ಪುನೀತ್ ಸಂಪೂರ್ಣವಾಗಿ ಬದಲಾಗಿದ್ದು ಹೇಗೆ? ಪತ್ರಕರ್ತ ಬಿಚ್ಚಿಟ್ಟ ಸತ್ಯವೇನು ನೋಡಿ

0

ಪುನೀತ್ ರಾಜಕುಮಾರ್ ಅವರು ವಿಧಿವಶರಾಗಿ ಸಾಕಷ್ಟು ದಿನಗಳಾದರೂ ಕೂಡ ನಾವಿನ್ನು ಅವರ ಸಾವಿನ ನೋವಿನಿಂದ ಹೊರಬಂದಿಲ್ಲ. ಅವರ ನೆನಪು ಎಲ್ಲರನ್ನು ಪದೇಪದೇ ಕಾಡುತ್ತಿರುತ್ತದೆ ಅವರ ಸಿನಿಮಾಗಳನ್ನು ನೋಡಿದಾಗ ಅವರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದನ್ನು ನೋಡಿದಾಗ ಬೇರೆ ಬೇರೆ ರೀತಿಯ ಒಂದಷ್ಟು ಸಂದರ್ಭಗಳನ್ನು ನೋಡಿದಾಗ ನಮ್ಮೆಲ್ಲರ ಮನಸ್ಸಿಗೂ ನೋವಾಗುತ್ತದೆ. ಹೀಗಾಗಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಜನರು ಈಗಲೂ ಕೂಡ ಮಾತನಾಡುತ್ತಿದ್ದಾರೆ ಈಗಲೂ ಕೂಡ ಅವರ ಚರ್ಚೆ ಮಾಡುತ್ತಿದ್ದಾರೆ ಗುಣಗಳನ್ನು ಹೋಗಳುವಂತಹ ಕೆಲಸ ಮಾಡುತ್ತಿದ್ದಾರೆ ನಾವಿಂದು ನಿಮಗೆ ಪುನೀತ್ ರಾಜಕುಮಾರ್ ಅವರ ಬದುಕಿನ ಒಂದಷ್ಟು ಘಟ್ಟಗಳ ಬಗ್ಗೆ ವಿಷಯವನ್ನು ತಿಳಿಸಿಕೊಡುತ್ತೇವೆ.

ಶಶಿಧರ್ ಭಟ್ ಎನ್ನುವವರು ಹಿರಿಯ ಸಿನಿಮಾ ಪತ್ರಕರ್ತರು ಹೌದು ಜೊತೆಗೆ ಸಾಕಷ್ಟು ವಾಹಿನಿಯಲ್ಲಿ ಎಡಿಟರ್ ಆಗಿ ಕೆಲಸವನ್ನು ಮಾಡಿದವರು ಜೊತೆಗೆ ಒಂದಿಷ್ಟು ವಾಹಿನಿಯಲ್ಲಿ ಸಂಪಾದಕರಾಗಿ ಕೆಲಸ ಮಾಡಿದವರು ಎಲ್ಲದಕ್ಕೂ ಮಿಗಿಲಾಗಿ ರಾಜಕುಮಾರ್ ಅವರ ಕುಟುಂಬದೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವವರು ಜೊತೆಗೆ ಪುನೀತ್ ರಾಜಕುಮಾರ್ ಅವರನ್ನು ಕೂಡ ಸಾಕಷ್ಟು ಸಂದರ್ಭದಲ್ಲಿ ಸಂದರ್ಶನವನ್ನು ಮಾಡಿರುವವರು.

ಅವರು ಪುನೀತ್ ರಾಜಕುಮಾರ್ ಅವರ ಕುರಿತಾಗಿ ಒಂದಷ್ಟು ದೀರ್ಘ ವಾದಂತಹ ಬರಹವನ್ನು ಬರೆದಿದ್ದಾರೆ ಅದನ್ನು ನೋಡಿದರೆ ನಮಗೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಇನ್ನಷ್ಟು ವಿಷಯಗಳು ತಿಳಿಯುತ್ತವೆ ಆ ಬರಹವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಇದು ಶಶಿಧರ್ ಭಟ್ ಅವರು ಬರೆದಂತಹ ಬರಹ – ಅದು ಮಧ್ಯಾಹ್ನದ ಹೊತ್ತು ನಾನು ಡಾಕ್ಟರ್ ರಾಜಕುಮಾರ್ ಅವರ ಚಿತ್ರವನ್ನು ಚಿತ್ರೀಕರಣವನ್ನು ನೋಡಿ ವರದಿ ಮಾಡುವುದಕ್ಕೆ ಚಾಮುಂಡೇಶ್ವರಿ ಸ್ಟುಡಿಯೋಕ್ಕೆ ಹೋಗಿದ್ದೆ.

ಚಿತ್ರೀಕರಣವನ್ನು ನೋಡುವುದಕ್ಕೆ ವ್ಯವಸ್ಥೆಮಾಡಿದವರು ಸಾರಾ ಗೋವಿಂದ್ ಮತ್ತು ಟಿ ವೆಂಕಟೇಶ್ ಅವರು. ಚಿತ್ರೀಕರಣವನ್ನು ನೋಡಿ ರಾಜಕುಮಾರ್ ಅವರ ಸಂದರ್ಶನ ಮಾಡಿ ಅಲ್ಲಿಂದ ಹೊರಡಬೇಕು ಆಗ ಪಾರ್ವತಮ್ಮ ರಾಜಕುಮಾರ್ ಅವರು ಊಟ ಮಾಡಿ ಹೊರಡಿ ಎಂದು ಹೇಳಿದರು. ಅದು ಡಾಕ್ಟರ್ ರಾಜಕುಮಾರ್ ಅವರ ಸಂಸ್ಥೆಯ ಸಂಪ್ರದಾಯ. ಮಧ್ಯಾಹ್ನದ ಹೊತ್ತಿಗೆ ಹೋದರೆ ಊಟ ಮಾಡಿಸದೆ ಯಾರನ್ನು ಕಳಿಸುತ್ತಿರಲಿಲ್ಲ. ಊಟ ಮಾಡಿ ಹೊರಡುವಾಗ ಪಾರ್ವತಮ್ಮ ರಾಜಕುಮಾರ್ ಅವರು ಹೇಳುತ್ತಾರೆ ನೀವು ಹೋಗುವಾಗ ಇವನನ್ನು ರಾಜಾಜಿನಗರದಲ್ಲಿ ವರದಪ್ಪ ಅವರ ಮನೆಯಲ್ಲಿ ಬಿಟ್ಟು ಹೋಗಿ ಎಂದು ಹೇಳಿದರು. ನಾನು ಅವರದೇ ಕಾರಿನಲ್ಲಿ ಹತ್ತುವರ್ಷದ ಪುನೀತ್ ರಾಜಕುಮಾರ್ ಅವರನ್ನು ಕರೆದುಕೊಂಡು ಹೊರಡುತ್ತೇನೆ ಪುನೀತ್ ಅವರ ಕೈಯಲ್ಲಿ ವೀಲ್ ಚೇಸ್ ಇತ್ತು ಅದನ್ನು ತೆಗೆದುಕೊಂಡು ವರದಪ್ಪ ಎಂದರೆ ಅವರ ಚಿಕ್ಕಪ್ಪ ಅವರ ಮನೆಗೆ ಹೊರಟಿದ್ದರು. ನಾನು ಪುನೀತ್ ರಾಜಕುಮಾರ್ ಎಂಬ ಅದ್ಭುತನನ್ನ ನೋಡಿದ್ದು ಮಾತನಾಡಿದ್ದು ಅದು ಮೊದಲ ಬಾರಿಗೆ.

ಸಾವಿರದ ಒಂಬೈನೂರಾ ಎಂಬತ್ತೈದನೇ ಇಸವಿ ನಾನು ಆಗ ಸಿನಿಮಾ ವರದಿಗಾರನಾಗಿ ಕೆಲಸವನ್ನು ಮಾಡುತ್ತಿದೆ. ಚಾಮುಂಡೇಶ್ವರಿ ಸ್ಟುಡಿಯೋದಿಂದ ವರದಪ್ಪ ಅವರ ಮನೆಗೆ ಹೋಗುವವರೆಗೆ ಈ ಪೋರ ಇಂಗ್ಲಿಷ್ ಸಿನಿಮಾದ ಕುರಿತು ಮಾತನಾಡಿದ್ದ ನನಗೆ ಆಶ್ಚರ್ಯ ಆಗಲೆ ನನಗೆ ಈ ಪ್ರತಿಭಾವಂತನ ನಟನ ಪರಿಚಯವಾಗಿದ್ದು. ಪುನೀತ್ ರಾಜಕುಮಾರ್ ಅವರ ನಟನೆಯ ಬೆಟ್ಟದ ಹೂವು ಇವತ್ತಿಗೂ ನನಗೆ ಪ್ರಿಯವಾದಂತಹ ಸಿನಿಮಾ. ಆ ಸಿನಿಮಾದಲ್ಲಿ ಪುನೀತ್ ತಾನೆಂತಹ ನಟ ಎಂಬುದನ್ನು ತೋರಿಸಿಬಿಟ್ಟಿದ್ದ. ಹಳ್ಳಿ ಹುಡುಗನ ಮುಗ್ಧತೆಯನ್ನು ಅನಾವರಣ ಮಾಡುವುದರಲ್ಲಿ ಪುನೀತ್ ಈ ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದ. ಡಾಕ್ಟರ್ ರಾಜಕುಮಾರ ಹಾಗೂ ಪಾರ್ವತಮ್ಮ ಅವರಿಗೆ ಪುನೀತ್ ಎಂದರೆ ಅಚ್ಚುಮೆಚ್ಚು ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಡಾಕ್ಟರ್ ರಾಜ್ ಪುನೀತ್ ಅವರಿಗೆ ಆಗಾಗ ಕರೆಯುತ್ತಿದ್ದರು ಪುನೀತ್ ಅವರು ಸಿನಿಮಾದ ವಾತಾವರಣದಲ್ಲಿ ಬೆಳೆಯುತ್ತಾರೆ.

ಪುನೀತ್ ಅವರ ಬದುಕನ್ನ ನಾವು ಮೂರು ಹಂತದಲ್ಲಿ ಗುರುತಿಸಬಹುದು. ಬಾಲ್ಯ ಮೊದಲ ಹಂತ ಬಾಲ್ಯದಲ್ಲಿಯೇ ತಾನು ಅಭಿಜಾತ ಕಲಾವಿದ ಎಂದು ತೋರಿಸಿದವರು. ಡಾಕ್ಟರ್ ರಾಜಕುಮಾರ್ ಅವರು ಕೂಡ ಪುನೀತ ದೊಡ್ಡ ಕಲಾವಿದನಾಗುತ್ತಾನೆ ಎಂದು ಕನಸನ್ನು ಕಂಡಿದ್ದರು. ಮೊದಲ ಹಂತದ ನಂತರ ಪುನೀತ್ ಅವರು ಸಿನಿಮಾದ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ತಾನು ದೊಡ್ಡ ಉದ್ಯಮಿ ಆಗಬೇಕು ಎನ್ನುವ ಆಸೆ ಪುನೀತ್ ರಾಜಕುಮಾರ್ ಅವರಿಗೆ ಇತ್ತು ಹೀಗಾಗಿ ಬೇರೆ ಬೇರೆ ವ್ಯಾಪಾರಗಳ ವ್ಯವಹಾರಗಳ ಬಗ್ಗೆ ಲಕ್ಷ ವಹಿಸಿದ ಪುನೀತ್ ಅವರ ಬಗ್ಗೆ ರಾಜಕುಮಾರ್ ಅವರಾಗಲಿ ಅಥವಾ ಪಾರ್ವತಮ್ಮ ರಾಜಕುಮಾರ್ ಅವರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಅವರಿಬ್ಬರಿಗೂ ಸ್ವಲ್ಪ ಆತಂಕ ಉಂಟಾಗಿತ್ತು ಜೊತೆಗೆ ಯಾವುದೇ ಆರ್ಥಿಕ ವಹಿವಾಟು ಅವರ ಕೈಹಿಡಿಯಲಿಲ್ಲ ಕಡೆಗೆ ಮತ್ತೆ ಪುನೀತ್ ಅವರು ಸಿನಿಮಾರಂಗದ ಕಡೆ ತಿರುಗಿ ನೋಡುತ್ತಾರೆ ತಮ್ಮ ವರ್ತಮಾನ ಭವಿಷ್ಯ ಎಲ್ಲವೂ ಸಿನಿಮಾ ಎಂಬುದು ಅವರಿಗೆ ಅರಿವಾಗಿತ್ತು. ಜೊತೆಗೆ ತಂದೆ-ತಾಯಿಗಳು ಕೂಡಾ ಪುನೀತ್ ಸಿನಿಮಾರಂಗದಲ್ಲಿ ಮುಂದುವರೆಯಲಿ ಎಂದು ಆಸೆಪಟ್ಟರು.

ಪುನೀತ್ ಅವರು ಪೂರ್ಣ ಪ್ರಮಾಣದ ನಟನಾಗಿ ಸಿನಿಮಾರಂಗಕ್ಕೆ ಪ್ರವೇಶವನ್ನು ಮಾಡುತ್ತಾರೆ ಅದು ಅವರ ಬದುಕನ್ನ ಬದಲಿಸಿತು ಇದು ಪುನೀತ್ ರಾಜಕುಮಾರ್ ಅವರ ಬದುಕಿನ ಮೂರನೆಯ ಘಟ್ಟ. ಈ ಸಮಯಕ್ಕೆ ಪುನೀತ್ ರಾಜಕುಮಾರ್ ಅವರು ಸಂಪೂರ್ಣವಾಗಿ ಬದಲಾಗಿದ್ದರು ರಾಜಕುಮಾರ್ ಅವರ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡಿದ್ದರು ಡಾಕ್ಟರ್ ರಾಜಕುಮಾರ್ ಅವರ ವ್ಯಕ್ತಿತ್ವದ ಭಾಗವಾಗಿದ್ದ ಸೌಜನ್ಯ ಗುರು-ಹಿರಿಯರ ಬಗ್ಗೆ ಇರುವಂತಹ ಗೌರವ ಸದಾ ಮುಖದ ಮೇಲೆ ಮುಗುಳ್ನಗು ಎಲ್ಲವನ್ನು ಪುನೀತ್ ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿದ್ದರು ಹೀಗಾಗಿ ಪುನೀತ್ ಬಹಳಷ್ಟು ಸಂದರ್ಭಗಳಲ್ಲಿ ರಾಜಕುಮಾರ್ ಅವರ ನೆನಪಾಗುವಂತೆ ಮಾಡುತ್ತಿದ್ದರು. ನಾನು ಪುನೀತ್ ಅವರನ್ನು ಟಿವಿಗಾಗಿ ಸಂದರ್ಶನ ಮಾಡುವ ಸಮಯದಲ್ಲಿ ಇದೇ ಪ್ರಶ್ನೆಯನ್ನು ಕೇಳಿದ್ದೆ ಡಾಕ್ಟರ್ ರಾಜಕುಮಾರ್ ಅವರ ವ್ಯಕ್ತಿತ್ವ ನಿಮ್ಮ ಮೇಲೆ ಯಾವ ರೀತಿಯಾಗಿ ಪರಿಣಾಮವನ್ನು ಬೀರಿದೆ ಎಂದು. ನಾನು ಪುನೀತ್ ರಾಜಕುಮಾರ್ ಅವರ ಕಣ್ಣಿನಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ನೋಡಲು ಯತ್ನ ಮಾಡಿದ್ದೆ.

