ಮಕರ ರಾಶಿಯವರಿಗೆ 2023 ರಲ್ಲಿ ಗ್ರಹಗತಿಗಳು ಹೇಗಿರಲಿವೆ ನೋಡಿ

0

ಇನ್ನೊಂದು ತಿಂಗಳು ಕಳೆದರೆ 2022 ಮುಗಿದು 2023 ಬರಲಿದೆ. ಈ 2023 ರಂದು ಮಕರ ರಾಶಿಯವರಿಗೆ ಅವರ ರಾಶಿ ಭವಿಷ್ಯ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಹೇಳಲಾಗಿದೆ. ಮಕರ ರಾಶಿಯವರಿಗೆ ಸಂಬಂಧಪಟ್ಟ ಇಡೀ ವರ್ಷದ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಅದೃಷ್ಟ ದುರಾದೃಷ್ಟಗಳು ಪಂಚಾಂಗ, ಜಾತಕ, ಗ್ರಹಗತಿಗಳ ಆಧಾರದ ಮೇಲೆ ನಿಂತಿರುತ್ತದೆ.

ಪ್ರತಿಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಸ್ಥಾನ ಬದಲಾಯಿಸುತ್ತಿರುತ್ತದೆ. ಈ ರೀತಿಯ ರಾಶಿ ಸಂಚಾರ ಎಲ್ಲಾ 12 ರಾಶಿಯ ಜನರಿಗೂ ಪ್ರಭಾವ ಬೀರುತ್ತದೆ. ಇನ್ನು ಮಕರ ರಾಶಿಯ ಜನರಿಗೆ ಈ ಎಲ್ಲಾ ಅಂಶಗಳು ಹೇಗೆ ಪ್ರಭಾವ ಬೀರುತ್ತವೆ. ಮತ್ತು 2023ರ ಅವರ ವರ್ಷ ಭವಿಷ್ಯ ಹೇಗಿರಲಿದೆ ಎನ್ನುವುದರ ವಿವರ ಇಲ್ಲಿದೆ.

ಸಾಮಾನ್ಯವಾಗಿ ದಿನ ಭವಿಷ್ಯ, ವಾರ ಭವಿಷ್ಯ, ಹಾಗೂ ವರ್ಷ ಭವಿಷ್ಯ ಭಿನ್ನವಾಗಿರುತ್ತವೆ. ಈ ರೀತಿಯ ಭವಿಷ್ಯ ಹೇಳುವಾಗ ಬೇರೆ ಬೇರೆ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹೇಳಲಾಗುತ್ತದೆ. ಇನ್ನು ವರ್ಷ ಭವಿಷ್ಯದಲ್ಲಿ ಮಕರ ರಾಶಿಯ ಮೇಲೆ 2023 ರಂದು ಮಕರ ರಾಶಿಯಲ್ಲಿ ಅತಿ ಹೆಚ್ಚು ದಿನಗಳ ಕಾಲ ಉಳಿಯುವ ಗ್ರಹಗಳ ಆಧಾರದ ಮೇಲೆ ಆ ಜನರ ಅದೃಷ್ಟ ನಿರ್ಧರಿಸಲ್ಪಡುತ್ತದೆ.

ಹೀಗಾಗಿ ಜನವರಿ 17ರ ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಗ್ರಹವು ಸಂಚರಿಸುತ್ತದೆ. ಇನ್ನು ಏಪ್ರಿಲ್ 26ರಂದು ಗುರು ಸಂಚಾರ ಆಗಲಿದೆ. ಅಕ್ಟೋಬರ್ 30ರಂದು ನಾಲ್ಕನೇ ರಾಶಿಯಲ್ಲಿದ್ದ ರಾಹು ಮೂರನೇ ರಾಶಿಗೆ ತನ್ನ ಸ್ಥಾನ ಬದಲಾಯಿಸಲಿದ್ದಾನೆ. ಹಾಗೂ ಹತ್ತನೇ ಮನೆಯಲ್ಲಿದ್ದ ಕೇತು 9ನೇ ಮನೆಗೆ ಸಂಚರಿಸುತ್ತಾನೆ.

