆಯಲ್ಲಿ ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುಜರಾತ್ ನಲ್ಲಿ ನಡೆದಿತ್ತು

ಇದೇ ರೀತಿಯ ಅನೇಕ ಆಕಸ್ಮಿಕ ಘಟನೆಗಳಿಂದ ಅನೇಕರು ಸಾವನ್ನಪ್ಪಿದ್ದಾರೆ ಇವನ್ನೆಲ್ಲ ನೋಡಿದಾಗ ಸ್ವಾಮೀಜಿಯವರು ನುಡಿದ ಭವಿಷ್ಯ ನಿಜ ಆಗುತ್ತಿದೆ. ಅದೇನೇ ಇರಲಿ ಜಗತ್ತಿನ ಸಕಲ ಜೀವಿಯು ಆರೋಗ್ಯದಿಂದ ಸಂತೋಷದಿಂದ ಇರಲಿ ಯಾವುದೇ ರೀತಿಯ ಹಾನಿಗೆ ಒಳಗಾಗುವುದು ಬೇಡ ಎಂದು ನಾವೆಲ್ಲ ಪ್ರಾರ್ಥಿಸಬೇಕಾಗಿದೆ.

Leave A Reply

Your email address will not be published.

error: Content is protected !!
Footer code: