WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ಸಂಪ್ರದಾಯ ಪೂಜೆ-ಪುನಸ್ಕಾರಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ ನಮ್ಮ ದೇಶದಲ್ಲಿ ಹಬ್ಬಗಳನ್ನು ಅಮಾವಾಸ್ಯೆ ಹುಣ್ಣಿಮೆ ಗ್ರಹಣಗಳನ್ನು ಪಾಲನೆ ಮಾಡಲಾಗುತ್ತದೆ ನಾವು ನಿಮಗೆ ಫೆಬ್ರುವರಿಯಲ್ಲಿ ಉಂಟಾಗುವ ಅಮಾವಾಸ್ಯೆ ಯಾವ ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಫೆಬ್ರುವರಿ ಒಂದು ಎರಡು ಸಾವಿರದ ಇಪ್ಪತ್ತೆರಡರ ಮಂಗಳವಾರದಂದು ಅಮಾವಾಸ್ಯೆ ಇದೆ. ಈ ಅಮಾವಾಸ್ಯೆ ಬಹಳ ವಿಶೇಷವಾಗಿದ್ದು ಈ ಅಮಾವಾಸ್ಯೆಯಂದು ಶಿವನ ದರ್ಶನವನ್ನು ಮಾಡಿದರೆ ಅಥವಾ ಚಾಮುಂಡೇಶ್ವರಿಯ ದರ್ಶನ ಮಾಡಿದರೆ ದ್ವಾದಶ ರಾಶಿಯಲ್ಲಿನ ನಾಲ್ಕು ರಾಶಿಗಳಿಗೆ ಅತ್ಯಂತ ಯೋಗ ಪ್ರಧಾನವಾಗಿರುವಂತದ್ದು.

ಸಾಮಾನ್ಯವಾಗಿ ದೈವ ಬಲವನ್ನು ಹೆಚ್ಚಿಸಬೇಕು ಎಂದರೆ ದೇವರ ಶಕ್ತಿ ಬೇಕು ಹಾಗೆ ದೇವತೆಗಳ ಆಶೀರ್ವಾದವೂ ಬೇಕು ದೈವಬಲವು ಹೆಚ್ಚಿರಬೇಕು ಹಾಗಾಗಿ ಭಗವಂತನ ಸ್ಮರಣೆ ಭಗವಂತನ ದರ್ಶನ ಅಥವಾ ಭಗವಂತನ ಸಾನಿಧ್ಯದಲ್ಲಿ ಧ್ಯಾನ ಇತರದನ್ನು ಮಾಡಿದಾಗ ಖಂಡಿತವಾಗಿ ನಮಗೆ ಒಂದಿಷ್ಟು ಯೋಗಗಳು ಪ್ರಾಪ್ತವಾಗುತ್ತವೆ. ನಮ್ಮ ದಾರಿದ್ರ್ಯ ದುಃಖ ಶೋಕಾದಿಗಳೆಲ್ಲವು ಶಮನವಾಗಿ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ ಧನ ಧನ್ಯಗಳು ಸಮೃದ್ಧವಾಗುತ್ತದೆ ಸಾಲ ಬಾಧೆಯೂ ಕೂಡಾ ನಿವಾರಣೆಯಾಗುತ್ತದೆ. ಹಾಗಾದರೆ ದ್ವಾದಶ ರಾಶಿಯ ಆ ನಾಲ್ಕು ರಾಶಿಗಳು ಯಾವುವು ಮತ್ತು ಅವು ಎಂತಹ ಯೋಗವನ್ನು ಪಡೆದುಕೊಳ್ಳುತ್ತವೆ ಎನ್ನುವುದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಮೇಷ ರಾಶಿ. ಈ ಅಮಾವಾಸ್ಯೆಯ ನಂತರ ಮೇಷ ರಾಶಿಯವರಿಗೆ ಅತ್ಯಧಿಕ ಧನಲಾಭವಾಗುತ್ತದೆ ಉದ್ಯೋಗದಲ್ಲಿ ಯಶಸ್ಸು ಲಭಿಸುತ್ತದೆ ನೌಕರಿಗಳು ಪ್ರಾಪ್ತವಾಗುತ್ತದೆ. ಎರಡನೆಯದಾಗಿ ಮಿಥುನ ರಾಶಿ. ಮಿಥುನ ರಾಶಿಯವರಿಗು ಕೂಡ ಆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮಿಥುನ ರಾಶಿಯವರು ಅಂದುಕೊಂಡಂತ ಕೆಲಸಗಳು ಪರಿಪೂರ್ಣವಾಗಿ ನೆರವೇರುತ್ತದೆ. ಹಾಗೆಯೇ ಸಾಲಭಾದೆಯೂ ಕೂಡ ಶಮನವಾಗುತ್ತದೆ ಮತ್ತು ಆರೋಗ್ಯದಲ್ಲಿ ಕೂಡ ಚೇತರಿಕೆ ಕಾಣಿಸುತ್ತಾ ಹೋಗುತ್ತದೆ. ಮೂರನೇದಾಗಿ ಕನ್ಯಾರಾಶಿ. ಕನ್ಯಾರಾಶಿಯವರಿಗೆ ನೀವು ಅಂದುಕೊಂಡಂತೆ ಕೃಷಿಭೂಮಿಯ ವ್ಯವಹಾರ ಇರಬಹುದು ಅಥವಾ ಮಿತ್ರರಿಂದ ಧನ ಲಾಭವನ್ನು ಪಡೆಯಬಹುದು. ದಾಯಾದಿಗಳ ಕಲಹ ಶಮನವಾಗುತ್ತವೆ ಆಗುತ್ತದೆ ಜೊತೆಗೆ ಅದ್ಭುತವಾದಂತಹ ರಾಜ ಯೋಗವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ನಾಲ್ಕನೆಯದಾಗಿ ಧನು ರಾಶಿ. ಧನುರಾಶಿಯವರಿಗು ಕೂಡ ಅತ್ಯಧಿಕ ಧನಲಾಭ ಪ್ರಾಪ್ತಿಯಾಗುತ್ತದೆ ನೀವು ಅಂದುಕೊಂಡ ಮನೋಇಚ್ಛೆಗಳು ಮನೋಕಾಮನೆಗಳು ನೆರವೇರುತ್ತವೆ ಮತ್ತು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ರಪ್ತು ಮಾಡುವಂತಹ ಕೆಲಸ ಕಾರ್ಯಗಳು ಇರಬಹುದು ಅಥವಾ ಹಣದ ವ್ಯವಹಾರ ಇರಬಹುದು ಇವೆಲ್ಲವೂ ಸಾರಾಸಗಟವಾಗಿ ನೆರವೇರುತ್ತವೆ. ಒಟ್ಟಿನಲ್ಲಿ ಅಮಾವಾಸ್ಯೆಯಂದು ಶಿವನ ದರ್ಶನವನ್ನು ಮತ್ತು ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ. ನಿಮಗೆ ಸರ್ವೋಭಿ ಮುಖವಾಗಿ ಅಭಿವೃದ್ಧಿಯಾಗುತ್ತದೆ ಭಗವಂತನು ನಿಮಗೆಲ್ಲರಿಗೂ ಇನ್ನೂ ಹೆಚ್ಚು ಹೆಚ್ಚು ಯೋಗವನ್ನು ಕೊಟ್ಟು ಹೆಚ್ಚು ಹೆಚ್ಚು ಫಲಪ್ರದಮಾಡಿ ನಿಮ್ಮನ್ನು ಕಷ್ಟಗಳಿಂದ ಕಾಪಾಡಲಿ ಎಂದು ನಾವು ದೇವರಲ್ಲಿ ಕೇಳಿಕೊಳ್ಳುತ್ತೇವೆ. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: