ಪುನೀತ್ ಅವರನ್ನ ನಟ ದರ್ಶನ್ ಅವಮಾನಿಸಿದ್ರಾ? ಈ ವಿಡಿಯೋ ಹಿಂದಿನ ಅಸಲಿಯತ್ತೇನು ನೋಡಿ

0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ ಕ್ರಾಂತಿ ಈಗಾಗಲೇ ಎಲ್ಲಾ ಸಿದ್ಧತೆಯನ್ನು ನಡೆಸಿಕೊಂಡಿದೆ. ಹೌದು ತೆರೆಯ ಮೇಲೆ ದರ್ಶನ್ ಅವರನ್ನು ಕ್ರಾಂತಿ ಸಿನಿಮಾ ಮೂಲಕ ಮತ್ತೊಮ್ಮೆ ಅದ್ದೂರಿಯಾಗಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ದೊಡ್ಡ ಸಾಹಸಕ್ಕೆ ಕೈ ಹಾಕಿರುವುದು ನಿಮಗೆ ಗೊತ್ತು. ದರ್ಶನ್ ಅವರ ಸಿನಿಮಾ ಕ್ರಾಂತಿಯನ್ನು ಯಾವ ನ್ಯೂಸ್ ಮಾಧ್ಯಮವು ಸಹ ಪ್ರಚಾರ ಮಾಡುತ್ತಿಲ್ಲ. ಹಾಗಾಗಿ ನಿಮ್ಮ ಅವಶ್ಯಕತೆ ನಮಗೆ ಇಲ್ಲ ಎಂದು ಡಿ ಬಾಸ್ ಅಭಿಮಾನಿಗಳು ಅವರೇ ಸ್ವತಹ ಕ್ರಾಂತಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ. ದರ್ಶನ್ ಅವರು ಸಿನಿಮಾ ಮೇಲೆ ಅವರ ಪ್ರೀತಿಯ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಫಿದಾ ಆಗಿದ್ದಾರೆ ಎನ್ನಬಹುದು.

ಇತ್ತೀಚಿಗೆ ಸಂದರ್ಶನ ಒಂದರಲ್ಲಿ ನಟ ದರ್ಶನ್ ಅವರು ಅವರ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಒಂದು ವಿಡಿಯೋ ಈಗ ವೈರಲ್ ಆಗಿದೆ. ದರ್ಶನ್ ಅವರು ಹೇಳುವ ಹಾಗೆ ಪುನೀತ್ ರಾಜಕುಮಾರ್ ಅವರು ಹೋದಮೇಲೆ ನಿಜಕ್ಕೂ ಅಭಿಮಾನಿಗಳು ಯಾವ ರೀತಿ ಕಣ್ಣೀರು ಹಾಕಿ ಅಭಿಮಾನ ತೋರಿಸಿದರು ಎಂಬುದಾಗಿ ನಾವು ನೋಡಿದೆವು. ಆದರೆ ನನಗೆ ನಾನು ಬದುಕಿದ್ದಾಗಲೇ ಅಭಿಮಾನಿಗಳು ಏನು ಎಂದು ತೋರಿಸಿದ್ದಾರೆ. ನಿಜಕ್ಕೂ ನಾವು ಸಾವನಪ್ಪಿದ ಮೇಲೆ ಎಲ್ಲಿ ಇರುತ್ತೇವೆ, ನಂತರ ಏನಾಗುತ್ತೆವೆ, ಅದನ್ನು ಇಲ್ಲಿಯವರೆಗೂ ಯಾರು ಕಂಡುಹಿಡಿದಿಲ್ಲ. ಆದರೆ ಪುನೀತ್ ರಾಜಕುಮಾರ್ ಅವರು ಹೋದಾಗ ನಾವು ಅದನ್ನೆಲ್ಲ ನೋಡಿದೆವು, ಅಭಿಮಾನಿಗಳು ನನಗೆ ಅದನ್ನ ಈಗಲೆ ತೋರಿಸಿದರು ನಾನು ಸತ್ತ ಮೇಲೆ ಅದನ್ನೆಲ್ಲ ನೋಡಲು ಸಾಧ್ಯವಿಲ್ಲ ಎಂದು ಭಾವುಕಕರಾದರು. ಕ್ರಾಂತಿ ಸಿನಿಮಾ ಪ್ರಮೋಷನ್ ಗಾಗಿ ಎಲ್ಲರಿಗೆ ದುಡ್ಡು ಕೊಟ್ಟು ಮಾಡಿಸುತ್ತಿದ್ದಾರೆ ಎನ್ನಲಾಗಿ ಹೇಳುತ್ತಿದ್ದಾರೆ.

ನಮ್ಮ ಕಡೆಯಿಂದ ಆಗಲಿ, ಪ್ರೊಡ್ಯೂಸರ್ ಕಡೆಯಿಂದ ಆಗಲಿ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಅಭಿಮಾನಿಗಳು ಸ್ವತಃ ಅವರು ದುಡಿದ ದುಡ್ಡಿನಲ್ಲಿಯೇ ನಮ್ಮ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ, ನಿಜಕ್ಕೂ ಧನ್ಯವಾದಗಳು ಸಣ್ಣ ಪದ ಆಗುತ್ತದೆ, ಅವರೇ ನಮಗೆ ದೇವರು ಎಂದು ದರ್ಶನ್ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ. ಮಾತನಾಡುತ್ತಾ ನಟ ದರ್ಶನ್ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಹೀಗೆ ಪುನೀತ್ ರಾಜ್‌ಕುಮಾರ್ ಹೆಸರು ಪ್ರಸ್ತಾಪ ಮಾಡಿರುವುದು ಅಪ್ಪು ಅಭಿಮಾನಿಗಳು ಕೋಪಕ್ಕೆ ಕಾರಣವಾಗಿದೆ. ಇಲ್ಲಿ ಅಭಿಮಾನಿಗಳ ಶಕ್ತಿ ಎಂಥದ್ದು ಎನ್ನುವುದರ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

ನಟ ದರ್ಶನ್ ತಮ್ಮ ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರನ್ನು ಪ್ರಸ್ತಾಪ ಮಾಡುತ್ತಲೇ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳು, ದರ್ಶನ್ ಕೊಟ್ಟಿರುವ ಹೇಳಿಕೆಯನ್ನು ತಿರುಚಲಾಗುತ್ತಿದೆ. ಇದಕ್ಕೆ ಅಪ್ಪು ಫ್ಯಾನ್ಸ್ ಸೊಪ್ಪು ಹಾಕಬೇಡಿ, ದರ್ಶನ್ ಮಾತನಾಡಿರುವು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಶಕ್ತಿ ಬಗ್ಗೆ ಎಂದಿದ್ದಾರೆ. ಪುನೀತ್ ಅವರ ಅಭಿಮಾನಿಗಳನ್ನು ಕೆಲವು ಕಿಡಿಗೇಡಿಗಳು ಬೇಕಂತಲೇ ಎತ್ತುಕಟ್ಟಿದ್ದಾರೆ. ವಿಡೀಯೋವನ್ನು ಪೂರ್ತಿ ನೋಡದೇ, ಸಣ್ಣದೊಂದು ಬಿಟ್ ಹಾಕಿ ಹೀಗೆ ವೈರತ್ವ ಬೆಳೆಸುತ್ತಿದ್ದಾರೆ ಎನ್ನುತ್ತಿದ್ದಾರೆ.

ಸಂದರ್ಶನದ ಮುಂದುವರೆದ ಭಾಗದಲ್ಲಿ ಕ್ರಾಂತಿ ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ ದರ್ಶನ್ ಶೂಟಿಂಗ್ ತಡವಾಗಲು ಕಾರಣ ಏನು ಎಂದು ವಿವರಿಸಿದ್ದಾರೆ. ಆಕ್ಚ್ಯೂಲಿ ಕ್ರಾಂತಿ ಸಿನಿಮಾ ರಿಲೀಸ್ ಆಗಿಬಿಡಬೇಕಾಗಿತ್ತು. ಸೆಟ್ ಹಾಕಿದಾಗ ಮಳೆ ಬಂತು. ಆಮೇಲೆ ಪುನೀತ್ ಅವರದ್ದು ಹಂಗಾಯ್ತು. ಪುನೀತ್‌ ಅವರದ್ದು ಆ ಥರ ಆದಾಗ ನಾನು ಒಬ್ಬ ಕಲಾವಿದ. ಅವರ ಜೊತೆ ತುಂಬಾ ಒಡನಾಟ ಇಟ್ಟುಕೊಂಡಿದ್ವಿ. ದೊಡ್ಮನೆಯಿಂದ ನಾವೆಲ್ಲಾ ಬಂದವರು. ಹಂಗೆ ಆದ ತಕ್ಷಣ 11 ದಿನ ಮಾಡೋದು ಬೇಡ ಕಣಯ್ಯಾ. ನಮಗೂ ಸೂತಕ ಅದು ಎಂದು ನಾನೇ ಶೂಟಿಂಗ್ ನಿಲ್ಲಿಸಿಬಿಟ್ಟೆ ಎಂದಿದ್ದಾರೆ.

ಕ್ರಾಂತಿ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ, ಡಬ್ಬಿಂಗ್ ಹಂತದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಿದೆ ಚಿತ್ರತಂಡ. ಸದ್ಯದ ಮಾಹಿತಿಯಂತೆ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರ್ತಿದೆ.

Leave A Reply

Your email address will not be published.

error: Content is protected !!
Footer code: