ಆತ್ಮೀಯ ಓದುಗರೇ ಪಪ್ಪಾಯ ಬೆಲೆ ಅನ್ನೋದು ಕೇವಲ ಬೆಳೆಯನ್ನಾಗಿ ನೋಡದೆ ಉತ್ತಮ ಅರೋಗ್ಯ ಹಾಗು ಸೌಂದರ್ಯವೃದ್ಧಿಗಾಗಿ ಕೂಡ ಈ ಪಪ್ಪಾಯ ಹಣ್ಣನ್ನು ಬೆಳೆಯುತ್ತಾರೆ ಸೀಸನ್ ಅಷ್ಟೇ ಅಲ್ಲ ಎಲ್ಲ ಸಮಯದಲ್ಲೂ ಕೂಡ ನೀವು ಪಪ್ಪಾಯವನ್ನು ಪಡೆಯಬಹುದು ಹಾಗಾಗಿ ಇದರಿಂದ ಲಾಭಗಳಿಸುವ ಅವಕ್ಷ ಇರುತ್ತದೆ ಆದ್ರೆ ಪಪ್ಪಾಯ ಬೆಳೆಯನ್ನು ಹೇಗೆ ಬೆಳೆಯುವುದು ಅನ್ನೋ ಸಂಪೂರ್ಣ ಮಾಹಿತಿ ಇದ್ರೆ ಖಂಡಿತ ಒಳ್ಳೆಯದಾಗುತ್ತೆ.
ಈ ಮೂಲಕ ಕೆಲವರು ರೈತರು ಬೆಳೆದು ಹೇಗೆ ಪಪ್ಪಾಯದಿಂದ ಲಾಭಗಳಿಸಿದ್ದಾರೆ ಅನ್ನೋದನ್ನ ತಿಳಿಯೋಣ ಕೃಷಿಯಲ್ಲಿ ಸದಾಕಾಲ ವಿನೂತನ ಪ್ರಯೋಗಗಳು ನಡೆಯುವುದು ನಿರಂತರ. ಆ ಬಗ್ಗೆ ಜಾಣ ಕೃಷಿಕ ಕಣ್ಣಿಟ್ಟಿರುತ್ತಾನೆ. ನಾನಾ ಕ್ಷೇತ್ರಗಳಿಗೆ ಭೇಟಿ ನೀಡಿ, ತಾವು ಪಡೆದ ಜ್ಞಾನವನ್ನು ಯಶಸ್ವಿಯಾಗಿ ತಮ್ಮ ಭೂಮಿಯಲ್ಲಿ ಅಳವಡಿಸಿ ಗೆಲುವಿನ ದಾರಿ ಹಿಡಿಯುತ್ತಾರೆ. ಇದೇ ರೀತಿ ಮಂಡ್ಯ ಜಿಲ್ಲೆಯ ಯೋಗೇಶ್ ಎಂಬ ರೈತ ಕೂಡಾ ತನ್ನ ಜಮೀನಿನಲ್ಲಿ ಪಪ್ಪಾಯ ಬೆಳೆಯನ್ನು ಬೆಳೆದು ಅದರಲ್ಲಿ ಉನ್ನತಿ ಸಾಧಿಸಿದ್ದಾರೆ. ಈ ರೈತ ಬೆಳೆದ ಪಪ್ಪಾಯ ತಳಿಯ ಹೆಸರು ರೆಡ್ ಲೇಡಿ ಎಂದು.
ನಮಗೆಲ್ಲ ತಿಳಿದೇ ಇದೆ ಸಾಮಾನ್ಯವಾಗಿ ಪಪ್ಪಾಯಿ ಔಷದಿ ಗುಣಗಳನ್ನು ಹೊಂದಿದೆ ಎಂದು. ರೈತರು ನೀರಾವರಿ ಅಲ್ಲದ ಒಣ ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಇದು ಒಂದು ಮಹತ್ವದ ಶೀಘ್ರ ಫಲಗಳನ್ನು ಕೊಡುವ ಹಣ್ಣಿನ ಬೆಳೆಯಾಗಿದೆ. ಈ ಹಣ್ಣು ಮನುಷ್ಯನ ದೇಹದ ಪೋಷಣೆಗೆ ಬೇಕಾದ ಪೋಷಕಾಂಶವನ್ನು ಹೊಂದಿದೆ.
