ಮದ್ಯಪಾನ ಧೂಮಪಾನ ಆರೋಗ್ಯಕ್ಕೆ ಹಾನಿಕರ ಇವುಗಳಿಗೆ ಒಂದು ಬಾರಿ ಇವುಗಳನ್ನು ಅಭ್ಯಾಸ ಮಾಡಿಕೊಂಡರೆ ಇದರಿಂದ ದೂರ ಇರುವುದು ತುಂಬಾ ಕಷ್ಟ. ಆದರೆ ಇವುಗಳಿಗೆ ಮನುಷ್ಯರು ಮಾತ್ರ ಅಡಿಕ್ಟ್ ಆಗುತ್ತಾರೆ ಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಏಕೆಂದರೆ ರಷ್ಯಾದಲ್ಲಿ ಇರುವ ಒಂದು ಝೂನಲ್ಲಿ ಜೋರಾ ಎಂಬ ಚಿಂಪಾಂಜಿ ಇತ್ತು.ಝೂ ಗೆ ಬರುವ ಜನರು ಅದಕ್ಕೆ ಆಲ್ಕೋಹಾಲ್ ಮತ್ತು ಸಿಗರೇಟ್ ಅನ್ನು ಪದೇ ಪದೇ ಕೊಡುತ್ತಿದ್ದರಿಂದ ಅದು ಧೂಮಪಾನ ಮತ್ತು ಮದ್ಯಪಾನ ಕ್ಕೆ ಅಡಿಕ್ಟ್ ಆಗುತ್ತೆ.

ಅದಕ್ಕೆ ಎಷ್ಟರ ಮಟ್ಟಿಗೆ ಅಭ್ಯಾಸವಾಗಿತ್ತೆಂದರೆ ಸಿಗರೇಟ್ ಮದ್ಯ ಇಲ್ಲದಿದ್ದರೆ ಊಟ ಕೂಡ ಮಾಡುತ್ತಿರಲಿಲ್ಲವಂತೆ. ಝೂ ಗೆ ಬರುವ ಜನರಿಗೆ ಎಷ್ಟು ಬಾರಿ ಹೇಳಿದರೂ ಅವರು ಗಾರ್ಡ್ಸ್ ಗಳ ಕಣ್ಣು ತಪ್ಪಿಸಿ ಜೋರಾ ಗೆ ಸಿಗರೇಟ್ ಮತ್ತು ಆಲ್ಕೋಹಾಲ್ ಅನ್ನು ಕೊಡುತ್ತಿದ್ದರು, ಕೊನೆಗೆ ಝೂದಲ್ಲಿನ ಸಿಬ್ಬಂದಿಗಳು ಬೇಸತ್ತು ಧೂಮಪಾನ ಮದ್ಯಪಾನ ವ್ಯಸನವನ್ನು ಕಡಿಮೆಗೊಳಿಸಲು ಬೆರಾಸಿಡಿಯಲ್ಲಿ ರಿಹ್ಯಾಬಿಲಿಟೆಶನ್ ಸೆಂಟರ್ ಗೆ ಸೇರಿಸಿ ಟ್ರಿಟಮೆಂಟ್ ಕೊಡಿಸಿ ನಾರ್ಮಲ್ ಆಗುವಂತೆ ಮಾಡಿದ್ದಾರೆ.

ನಮ್ಮಲ್ಲಿ ಅನೇಕರು ಕಾಲೇಜ್ ಬಂಕ್ ಮಾಡುವುದನ್ನ ಅಂಟೆಂಡ್ಸ್ ಸಮಯದಲ್ಲಿ ನಮ್ಮ ಹಾಜರಿ ನಂಬರ್ ಬಂದಾಗ ನಮ್ಮ ಸ್ನೇಹಿತರಿಂದ ಪ್ರಸೆಂಟ್ ಹಾಕಿಕೊಳ್ಳುವುದನ್ನು ಮಾಡಿರುತ್ತೆವೆ. ಆದರೆ ರಷ್ಯಾದ ಒಂದು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿ ಮಾಡಲು ಆಗುವುದಿಲ್ಲ ಎಕೆಂದರೆ ಅಲ್ಲಿ ಇಂತಹ ಕೆಲಸಗಳನ್ನು ಮಾಡದಂತೆ ಇರಲು ತಂತ್ರಜ್ಞಾನವನ್ನು ಬಳಸಿ ಹೊಸ ಹಾಜರಾತಿ ಸಿಸ್ಟಂ ಅನ್ನು ಪರಿಚಯಿಸಿದ್ದಾರೆ.

