ಪಿತ್ರಾರ್ಜಿತ ಆಸ್ತಿ ಹಾಗೂ ಸ್ವಯಾರ್ಜಿತ ಆಸ್ತಿಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ ಆದರೆ ಪಿತ್ರಾರ್ಜಿತ ಆಸ್ತಿ ಎಂದರೇನು, ಸ್ವಯಾರ್ಜಿತ ಆಸ್ತಿ ಎಂದರೇನು ಎಂಬುದರ ಬಗ್ಗೆ ತಿಳಿದಿರಬೇಕು. ಪಿತ್ರಾರ್ಜಿತ ಆಸ್ತಿ ಎಂದರೇನು ಅದರ ಹಕ್ಕು, ಅಧಿಕಾರದ ಬಗ್ಗೆ ಹಾಗೂ ಸ್ವಯಾರ್ಜಿತ ಆಸ್ತಿ ಎಂದರೇನು ಅದರ ಹಕ್ಕು, ಅಧಿಕಾರದ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಪಿತ್ರಾರ್ಜಿತ ಆಸ್ತಿ ಎಂದರೇನು ಸ್ವಯಾರ್ಜಿತ ಆಸ್ತಿ ಎಂದರೇನು ಎಂಬುದನ್ನು ಎಲ್ಲರೂ ತಿಳಿಯಬೇಕು. ಪ್ರತಿಯೊಬ್ಬರ ಹೆಸರಿನಲ್ಲಿ ಆಗಲಿ, ತಂದೆಯ ಹೆಸರಿನಲ್ಲಿ ಆಗಲಿ, ಅಜ್ಜನ ಹೆಸರಿನಲ್ಲಿ ಆಗಲಿ ಮನೆ ಆಗಲಿ, ಸೈಟ್ ಆಗಲಿ, ಜಮೀನು ಆಗಲಿ ಇರುತ್ತದೆ ಆದರೆ ಅದು ಸ್ವಯಾರ್ಜಿತ ಆಸ್ತಿಯೊ, ಪಿತ್ರಾರ್ಜಿತ ಆಸ್ತಿಯೊ ಎಂದು ತಿಳಿದುಕೊಳ್ಳಬೇಕು ಏಕೆಂದರೆ ಮುಂದಿನ ದಿನಗಳಲ್ಲಿ ಜಮೀನು ಅವರಿಗೆ ಸಿಗುತ್ತದೆಯಾ ಅಥವಾ ಬೇರೆಯವರು ಜಮೀನಿನ ಮೇಲೆ ಹಕ್ಕು ಸಾಧಿಸಬಹುದಾ ಎಂಬುದನ್ನು ತಿಳಿದುಕೊಳ್ಳಬೇಕು. ಪಿತ್ರಾರ್ಜಿತ ಆಸ್ತಿ ಎಂದರೆ ಹಿರಿಯರು ಗಳಿಸಿದ ಆಸ್ತಿಯಾಗಿದೆ.
ಇದು ಮೂರು ತಲೆಮಾರುಗಳನ್ನು ಒಳಗೊಂಡಿರುತ್ತದೆ. ಅಜ್ಜ ತಾನು ಗಳಿಸಿದ ಆಸ್ತಿಯನ್ನು ಯಾರ ಹೆಸರಿಗೂ ವರ್ಗಾವಣೆ ಮಾಡದೆ ತೀರಿಕೊಂಡರೆ ಅವನ ಆಸ್ತಿಯಲ್ಲಿ ಅಜ್ಜನ ಹೆಂಡತಿ, ಅಜ್ಜನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಪಾಲು ಇರುತ್ತದೆ. ತಂದೆ ತನ್ನ ಸ್ವಂತ ದುಡಿಮೆಯಿಂದ ಆಸ್ತಿ ಗಳಿಸಿದರೆ ಅವನ ಹೆಂಡತಿ, ಅವನ ಮಕ್ಕಳು, ಮೊಮ್ಮಕ್ಕಳು ಪಾಲು ಪಡೆಯಬಹುದು. ಸ್ವಂತ ಗಳಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನುವರು. ಸ್ವಯಾರ್ಜಿತ ಆಸ್ತಿಯ ಮೇಲೆ ಯಾರಿಗೂ ಹಕ್ಕು ಇರುವುದಿಲ್ಲ. ಆಸ್ತಿ ಗಳಿಸಿದ ವ್ಯಕ್ತಿಗೆ ಮಾತ್ರ ಅಧಿಕಾರ ಇರುತ್ತದೆ. ಸ್ವಯಾರ್ಜಿತ ಆಸ್ತಿಯನ್ನು ಆ ವ್ಯಕ್ತಿ ಯಾರಿಗೆ ಬೇಕಾದರೂ ಕೊಡಬಹುದು ಅಥವಾ ದಾನ ಮಾಡಬಹುದು.
ಸ್ವಯಾರ್ಜಿತ ಆಸ್ತಿಯನ್ನು ಆತ ತಾನು ಬದುಕಿರುವಾಗ ತನ್ನ ಇಚ್ಛೆ ಬಂದ ವ್ಯಕ್ತಿಯ ಹೆಸರಿಗೆ ವಿಲ್ ಬರೆಯುವ ಮೂಲಕ ಕೊಡಬಹುದು. ಸ್ವಯಾರ್ಜಿತ ಆಸ್ತಿಯನ್ನು ಹೊಂದಿದ ವ್ಯಕ್ತಿ ಆಸ್ತಿಯನ್ನು ಯಾರಿಗೂ ಕೊಡದೆ ಮರಣ ಹೊಂದಿದರೆ ವಾರಸುದಾರರಿಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆ. ಆತ ಮರಣ ಹೊಂದಿದರೆ ಆತನ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಪಾಲು ಸಿಗುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸುಲಭವಾಗಿ ಪಾಲು ಸಿಕ್ಕಿದಷ್ಟು ಸ್ವಯಾರ್ಜಿತ ಆಸ್ತಿಯಲ್ಲಿ ಬೇರೆಯವರಿಗೆ ಹಕ್ಕು ಇರುವುದಿಲ್ಲ. ಈ ಮಾಹಿತಿ ಉಪಯುಕ್ತವಾಗಿದೆ ತಪ್ಪದೆ ಎಲ್ಲರಿಗೂ ತಿಳಿಸಿ,