ಯಾಕೆಂದರೆ ಡಾಕ್ಟರ್ ರಾಜಕುಮಾರ್ ಅವರಂತವರ ಮಗನಾಗುವುದು ಸುಲಭವಲ್ಲ ಪ್ರತಿ ಹಂತದಲ್ಲಿಯೂ ಡಾಕ್ಟರ್ ರಾಜ್ ಅವರೊಂದಿಗೆ ಪುನೀತ್ ಅವರನ್ನು ಹೋಲಿಕೆ ಮಾಡುವುದು ಕೆಲವೊಮ್ಮೆ ತೀವ್ರ ಸ್ವರೂಪದ ಸಮಸ್ಯೆಯನ್ನು ತಂದಿಡುತ್ತಿತ್ತು. ಡಾಕ್ಟರ್ ರಾಜೇಂದ್ರ ಪ್ರಭಾವಳಿಯಿಂದ ಹೊರಗೆ ಬಂದು ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಪುನೀತ್ ಅವರ ಮುಂದಿನ ಸವಾಲಾಗಿತ್ತು.

ಈ ಸವಾಲನ್ನು ಸ್ವೀಕರಿಸಿ ಅದ್ಭುತವಾಗಿ ನಿರ್ವಹಿಸಿದ್ದರು ಕೂಡ. ಪುನೀತ್ ಅವರು ಯಾವುದೇ ಹಂತದಲ್ಲಿ ತಮ್ಮ ತಂದೆಯನ್ನು ಅನುಕರಣೆ ಮಾಡಲಿಲ್ಲ ತಂದೆಗಿಂತ ಭಿನ್ನವಾದ ನಟನ ಶೈಲಿಯನ್ನು ಅವರು ರೂಢಿಸಿಕೊಂಡರು ಜೊತೆಗೆ ಇವತ್ತಿನ ಪ್ರೇಕ್ಷಕರಿಗೆ ಬೇಕಾಗಿದ್ದು ಏನು ಎಂಬುದನ್ನು ಸ್ವಯಂ ಪ್ರಯತ್ನದಿಂದ ಅವರು ಕಂಡುಕೊಂಡರು. ಪುನೀತ್ ಅವರು ನಾಯಕರಾಗಿ ಸಿನಿಮಾರಂಗವನ್ನು ಪ್ರವೇಶಿಸುವಾಗ ಹಿರಿಯರ ಮಾರ್ಗದರ್ಶನ ಇತ್ತು ಎಂಬುದು ನಿಜ ಆದರೆ ಅವರು ಕ್ರಮೇಣ ಇದರ ಎಲ್ಲರಿಂದ ಹೊರಗಡೆ ಬಂದರು.

ಜೊತೆಗೆ ಇವತ್ತಿನ ಸಿನಿಮಾದ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಳ್ಳುವ ಮನಸ್ಸು ಅವರದಾಗಿತ್ತು. ಅನೇಕ ಸಿನಿಮಾಗಳ ನಿರ್ಮಾಣಕ್ಕೂ ಕೈಯನ್ನು ಹಾಕಿದ್ದರು ಇನ್ನೂ ಅನೇಕ ಸಿನಿಮಾಗಳ ನಿರ್ಮಾಣವಾಗುವುದಿತ್ತು. ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನೇಮಿಸಿಕೊಂಡಿದ್ದ ಅಂತಹ ಪುನೀತ್ ಟಿವಿಗಳಲ್ಲಿಯೂ ಕಾಣಿಸಿಕೊಂಡರು ಕನ್ನಡದ ಕೋಟ್ಯಾಧಿಪತಿ ಟಿವಿಯಲ್ಲಿನ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು.

ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಪುನೀತ್ ಅವರು ದಾನಧರ್ಮಗಳನ್ನು ಮಾಡುವುದರಲ್ಲಿಯೂ ಎತ್ತಿದ ಕೈ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಸಹಾಯ ಮಾಡುತ್ತಿದ್ದಂತ ಪುನೀತ್ ನೀವು ಯಾರಿಗೆ ಸಹಾಯವನ್ನು ಮಾಡುತ್ತಿದ್ದೀರಿ ಅದನ್ನು ಬಹಿರಂಗ ಪಡಿಸಬಾರದು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರಾಗಿದ್ದರು. ಪುನೀತ್ ಅವರು ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಬೆಲೆ ನೀಡುತ್ತಿದ್ದರು ವಾಟ್ಸಪ್ ನಲ್ಲಿ ಸಕ್ರಿಯರಾಗಿರುತ್ತಿದ್ದರು ಸಂದೇಶವನ್ನು ಕಳಿಸಿದ ಎಲ್ಲರಿಗೂ ಉತ್ತರವನ್ನು ನೀಡುತ್ತಿದ್ದರು ನಾನು ಇವರಿಗೆಲ್ಲ ಯಾಕೆ ಉತ್ತರವನ್ನು ನೀಡಬೇಕು ಎಂಬ ಅಹಂ ಇರಲಿಲ್ಲ. ಹೀಗಾಗಿ ಅವರ ಸ್ನೇಹವನ್ನು ಕಳೆದುಕೊಳ್ಳುವುದು ಸಾಧ್ಯವಿರಲಿಲ್ಲ.

ಚಿತ್ರೀಕರಣದ ಸಮಯದಲ್ಲಿ ಎಲ್ಲರೊಟ್ಟಿಗೆ ನಗುನಗುತ್ತಾ ಇದ್ದಂತಹ ಪುನೀತ್ ಅವರಿಗೆ ಸಿಟ್ಟು ಬರುತ್ತಿದ್ದದ್ದು ಕಡಿಮೆ. ತಮ್ಮ ಬದುಕಿನ ಎರಡನೇ ಹಂತದಲ್ಲಿ ಅಂದರೆ ಉದ್ಯಮವನ್ನು ಮಾಡಲು ಹೊರಟ ಸಂದರ್ಭದಲ್ಲಿ ಸಿಟ್ಟು ಮಾಡಿಕೊಂಡಂತಹ ಕೆಲವು ಉದಾಹರಣೆಗಳಿವೆ ಆದರೆ ಚಿತ್ರರಂಗದ ನಾಯಕನಟನಾದ ಮೇಲೆ ನಾಯಕನಂತೆ ಇದ್ದವರು ಪುನೀತ್.

ಹಾಗೆ ತಮ್ಮ ದಿನಚರಿಯಲ್ಲಿ ಶಿಸ್ತನ್ನು ಅಳವಡಿಸಿಕೊಂಡವರು ಬೆಳಿಗ್ಗೆ ವಾಕಿಂಗ್ ಜಿಮ್ ಯಾವುದನ್ನು ತಪ್ಪಿಸುತ್ತಿರಲಿಲ್ಲ ಡಾಕ್ಟರ್ ರಾಜಕುಮಾರ್ ಅವರಂತೆ ಶಿಸ್ತಿನ ಸಿಪಾಯಿಯಾಗಿದ್ದರು. ದೇಹವನ್ನ ಮಣಿಸುವುದು ಕುಣಿಸುವುದು ಅವರಿಗೆ ಇಷ್ಟ ಕೆಲವೊಮ್ಮೆ ಅನಿಸುತ್ತದೆ ಶಿಸ್ತಿನ ವ್ಯಕ್ತಿಗಳು ಅಶಿಸ್ತಿನಂತೆ ಇರುವುದನ್ನ ಕಲಿಯಬೇಕು. ತಮ್ಮ ದೇಹದ ಜೊತೆ ಮಾತನಾಡುವುದನ್ನು ಕಲಿಯಬೇಕು ದೇಹದ ಮಾತು ಕೇಳಿಸಿಕೊಳ್ಳಬೇಕು. ಪುನೀತ್ ಅಸು ನೀಗಿದ ಮೇಲೆ ನಾನು ಈಗ ನೀಡಿದ ಸಲಹೆಯ ಮಾದರಿಯಲ್ಲಿ ಎಲ್ಲರೂ ಸಲಹೆ ನೀಡುತ್ತಿದ್ದಾರೆ ಎಲ್ಲರೂ ವೈದ್ಯರಾಗಿಬಿಟ್ಟಿದ್ದಾರೆ ಬೇರೆಬೇರೆ ವಾಹಿನಿಯ ನಿರೂಪಕರು ಸಲಹೆ ನೀಡುವುದರಲ್ಲಿ ನಿರತರಾಗಿದ್ದಾರೆ.

ನಲವತ್ತಾರು ಸಾಯುವ ವಯಸ್ಸಲ್ಲ ಎಂದು ಹೇಳುತ್ತಾರೆ ಅದು ನಿಜ ಆದರೆ ಸಾಯುವುದಕ್ಕೆ ವಯಸ್ಸು ಎನ್ನುವುದು ಇರುವುದಿಲ್ಲ ಯಾವ ಕ್ಷಣದಲ್ಲಿ ಬೇಕಾದರೂ ಸಾವು ಬರಬಹುದು ಒಬ್ಬ ವ್ಯಕ್ತಿ ಅಸು ನೀಗಿದಾಗ ನಾವೆಲ್ಲ ಅವನು ಬದುಕಿನ ಸಮಯವನ್ನು ನೆನಪು ಮಾಡಿಕೊಳ್ಳುತ್ತಾ ಆ ವ್ಯಕ್ತಿ ಹೇಗೆ ಬದುಕಿದ್ದ ಎಂಬುದನ್ನು ಮೆಲುಕು ಹಾಕುತ್ತೇವೆ. ಈಗಲೂ ಪುನೀತ್ ರಾಜಕುಮಾರ್ ಅವರ ನೆನಪು ಮಾಡಿಕೊಳ್ಳುತ್ತಿದ್ದೇವೆ. ಡಾಕ್ಟರ್ ರಾಜಕುಮಾರ್ ಅವರು ನಿಧನರಾದಾಗಲು ನೆನಪು ಮಾಡಿಕೊಂಡಿದ್ದೇವೆ ಕೊನೆಯದಾಗಿ ನಾನು ಹೇಳುವುದು ಪುನೀತ್ ಇನ್ನು ಕೆಲಕಾಲ ನಮ್ಮ ನಡುವೆ ಇರಬೇಕಾಗಿತ್ತು ಎಂದು.

ಇದು ಶಶಿಧರ್ ಭಟ್ ಅವರು ಬರೆದಿರುವಂತಹ ಸುದೀರ್ಘವಾದ ಬರಹ. ಇಲ್ಲಿ ಅವರು ಒಂದಷ್ಟು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ ಇದರಿಂದ ತಿಳಿದುಬರುವುದು ಪುನೀತ್ ರಾಜಕುಮಾರ್ ಅವರು ತಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದರು ಎಂದು ಆರಂಭದ ದಿನಗಳಲ್ಲಿ ಕೋಪತಾಪ ಎಲ್ಲವೂ ಕೂಡ ಅವರಲ್ಲಿತ್ತು ಅದೆಲ್ಲವನ್ನೂ ಕೂಡ ಹಂತಹಂತವಾಗಿ ಬದಲಾಯಿಸಿಕೊಳ್ಳುತ್ತಾ ಬಂದರು. ಅವರು ವಿಧಿವಶರಾದ ಮೇಲೆ ಅವರ ಅಭಿಮಾನಿಗಳಿಗೂ ಅವರ ಮೇಲೆ ಇದ್ದಂತಹ ಅಭಿಮಾನ ದುಪ್ಪಟ್ಟಾಗಿದೆ ಅಭಿಮಾನಿಗಳಲ್ಲದಿರುವವರು ಅಭಿಮಾನಿಗಳಾಗಿದ್ದರೆ ಅದು ಪುನೀತ್ ರಾಜಕುಮಾರ್ ಅವರ ವಿಶೇಷತೆ.

Leave A Reply

Your email address will not be published.

error: Content is protected !!