WhatsApp Group Join Now
Telegram Group Join Now

ಹಿಂದೂ ಪಂಚಾಗದ ಪ್ರಕಾರ ಯುಗಾದಿ ಹೊಸ ವರ್ಷ 2023 ಪ್ರಾರಂಭವಾಗಿದೆ. ಹೊಸ ವರ್ಷ 2023 ಪ್ರತಿಯೊಬ್ಬರಿಗೂ ಹೊಸ ಭರವಸೆಗಳು, ಹೊಸ ಕನಸುಗಳು, ಹೊಸ ಗುರಿಗಳು ಮತ್ತು ಸವಾಲುಗಳನ್ನು ಎದುರಿಸುವ ವರ್ಷವಾಗಿರುತ್ತದೆ. ಹೊಸ ವರ್ಷ 2023 ಪ್ರತಿಯೊಬ್ಬರ ಜೀವನದಲ್ಲಿ ಸಾಕಷ್ಟು ಭರವಸೆಗಳನ್ನು ತರುವ ವರ್ಷವಾಗಿರುತ್ತದೆ.

ಕಳೆದ ವರ್ಷ ಅಪೂರ್ಣವಾಗಿ ಉಳಿದಿರುವ ನಮ್ಮ ಕೆಲಸ ಮುಂಬರುವ ಹೊಸ ವರ್ಷದಲ್ಲಿ ಪೂರ್ಣಗೊಳ್ಳಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಹೊಸ ವರ್ಷದಲ್ಲಿ, ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಾಗುತ್ತದೆ, ಇನ್ನೂ ಹಚ್ಚಿನ ಶುಭ ಸುದ್ದಿಗಳು ಈ ವರ್ಷದಲ್ಲಿ ಸಿಗಲಿ ಎಂಬ ಹಾರೈಕೆಯೊಂದಿಗೆ ನಿಮ್ಮ ದ್ವಾದಶ ರಾಶಿಗಳಲ್ಲಿ ಕೊನೆಯ ಮೂರು ರಾಶಿಗಳಾದ ಮಕರ ಕುಂಭ ಮೀನ ರಾಶಿಗಳ ಭವಿಷ್ಯದ ಬಗ್ಗೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಈ ವರ್ಷ ಅತಿ ಕಡಿಮೆ ಅಥವಾ ಅತಿ ಹೆಚ್ಚು ಮಳೆ ಇರುತ್ತದೆ. ಫಲ ಬಿಡುವ ವೃಕ್ಷಗಳು ಚೆನ್ನಾಗಿ ಹಣ್ಣನ್ನು ಕೊಡುತ್ತವೆ. ಮಳೆಯ ಸಮೃದ್ಧಿ ಇರುತ್ತದೆ. ತರಿ ಹಾಗೂ ಖುಷ್ಕಿ ಬೆಳೆಗಳು ಉತ್ತಮವಾಗಿರುತ್ತವೆ. ಬೂದುಮಣ್ಣಿನಲ್ಲಿ ಹಾಗೂ ಕೆಮ್ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಚೆನ್ನಾಗಿ ಫಲಿಸುತ್ತವೆ. ಮೆಣಸು, ಸಾಸಿವೆ, ರಾಗಿ, ಲವಂಗ, ಏಲಕ್ಕಿ ಮೊದಲಾದ ಕಪ್ಪುಬೆಳೆಗಳು ಹೆಚ್ಚು ಇಳುವರಿ ಕೊಡುತ್ತವೆ. ಹೈನುಗಾರಿಕೆ ಚೆನ್ನಾಗಿ ಫಲಿಸುತ್ತದೆ.

ರಾಷ್ಟ್ರದಲ್ಲಿ ರಾಜಕೀಯ ಸ್ಥಿರತೆ ಇರುತ್ತದೆ. ದೇಶಕ್ಕೆ ಉತ್ತಮ ಹೆಸರು, ಗೌರವ ಬರುತ್ತದೆ. ದೇಶದ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಮಕರ ರಾಶಿ: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಇರುತ್ತದೆ. ತಾಳ್ಮೆ ಇದ್ದರೆ ಉತ್ತಮ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಸಾಲಬಾಧೆ ಕಾಡುತ್ತದೆ. ಸಾಲ ಕೊಡುವುದು ತೆಗೆದುಕೊಳ್ಳುವುದು ಬೇಡ. ಮಾತಿನ ಮೇಲೆ ಹಿಡಿತವಿರಲಿ. ಸಮಯೋಚಿತ ಮಾತುಗಳು ಸೂಕ್ತವಾಗಿರುತ್ತದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಣಿಸುತ್ತದೆ.

ಕುಂಭ ರಾಶಿ: ಕುಂಭ ರಾಶಿಯವರಿಗೆ ಶನಿ ಆಗಮನವಾಗುತ್ತದೆ. ನೀವು ಅಪವಾದ ಮತ್ತು ನಿಂದನೆಗಳನ್ನು ಕೇಳಬೇಕಾಗುತ್ತದೆ. ಇವರಿಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ. ವ್ಯವಹಾರಗಳಲ್ಲಿ ಹೆಚ್ಚಿನ ಲಾಭಗಳು ದೊರೆಯುವುದಿಲ್ಲ. ಕೆಟ್ಟ ಜನಗಳಿಂದ ದೂರವಿರುವುದು ಉತ್ತಮ, ಶನಿಶಾಂತಿ ಮಾಡಿಸುವುದು ಉತ್ತಮವಾಗಿರುತ್ತದೆ. ರಾಹು ನಿಮಗೆ ಶುಭ ಫಲಗಳನ್ನು ಕೊಡುತ್ತದೆ. ಯಾವುದೇ ಸಮಸ್ಯೆ ಬಂದರೂ ಬಹಳಷ್ಟು ಧೈರ್ಯದಿಂದ ಇರುತ್ತೀರಾ.

ಮೀನ ರಾಶಿ: ಈ ರಾಶಿಯವರು ಚಂಚಲ ಸ್ವಭಾವದವರಾಗಿರುತ್ತಾರೆ. ಮೀನರಾಶಿಯವರಿಗೆ ಆತುರ ಜಾಸ್ತಿ, ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರು ಆಲೋಚನೆಗಳು ಜಾಸ್ತಿಯಾಗಿರುತ್ತದೆ. ದಾನ ಧರ್ಮಗಳಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚಿರುತ್ತದೆ. ಇವರಿಗೆ ಕಲ್ಮಶ ಸ್ವಭಾವ ಇರುವುದಿಲ್ಲ. ತಿರುಗಾಟ ಹೆಚ್ಚಾಗಿರುತ್ತದೆ. ನೋವುಗಳಿಗೆ ಸ್ಪಂದಿಸುವ ಗುಣ ಇರುತ್ತದೆ. ಅನಾವಶ್ಯಕ ಕದನಗಳು ಬೇಡ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: