ಬಿಗ್ ಬಾಸ್ ಮನೇಲಿ ಮಗಳನ್ನುನೆನೆದು ಚಂದ್ರ ಚೋಡ್ ಅತ್ತಿದ್ಯಾಕೆ?

0

ಬಿಗ್ಬಾಸ್ ಇದು ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿದೆ. ಈ ವರ್ಷದ ಬಿಗ್ಬಾಸ್ ಮನೆಯಲ್ಲಿ ಅನೇಕ ಆಟಗಾರರು ಒಳಗೆ ಇದ್ದು ಅನೇಕ ಆಟಗಾರರು ಹೊರಗೆ ಬಂದಿದ್ದಾರೆ. ಹಾಗೆಯೇ ಚಂದ್ರಚೂಡ ಅವರು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಬರುವಾಗ ಬಹಳ ಆಶ್ಚರ್ಯಕರವಾಗಿ ಬಂದಿದ್ದರು. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಚಕ್ರವರ್ತಿ ಚಂದ್ರಚೂಡ ಅವರು ಬಂದ ಒಂದು ವಾರ ಮನೆಯಲ್ಲಿ ಇರುವ ಯಾವ ಸದಸ್ಯರಿಗೂ ಅವರು ಇಷ್ಟ ಆಗಿರಲಿಲ್ಲ. ಏಕೆಂದರೆ ಅವರ ಆಗಮನ ಹಾಗೆಯೇ ಇತ್ತು. ಕಾಲಾಂತರದಲ್ಲಿ ಎಲ್ಲರಿಗೂ ಇಷ್ಟವಾಗುತ್ತಾ ಹೋದರು. ಅದರಲ್ಲೂ ಒಲವಿನ ಉಡುಗೊರೆ ಎಂಬ ಸ್ಪರ್ಧೆಯಲ್ಲಿ ಅವರು ಇಷ್ಟವಾದರು. ಆಗ ಒಲವಿನ ಉಡುಗೊರೆಯನ್ನು ದಿವ್ಯಾ ಸುರೇಶ್ ಅವರಿಗೆ ಕೊಡುತ್ತೇನೆ ಎಂದು ಹೇಳುತ್ತಾರೆ. ಏಕೆಂದರೆ ಚಂದ್ರಚೂಡ ಅವರಿಗೆ ದಿವ್ಯಾ ಅವರನ್ನು ನೋಡಿದರೆ ಅವರ ಮಗಳನ್ನು ನೋಡಿದಂತೆ ಆಗುತ್ತದೆ ಎಂದು ಹೇಳುತ್ತಾರೆ.

ದಿವ್ಯಾ ಸುರೇಶ್ ಅವರ ಹತ್ತಿರ ತಾನು ತನ್ನ ಮಗಳು ಚಿಕ್ಕವಳಿದ್ದಾಗ ಜೈಲಿಗೆ ಹೋಗಿದ್ದೆ. ಆಗ ನನ್ನ ಮಗಳಿಗೆ ನನ್ನ ಮೇಲೆ ಜಿಗುಪ್ಸೆ ಹುಟ್ಟಿದೆ ಎಂದು ಹೇಳುತ್ತಾರೆ. ಆಗ ದಿವ್ಯಾ ಸುರೇಶ್ ಅವರು ಕೂಡ ಬಹಳ ನೋವಾಗಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ಚಂದ್ರಚೂಡ ಅವರು ಮೊದಲು ಒಂದು ಮದುವೆ ಆಗಿ ಮಗಳು ಹುಟ್ಟಿರುತ್ತಾಳೆ. ಆಗ ಮೊದಲ ಹೆಂಡತಿಯನ್ನು ತೊರೆದು ಶ್ರುತಿಯನ್ನು ವಿವಾಹವಾಗುತ್ತಾರೆ. ಆಗ ಅವರ ಮೊದಲ ಹೆಂಡತಿ ನ್ಯಾಯಕ್ಕಾಗಿ ನ್ಯಾಯಾಲಕ್ಕೆ ಹೋದಾಗ ತೀರ್ಪು ಇವಳ ಕಡೆ ಆಗುತ್ತದೆ.

ಹಾಗೆಯೇ ಶ್ರುತಿ ಅವರೊಂದಿಗೆ ದೂರ ಆಗುತ್ತಾರೆ. ಹಾಗೆಯೇ ತಮ್ಮ ಮೊದಲ ಹೆಂಡತಿಯ ಜೊತೆ ಮತ್ತು ಮಗಳ ಜೊತೆ ಜೀವನ ನಡೆಸುತ್ತಾರೆ. ಆದರೆ ಕಾಲ ಕ್ರಮೇಣವಾಗಿ ಅವರ ಈ ನಡತೆ ಮಗಳನ್ನು ಅವರ ಪ್ರೀತಿಯಿಂದ ದೂರ ಮಾಡುತ್ತದೆ. ಜೈಲಿಗೆ ಹೋಗುವ ಸಮಯ ಸಹ ಬರುತ್ತದೆ. ಆದ್ದರಿಂದ ಈಗ ಅವರು ತಮ್ಮ ಮಗಳನ್ನು ಬಹಳ ನೆನೆಸಿಕೊಳ್ಳುತ್ತಾರೆ. ಹಾಗೆಯೇ ದಿವ್ಯಾ ಸುರೇಶ್ ಅವರನ್ನು ನೋಡಿ ತಮ್ಮ ಮಗಳ ನೆನಪಾಗಿ ಬಿಗ್ಬಾಸ್ ಮನೆಯಲ್ಲಿ ಬಹಳ ನೋವು ಪಟ್ಟುಕೊಳ್ಳುತ್ತಾರೆ.

Leave A Reply

Your email address will not be published.

error: Content is protected !!
Footer code: