ಪ್ರಪಂಚದಲ್ಲಿ ಅತಿ ಹೆಚ್ಚು ಇಂಟರ್ನೆಟ್ ಬಳಸುವ ದೇಶ ಯಾವುದು?

0

ವೇಗವಾಗಿ ಬದಲಾಗುತ್ತಿರುವ ಆಧುನಿಕ ದಿನದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದುವುದು ಅವಶ್ಯಕವಾಗಿದೆ ನಾವಿಂದು ನಿಮಗೆ ಕಂಪ್ಯೂಟರ್ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಕಂಪ್ಯೂಟರ್ ನಲ್ಲಿ ಕಾಪಿ ಮಾಡುವುದಕ್ಕೆ ಕೀಬೋರ್ಡ್ನಲ್ಲಿ ಬಳಸುವ ಶಾರ್ಟ್ ಕಟ್ ಕಿ ಯಾವುದು ಎಂದರೆ ಕಂಟ್ರೋಲ್ ಪ್ಲಸ್ ಸಿ. ಎರಡನೆಯದಾಗಿ ಯಾವುದನ್ನು ಕಂಪ್ಯೂಟರ್ನ ಮೆದುಳು ಎಂದು ಕರೆಯುತ್ತಾರೆ ಎಂದರೆ ಸಿಪಿಯು ವನ್ನು ಕಂಪ್ಯೂಟರ್ನ ಮೆದುಳು ಎಂದು ಕರೆಯುತ್ತಾರೆ.

ಮೂರನೆಯದಾಗಿ ರೋಮ್ ನ ವಿಸ್ತೃತ ರೂಪ ಯಾವುದು ಎಂದರೆ ರೀಡ್ ಓನ್ಲಿ ಮೇಮೋರಿ. ನಾಲ್ಕನೆಯದಾಗಿ ವೈರಸ್ಸನ್ನು ಮೊದಲ ಬಾರಿಗೆ ಕಂಡು ಹಿಡಿದ ದೇಶ ಯಾವುದು ಎಂದರೆ ಪಾಕಿಸ್ತಾನ. ಪಾಕಿಸ್ತಾನವು ಸಾವಿರದ ಒಂಬೈನೂರಾ ಎಂಬತ್ತಾರಲ್ಲಿ ಮೊದಲ ಬಾರಿಗೆ ವೈರಸ್ಸನ್ನು ಕಂಡುಹಿಡಿಯುತ್ತದೆ. ಐದನೆಯದಾಗಿ ಎಂಬಿ ಯ ವಿಸ್ತೃತ ರೂಪ ಯಾವುದು ಎಂದರೆ ಮೆಗಾಬೈಟ್ಸ್ ಎಂದು. ಆರನೆಯದಾಗಿ ಅತ್ಯಂತ ವೇಗದಾಯಕ ಮತ್ತು ಅತ್ಯಂತ ವೆಚ್ಚದಾಯಕ ಗಣಕಯಂತ್ರ ಯಾವುದು ಎಂದರೆ ಸೂಪರ್ ಕಂಪ್ಯೂಟರ್ ಆಗಿದೆ. ಏಳನೆಯದಾಗಿ ಇಂಟರ್ನೆಟ್ ಕಂಡುಹಿಡಿದವರು ಯಾರು ಎಂದರೆ ಟೀಮ್ ಬರ್ನೆಸ ಲೀ ಅವರು.

ಎಂಟನೆಯದಾಗಿ ಹತ್ತೊಂಬತ್ತು ನೂರ ತೊಂಬತ್ತರಲ್ಲಿ ಮೊದಲನೆಯದಾಗಿ ಆವಿಷ್ಕರಿಸಿದ ವೆಬ್ ಬ್ರೌಸರ್ ಯಾವುದು ಎಂದರೆ ನೆಕ್ಸಸ್. ಒಂಬತ್ತನೇಯದಾಗಿ ಭಾರತದ ಅತಿ ದೊಡ್ಡ ಕಂಪ್ಯೂಟರ್ ತರಬೇತಿ ಸಂಸ್ಥೆ ಯಾವುದು ಎಂದರೆ ಅದು ಎನ್ ಐ ಐ ಟಿ. ಆಗಿದೆ. ಹತ್ತನೇಯದಾಗಿ www. ನ ವಿಸ್ತೃತ ರೂಪ ವರ್ಲ್ಡ್ ವೈಡ್ ವೆಬ್ ಎಂಬುದಾಗಿದೆ. ಹನ್ನೊಂದನೇಯದಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಯಾವ ಜನರೇಶನ್ ಕಂಪ್ಯೂಟರ್ ಗಳಿಗೆ ಸಂಬಂಧಿಸಿದ ಎಂದರೆ ಮೂರನೇ ಜನರೇಷನ್ ಕಂಪ್ಯೂಟರ್ ಗೆ ಸಂಬಂಧಿಸಿದೆ.

ಹನ್ನೆರಡನೇಯದಾಗಿ ಸಿ ಪಿ ಯು ವಿಸ್ತೃತ ರೂಪ ಏನು ಎಂದರೆ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ ಆಗಿದೆ. ಮೂರನೆಯದಾಗಿ 1kb ಯು ಒಂದು ಸಾವಿರದ ಇಪ್ಪತ್ನಾಲ್ಕು ಬೈಟ್ ಗೆ ಸಮವಾಗಿರುತ್ತದೆ. ಹದಿನಾಲ್ಕನೇಯದಾಗಿ ಪ್ರಪಂಚದಲ್ಲಿ ಅತಿ ಹೆಚ್ಚು ಇಂಟರ್ನೆಟ್ ಬಳಸುವ ದೇಶ ಯಾವುದು ಎಂದರೆ ಅದು ಚೀನಾ ದೇಶ. ಹದಿನೈದನೇಯದಾಗಿ ಕೀಬೋರ್ಡ್ನಲ್ಲಿ ಎಷ್ಟು ಕೀಲಿಗಳಿವೆ ಎಂದರೆ ನೂರಾ ನಾಲ್ಕು ಕೀಲಿಗಳಿವೆ. ಇದಿಷ್ಟು ನಾವು ನಿಮಗೆ ತಿಳಿಸುತ್ತಿರುವ ಕಂಪ್ಯೂಟರ್ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗು ತಿಳಿಸಿರಿ.

Leave A Reply

Your email address will not be published.

error: Content is protected !!