ಮಕರ ರಾಶಿಯವರು ಈ ರಾಶಿಯವರ ಜೊತೆ ಮದುವೆಯಾಗಿ ನಿಮ್ಮ ಜೀವನ ತುಂಬಾ ಚೆನ್ನಾಗಿರುತ್ತೆ

ಜ್ಯೋತಿಷ್ಯ

ಮದುವೆ ಎನ್ನುವುದು ಒಂದು ಅಮೂಲ್ಯವಾದ ಬಂಧನ ಪ್ರತಿಯೊಬ್ಬರೂ ಸಹ ತಮ್ಮ ಜೀವನದಲ್ಲಿ ಬರುವಂತಹ ಸಂಗಾತಿ ಸದಾ ಕಾಲ ನನ್ನ ಬೆನ್ನೆಲುಬಾಗಿ ನಿಂತಿರಬೇಕು ಹಾಗೆ ತನ್ನ ಜೊತೆ ತಾನು ಮಾಡುವಂತಹ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಸಂತೋಷದಲ್ಲಿ ಜೀವನವನ್ನು ನಡೆಸಬೇಕು ಅಂತ ಆಸೆ ಪಡುತ್ತಾರೆ.

ಆದರೆ ಆ ರೀತಿ ಆಗಬೇಕು ಎಂದರೆ ನೀವು ಇಷ್ಟಪಡುವಂತಹ ಸಂಗಾತಿ ಜೊತೆ ಬೆರೆಯಬೇಕು ಹಾಗೆ ಅವರ ಜೊತೆ ಸಂತೋಷವಾದ ಜೀವನವನ್ನು ನಡೆಸಬೇಕು ಅವರು ನಿಮ್ಮನ್ನು ಅರ್ಥಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳುವಂತಹ ಸಂಗಾತಿ ಸಿಗಬೇಕೆಂದರೆ ಅವರ ಜಾತಕ ಕೂಡಿ ಬರಬೇಕು ರಾಶಿಯಲ್ಲಿ ಹೊಂದಾಣಿಕೆ ಆಗಬೇಕು

ಮದುವೆ ಎಂಬುದು ದೈವ ನಿಶ್ಚಯದಂತೆ ಆಗುತ್ತದೆ ಎನ್ನುವ ಮಾತಿದೆ ಅದರಂತೆ ಪ್ರತಿಯೊಂದು ರಾಶಿಯವರಿಗು ಸೂಕ್ತವಾದ ರಾಶಿಯವರ ಜೊತೆ ಮದುವೆ ಮಾಡಿದರೆ ಅವರ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂಬುದು ನಂಬಿಕೆ ಹಾಗೆಯೇ ಮಕರ ರಾಶಿಯವರು ಯಾವ ಯಾವ ರಾಶಿಯವರೊಂದಿಗೆ ಮದುವೆ ಆದರೆ ಅವರ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂದು ತಿಳಿದುಕೊಳ್ಳೋಣ.

ಮಕರ ರಾಶಿಯವರು ಬಹಳಷ್ಟು ಶ್ರಮಜೀವಿಗಳು ಅವರು ಸದಾ ಕಾಲ ಸಂತೋಷವಾಗಿ ಇರಲು ಇಷ್ಟಪಡುತ್ತಾರೆ ಹಾಗೆ ಅವರು ಛಲವಾದಿಗಳು ಯಾವುದೇ ಕೆಲಸವಾದರೂ ಮಾಡದೆ ಬಿಡುವುದಿಲ್ಲ ಹಾಗಾಗಿ ಅವರು ತನ್ನ ಸಂಗಾತಿಯಾಗಿ ಬರುವವರು ಸದಾ ಕಾಲ ತನ್ನ ಬೆನ್ನೆಲುಬಾಗಿ ನಿಂತು ನನ್ನ ಗುರಿ ತಲುಪುವವರೆಗೂ ಸಹಾಯ ಮಾಡಬೇಕೆಂದು ಬಯಸುತ್ತಾರೆ.

ನೀವು ಅಂದುಕೊಂಡ ಹಾಗೆ ಮದುವೆಯಾಗಬೇಕು ತನ್ನ ಗುರಿ ತಲುಪಬೇಕೆಂದರೆ ನೀವು ಈ ಮೂರು ರಾಶಿಯವರನ್ನು ಮದುವೆಯಾಗಬಹುದು ಅದು ಯಾವುದೆಂದರೆ ಮಕರ ರಾಶಿ ಮೀನ ರಾಶಿ ಮತ್ತು ಕನ್ಯಾ ರಾಶಿ ಈ ರಾಶಿಯವರನ್ನು ಮದುವೆಯಾಗುವುದರಿಂದ ನಿಮಗೆ ಒಳ್ಳೆ ಸಂಗಾತಿ ಸಿಗುತ್ತಾರೆ ಇವರ ಜಾತಕವು ನಿಮ್ಮ ಜಾತಕ ದೊಂದಿಗೆ ಹೊಂದಾಣಿಕೆಯಾಗುತ್ತದೆ ನಿಮ್ಮ ಜೀವನದ ಬಹು ಕಷ್ಟಕರ ಸಂದರ್ಭದಲ್ಲಿಯೂ ಸಹ ಈ ರಾಶಿಯವರು ನಿಮ್ಮೊಂದಿಗೆ ಕೈಜೋಡಿಸುತ್ತಾರೆ ಮತ್ತು ನಿಮ್ಮ ಪರವಾಗಿ ನಿಲ್ಲುತ್ತಾರೆ ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ.

Leave a Reply

Your email address will not be published. Required fields are marked *