ಇಡೀ ವರ್ಷದ ಒಟ್ಟಾರೆ ಭವಿಷ್ಯ ನೋಡುವುದಾದರೆ ಮಕರ ರಾಶಿಯವರಿಗೆ 2023ರಲ್ಲಿ ಗುರುಬಲ ಇಲ್ಲವೆಂದು ಹೇಳಬಹುದು. ಸಾಕಷ್ಟು ದಿನಗಳಿಂದ ಮನೆ ಮಾಡಿದ್ದ ಸೋಮಾರಿತನ ದೂರವಾಗಿ ಕೆಲಸದ ಕಡೆಗೆ ಹೆಚ್ಚು ಗಮನ ಕೊಡಲಿದ್ದೀರಿ. ಐದು ವರ್ಷಗಳ ಸಾಡೇಸಾತ್ ಮುಗಿಯಲಿದ್ದು ಇನ್ನೂ ಕೆಲವು ವರ್ಷ ಸಾಡೆ ಸಾತ್ ಇರಲಿದೆ. ಈ ಮೊದಲು ನೀವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದರೆ, ಇನ್ನು ಮುಂದೆ ನಿಮಗೆ ಶನಿಯ ಕೃಪೆಯಿದ್ದು ಒಳ್ಳೆಯ ಲಾಭಗಳು ದೊರೆಯಲಿವೆ. ಒಂದು ವೇಳೆ ನೀವು ಈ ಹಿಂದೆ ಸಾಕಷ್ಟು ಖುಷಿಯನ್ನು ಅನುಭವಿಸಿದ್ದರೆ ಇನ್ನು ಮುಂದೆ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಕೆಲಸ ಮಾಡುವ ಜಾಗದಲ್ಲಿ ಕೆಲವು ಸಮಸ್ಯೆಗಳು ತಲೆದೂರಬಹುದು. ನಿಮ್ಮದಲ್ಲದ ತಪ್ಪಿಗೆ ನಿಮ್ಮ ಮೇಲೆ ಆಪಾದನೆ ಮಾಡಬಹುದು, ಎಚ್ಚರಂದಿರಿ. ಕುಟುಂಬದಲ್ಲಿ ಕಲಹ, ಜಗಳ ಏರ್ಪಡುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಪರಿಸ್ಥಿತಿಯನ್ನು ಸಮಾಧಾನದಿಂದ ಬಗೆಹರಿಸಿ. ಶೈಕ್ಷಣಿಕ ವಿಷಯವಾಗಿ ವಿದ್ಯಾರ್ಥಿಗಳಿಗೂ ಅಷ್ಟೇನು ಪ್ರಗತಿ ಇರುವುದಿಲ್ಲ. ಆದರೆ ವಿದೇಶಕ್ಕೆ ಹೋಗಿ ಶಿಕ್ಷಣ ಮಾಡುವವರಿಗೆ ಇದು ಒಳ್ಳೆಯ ಕಾಲವಾಗಿದೆ.

ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಅತ್ಯಂತ ಶುಭ ಸುದ್ದಿ ಎಂದರೆ ನಿಮಗೆ ಮುಂದಿನ ವರ್ಷ ಸಾಕಷ್ಟು ಹಣಕಾಸಿನ ನೆರವು ದೊರೆಯಲಿದೆ. ಆರ್ಥಿಕವಾಗಿ ಸದೃಢರಾಗುವಿರಿ. ರಾಹು, ಕೇತು, ಗುರು ಗ್ರಹಗಳ ಪೂಜೆ ಮಾಡಿ ನಿಮ್ಮ ಕಷ್ಟಗಳು ಬಗೆಹರಿಯಬೇಕೆಂದರೆ ಕೊಲ್ಲೂರು ಸೇರಿದಂತೆ ವಿವಿಧ ಶಕ್ತಿ ಪೀಠಗಳಿಗೆ ಭೇಟಿ ನೀಡಿ ದೇವಿಯ ದರ್ಶನ ಮಾಡಿ.

Leave A Reply

Your email address will not be published.

error: Content is protected !!