ಬಹುದಿನಗಳ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಖದಲ್ಲಿ ನಗು, ಯಾವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು ಗೊತ್ತಾ

0

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸರಳತೆ ,ಮಿತಭಾಷಿ ವ್ಯಕ್ತಿತ್ವ ಇವರದ್ದು. ನಾವು ಎಲ್ಲೂ ನೋಡಿಲ್ಲ ಇವರು ಎಲ್ಲರ ಜೊತೆಗೆ ಬೆರೆತು ಸಂಭ್ರಮವನ್ನು ಪಡುವ ಹೆಣ್ಣು ಅಲ್ಲ ಅಗತ್ಯಕ್ಕೆ ತಕ್ಕಂತೆ ಮಾತು ಅದು ತನಗೆ ಆಪ್ತರ ಬಳಿ ಅಷ್ಟೆ. ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು ಎನ್ನುವ ಗಾದೆಮಾತು ಇವರನ್ನು ನೋಡಿಯೇ ಮಾಡಿರಬೇಕು ಅನ್ನುವ ವ್ಯಕ್ತಿತ್ವ ಅವರದ್ದು.

ಅಶ್ವಿನಿ ಅವರು ತನ್ನ ಪತಿ ಪುನೀತ ರಾಜ್ ಕುಮಾರ್ ಅವರಿಗೆ ಬೆನ್ನೆಲುಬಾಗಿ ಸದಾ ಅವರ ಕಾರ್ಯವನ್ನು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಹಾಗೂ ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇದ್ದೆ ಇರುತ್ತಾರೆ ಎನ್ನುವ ಹಾಗೆ ಪುನೀತ ಅವರ ಏಳಿಗೆ ಅವರ ಹೆಂಡ್ತಿ ಕಾರಣ ಎಂದು ನಾವು ಅರಿಯಲು ಸಮಯವೇ ಬೇಕಿಲ್ಲ. ಇನ್ನೂ ಇವರಿಗೆ ಮುದ್ದಾದ ಇಬ್ಬರು ಪುತ್ರಿಯರು ಇದ್ದಾರೆ ದೃತಿ ಹಾಗೂ ವಂದಿತ ಅವರದ್ದು ಕೂಡ ತಂದೆ ತಾಯಿಯ ಹಾಗೆ ಸರಳ ನಡೆ ನುಡಿ ಇದು ದೊಡ್ಮನೆ ವಂಶದ ಪರಂಪರ್ಯದ ಅನುಕರಣೆ ಎಂದೇ ಹೇಳಬಹುದು.

ರಾಜ್ ಕುಮಾರ್ ಕುಟುಂಬಗಳಲ್ಲಿ ಯಾವ ಹೆಣ್ಣು ಮಕ್ಕಳು ದ್ವನಿ ಎತ್ತರಿಸಿ ಮಾತು ಆಡಿದ ಉದಾಹರಣೆ ಇಲ್ಲ ಹಾಗೂ ಪುನೀತ ರಾಜ್ ಕುಮಾರ್ ಅವರು ವಿಧಿವಶ ಬಳಿಕ ಅಶ್ವಿನಿ ಅವರು ತನ್ನ ನೋವನ್ನು ತಾವೆ ನುಂಗಿ ಎಲ್ಲರಿಗೂ ಧೈರ್ಯ ಹೇಳಿದ ದಿಟ್ಟ ಮಹಿಳೆ ಪುನೀತ ರಾಜ್ ಕುಮಾರ್ ಅವರು ಇದ್ದಾಗ ಎಲ್ಲೂ ಮಾದ್ಯಮಗಳ ಕಣ್ಣಿಗೆ ಬೀಳದೆ ತಾನು ತನ್ನ ಕೆಲಸ ಅಂತ ಇದ್ದವರು ಅವರು. ಪುನೀತ್ ರಾಜ್ ಕುಮಾರ್ ಅವರು ಸತ್ತ ಬಳಿಕ ಪುನೀತ್ ಅವರ ಅಭಿಮಾನಿಗಳು ಬೇಸರ ಪಡಬಾರದು ಎನ್ನುವ ದೃಷ್ಟಿಯಿಂದ ಎಲ್ಲರ ಜೊತೆ ಬೆರೆತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇದ್ದಾರೆ ಹಾಗೂ ತಾವು ಕೂಡ ಕೆಲವೊಂದು ಸಮಾಜಮುಖಿ ಕಾರ್ಯವನ್ನು ಮಾಡುತ್ತ ಇದ್ದಾರೆ .

ಪುನೀತ ರಾಜ್ ಕುಮಾರ್ ಅವರ ಬಳಿಕ ಅಶ್ವಿನಿ ಅವರು ಎಲ್ಲೂ ತುಂಬು ಮನಸ್ಸಿನ ಮೂಲಕ ನಕ್ಕಿದ್ದೆ ನಾವು ಕಾಣಲಿಲ್ಲ ಹಾಗೂ ಅವರ ಕುಟುಂಬಸ್ಥರು ಇಂದಿಗೂ ನೋವಿನಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಪುನೀತ ರಾಜ್ ಕುಮಾರ್ ಅವರ ಹೆಸರಲ್ಲಿ ನಿರ್ಮಿಸಿದ ನಮ್ಮ ಪವರ್ ರನ್ ಚಾಲನೆ ನೀಡಲು ಸ್ವತಃ ಅಶ್ವಿನಿ ಪುನೀತ ರಾಜ್ ಕುಮಾರ್ ಅವರೇ ಬಂದಿದ್ದು ಹಾಗೂ ಎಲ್ಲರ ಜೊತೆ ನಗು ಮುಖದಿಂದ ಮಾತುಕತೆ ನಡೆಸಿದ್ದರು ಹಾಗೂ ಕಾರ್ಯಕ್ರಮಕ್ಕೆ ಸ್ವತಃ ತಾವೇ ಚಾಲನೆ ಮಾಡಿದರು ಇದರಿಂದ ಅಲ್ಲಿ ಭಾಗವಹಿಸಿದ ಎಲ್ಲರಿಗೂ ಖುಶಿ ಆಗಿದ್ದು ಸ್ಪರ್ದೆಯಲ್ಲಿ ಗೆದ್ದ ವಿಜೇತರಿಗೆ ತಮ್ಮ ಕೈಯಾರೆ ಬಹುಮಾನ ಹಾಗೂ ಪ್ರಶಸ್ತಿಯನ್ನು ಸಹ ನೀಡಿದ್ದರು. ಅಲ್ಲಿ ಇರುವ ಎಲ್ಲರ ಜೊತೆ ಹಮ್ಮು ಬಿಮ್ಮು ಇಲ್ಲದೆ ಸರಳತೆ ಇಂದ ಹಸನ್ಮುಖಿ ಆಗಿ ಬೆರೆತರು.

ಇಂದಿಗೂ ನಮ್ಮೆಲ್ಲರ ಮನದಲ್ಲಿ ಅಪ್ಪು ಹೆಸರು ಅಜರಮರ ಹಾಗಾಗಿ ಅಶ್ವಿನಿ ಅವರು ಕೂಡ ಹೀಗೆ ಸದಾ ನಗುತ್ತಲೇ ಬಾಳಲಿ, ಅವರ ಎಲ್ಲಾ ದುಃಖವನ್ನು ಭರಿಸುವ ಶಕ್ತಿ ಅದ ದೇವರು ಅವರಿಗೆ ಕರುಣಿಸಲಿ ಎಂದು ಹಾರೈಸೋಣ .ಇತ್ತೀಚಿಗೆ ಅಶ್ವಿನಿ ಅವರು ಕೂಡ ಹೊಸ ಚಿತ್ರ ನಿರ್ಮಾಣ ಮಾಡಲು ಇಚ್ಚಿಸಿದ್ದು ಹೆಚ್ಚಿನ ಆದ್ಯತೆ ಮಹಿಳಾ ನಿರ್ದೇಶಕಿ ಹೇಳಿದ್ದಾರೆ ಹಾಗಾಗಿ ಹೊಸ ನಿರ್ದೇಶಕಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಈ ಸಿನಿಮಾ ಜಾಸ್ತಿ ಮಹಿಳೆ ಅವರೇ ಕೆಲಸ ಮಾಡಿದ್ದಾರೆ ಏನೇ ಆಗಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಇಟ್ಟಿರುವ ಹೆಜ್ಜೆಗೆ ಜಯ ಸಿಕ್ಕಿ ಹೀಗೆ ಸದಾ ಹಸನ್ಮುಖಿ ಆಗಿ ಇನ್ನೂ ಹೆಚ್ಚು ಸಿನಿಮಾ ಹಾಗೂ ಸಾಮಾಜಿಕ ಕಾರ್ಯ ಅಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ ಇರಲಿ.

Leave A Reply

Your email address will not be published.

error: Content is protected !!