ಪುಟ್ಟ ಹಳ್ಳಿಯಿಂದ ಬಂದು ತನ್ನದೆ ಆದ ರೀತಿಯಲ್ಲಿ ಹಾಸ್ಯ ಮಾಡಿ ನಕ್ಕು ನಗಿಸಿದ ಮಜಾಭಾರತದ ಮಂಜು ಅವರು ಮಜಾಭಾರತದ ಮೂಲಕ ಫೇಮಸ್ ಆಗಿದ್ದಾರೆ. ಅವರು ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿ ಕೂಡ ಆಗಿದ್ದರು. ಮಂಜು ಅವರು ನಾಟಕಕ್ಕೆ ಪಾದಾರ್ಪಣೆ ಮಾಡಿದ ಸನ್ನಿವೇಶ, ಅವರ ಜೀವನದ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮಜಾಭಾರತದಿಂದ ಫೇಮಸ್ ಆಗಿರುವ ಮಂಜು ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಒಂದು ಹಳ್ಳಿಯವರು. ಸೆಕೆಂಡ್ ಪಿಯುಸಿವರೆಗೆ ಅವರು ಓದಿದ್ದಾರೆ. 2007ರಲ್ಲಿ ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡಿದರು ನಂತರ ಪೆಟ್ರೋಲ್ ಬಂಕ್ ಗೆ ಸೇರಿಕೊಂಡರು. ಅವರು ಸಿನಿಮಾ ನೋಡುವ ಹುಚ್ಚಿನಿಂದ ವಾರದಲ್ಲಿ ಏಳೆಂಟು ಸಿನಿಮಾ ನೋಡುತ್ತಿದ್ದರು. ಪೆಟ್ರೋಲ್ ಬಂಕ್ ಗೆ ಕೆಲವು ಸ್ಟಾರ್ ನಟರು ಬರುತ್ತಿದ್ದರು ಅವರೊಂದಿಗೆ ಮಂಜು ಅವರು ಮಾತನಾಡುತ್ತಿದ್ದರು. ಜೈರಾಮ್ ಕಾರ್ತಿಕ್ ಅವರು ಪರಿಚಯವಾಗಿ ಅವರಿಂದ ಜರ್ಸಿ ಶರ್ಟ್ ಅನ್ನು ಪಡೆದುಕೊಂಡು ಒಂದು ವಾರ ಮಂಜು ಅವರು ಹಾಕಿಕೊಂಡಿದ್ದರು. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವಾಗ ಸಿರಿಗಂಧ ಮ್ಯಾಗ್ಜಿನ್ ನಲ್ಲಿ ಬಣ್ಣ ಅಭಿನಯ ಶಾಲೆ ನಾಗರಾಜ್ ಕೋಟೆ ಅವರ ಬಗ್ಗೆ ಓದಿದರು ಆಗ ಮಂಜು ಅವರಿಗೆ ನಾನು ಆಕ್ಟಿಂಗ್ ಮಾಡಬೇಕು ಎಂಬ ಆಸೆ ಪ್ರಾರಂಭವಾಯಿತು. ನಟನೆಯ ಬಗ್ಗೆ ಕಲಿಯಲು ವೀಕೆಂಡ್ ನಲ್ಲಿ ಕ್ಲಾಸ್ ಗೆ ಹೋಗುತ್ತಿದ್ದರು. ಅಲ್ಲಿ ಮಂಜು ಅವರು ಒಂದು ನಾಟಕ ಮಾಡುತ್ತಾರೆ, ಆ ನಾಟಕ ಅವರ ಜೀವನದ ದಿಕ್ಕನ್ನೇ ಬದಲಿಸುತ್ತದೆ.
ನಂತರ ಅವರು ರಂಗ ಭಂಡಾರ ಉತ್ಸವದಂದು 21ದಿನಗಳ 21 ನಾಟಕಗಳಲ್ಲಿ ಮಂಜು ಅವರ ತಂಡವು ನಾಟಕ ಮಾಡುತ್ತದೆ ಅಲ್ಲದೆ ಉಳಿದ ನಾಟಕಗಳನ್ನು ಅವರು ನೋಡುತ್ತಾರೆ. ಒಂದೊಂದು ನಾಟಕದಲ್ಲಿ ಅದ್ಭುತವಾದ ಕಲಾವಿದರು ನಟಿಸಿರುವುದು ನೋಡಿದ ಮಂಜು ಅವರಿಗೆ ನಾನು ಈ ಹಂತದವರೆಗೆ ನಾಟಕ ಮಾಡಬೇಕಾದರೆ ಬಹಳಷ್ಟು ತಿಳಿದುಕೊಳ್ಳಬೇಕು, ಕಲಿಬೇಕು ಎಂದು ಅನಿಸಿತು. ನಂತರ ಅವರು ಬೀದಿನಾಟಕ, ಅನೇಕ ರಂಗಮಂದಿರಗಳಲ್ಲಿ ನಾಟಕಗಳನ್ನು ಮಾಡಿ ನಾಟಕದ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳನ್ನು ಕಲಿಯುತ್ತಿದ್ದರು. ಪ್ರಶಾಂತ್ ಸಿದ್ದಿ ಅವರ ಪರಿಚಯವಾಯಿತು ಅವರು ಮಂಜು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದರು. ಹೊಸ್ತಿಲು ಮುಂತಾದ ನಾಟಕಗಳಲ್ಲಿ ಅಭಿನಯಿಸುತ್ತಾರೆ ಹೀಗಿರುವಾಗ ಅವರಿಗೆ ನೀನಾಸಂ ಬಗ್ಗೆ ಆಸಕ್ತಿ ಮೂಡುತ್ತದೆ. ಊಟಕ್ಕೂ ಕಷ್ಟದ ಪರಿಸ್ಥಿತಿ ಇತ್ತು, ಜೊತೆಗಿರುವ ಸ್ನೇಹಿತರು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ ಅಂತಹ ಸಮಯದಲ್ಲಿ ಮಂಜು ಹಾಗೂ ಅವರ ಒಬ್ಬ ಸ್ನೇಹಿತ ನೀನಾಸಂಗೆ ಅಪ್ಲಿಕೇಷನ್ ಹಾಕಿ ಅಲ್ಲಿ ಸೀಟ್ ಸಿಗುತ್ತದೆ. ಅಲ್ಲಿ ಊಟ ಸಿಗುತ್ತದೆ ಎಂಬ ಕಾರಣಕ್ಕಾಗಿ ನೀನಾಸಂಗೆ ಹೋಗುತ್ತಾರೆ ಹಾಗೆ ಊಟಕ್ಕೆ ಮೋಸ ಮಾಡಬಾರದು ಚೆನ್ನಾಗಿ ಕಲಿಯೋಣ ಎಂದು ನಿರ್ಧಾರ ಮಾಡುತ್ತಾರೆ.
ಅಲ್ಲಿ ಬಹುಮುಖಿ ಎಂಬ ನಾಟಕದಲ್ಲಿ ಅಭಿನಯಿಸುತ್ತಾರೆ ನಾಟಕ ಚೆನ್ನಾಗಿ ಮೂಡಿ ಬರುತ್ತದೆ, ಹಲವರು ಸ್ನೇಹಿತರಾಗುತ್ತಾರೆ. 30 ದಿನ ಕಲಿತ ನಂತರ ಒಂದು ವರ್ಷ ಕಲಿತರೆ ಇನ್ನು ಚೆನ್ನಾಗಿ ನಾಟಕ ಮಾಡಬಹುದು ಎಂದು ಮತ್ತೆ ಅಪ್ಲಿಕೇಷನ್ ಹಾಕಲಾಯಿತು ಆದರೆ ಸೆಲೆಕ್ಟ್ ಆಗಲಿಲ್ಲ ಇದರಿಂದ ಮಂಜು ಅವರು ಬಹಳ ಬೇಸರವಾದರು. ನಂತರ ಪ್ರಶಾಂತ್ ಸಿದ್ದಿ ಅವರು ಮಂಜು ಅವರನ್ನು ಕರೆಸಿ ಬಂದು ನಾಟಕದಲ್ಲಿ ಅಭಿನಯಿಸಲು ಕೇಳುತ್ತಾರೆ. ನಾಟಕ ಅದ್ಭುತವಾಗಿ ಮೂಡಿ ಬರುತ್ತದೆ ಆಗ ಮಂಜು ಅವರು ಶಾಸ್ತ್ರಬದ್ಧವಾಗಿ ಕಲಿತರೆ ಮಾತ್ರ ನಟನಾಗಲು ಸಾಧ್ಯವಿಲ್ಲ ಆಸಕ್ತಿ ಇದ್ದರೆ ನಟನಾಗಬಹುದು ಎಂದು ನಿರ್ಧರಿಸಿದರು. ನಂತರ ಕೆಲವು ನಾಟಕಗಳಲ್ಲಿ ಅಭಿನಯಿಸುತ್ತಾರೆ ಅಲ್ಲಮನ ಬಯಲಾಟ ಎಂಬ ನಾಟಕದಲ್ಲಿ ಅವರು ಅಭಿನಯಿಸುತ್ತಾರೆ. ನಂತರ ಊರಿಗೆ ಹೋದಾಗ ಕ್ರಿಕೆಟ್ ಟೂರ್ನಮೆಂಟ್ ಇರುತ್ತದೆ ಆಕಸ್ಮಿಕವಾಗಿ ಬಾಲ್ ತಾಗಿ ಕಾಲು ಫ್ರಾಕ್ಚರ್ ಆಗುತ್ತದೆ. ಆಪರೇಷನ್ ಮಾಡುತ್ತಾರೆ ಒಂದು ವಾರ ಆಸ್ಪತ್ರೆಯಲ್ಲಿದ್ದರು. ಒಂದು ವೇಳೆ ನಡೆಯಲು ಬರದಿದ್ದರೆ ನನ್ನ ಕನಸು ಎಂದು ಮಂಜು ಅವರಿಗೆ ಚಿಂತೆ ಕಾಡುತ್ತದೆ. ಕೆಲವು ತಿಂಗಳುಗಳ ನಂತರ ಬೆಂಗಳೂರಿಗೆ ಬರುತ್ತಾರೆ.
ಕಾಮಿಡಿ ಕಿಲಾಡಿಗಳು ಸೀಸನ್ 1ರ ಆಡಿಷನ್ ಗೆ ದಾವಣಗೆರೆಗೆ ಹೋದರು ಅದರಲ್ಲಿ ಸೆಲೆಕ್ಟ್ ಆಗಲಿಲ್ಲ. ನಂತರ ಮಜಾಭಾರತ ಆಡಿಷನ್ ಗೆ ಮಂಜು ಅವರು ಹೋಗುತ್ತಾರೆ ಅಲ್ಲಿಯೂ ಸೆಲೆಕ್ಟ್ ಆಗಲಿಲ್ಲ. ಸಣ್ಣಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು ನಂತರ ಮತ್ತೆ ಮಜಾಭಾರತದ ಆಡಿಷನ್ ನಡೆಯುತ್ತದೆ. ಅಲ್ಲಿ ಮಂಜು ಅವರು ಸ್ಕ್ರಿಪ್ಟ್ ಬರೆದು ಆಕ್ಟ್ ಮಾಡಿದರು ಅಲ್ಲಿ ಸೆಲೆಕ್ಟ್ ಆದರು. ಮೊದಲು ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದರು ನಂತರ ಒಮ್ಮೆ ಪಾತ್ರ ಮಾಡುವವನು ಬರದ ಕಾರಣ ಮಂಜು ಅವರು ಆ ಪಾತ್ರ ಮಾಡುತ್ತಾರೆ. ಆ ಸ್ಕ್ರಿಪ್ಟ್ ಅದ್ಭುತವಾಗಿ ಮೂಡಿ ಬರುತ್ತದೆ. ರಚಿತಾ ರಾಮ್ ಮತ್ತು ಗುರು ಸರ್ ಅವರು ಬಹಳ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಮಜಾಭಾರತ ತಂಡದಲ್ಲಿ ನಾನು ಒಬ್ಬ ಸದಸ್ಯನಾಗಿರುವುದು ನನಗೆ ಹೆಮ್ಮೆ ಅನಿಸುತ್ತದೆ ಎಂದು ಮಂಜು ಅವರು ಹೇಳಿದರು. ಕಲಾವಿದನು ಎಲ್ಲಾ ರೀತಿಯ ಜೀವನ ನೋಡುತ್ತಾನೆ ಇಂತಹ ಅವಕಾಶ ಕಲಾವಿದನಿಗೆ ಮಾತ್ರ ಸಿಗುತ್ತದೆ ಎನ್ನುವುದು ಮಂಜು ಅವರ ಅಭಿಪ್ರಾಯ. ಮಂಜು ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿ, ಹೆಚ್ಚು ಹೆಚ್ಚು ನಮ್ಮನ್ನು ನಕ್ಕುನಗಿಸಲಿ ಎಂದು ಆಶಿಸೋಣ.