ಯೂನಿವರ್ಸಿಟಿ ಟೆಕ್ನಾಲಜಿ ಪೆಟ್ರೋನಸ್ ಮಲೇಶಿಯಾದ ಒಂದು ಯೂನಿವರ್ಸಿಟಿ ವಿದ್ಯಾರ್ಥಿಗಳು ತಮ್ಮ ಹಾಜರಾತಿಯನ್ನು ತಾವೇ ಎಂಟರ್ ಮಾಡುವಂತೆ ಕ್ಯೂ ಆರ್ ಕೋಡ್ ಅನ್ನು ಕ್ಲಾಸ್ ರೂಮ್ ನಲ್ಲಿ ಇರಿಸುತ್ತಾರೆ. ಕ್ಲಾಸ್ ರೂಮ್ ಗೆ ಎಂಟರ್ ಆದಾಗ ಪ್ರತಿಯೊಬ್ಬರೂ ತಮ್ಮ ಫೋನಿನಿಂದ ಡಿಜಿಟಲ್ ಬೋರ್ಡ್ ನಲ್ಲಿ ಕಾಣಿಸುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಮಾತ್ರ ಹಾಜರಿ ಬೀಳುತ್ತದೆ ಮತ್ತು ಹಾಗೆ ಕಾಣಿಸುವ ಕ್ಯೂ ಆರ್ ಕೋಡ್ ಕೆಲವೇ ನಿಮಿಷಗಳು ಮಾತ್ರ irutte2. ಇದರಿಂದ ವಿದ್ಯಾರ್ಥಿಗಳು ಕ್ಲಾಸ್ ಗೆ ತಡವಾಗಿ ಬಂದರು ಅಥವಾ ಕ್ಲಾಸ್ ಅನ್ನು ತಪ್ಪಿಸಿದರು ಕೂಡ ಆಬ್ಸೆಂಟ್ ಬೀಳುತ್ತದೆ.

ನಮ್ಮಲ್ಲಿ ಅನೇಕರಿಗೆ ನಮ್ಮ ಆತ್ಮೀಯರು ಅಥಾವ ಬಂಧುಗಳು ಸತ್ತು ಹೋದ ಮೇಲೆ ಅವರನ್ನು ಪುನಃ ನೋಡಬೇಕು ಅಂತ ಅನ್ನಿಸುತ್ತೆ. ಇದಕ್ಕಾಗಿ ಸೌತ್ ಕೊರಿಯಾದಲ್ಲಿ ಮೀಟ್ ಯು ಎನ್ನುವ TV ಶೋ ಅನ್ನು ಪ್ರಾರಂಬಿಸಿದ್ದಾರೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಯಾರಾದರೂ ಸತ್ತು ಹೋದರೆ ಈ TV ಶೋಗೆ ಹೋಗಿ ನೀವು ಅವರೊಂದಿಗೆ ಮಾತನಾಡಬಹುದು,ನೋಡಬಹುದು, ಭೇಟಿ ಮಾಡಬಹುದು. ಅದು ಹೇಗೆ ಅಂದರೆ ವಿರುಚ್ಯುವಲ್ ತಂತ್ರಜ್ಞಾನವನ್ನು ಬಳಸಿ ಅವರು ಇದನ್ನು ನೆಡೆಸುತ್ತಿದ್ದಾರೆ, ಆದರೆ ನಿಮಗೆ ವಿರುಚ್ಯುವಲ್ ರಿಯಾಲಿಟಿ ಮೂಲಕ ನಮ್ಮ ಆತ್ಮೀಯರ ಭಾವಚಿತ್ರ ಮತ್ತು ಧ್ವನಿ ಹೇಗೆ ಬರುತ್ತೆ ಅನ್ನೋ ಅನುಮಾನ ಬರಬಹುದು..