ಈ ರೈತ ಪಪ್ಪಾಯ ಕೃಷಿಯನ್ನು ಹೇಗೆ ಮಾಡಿದ್ದಾರೆ? ಎಂದು ನೋಡುವುದಾದರೆ, ಆರಂಭದಲ್ಲಿ ತಮ್ಮ ಜಮೀನಿಗೆ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ ಹಾಕಿ ಹೊಲ ಹದ ಮಾಡಿಕೊಂಡಿದ್ದಾರೆ. ಬಳಿಕ ನಾಲ್ಕೂವರೆ ಹಾಗೂ ಐದು ಅಡಿಗಳ ಅಂತರರಲ್ಲಿ ತಲಾ ಒಂದು ಸಸಿಯನ್ನು ನೆಟ್ಟಿದ್ದಾರೆ. ಪಪ್ಪಾಯ ಗಿಡಗಳನ್ನು ನೆಟ್ಟು ಹನಿ ನೀರಾವರಿ ಮೂಲಕ ನೀರುಣಿಸಿದ್ದಾರೆ. ಇದೀಗ ಸಮೃದ್ಧವಾಗಿ ಬೆಳೆ ಬೆಳೆದಿದೆ.
ಇವರು ಒಂದು ಎಕರೆ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯವರು ನೀಡಿದ ಆರುನೂರು ಸಸಿಗಳನ್ನು ಹಾಗೂ ಸ್ವಂತವಾಗಿ ಏಳುನೂರು ಸಸಿಗಳನ್ನು ಹೀಗೆ ಒಂದುಸಾವಿರದ ಮುನ್ನೂರು ಸಸಿಗಳನ್ನು ನೆಟ್ಟಿದ್ದಾರೆ. ಪಪ್ಪಾಯ ಸಸಿಗಳನ್ನು ನಾಟಿ ಮಾಡಿದ ಎಂಟರಿಂದ ಒಂಭತ್ತು ತಿಂಗಳಿಗೆ ಕೊಯ್ಲಿಗೆ ಬರುವ ಈ ತಳಿಯ ಪಪ್ಪಾಯ ಸತತವಾಗಿ ಮೂರು ವರ್ಷಗಳ ಕಾಲ ಫಸಲು ನೀಡುತ್ತದೆ. ಸಾಮಾನ್ಯವಾಗಿ ಪಪ್ಪಾಯಕ್ಕೆ ರೋಗಭಾದೆ ಕಡಿಮೆ.
ಮಂಡ್ಯದ ಈ ರೈತ ಹೇಳುವ ಹಾಗೆ ಒಂದು ಎಕರೆಗೆ ಒಂದು ಲಕ್ಷ ಖರ್ಚು ಮಾಡಿದರೆ ಪಪ್ಪಾಯ ಬೆಳೆಯನ್ನು ಬೆಳೆಯಬಹುದು. ಈ ರೆಡ್ ಲೇಡಿ ಪಪ್ಪಾಯ ತಳಿಯು ಸಾಮಾನ್ಯವಾಗಿ ಒಂದು ವರ್ಷದವರೆಗೂ ಫಸಲು ನೀಡುತ್ತದೆ. ಯಾವುದೇ ರೋಗ , ಕೀಟಗಳ ಬಾಧೆ ಇಲ್ಲದೇ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋದರೆ ಒಂದುವರ್ಷದ ವರೆಗೂ ಹಣ್ಣು ನೀಡುತ್ತದೆ ಎನ್ನುತ್ತಾರೆ ರೈತ ಯೋಗೇಶ್