ಆ ಟಿವಿ ಶೋ ಅವರು ಸತ್ತು ಹೋದವರ ಫೋಟೋಗಳನ್ನು ವಿಡಿಯೋ ರೆಕಾರ್ಡ್ಸ್ ಅನ್ನು ಮತ್ತು ಆಡಿಯೋ ರೆಕಾರ್ಡ್ಸ್ ಅನ್ನು ಮೊದಲೇ ಶೇಖರಿಸಿರುತ್ತಾರೆ. ಅವುಗಳಿಂದ ವಿರುಚ್ಯುವಲ್ ರಿಯಾಲಿಟಿಯನ್ನು ಸೃಷ್ಟಿ ಮಾಡುತ್ತಾರೆ. ವಿರುಚ್ಯುವಲ್ ರಿಯಾಲಿಟಿಯಿಂದ ಈ ಟಿವಿ ಶೋ ಅವರು ಜಾಂಗ್ ಜಿಸಂ ಎಂಬ ಮಹಿಳೆಗೆ ಕ್ಯಾನ್ಸರ್ ನಿಂದ ಸತ್ತು ಹೋದ ತನ್ನ ಮಗಳನ್ನ ಭೇಟಿ ಮಾಡಿಸುವ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ ಆದರೆ ಇಲ್ಲಿ ಭೇಟಿ ಮಾಡಿದ್ದಾಳೆ ಅಂದ್ರೆ ನಿಜವಾಗಲೂ ಭೇಟಿ ಮಾಡಿದಂತೆ ಇರುವುದಿಲ್ಲ ತನ್ನ ಮಗಳೆ ಕಾರ್ಟೂನ್ ತರ ಮಾತಾಡುವುದನ್ನು ನೋಡಿ ಆ ತಾಯಿ ಕಣ್ಣೀರು ಸುರಿಸುತ್ತಾಳೆ

ಚೀನಾದಲ್ಲಿ ಒಂದು ಜಾಬ್ ಇದೆ, ಈ ಜಾಬ್ನಲ್ಲಿ ತಿಂಗಳಿಗೆ ನಾಲ್ಕು ಲಕ್ಷ ಸಂಬಳ ಕೊಡುತ್ತಾರೆ.. ಆ ಜಾಬ್ ಯಾವುದೇಂದರೆ ಪ್ರೊಫೆಷ್ನಲ್ ಫಾರ್ಟ್ ಸ್ಮೇಲ್ಲರ್ಸ. ಇದರಲ್ಲಿ ಯಾವುದಾದರು ವ್ಯಕ್ತಿ ಬಾಂಬ್ ಹಾಕಿದಾಗ ಅದನ್ನು ವಾಸನೆ ನೋಡಬೇಕು. ಈ ಜಾಬ್ ಅಲ್ಲಿ ಸೇರಬೇಕು ಅಂದ್ರೆ ಧೂಮಪಾನ ಮದ್ಯಪಾನ ವ್ಯಸನಗಳಾಗಿರಬಾರದು ಇದರಲ್ಲಿ ಅನೇಕ ಟೆಸ್ಟ್ ಗಳು ಮತ್ತು ಟ್ರೈನಿಂಗ್ ಗಳು ಇರುತ್ತವೆ.

1970 ರಲ್ಲಿ ರಷ್ಯಾದಲ್ಲಿ ಒಂದು ರೇಡಿಯೋ ಸ್ಟೇಷನ್ ಯಿಂದ ಒಂದು ವಿಚಿತ್ರವಾದ ಫ್ರೀಕ್ವೆನ್ಸಿಯಲ್ಲಿ ಒಂದು ವಾಯ್ಸ್ ಬರಲು ಪ್ರಾರಂಬಿಸುತ್ತೇ ಈ ರೇಡಿಯೋ ಗೆ ಬಜರ್ ಅಂತ ಹೆಸರಿಡುತ್ತಾರೆ. ಇದರಲ್ಲಿ ವಿಚಿತ್ರ ಏನೆಂದರೆ ರೇಡಿಯೋ ಸ್ಟೇಷನ್ ಅನ್ನ ಯಾರು ಎಲ್ಲಿಂದ ಆಪರೇಟ್ ಮಾಡುತ್ತಿದ್ದಾರೆ ಎನ್ನುವ ವಿಷಯ ಯಾರಿಗೂ ಗೊತ್ತಿಲ್ಲ, ಆ ರೇಡಿಯೋ ಚಾನೆಲ್ 4625 ಫ್ರೀಕ್ವೆನ್ಸಿಯಲ್ಲಿ ರನ್ ಆಗುತ್ತಿರುತ್ತದೆ. ನಂತರ ಈ ಘಟನೆಯ ಮೇಲೆ ಎರಡು ಥೆರಿಸ್ ಹುಟ್ಟಿಕೊಳ್ಳುತ್ತವೆ. ಮೊದಲನೆಯದು ಎಲಿಯನ್ಸ್ ರಷ್ಯಾನ್ಸರನ್ನ ಸಂಪರ್ಕ ಮಾಡಲು ಈ ರೇಡಿಯೋ ಸ್ಟೇಷನ್ ಮೂಲಕ ಪ್ರಯತ್ನಿಸುತ್ತವೆ ಅಂತ ಹೇಳಲಾಗುತ್ತದೆ. ಎರಡನೇ ಥಿಯೆರಿಯಲ್ಲಿ ನೇರವಾಗಿ ದೆವ್ವಗಳೆ ರೇಡಿಯೋ ಸ್ಟೇಷನ್ ಅನ್ನು ಆಪರೇಟ್ ಮಾಡುತ್ತಿವೆ ಎಂದು ಹೇಳಲಾಗುತ್ತೆ.

ಎಟಿಯನ್ ನೌಟ್ ಎಂಬ ಈ ವ್ಯಕ್ತಿ ಮೊದಲ ಬಾರಿ ಅರ್ಥ್ ಸ್ಯಾಂಡ್ವಿಚ್ ಅನ್ನು ತಯಾರಿಸಿದ್ದಾನೆ. ಭೂಮಿಯನ್ನು ಎರಡು ಬ್ರೆಡ್ ಮಧ್ಯದಲ್ಲಿ ಹೇಗೆ ಇರಿಸುತ್ತಾನೆ ಎನ್ನುವ ಅನುಮಾನ ಕಾಡುವುದು ಸಹಜ. ಈತನು ಮಾಡಿದ್ದು ಭೂಮಿಯ ಒಂದು ಕಡೆ ಬ್ರೆಡ್ ಅನ್ನು ಇರಿಸಿ ಸರಿಯಾಗಿ ಅದಕ್ಕೆ ಆಪೊಸಿಟ್ ಸೈಡ್ ಅಲ್ಲಿ ಮತ್ತೊಂದು ಕಡೆ ಬ್ರೆಡ್ ಅನ್ನು ಇರಿಸುತ್ತಾನೆ. ಆಗ ಆ ಬ್ರೆಡ್ ಮಧ್ಯದಲ್ಲಿ ಭೂಮಿ ಇದ್ದಂತಾಗುತ್ತದೆ. ಹೀಗೆ ಈ ಅರ್ಥ್ ಸ್ಯಾಂಡ್ವಿಚ್ ಆಗುತ್ತದೆ ಎಂದು ಅವನು ಹೇಳುತ್ತಾನೆ.

By admin

Leave a Reply

Your email address will not be published. Required fields are marked *

error: Content is protected !!
Footer code: